- ಪ್ರತಿಲಿಪಿಯಲ್ಲಿ ಟಿಡಿಎಸ್ (TDS) ವ್ಯವಸ್ಥೆ24 ನವೆಂಬರ್ 2025ಆತ್ಮೀಯ ಸಾಹಿತಿಗಳೇ, ನಿಮ್ಮಲ್ಲಿ ಹಲವರು ಟಿಡಿಎಸ್ (TDS) ಬಗ್ಗೆ ಮತ್ತು ನಿಮ್ಮ ಗಳಿಕೆ ಅಥವಾ ಬಹುಮಾನಗಳಿಂದ ಏಕೆ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಎಂಬ ಪ್ರಶ್ನೆಗಳನ್ನು ಆಗಾಗ ಕೇಳುತ್ತಿರುತ್ತೀರಿ. ಟಿಡಿಎಸ್ ಎಂದರೇನು, ಅದನ್ನು ಏಕೆ ಅನ್ವಯಿಸಲಾಗುತ್ತದೆ ಮತ್ತು ಪ್ರತಿಲಿಪಿಯಲ್ಲಿನ ವಿವಿಧ ರೀತಿಯ ಪಾವತಿಗಳಿಗೆ ಅದು ಹೇಗೆ ಅನ್ವಯವಾಗುತ್ತದೆ ಎಂಬುದನ್ನು ಈ ಬ್ಲಾಗ್ ವಿವರಿಸುತ್ತದೆ. ಟಿಡಿಎಸ್ ಎಂದರೆ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (Tax Deducted at Source). ಇದು ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ಭಾರತ ಸರ್ಕಾರ ರೂಪಿಸಿರುವ ನಿಯಮವಾಗಿದೆ. ಟಿಡಿಎಸ್ ದರ ಮತ್ತು ಅದನ್ನು ಮರುಪಾವತಿ ಪಡೆಯಬಹುದೇ ಎಂಬುದು ನೀವು ಪಡೆಯುವ ಪಾವತಿಯ ಸ್ವರೂಪವನ್ನು ಅವಲಂಬಿಸಿರುತ್ತದೆ. 1. ಲೇಖಕರ ನಿಯಮಿತ ಗಳಿಕೆಗಳು (ಪ್ರತಿ ತಿಂಗಳೂ ನಿಮ್ಮ ಬರಹಗಳಿಂದ ಗಳಿಸುವ ಸಂಪಾದನೆ): ಒಂದು ಆರ್ಥಿಕ ವರ್ಷದಲ್ಲಿ (ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ) ಪ್ರತಿಲಿಪಿಯಲ್ಲಿ ನಿಮ್ಮ ಒಟ್ಟು ಗಳಿಕೆಯು ₹30,000/- ತಲುಪಿದಾಗ, ಶೇ.10 ರಷ್ಟು ಟಿಡಿಎಸ್ ಕಡಿತ ಪ್ರಾರಂಭವಾಗುತ್ತದೆ. ಉದಾಹರಣೆಗೆ: ನೀವು ಏಪ್ರಿಲ್ನಿಂದ ಆಗಸ್ಟ್ವರೆಗೆ ಪ್ರತಿ ತಿಂಗಳು ₹5,000 ಗಳಿಸಿದರೆ, ನಿಮ್ಮ ಒಟ್ಟು ಗಳಿಕೆ ₹25,000 ಆಗಿರುತ್ತದೆ. ನೀವು ಸೆಪ್ಟೆಂಬರ್ನಲ್ಲಿ ಪುನಃ ₹5,000 ಗಳಿಸಿದಲ್ಲಿ, ನಿಮ್ಮ ಒಟ್ಟು ಗಳಿಕೆ ₹30,000 ತಲುಪುತ್ತದೆ. ಒಮ್ಮೆ ನಿಮ್ಮ ಒಟ್ಟು ಗಳಿಕೆ ಆರ್ಥಿಕ ವರ್ಷದಲ್ಲಿ ₹30,000 ದಾಟಿದ ನಂತರ, ಆ ವರ್ಷದ ನಿಮ್ಮ ಒಟ್ಟು ಗಳಿಕೆಯ ಮೇಲೆ ಶೇ. 10 ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ. ಅಂದರೆ, ₹3,000 (₹30,000 ದ ಶೇ.10) ಟಿಡಿಎಸ್ ರೂಪದಲ್ಲಿ ಕಡಿತಗೊಳ್ಳುತ್ತದೆ ಮತ್ತು ಉಳಿದ ಮೊತ್ತವನ್ನು ನಿಮಗೆ ಪಾವತಿಸಲಾಗುತ್ತದೆ. ಈ ಉದಾಹರಣೆಯ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಕೇವಲ ₹2,000 ಮಾತ್ರ ನಿಮಗೆ ಪಾವತಿಯಾಗುತ್ತದೆ. ಮುಂದಿನ ತಿಂಗಳುಗಳಿಂದ ಆರ್ಥಿಕ ವರ್ಷವು ಮುಕ್ತಾಯವಾಗುವವರೆಗೆ ಪ್ರತಿ ತಿಂಗಳ ಗಳಿಕೆಯಿಂದ ಶೇ.10 ರಷ್ಟು ಟಿಡಿಎಸ್ ಅನ್ನು ಕಡಿತಗೊಳಿಸುವುದನ್ನು ಮುಂದುವರಿಸಲಾಗುತ್ತದೆ. ನೀವು ಚಾರ್ಟರ್ಡ್ ಅಕೌಂಟೆಂಟ್ ಸಹಾಯದೊಂದಿಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಬಹುದು. ರಿಟರ್ನ್ ಪ್ರಕ್ರಿಯೆಯ ಬಳಿಕ, ಕಡಿತಗೊಳಿಸಿದ ಟಿಡಿಎಸ್ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಮರುಪಾವತಿ ಮಾಡಲಾಗುತ್ತದೆ. ಎಲ್ಲಾ ಟಿಡಿಎಸ್ ಪ್ರಮಾಣಪತ್ರಗಳನ್ನು ಪ್ರಸ್ತುತ ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಮೊದಲು ನೀಡಲಾಗುತ್ತದೆ. ಯಾವುದೇ ಗಳಿಕೆ ಅಥವಾ ಪಾವತಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ, ಲೇಖಕರು ಆ್ಯಪ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು. 2. ಸ್ಪರ್ಧೆಯ ಬಹುಮಾನಗಳು: ಸ್ಪರ್ಧೆಯ ಬಹುಮಾನಗಳಿಗೂ ಟಿಡಿಎಸ್ ಅನ್ವಯವಾಗುತ್ತದೆ, ಆದರೆ ಅದರ ಶೇಕಡಾವಾರು ವಿಭಿನ್ನವಾಗಿರುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ನಿಮ್ಮ ಒಟ್ಟು ಬಹುಮಾನದ ಮೊತ್ತ ₹10,000 ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 115BB ಅಡಿಯಲ್ಲಿ ಶೇ.30 ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಇದರ ಜೊತೆಗೆ, ಸರ್ಚಾರ್ಜ್ ಮತ್ತು ಶೇ.4 ರ ಆರೋಗ್ಯ ಮತ್ತು ಶಿಕ್ಷಣ ಸೆಸ್ನಂತಹ ಸರ್ಕಾರಿ ಶುಲ್ಕಗಳಿಗಾಗಿ ಒಂದು ಸಣ್ಣ ಹೆಚ್ಚುವರಿ ಮೊತ್ತವನ್ನು ಕೂಡಾ ಸೇರಿಸಲಾಗುತ್ತದೆ. ಉದಾಹರಣೆಗೆ: ನೀವು ಒಂದು ಸ್ಪರ್ಧೆಯಲ್ಲಿ ₹5,000 ಗೆದ್ದರೆ, ಆ ಆರ್ಥಿಕ ವರ್ಷದ ₹10,000 ಮಿತಿಯನ್ನು ನೀವು ದಾಟಿಲ್ಲದ ಕಾರಣ ಯಾವುದೇ ಟಿಡಿಎಸ್ ಕಡಿತಗೊಳಿಸಲಾಗುವುದಿಲ್ಲ. ಅದೇ ಆರ್ಥಿಕ ವರ್ಷದಲ್ಲಿ ನೀವು ಮತ್ತೊಂದು ಸ್ಪರ್ಧೆಯಲ್ಲಿ ₹5,000 ಗೆದ್ದಾಗ, ನಿಮ್ಮ ಒಟ್ಟು ಬಹುಮಾನ ಮೊತ್ತವು ₹10,000 ಆಗುತ್ತದೆ. ಹೀಗಾಗಿ ಟಿಡಿಎಸ್ ಮಿತಿಯನ್ನು ತಲುಪುವುದರಿಂದ, ಒಟ್ಟು ₹10,000/- ದ ಮೇಲೆ ಶೇ.30 ರಷ್ಟು ಟಿಡಿಎಸ್ (ಅಂದರೆ ₹3,000/-) ಅನ್ನು ಎರಡನೇ ಪಾವತಿಯಿಂದ ಕಡಿತಗೊಳಿಸಲಾಗುತ್ತದೆ. ಹೀಗಾಗಿ, ಎರಡನೇ ಸ್ಪರ್ಧೆಯ ₹5,000/- ಬಹುಮಾನದಿಂದ ₹3,000/- ಟಿಡಿಎಸ್ ಕಡಿತಗೊಂಡು, ನಿಮಗೆ ₹2,000/- ನಿಮಗೆ ಜಮೆಯಾಗುತ್ತದೆ. ಅದೇ ಆರ್ಥಿಕ ವರ್ಷದಲ್ಲಿ ನೀವು ಯಾವುದೇ ಹೆಚ್ಚುವರಿ ಬಹುಮಾನದ ಹಣವನ್ನು ಗೆದ್ದರೆ, ಅದರ ಮೇಲೆ ಸಹ ಶೇ.30 ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ ಮತ್ತು ಉಳಿದ ಮೊತ್ತವನ್ನು ನಿಮಗೆ ಪಾವತಿಸಲಾಗುತ್ತದೆ. ಈ ಶೇ.30 ರ ಕಡಿತವು ಕಡ್ಡಾಯ ಸರ್ಕಾರಿ ತೆರಿಗೆ ನಿಯಮವಾಗಿದ್ದು, ಪಾವತಿ ಪ್ರಕ್ರಿಯೆಗೆ ಮೊದಲು ಅನ್ವಯಿಸಲಾಗುತ್ತದೆ. ಸೆಕ್ಷನ್ 115BB ಪ್ರಕಾರ, ನಿಮ್ಮ ಒಟ್ಟು ವಾರ್ಷಿಕ ಆದಾಯವು ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೂ ಸಹ, ಈ ಟಿಡಿಎಸ್ ಮೊತ್ತವನ್ನು ನಂತರದಲ್ಲಿ ಮರುಪಾವತಿ ಅಥವಾ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಇಂತಹ ಬಹುಮಾನಗಳಿಗೆ ಶೇ.30 ರ ಏಕರೂಪದ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಮತ್ತು ಈ ತೆರಿಗೆ ಅಂತಿಮವಾಗಿರುತ್ತದೆ. ತೆರಿಗೆ ಉದ್ದೇಶಗಳಿಗಾಗಿ ಈ ಗಳಿಕೆಗಳನ್ನು "ಇತರೆ ಮೂಲಗಳಿಂದ ಆದಾಯ"(Income from other Sources) ಎಂದು ವರ್ಗೀಕರಿಸಲಾಗುತ್ತದೆ. ಸ್ಪರ್ಧೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗಾಗಿ, ನೀವು [email protected] ಅನ್ನು ಸಂಪರ್ಕಿಸಬಹುದು. 3. ಐಪಿ (IP) ಒಪ್ಪಂದಗಳು ಮತ್ತು ಸಂಬಂಧಿತ ಪಾವತಿಗಳು: ಆದಾಯ ತೆರಿಗೆ ಕಾಯಿದೆಯ ಪ್ರಕಾರ, ಕೆಲವು ಪಾವತಿಗಳ ಮೇಲೆ ಶೇ.10 ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ. ನಿಮ್ಮ ಪ್ಯಾನ್ (PAN) ಅಡಿಯಲ್ಲಿ ನಿಖರವಾದ ತೆರಿಗೆ ಕಡಿತವನ್ನು ಖಚಿತಪಡಿಸಿಕೊಳ್ಳಲು, ಪ್ರತಿಲಿಪಿಯಲ್ಲಿನ ಎಲ್ಲಾ ಐಪಿ-ಸಂಬಂಧಿತ ಪಾವತಿಗಳ ಮೇಲೆ ಶೇ.10 ರಷ್ಟು ಟಿಡಿಎಸ್ ಅನ್ನು, ಪಾವತಿಯ ಮೊತ್ತವನ್ನು ಲೆಕ್ಕಿಸದೆ, ಕಡಿತಗೊಳಿಸಲಾಗುತ್ತದೆ. ಒಪ್ಪಂದದಲ್ಲಿ ನಮೂದಿಸಿರುವ ಪಾವತಿ ಮೊತ್ತವು ₹1,000/-, ₹5,000/-, ₹18,000/- ಅಥವಾ ಯಾವುದೇ ಇತರ ಮೊತ್ತವಾಗಿದ್ದರೂ, ಪ್ರತಿ ಪ್ರಕರಣದಲ್ಲಿ ಶೇ. 10 ರಷ್ಟು ಟಿಡಿಎಸ್ ಅನ್ನು ಅನ್ವಯಿಸಲಾಗುತ್ತದೆ. ಈ ಕಡಿತವನ್ನು ನೀವು ನೀಡಿದ ಬ್ಯಾಂಕ್ ಖಾತೆಗೆ ಪಾವತಿಯನ್ನು ಜಮೆ ಮಾಡುವ ಮೊದಲು ಮಾಡಲಾಗುತ್ತದೆ. ನೀವು ಒದಗಿಸಿದ ಪ್ಯಾನ್ ಗೆ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ, ಆದ್ದರಿಂದ ನಿಮ್ಮ ಐಟಿಆರ್ (ITR) ಅನ್ನು ಸಲ್ಲಿಸುವಾಗ ನೀವು ಈ ಮೊತ್ತವನ್ನು ಕ್ಲೈಮ್ ಮಾಡಬಹುದು(ಮರುಪಾವತಿ ಪಡೆಯಬಹುದು). ಟಿಡಿಎಸ್ ಕಡಿತದ ವಿವರಗಳು ಆದಾಯ ತೆರಿಗೆ ಪೋರ್ಟಲ್ನಲ್ಲಿರುವ ನಿಮ್ಮ ಫಾರ್ಮ್ 26AS ಅಥವಾ AIS ನಲ್ಲಿ ಲಭ್ಯವಾಗುತ್ತವೆ. ಒಪ್ಪಂದಕ್ಕೆ ಸಹಿ ಹಾಕಿ ಪಾವತಿ ಮೊತ್ತವನ್ನು ಅಂತಿಮಗೊಳಿಸಿದಾಗ, ಪಾವತಿ ಪ್ರಕ್ರಿಯೆಯ ಭಾಗವಾಗಿ ಶೇ.10 ರಷ್ಟು ಟಿಡಿಎಸ್ ಕಡಿತವು ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ಯಾವುದೇ ಐಪಿ ಅಥವಾ ಒಪ್ಪಂದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ, ಲೇಖಕರು [email protected] ಅನ್ನು ಸಂಪರ್ಕಿಸಬಹುದು. ಟಿಡಿಎಸ್ ಸಾರಾಂಶ (ಲೇಖಕರಿಗಾಗಿ) ಗಮನಿಸಿ: ನೀವು ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಒದಗಿಸದಿದ್ದರೆ, ಅದು ನಿಷ್ಕ್ರಿಯವಾಗಿದ್ದರೆ (ಉದಾಹರಣೆಗೆ - ಆಧಾರ್ನೊಂದಿಗೆ ಲಿಂಕ್ ಆಗಿಲ್ಲದಿದ್ದರೆ), ಅಥವಾ ಅಮಾನ್ಯವಾಗಿದ್ದರೆ, ಟಿಡಿಎಸ್ ಅನ್ನು ಶೇ.20 ರಿಂದ ಶೇ.30 ರ ಹೆಚ್ಚಿನ ದರದಲ್ಲಿ ವಿಧಿಸಲಾಗುತ್ತದೆ. ಗಮನಿಸಿ: ನೀವು ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಒದಗಿಸದಿದ್ದರೆ, ಅದು ನಿಷ್ಕ್ರಿಯವಾಗಿದ್ದರೆ (ಉದಾಹರಣೆಗೆ - ಆಧಾರ್ನೊಂದಿಗೆ ಲಿಂಕ್ ಆಗಿಲ್ಲದಿದ್ದರೆ), ಅಥವಾ ಅಮಾನ್ಯವಾಗಿದ್ದರೆ, ಟಿಡಿಎಸ್ ಅನ್ನು ಶೇ.20 ರಿಂದ ಶೇ.30 ರ ಹೆಚ್ಚಿನ ದರದಲ್ಲಿ ವಿಧಿಸಲಾಗುತ್ತದೆ. ಟಿಡಿಎಸ್ ಅನ್ನು ಕ್ಲೈಮ್ ಮಾಡುವುದು(ಮರುಪಾವತಿ ಪಡೆಯುವುದು) ಹೇಗೆ? ನಿಮ್ಮ ಒಟ್ಟು ವಾರ್ಷಿಕ ಆದಾಯವು ಸರ್ಕಾರ ನಿಗದಿಪಡಿಸಿದ ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೆ, ನಿಮ್ಮ ನಿಯಮಿತ ಗಳಿಕೆಗಳು ಅಥವಾ ಐಪಿ ಪಾವತಿಗಳಿಂದ ಕಡಿತಗೊಳಿಸಿದ ಶೇ.10 ರಷ್ಟು ಟಿಡಿಎಸ್ ಅನ್ನು ನೀವು ಕ್ಲೈಮ್ ಮಾಡಬಹುದು. ಕ್ಲೈಮ್ ಮಾಡಲು, ನೀವು ಆ ಆರ್ಥಿಕ ವರ್ಷ ಮುಗಿದ ನಂತರ, ಸಾಮಾನ್ಯವಾಗಿ ಏಪ್ರಿಲ್ ಮತ್ತು ಜುಲೈ ನಡುವೆ, ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಬೇಕು. ನಿಮ್ಮ ITR ಅನ್ನು ಸಲ್ಲಿಸುವಾಗ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಪ್ರಮಾಣೀಕೃತ ತೆರಿಗೆ ವೃತ್ತಿಪರರ ಸಹಾಯವನ್ನು ತೆಗೆದುಕೊಳ್ಳಲು ನಾವು ಸಲಹೆ ನೀಡುತ್ತೇವೆ. ನಿಮ್ಮ ITR ಅನ್ನು ಆದಾಯ ತೆರಿಗೆ ಇಲಾಖೆಯು ಪ್ರಕ್ರಿಯೆಗೊಳಿಸಿದ ನಂತರ, ಕಡಿತಗೊಳಿಸಿದ ಟಿಡಿಎಸ್ ಮೊತ್ತವನ್ನು ನಿಮ್ಮ ನೋಂದಾಯಿತ ಬ್ಯಾಂಕ್ ಖಾತೆಗೆ ನೇರವಾಗಿ ಮರುಪಾವತಿ ಮಾಡಲಾಗುತ್ತದೆ. ನೀವು ಆದಾಯ ತೆರಿಗೆ ಪೋರ್ಟಲ್ನಲ್ಲಿ ನಿಮ್ಮ ಫಾರ್ಮ್ 26AS ಅಥವಾ AIS ಅನ್ನು ಪರಿಶೀಲಿಸುವ ಮೂಲಕ ಕಡಿತಗೊಳಿಸಿದ ಟಿಡಿಎಸ್ ಅನ್ನು ಟ್ರ್ಯಾಕ್ ಮಾಡಬಹುದು. (ಆದಾಯ ತೆರಿಗೆ ವೆಬ್ಸೈಟ್ ಲಿಂಕ್ -https://incometaxindia.gov.in/Pages/default.aspx) ದಯವಿಟ್ಟು ಗಮನಿಸಿ: ಸ್ಪರ್ಧೆಯ ಬಹುಮಾನಗಳಿಂದ ಕಡಿತಗೊಳಿಸಿದ ಶೇ. 30 ರಷ್ಟು ಟಿಡಿಎಸ್ ಅನ್ನು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 115BB ಪ್ರಕಾರ ನಂತರದಲ್ಲಿ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಪ್ರಮುಖ ಅಂಶಗಳು: ಟಿಡಿಎಸ್ ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ಕಡ್ಡಾಯವಾದ ಕಾನೂನು ಅವಶ್ಯಕತೆಯಾಗಿದ್ದು, ನಿಮ್ಮ ಒಟ್ಟು ಗಳಿಕೆ ಅಥವಾ ಬಹುಮಾನದ ಮೊತ್ತವನ್ನು ಆಧರಿಸಿ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ನೀವು ಪ್ರತಿಲಿಪಿಯಲ್ಲಿ ಅನೇಕ ಭಾಷೆಗಳಲ್ಲಿ ಬರೆದರೂ, ನಿಮ್ಮ ಎಲ್ಲಾ ಖಾತೆಗಳಾದ್ಯಂತ ಒಂದೇ ಪ್ಯಾನ್ ಅನ್ನು ಲಿಂಕ್ ಮಾಡಿದ್ದರೆ, ಎಲ್ಲಾ ಭಾಷೆಗಳಾದ್ಯಂತ ನಿಮ್ಮ ಒಟ್ಟು ಆದಾಯ ಅಥವಾ ಬಹುಮಾನಗಳನ್ನು ಒಂದೇ ಪ್ಯಾನ್ ಅಡಿಯಲ್ಲಿ ಒಟ್ಟಿಗೆ ಎಣಿಕೆ ಮಾಡಲಾಗುತ್ತದೆ. ಉದಾಹರಣೆಗೆ, ನಿಮ್ಮ ಒಟ್ಟು ಬಹುಮಾನ ವಿವಿಧ ಭಾಷೆಗಳಾದ್ಯಂತ ಒಂದು ಆರ್ಥಿಕ ವರ್ಷದಲ್ಲಿ ₹10,000/- ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಶೇ.30 ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ. ಸ್ಪರ್ಧೆಯ ಬಹುಮಾನಗಳ ಮೇಲಿನ ಟಿಡಿಎಸ್ ಅನ್ನು ಪ್ರತಿ ಸ್ಪರ್ಧೆ ಮೇಲೆ ಮಾತ್ರವಲ್ಲದೆ, ಒಂದು ಆರ್ಥಿಕ ವರ್ಷದಲ್ಲಿನ ಒಟ್ಟು ಬಹುಮಾನಗಳ ಮೇಲೆ ಲೆಕ್ಕ ಹಾಕಲಾಗುತ್ತದೆ. ಒಮ್ಮೆ ನಿಮ್ಮ ಒಟ್ಟು ಬಹುಮಾನದ ಮೊತ್ತ ₹10,000/- ದಾಟಿದರೆ, ಒಟ್ಟು ಅರ್ಹ ಮೊತ್ತಕ್ಕೆ ಶೇ. 30 ರಷ್ಟು ಟಿಡಿಎಸ್ ಅನ್ವಯವಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಈಗಾಗಲೇ ಟಿಡಿಎಸ್ ಕಡಿತಗೊಂಡಿದ್ದರೆ ಮತ್ತು ನೀವು ನಂತರ ಮತ್ತೆ ನಗದು ಬಹುಮಾನ ಗಳಿಸಿದರೆ, ಆ ಆರ್ಥಿಕ ವರ್ಷದ ನಿಮ್ಮ ಒಟ್ಟು ಬಹುಮಾನದ ಮೊತ್ತದ ಆಧಾರದ ಮೇಲೆ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ತೆರಿಗೆ ಕಾಯಿದೆಯ ಪ್ರಕಾರ ಹೆಚ್ಚುವರಿ ಕಡಿತಗಳನ್ನು(ಸೆಸ್) ಅನ್ವಯಿಸಲಾಗುತ್ತದೆ. ನಿಮ್ಮ ಒಟ್ಟು ಆದಾಯವು ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೆ, ನಿಮ್ಮ ನಿಯಮಿತ ಗಳಿಕೆಗಳು ಅಥವಾ ಐಪಿ ಪಾವತಿಗಳ ಮೇಲಿನ ಶೇ. 10 ರಷ್ಟು ಟಿಡಿಎಸ್ ಅನ್ನು ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಮೂಲಕ ನೀವು ಕ್ಲೈಮ್ ಮಾಡಬಹುದು. ಸ್ಪರ್ಧೆಯ ಬಹುಮಾನಗಳ ಮೇಲಿನ ಶೇ. 30 ರಷ್ಟು ಟಿಡಿಎಸ್ ಅಂತಿಮವಾಗಿರುತ್ತದೆ ಮತ್ತು ಅದನ್ನು ನಂತರದಲ್ಲಿ ಮರುಪಾವತಿ ಪಡೆಯಲು ಸಾಧ್ಯವಿಲ್ಲ. ನೀವು ಆದಾಯ ತೆರಿಗೆ ಪೋರ್ಟಲ್ನಲ್ಲಿ ಲಭ್ಯವಿರುವ ನಿಮ್ಮ ಫಾರ್ಮ್ 26AS ಅಥವಾ AIS ನಲ್ಲಿ ಕಡಿತಗೊಳಿಸಿದ ಟಿಡಿಎಸ್ ವಿವರಗಳನ್ನು ಯಾವಾಗ ಬೇಕಾದರೂ ಪರಿಶೀಲಿಸಬಹುದು. ಲೇಖಕರ ಎಲ್ಲಾ ಪಾವತಿಗಳಿಗಾಗಿ ಈ ನಿಯಮಗಳನ್ನು ಅನುಸರಿಸುವುದು ಆದಾಯ ತೆರಿಗೆ ಕಾಯಿದೆಯ ಪ್ರಕಾರ ಪ್ರತಿಲಿಪಿಗೆ ಕಡ್ಡಾಯವಾಗಿದೆ ಮತ್ತು ಟಿಡಿಎಸ್ ಕಡಿತಗಳನ್ನು ಹಿಂತಿರುಗಿಸಲು ಅಥವಾ ಬಿಟ್ಟುಬಿಡಲು ಸಾಧ್ಯವಿಲ್ಲ. ನಿಮಗೆ ಯಾವುದೇ ತ್ರೈಮಾಸಿಕದ ಫಾರ್ಮ್ 16A ಅಗತ್ಯವಿದ್ದರೆ, ದಯವಿಟ್ಟು [email protected] ಗೆ ಇಮೇಲ್ ಮಾಡುವ ಮೂಲಕ ವಿನಂತಿಸಬಹುದು. ಈ ವಿವರಣೆಯು ಪ್ರತಿಲಿಪಿಯಲ್ಲಿ ಟಿಡಿಎಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ನಿಮ್ಮ ಪಾವತಿ ವಿವರಗಳ ಕುರಿತು ಸಹಾಯ ಬೇಕಿದ್ದರೆ, ದಯವಿಟ್ಟು ಆ್ಯಪ್ ಮೂಲಕ ತಂಡವನ್ನು ಸಂಪರ್ಕಿಸಿ. ನಿಮಗೆ ಸಹಾಯ ಮಾಡಲು ನಾವು ಸದಾ ಸಿದ್ಧರಿರುತ್ತೇವೆ. ಪ್ರತಿಲಿಪಿಕನ್ನಡ ಬಳಗಇನ್ನೂ ಹೆಚ್ಚು ತೋರಿಸಿ
- ‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 10’ ಸ್ಪರ್ಧೆಯ ಫಲಿತಾಂಶ15 ಅಕ್ಟೋಬರ್ 2025ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 10 ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. ಇದು ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯ ಕೊನೆಯ ಆವೃತ್ತಿಯಾಗಿದ್ದು ಸಾಹಿತ್ಯಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡಿದೆ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಉತ್ತಮ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆ, ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯ ಕೊನೆಯ ಆವೃತ್ತಿಯಾದ ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 10 ಸ್ಪರ್ಧೆ ಹಿಂದಿನ ಆವೃತ್ತಿಗಳಂತೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿ ಸ್ಪರ್ಧೆಯ ಯಶಸ್ಸಿಗೆ ಕಾರಣರಾದ ಎಲ್ಲ ಬರಹಗಾರರಿಗೆ ಧನ್ಯವಾದಗಳು. ಸ್ಪರ್ಧೆಯ ಕುರಿತು ನಿಮ್ಮ ಆಸಕ್ತಿ ಮತ್ತು ಉತ್ಸಾಹ ಶ್ಲಾಘನೀಯ. ಸ್ಪರ್ಧೆಗೆ ಅರವತ್ತೈದಕ್ಕೂ ಅಧಿಕ ಕೃತಿಗಳು ಸಲ್ಲಿಸಲ್ಪಟ್ಟಿದ್ದವು. ಆದರೆ ಅವುಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಧಾರಾವಾಹಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗಿದೆ. ಕೆಲವು ಕೃತಿಗಳು ಕೊನೆಯ ಹಂತದಲ್ಲಿ ನಿಯಮ ಪಾಲಿಸದೆ ಸ್ಪರ್ಧೆಯಿಂದ ಹೊರಗುಳಿಯುವಂತಾದದ್ದು ವಿಷಾದದ ಸಂಗತಿ. ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲ ನಿಯಮಗಳು ಮತ್ತು ಕಾಲಾವಧಿಯನ್ನು ಗಮನದಲ್ಲಿಟ್ಟುಕೊಂಡು ಕೃತಿಗಳನ್ನು ಬರೆಯಲು ನಾವು ಸಲಹೆ ನೀಡುತ್ತೇವೆ. ದೀರ್ಘ ಧಾರಾವಾಹಿಗಳನ್ನು ರಚಿಸುವಾಗ ಬರಹಗಾರರಲ್ಲಿ ಕತೆಯನ್ನು ಮುಂದುವರೆಸುವಲ್ಲಿ ಅನೇಕ ತೊಡಕುಗಳು ಎದುರಾಗಬಹುದು. ಜೊತೆಗೆ ಸಮಯದ ಮಿತಿ ಒಳಪಟ್ಟಾಗ ಒತ್ತಡದ ಮನಸ್ಥಿತಿ ಒಂದು ಕೃತಿಯ ರೂಪುರೇಷೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಇವೆಲ್ಲವುಗಳನ್ನು ಸಮರ್ಥವಾಗಿ ಎದುರಿಸಿ ಬರಹಗಾರರು ಅತ್ಯುತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂದು ನಾವು ಬಯಸುತ್ತೇವೆ. ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಎಲ್ಲಾ ಕೃತಿಗಳೂ ವಿಭಿನ್ನ ಕಥಾಹಂದರ, ಪಾತ್ರಗಳು, ನಿರೂಪಣೆಯ ಮೂಲಕ ಗಮನ ಸೆಳೆಯುವಂತಿದ್ದವು. ಸಲ್ಲಿಸಲ್ಪಟ್ಟಿರುವ ಕೃತಿಗಳಲ್ಲಿ ಕಥಾಹಂದರ, ಸೃಜನಾತ್ಮಕತೆ, ಪಾತ್ರಪೋಷಣೆ, ನಿರೂಪಣೆ, ಭಾಷೆ ಮತ್ತು ವ್ಯಾಕರಣ ಶುದ್ಧಿ ಮುಂತಾದ ಮಾನದಂಡಗಳ ಆಧಾರದ ಮೇಲೆ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳನ್ನು ರಚಿಸುವತ್ತ ಗಮನ ಹರಿಸುವಂತಾಗಲಿ ಎಂದು ಆಶಿಸುತ್ತೇವೆ. ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು- ಪ್ರಥಮ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಪ್ರಶಾಂತ್ ಶಿರ್ವ ಅವರ ಸುಮೇರು ಕತೆಯ ಕುರಿತು: ಪ್ರಕೃತಿ ಮಾನವನ ನಡುವಿನ ಸಂಬಂಧ, ಕತೆಯ ಕಾಲಘಟ್ಟದ ಜನಜೀವನದ ಬಿಂಬ, ಮಾನವನ ಆಸೆ, ಪರಿಣಾಮಗಳು ಕೃತಿಯಲ್ಲಿ ಹದವಾಗಿ ಬೆರೆತಿವೆ. ಕೊನೆಯವರೆಗೂ ಓದಿಸಿಕೊಂಡು ಹೋಗಬಲ್ಲ ನಿರೂಪಣೆಯೊಂದಿಗೆ ಕತೆ ಚೆನ್ನಾಗಿ ಮುಡಿಬಂದಿದೆ. ದ್ವಿತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶ್ರೀನಿವಾಸ್ ಸಂಡೂರ್ ಅವರ ಧಾರವ - ಸಮುದ್ರ ಗುಪ್ತ ಪರಾಕ್ರಮಾಂಕ ಕತೆಯ ಕುರಿತು: ಐತಿಹಾಸಿಕ ವಸ್ತು ವಿಷಯವನ್ನೊಳಗೊಂಡ ಈ ಕತೆ ಅಧ್ಯಯನದ ಹಿನ್ನೆಲೆಯೊಂದಿಗೆ, ಉತ್ತಮ ಪಾತ್ರಪೋಷಣೆ, ಹದವಾದ ಸಂಭಾಷಣೆ, ಕಣ್ಣಿಗೆ ಕಟ್ಟುವಂತಹ ಸನ್ನಿವೇಶ ಚಿತ್ರಣಗಳ ಮೂಲಕ ಓದುಗನ ಗಮನ ಸೆಳೆಯುತ್ತದೆ. ತೃತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಅಭಿವ್ಯಕ್ತಿ ಅವರ ಹೈಜಾಕ್ ಕತೆಯ ಕುರಿತು: ಸಾಮಾಜಿಕ ಸಮಸ್ಯೆಯೊಂದರ ಸುತ್ತ ಹೆಣೆಯಲ್ಪಟ್ಟಿರುವ ಈ ಕತೆ ವಿಭಿನ್ನವಾದ ಕಥಾಹಂದರ, ಪಾತ್ರಚಿತ್ರಣ, ಸಾಮಾಜಿಯ ನ್ಯಾಯದ ಕುರಿತು ಕಾಳಜಿ ಮತ್ತು ಉತ್ತಮ ನಿರೂಪಣೆಯೊಂದಿಗೆ ಓದುಗರ ಮನಸೆಳೆಯುತ್ತದೆ. ನಾಲ್ಕನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಸಂಧ್ಯಾ ಭಟ್ ಅವರ ಪಾಂಚಜನ್ಯ ಐದನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಉಮಾ ಶಂಕರಿ ಅವರ ಬಾಳ್ವೆಯ ತೆನೆ ತೂಗುವುದೇ..? ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಸುಜಾತ ಗುರುಪಾದಸ್ವಾಮಿ ಅವರ ಸಂಯೋಗ (ಅವನ ಒಲವು) ಏಳನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವಿಜಯಲಕ್ಷ್ಮಿ ಎಸ್. ಅವರ ಗಗನ ಕುಸುಮ ಎಂಟನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಜ್ಯೋತಿ ಬಾಳಿಗಾ ಅವರ ಬಂದೆಯಾ ಬಾಳಿಗೆ ಬೆಳಕಾಗಿ ಒಂಬತ್ತನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶ್ರೀಲೇಖ ಅವರ ಜೀವನ ಸಾಹಿತ್ಯ ಹತ್ತನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ರಂಗವಲ್ಲಿಸುತೆ ಅವರ ಸಾಧನೆಯ ಹಾದಿಯಲ್ಲಿ ಹನ್ನೊಂದರಿಂದ ಇಪ್ಪತ್ತೈದನೆಯ ಸ್ಥಾನ ವಿಜೇತರ ಯಾದಿ ಈ ಕೃತಿಗಳ ಕರ್ತೃಗಳಿಗೆ ತಲಾ 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಕ್ರ.ಸಂ. ಕೃತಿ ಕರ್ತೃ 11 ಕೊಳಲಿನ ಕರೆ ವಿಜಯ ಭಾರತಿ 12 ಪುಷ್ಪಕ ವಿಮಾನ ನವಿ 13 ಯಾಂತ್ರಿಕತೆಯ ಸುಳಿಯಲ್ಲಿ... ರೇಖಾ ದೇವರಾಜ್ 14 ಕಲ್ಲು ಗುಲಾಬಿ ಚೈತ್ರ ಭಟ್ 15 ಕೈಕೇಯಿ ಬನಶಂಕರಿ ಕುಲಕರ್ಣಿ 16 ದಿಕ್ಸೂಚಿ ಸೌಮ್ಯ ಶ್ರೀ 17 "ಅನುಕ್ತ" ಇದು ಮಾತಿಗೆ ನಿಲುಕದ್ದು...! ವೇದಾ ಮಂಜುನಾಥನ್ 18 ಆತ್ಮ ಬಂಧನ ಕೃಷ್ಣ ತುಳಸಿ 19 ಬಾಳ ನಗುವಿನ ಬೆಳಕು ನೀನೇ ಅಶ್ವಿನಿ ಜೈನ್ 20 ಪ್ರೇಮದ ಕಾದಂಬರಿ ಕ್ಷಿತಿಜಾ 21 ಹರೆಯದ ಪ್ರೀತಿ..! ರಾಧಾ ಸನಾ 22 ಒಲವಿನಂತರಾಳದಿ(ಕೇಳದೆ ಹೃದಯದ ಪಿಸುಮಾತು?) ಮಾಲಾ ಶ್ರೀನಿವಾಸ್ ಭಟ್ 23 ನೀನಾದೆ ನನ್ನ ಬಾಳ ರತ್ನ ಮಂಜರಿ ರಶ್ಮಿ ಅಂಗಡಿ 24 ಅನುರಾಗ ಮತ್ತೆ ಅರಳಿದಾಗ ವಿದ್ಯಾ ವೈ. ಎಸ್ 25 ಸದ್ದಿಲ್ಲದ ಮೆರವಣಿಗೆ...!! ರೂಪಾ ರೈ 100 ಕ್ಕೂ ಅಧಿಕ ಅಧ್ಯಾಯಗಳನ್ನು ರಚಿಸಿದವರ ಯಾದಿ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 100 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಅವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು. ಕ್ರ.ಸಂ. ಕೃತಿ ಕರ್ತೃ 1 ಪುಟ್ಟ ಗೌರಿ ಮದುವೆ ರೇಖಾ ಕೆ ಎಸ್ 2 ಜೀವನ ಸಾಹಿತ್ಯ ಶ್ರೀಲೇಖ 3 ಬಾಳ ನಗುವಿನ ಬೆಳಕು ನೀನೇ ಅಶ್ವಿನಿ ಜೈನ್ 4 ಕಲ್ಲು ಗುಲಾಬಿ ಚೈತ್ರ ಭಟ್ 5 ಕಾರ್ಮೋಡ ಕರಗಿತು ಸೀಸನ್ 2 ವಿದ್ಯಾ ವಾಮಂಜೂರು 6 ಈ ಉಸಿರಿರುವವರೆಗೂ ಕಾಯುವೆ ನಿನ್ನ ಪ್ರೀತಿಗಾಗಿ ಲಕ್ಷ್ಮೀ ಬೀರರಾಜು 7 ಪುಷ್ಪಕ ವಿಮಾನ ನವಿ 8 ಬಾಳ್ವೆಯ ತೆನೆ ತೂಗುವುದೇ..? ಉಮಾ ಶಂಕರಿ 9 ಸಂಗಾತಿ ನಿನ್ನ ಸಂಪ್ರೀತಿಯಲ್ಲಿ... ಕಾವ್ಯಶ್ರೀ ಹನುಮಂತ್ ರಾಜ್ 10 ಆಂತರ್ಯದ ಒಲವು (ಒಡೆದ ಮನಸ್ಸುಗಳ ಪುನರ್ಮಿಲನ) ಮಧುಸೂರ್ಯ ಭಟ್ 11 ನೀ ನನ್ನ ಪ್ರಾಣವು... ಶ್ರೀ ಭಾಗ್ಯ ಪೂಜಾರಿ 12 ಸಿತಾರಾ... ಅಜೇಯ ನೀರ್ಕಜೆ 13 ಸದ್ದಿಲ್ಲದ ಮೆರವಣಿಗೆ...!! ರೂಪಾ ರೈ 14 ಪ್ರೇಮಂ ಶರಣಂ ಗಚ್ಛಾಮಿ ದಿವ್ಯ ಹೇಮಂತ್ 15 ನಿನ್ನಿಂದಲೇ ಪಿ. ಎ. ರೆಡ್ಡಿ 16 ಧಾರವ - ಸಮುದ್ರ ಗುಪ್ತ ಪರಾಕ್ರಮಾಂಕ ಶ್ರೀನಿವಾಸ್ ಸಂಡೂರ್ 17 ಬಂದೆಯಾ ಬಾಳಿಗೆ ಬೆಳಕಾಗಿ ಜ್ಯೋತಿ ಬಾಳಿಗಾ 18 ಮುಡಿಯ ಜಾರಿದ ಹೂವಿದು! ನಾಗರತ್ನ ಗೌಡ 19 ಪ್ರೀತಿಕೊಟ್ಟ ಸತಿಗೆ ತನ್ನನ್ನಿತ್ತನೇ ಶಿವ ನಾಗರತ್ನ ನಾಯ್ಕ್ 20 ಕೊಳಲಿನ ಕರೆ ವಿಜಯ ಭಾರತಿ 21 ಒಲವಿನಂತರಾಳದಿ(ಕೇಳದೆ ಹೃದಯದ ಪಿಸುಮಾತು?) ಮಾಲಾ ಶ್ರೀನಿವಾಸ್ ಭಟ್ 22 ನೀನಾದೆ ನನ್ನ ಬಾಳ ರತ್ನ ಮಂಜರಿ ರಶ್ಮಿ ಅಂಗಡಿ 23 ಹೈಜಾಕ್ ಅಭಿವ್ಯಕ್ತಿ 24 ಉಸಿರೆನ್ನಲೇ ನಾ ನಿನ್ನ ಸೀಸನ್-೨ ಶುಭಸರಳ ಜೆ 25 ಸಾಧನೆಯ ಹಾದಿಯಲ್ಲಿ ರಂಗವಲ್ಲಿಸುತೆ 26 ಅಗಲಿ ನಿನ್ನನು ಬಾಳಲಾರೇನು ಕೃಷ್ಣಾ ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ: ರೇಖಾ ಕೆ ಎಸ್ ಅವರ ೧೭೦ ಅಧ್ಯಾಯಗಳ ಪುಟ್ಟ ಗೌರಿ ಮದುವೆ ಉದಯೋನ್ಮುಖ ಬರಹಗಾರರ ಯಾದಿ ಪ್ರತಿಲಿಪಿಯ ತಮ್ಮ ಪ್ರೊಫೈಲ್ನಲ್ಲಿ ಮೊದಲ ಬಾರಿಗೆ ಕನಿಷ್ಠ 80 ಅಧ್ಯಾಯಗಳ ಧಾರಾವಾಹಿ ರಚಿಸಿ ಪ್ರಕಟಿಸಿರುವ ಎಲ್ಲ ನವ ಬರಹಗಾರರ ಉತ್ಸಾಹ ಮತ್ತು ಪ್ರಯತ್ನ ಸಂತಸ ನೀಡಿದೆ. ಈ ಬರಹಗಾರರ ಸಾಹಿತ್ಯ ಪ್ರಯಾಣ ಎಲ್ಲಿಯೂ ವಿರಮಿಸದೇ ಮುಂದುವರೆಯಲಿ ಎಂದು ಆಶಿಸುತ್ತೇವೆ. ಈ ಬರಹಗಾರರಿಗೆ ಗೌರವ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು. ಕ್ರ.ಸಂ. ಕೃತಿ ಕರ್ತೃ 1 ಗಗನ ಕುಸುಮ ವಿಜಯಲಕ್ಷ್ಮಿ ಎಸ್. 2 ಸಂಗಾತಿ ನಿನ್ನ ಸಂಪ್ರೀತಿಯಲ್ಲಿ... ಕಾವ್ಯಶ್ರೀ ಹನುಮಂತ್ ರಾಜ್ 3 ಅತೀತದ ನೆರಳು ಹಂಸವೇಣಿ 4 ಫೇಸ್ಬುಕ್ ಸೋದರಿ ವಿನಯ ಮುರಳಿ ಕೃಷ್ಣ 5 ಅತ್ತೆಯ ಬಲೆ ರವಿ ಬೂಕನಬೆಟ್ಟ 6 ನಿನಗಾಗಿ ತೆರೆದಿದೆ ನನ್ನ ಮನ ಕೃಷ್ಣಪ್ರಿಯೇ 7 ಪ್ರೇಮದ ಕಾದಂಬರಿ ಕ್ಷಿತಿಜಾ 8 ಮರೆತಿಲ್ಲದ ನೆನಪು ನಿಧಿ 9 ಭಾರ್ಗವ್ಯಾಚ್ಯುತ ಸ್ವಾತಿ ಭೂಷಣ್ 10 ನೀನಾದೆ ನನ್ನ ಬಾಳ ರತ್ನ ಮಂಜರಿ ರಶ್ಮಿ ಅಂಗಡಿ 11 ಮುಡಿಯ ಜಾರಿದ ಹೂವಿದು! ನಾಗರತ್ನ ಗೌಡ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ಪ್ರತಿಲಿಪಿ ಸ್ಪರ್ಧೆಗಳ ತೀರ್ಪು ಮತ್ತು ಫಲಿತಾಂಶ ಪ್ರಕಟಣೆಯ ಪ್ರಕ್ರಿಯೆ22 ಆಗಸ್ಟ್ 20251. ಎಲ್ಲ ಅರ್ಹ ಕೃತಿಗಳ ಪಟ್ಟಿ ತಯಾರಿಕೆ ಕೃತಿ ಪ್ರಕಟಣೆಯ ಕಾಲಾವಧಿ ಕೃತಿಗಳು ಸ್ಪರ್ಧೆಯ ಕಾಲಾವಧಿಯಲ್ಲಿಯೇ ಪ್ರಕಟಗೊಂಡಿರಬೇಕು. ಕನಿಷ್ಠ ಅಧ್ಯಾಯಗಳ ಮಿತಿ ಸ್ಪರ್ಧೆಯ ವಿವರಗಳಲ್ಲಿ ತಿಳಿಸಿರುವ ಕನಿಷ್ಠ ಅಧ್ಯಾಯಗಳ ಮಿತಿಯನ್ನು ಕೃತಿ ಪೂರೈಸಿರಬೇಕು. ಪದಸಂಖ್ಯೆಯ ಮಿತಿ ಕೃತಿಯ ಪ್ರತಿ ಅಧ್ಯಾಯ ಸ್ಪರ್ಧೆಯ ವಿವರಗಳಲ್ಲಿ ತಿಳಿಸಿರುವ ಕನಿಷ್ಠ ಪದಸಂಖ್ಯೆಗಳ ಮಿತಿಯನ್ನು ಪೂರೈಸಿರಬೇಕು. ವಿಷಯ ನೀತಿ ಕಥೆಯು ಪ್ರತಿಲಿಪಿಯ ಮಾರ್ಗಸೂಚಿಗಳ ಪ್ರಕಾರವಾಗಿರಬೇಕು. ನಿಷೇಧಿತ ವಿಷಯವನ್ನು ಹೊಂದಿರುವ ಕೃತಿಗಳನ್ನು ಅನರ್ಹಗೊಳಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ನಕಲು ಅಥವಾ ಕೃತಿಚೌರ್ಯ ಮಾಡಿದ ಕೃತಿಗಳು ಅನರ್ಹವಾಗುತ್ತವೆ. 2. ವಿಜೇತ ಕೃತಿಗಳ ಆಯ್ಕೆಯ ಮಾನದಂಡಗಳು ನಿರ್ದಿಷ್ಟ ಪ್ರಾದೇಶಿಕ ಭಾಷೆಯಲ್ಲಿ ಪರಿಣಿತರಾಗಿರುವ ತೀರ್ಪುಗಾರ ಮತ್ತು ಸಂಪಾದಕ ಮಂಡಳಿಯ ಸಮಿತಿಯು ಕಿರು ಪಟ್ಟಿ ಮಾಡಲಾದ ಕೃತಿಗಳನ್ನು ಓದಿ ಈ ಕೆಳಗಿನ ಮಾನದಂಡಗಳ ಆಧಾರದ ಮೇಲೆ ವಿಜೇತ ಕೃತಿಗಳನ್ನು ನಿರ್ಣಯಿಸುತ್ತದೆ. ಕಥೆಯನ್ನು ಆಯ್ಕೆ ಮಾಡುವಾಗ ಈ ಕೆಳಗಿನ ಸಂಗತಿಗಳನ್ನು ಪರಿಗಣಿಸಲಾಗುತ್ತದೆ. ೧. ನಿರೂಪಣೆ - ಲೇಖಕರು ಕಥೆಯನ್ನು ಎಷ್ಟು ಚೆನ್ನಾಗಿ ನಿರೂಪಿಸುತ್ತಾರೆ, ಓದುಗರನ್ನು ಆರಂಭದಿಂದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಎಷ್ಟು ಸಫಲರಾಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ೨. ಸ್ವಂತಿಕೆ - ಪ್ರತಿಲಿಪಿಯಲ್ಲಿನ ಸಾಮಾನ್ಯ ಅಥವಾ ಪುನರಾವರ್ತಿತ ಕಥಾವಸ್ತುಗಳಿಗಿಂತ ಎದ್ದು ಕಾಣುವ ತಾಜಾ ಮತ್ತು ವಿಶಿಷ್ಟ ವಿಚಾರಗಳನ್ನು ಹೊಂದಿದೆಯೇ ಎಂದು ಗಮನಿಸಲಾಗುತ್ತದೆ. ೩. ಓದುಗರ ಮೇಲಿನ ಪ್ರಭಾವ ಕಥೆಯು ನಿರ್ಮಿಸುವ ಭಾವನಾತ್ಮಕ ಸಂಬಂಧ, ಓದುಗರು ಓದಿದ ನಂತರವೂ ಅದರ ಬಗ್ಗೆ ಯೋಚಿಸುವಂತೆ ಮಾಡುವಂತಿದೆಯೇ ಎಂದು ನೋಡಲಾಗುತ್ತದೆ. ೪. ಕಥಾವಸ್ತುವಿನ ತಿರುವುಗಳು ಮುಂದೆ ಏನಾಗುತ್ತದೆ ಎಂದು ತಿಳಿಯಲು ಓದುಗರನ್ನು ಕಾತರರನ್ನಾಗಿ ಮಾಡುವ, ಕಥಾಹಂದರದಲ್ಲಿನ ಅಚ್ಚರಿಯ ತಿರುವುಗಳು ಹೇಗೆ ಕೆಲಸ ಮಾಡಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ೫. ಕಥೆಯ ವೇಗ - ಎಳೆಯುವಿಕೆ ಅಥವಾ ಆತುರವಿಲ್ಲದ ಘಟನೆಗಳ ಸುಗಮ ಹರಿವು, ಓದುಗರ ಆಸಕ್ತಿಯನ್ನು ಜೀವಂತವಾಗಿರಿಸುತ್ತದೆ. ಇವುಗಳನ್ನು ಸಹ ಪರಿಗಣಿಸಲಾಗುತ್ತದೆ. ೬. ತಿರುವುಗಳು ನಿರೂಪಣೆಯಲ್ಲಿನ ಅನಿರೀಕ್ಷಿತ ಬೆಳವಣಿಗೆಗಳು ರೋಮಾಂಚನ ಮತ್ತು ಸಸ್ಪೆನ್ಸ್ ಅನ್ನು ಹೆಚ್ಚಿಸುತ್ತವೆ. ಅವುಗಳ ಬಳಕೆ ಮತ್ತು ಪ್ರಸ್ತುತಿಯನ್ನು ಗಮನಿಸಲಾಗುತ್ತದೆ. ೭. ಪಾತ್ರ ಅಭಿವೃದ್ಧಿ - ಪಾತ್ರಗಳು ಎಷ್ಟು ಚೆನ್ನಾಗಿ ವಿಕಸನಗೊಳ್ಳುತ್ತವೆ ಮತ್ತು ನೈಜವಾಗಿ ಭಾಸವಾಗುತ್ತವೆ, ಓದುಗರು ಅವುಗಳ ಬಗ್ಗೆ ಆಳವಾಗಿ ಕಾಳಜಿ ವಹಿಸುವಂತೆ ಮಾಡುತ್ತದೆ ಎಂಬುದನ್ನು ಪರಿಗಣಿಸಲಾಗುತ್ತದೆ. ೮. ಇವುಗಳ ಜೊತೆಗೆ ಸೃಜನಶೀಲತೆ, ಭಾಷ ಶುದ್ಧತೆಗಳನ್ನೂ ಪರಿಗಣಿಸಿ ಅಂಕಗಳನ್ನು ನೀಡಲಾಗುತ್ತದೆ. ಸೂಚನೆ: ತೀರ್ಪುಗಾರರ ಸಮಿತಿಯ ಎಲ್ಲಾ ಸದಸ್ಯರು ಕಥೆಗಳಿಗೆ ಪ್ರತ್ಯೇಕವಾಗಿ ಅಂಕ ನೀಡುತ್ತಾರೆ. ನಂತರ ಅವರ ಅಂಕಗಳನ್ನು ಸರಾಸರಿ ಮಾಡಲಾಗುತ್ತದೆ ಮತ್ತು ಹೆಚ್ಚಿನ ಅಂಕ ಪಡೆದ ಕೃತಿಯನ್ನು ವಿಜೇತ ಕೃತಿಯಾಗಿ ಘೋಷಿಸಲಾಗುತ್ತದೆ. 3. ಎರಡು ಬಾರಿ ಪರಿಶೀಲನೆ ತೀರ್ಪುಗಾರರು ಅಂಕಗಳನ್ನು ನೀಡಿದ ಮೇಲೆ, ಸಂಪಾದಕ ಮಂಡಳಿ ಮತ್ತೊಮ್ಮೆ ಕೃತಿಗಳನ್ನು ಪರಿಶೀಲಿಸುತ್ತದೆ. ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆಯೇ ಮತ್ತು ತೀರ್ಪು ನ್ಯಾಯಯುತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತದೆ. ಅದರ ನಂತರ, ವಿಜೇತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ತೀರ್ಪಿನ ನಿಖರತೆಗಾಗಿ ಎರಡು ಬಾರಿ ಪರಿಶೀಲಿಸಲಾಗುತ್ತದೆ. 4. ಫಲಿತಾಂಶ ಪ್ರಕಟಣೆ ಫಲಿತಾಂಶಗಳನ್ನು ಸ್ಪರ್ಧೆಯ ವಿವರಗಳಲ್ಲಿ ತಿಳಿಸಿರುವ ಫಲಿತಾಂಶದ ದಿನಾಂಕದಂದು ಅಧಿಕೃತ ಪ್ರತಿಲಿಪಿ ಬ್ಲಾಗ್ ವಿಭಾಗದಲ್ಲಿ ಪ್ರಕಟಣೆ ಮಾಡಲಾಗುತ್ತದೆ. ವಿಜೇತರಿಗೆ ಅಪ್ಲಿಕೇಶನ್ನಲ್ಲಿ ನೋಟಿಫಿಕೇಶನ್ ಅಥವಾ ಇಮೇಲ್ ಮೂಲಕ ಫಲಿತಾಂಶ ಮಾಹಿತಿಯನ್ನು ತಿಳಿಸಲಾಗುತ್ತದೆ. ಕಥೆಗಳನ್ನು ಬರೆಯುವುದು ಮತ್ತು ನಿರ್ಣಯಿಸುವುದು ಹೆಚ್ಚು ವ್ಯಕ್ತಿನಿಷ್ಠವಾಗಿದೆ. ಒಬ್ಬ ವ್ಯಕ್ತಿ ಏನು ಇಷ್ಟಪಡುತ್ತಾನೆ, ಇನ್ನೊಬ್ಬರು ಏನು ಇಷ್ಟಪಡದಿರಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲರಿಗೆ ಸಮಾನ ಅವಕಾಶ ಒದಗಿಸಿ, ನ್ಯಾಯಯುತ, ಸ್ಥಿರ ಮತ್ತು ವಸ್ತುನಿಷ್ಠವಾಗಿ ಫಲಿತಾಂಶ ನೀಡಲು ಪ್ರಯತ್ನಿಸಲಾಗುತ್ತದೆ. ಶುಭವಾಗಲಿ! ಪ್ರತಿಲಿಪಿ ಸ್ಪರ್ಧಾ ವಿಭಾಗಇನ್ನೂ ಹೆಚ್ಚು ತೋರಿಸಿ
- ‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 9’ ಸ್ಪರ್ಧೆಯ ಫಲಿತಾಂಶ04 ಮೇ 2025ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 9 ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಉತ್ತಮ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆ, ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ ಹಿಂದಿನ ಆವೃತ್ತಿಗಳಂತೆ ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 9 ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿ ಸ್ಪರ್ಧೆಯ ಯಶಸ್ಸಿಗೆ ಕಾರಣರಾದ ಎಲ್ಲ ಬರಹಗಾರರಿಗೆ ಧನ್ಯವಾದಗಳು. ಸ್ಪರ್ಧೆಯ ಕುರಿತು ನಿಮ್ಮ ಆಸಕ್ತಿ ಮತ್ತು ಉತ್ಸಾಹ ಶ್ಲಾಘನೀಯ. ಸ್ಪರ್ಧೆಗೆ ಅರವತ್ತಕ್ಕೂ ಅಧಿಕ ಕೃತಿಗಳು ಸಲ್ಲಿಸಲ್ಪಟ್ಟಿದ್ದವು. ಆದರೆ ಅವುಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಧಾರಾವಾಹಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗಿದೆ. ದೀರ್ಘ ಧಾರಾವಾಹಿಗಳನ್ನು ರಚಿಸುವಾಗ ಬರಹಗಾರರಲ್ಲಿ ಕತೆಯನ್ನು ಮುಂದುವರೆಸುವಲ್ಲಿ ಅನೇಕ ತೊಡಕುಗಳು ಎದುರಾಗಬಹುದು. ಜೊತೆಗೆ ಸಮಯದ ಮಿತಿ ಒಳಪಟ್ಟಾಗ ಒತ್ತಡದ ಮನಸ್ಥಿತಿ ಒಂದು ಕೃತಿಯ ರೂಪುರೇಷೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಇವೆಲ್ಲವುಗಳನ್ನು ಸಮರ್ಥವಾಗಿ ಎದುರಿಸಿ ಬರಹಗಾರರು ಅತ್ಯುತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂದು ನಾವು ಬಯಸುತ್ತೇವೆ. ಬರಹಗಾರರಿಗೆ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಪ್ರತಿಯೊಬ್ಬ ಬರಹಗಾರನಿಗೂ ಅವನದೇ ಆದ ತಂತ್ರವಿರುತ್ತದೆ. ಅವುಗಳನ್ನು ಪ್ರತಿಯೊಬ್ಬ ಬರಹಗಾರ ಸ್ವತಃ ಗಮನಿಸಬೇಕು, ಆಗ ಎದುರಾಗುವ ತೊಡಕುಗಳಿಂದ ಸಮರ್ಥವಾಗಿ ಹೊರಬರಲು ಸಾಧ್ಯ. ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಎಲ್ಲಾ ಕೃತಿಗಳೂ ಒಂದೊಂದು ರೀತಿಯಲ್ಲಿ ಉತ್ತಮವೆನಿಸುತ್ತಿದ್ದವು. ಬರವಣಿಗೆ ಒಂದು ಸೃಜನಾತ್ಮಕ ಕಲೆಯಾಗಿರುವುದರಿಂದ ಪ್ರತಿಯೊಬ್ಬರ ಭಾವ, ದೃಷ್ಟಿಕೋನಗಳೂ ವಿಭಿನ್ನವಾಗಿರುತ್ತವೆ. ಅದೇ ನಿಟ್ಟಿನಲ್ಲಿ ಆ ಕೃತಿಗಳನ್ನು ಓದಿ ತೀರ್ಪು ನೀಡುವ ಕಾಯಕವೂ ಸುಲಭದ್ದಲ್ಲ. ಆದರೂ ಸಲ್ಲಿಸಲ್ಪಟ್ಟಿರುವ ಕೃತಿಗಳಲ್ಲಿ ಕಥಾಹಂದರ, ಸೃಜನಾತ್ಮಕತೆ, ಪಾತ್ರಪೋಷಣೆ, ನಿರೂಪಣೆ, ಭಾಷೆ ಮತ್ತು ವ್ಯಾಕರಣ ಶುದ್ಧಿ ಮುಂತಾದ ಮಾನದಂಡಗಳ ಆಧಾರದ ಮೇಲೆ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳನ್ನು ರಚಿಸುವತ್ತ ಗಮನ ಹರಿಸುವಂತಾಗಲಿ ಎಂದು ಆಶಿಸುತ್ತೇವೆ. ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು- ವಿಜೇತ ಕೃತಿಗಳು ಪ್ರಥಮ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ಸಾಹಿತಿಗಳ ವಿಶೇಷ ಪೋಸ್ಟ್ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ ಪ್ರಶಾಂತ್ ಶಿರ್ವಅವರಶುಕ್ತಿಜ ಕತೆಯ ಕುರಿತು: ಉತ್ತಮ ಕಲ್ಪನೆಯಿಂದ ರಚನೆಯಾದ ಈ ಧಾರಾವಾಹಿ, ಮನುಷ್ಯನ ಆಸೆ, ಲಾಲಸೆ, ಅವುಗಳ ಪರಿಣಾಮಗಳನ್ನು ತೆರೆದಿಡುತ್ತಾ ಉತ್ತಮವಾಗಿ ಸಾಗುತ್ತದೆ. ಐತಿಹಾಸಿಕ ಮತ್ತು ಭೌಗೋಳಿಕ ಅಂಶಗಳು ಕತೆಯ ಮೆರಗನ್ನು ಹೆಚ್ಚಿಸುತ್ತವೆ. ದ್ವಿತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ಸಾಹಿತಿಗಳ ವಿಶೇಷ ಪೋಸ್ಟ್ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ ರಮ್ಯಾ ಅಲೋಕ್ಅವರಸತಿ ಕತೆಯ ಕುರಿತು: ಒಂದು ಸಾಮಾನ್ಯ ಗೃಹಿಣಿ ಸತಿಯಾದ ಕತೆ ಇದು. ಕೌಟುಂಬಿಕ ಭಿನ್ನಾಭಿಪ್ರಾಯಗಳು, ಮನಸ್ತಾಪಗಳನ್ನು ಬಳಸಿಕೊಂಡು, ಹೆಣ್ಣಿನ ಅಂತರಾಳವನ್ನು ತೆರೆದಿಡುವ ಈ ಧಾರಾವಾಹಿ ಉತ್ತಮ ನಿರೂಪಣೆಯಿಂದ ಮನಮುಟ್ಟುತ್ತದೆ. ತೃತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ಸಾಹಿತಿಗಳ ವಿಶೇಷ ಪೋಸ್ಟ್ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ ಶ್ರೀನಿವಾಸ್ ಸಂಡೂರ್ಅವರಸಂರವ - ಗುಪ್ತ ಸಾಮ್ರಾಜ್ಯದ ಉದಯ ಕತೆಯ ಕುರಿತು: ಐತಿಹಾಸಿಕ ಧಾರಾವಾಹಿಯ ಸಾಲಿಗೆ ಸೇರುವ ಈ ಕತೆ ಗುಪ್ತ ಸಾಮ್ರಾಜ್ಯದ ಆಳ-ಅಗಲವನ್ನು ವಿಶ್ಲೇಷಿಸುತ್ತಾ ಸಾಗುತ್ತದೆ. ಒಳ್ಳೆಯ ನಿರೂಪಣೆಯೊಂದಿಗೆ ಪ್ರತಿ ಅಧ್ಯಾಯದಲ್ಲಿ ಕುತೂಹಲ ಹುಟ್ಟಿಸುತ್ತದೆ. ನಾಲ್ಕರಿಂದ ಹತ್ತನೆಯ ಸ್ಥಾನ ವಿಜೇತರ ಪಟ್ಟಿ: ಈ ಕೃತಿಗಳ ಕರ್ತೃಗಳಿಗೆ ತಲಾ 3,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ಸಾಹಿತಿಗಳ ವಿಶೇಷ ಪೋಸ್ಟ್ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಸ್ಥಾನ ಕೃತಿ ಕರ್ತೃ ೪. ಅಲ್ಲಿ ರಣದುಂದುಭಿ ಇಲ್ಲೊಂದು ಭಾವಗೀತೆ ಸವಿ ಸಾನಿಧ್ಯ ೫. ಪರ್ವ - ಅನುರಾಗದ ಅಲೆಗಳ ಮೇಲೆ ಒಲಿದ ಸ್ವರಗಳು ಚೈತ್ರ ಯೋಗೇಶ್ ೬. Mission ಕಾಶ್ಮೀರ ದಿ ಬ್ಲಾಕ್ ೭. ನಿಗೂಢ ಕರೆ ಶಿವಶಂಕರ್ ಎಸ್ ಜಿ ೮. ಮನೋಮಯ ವಿಜಯ ಭಾರತಿ ೯. ಕಾಯುತಿರುವ ವಿಹಂಗರಾಜ ಬನಶಂಕರಿ ಕುಲಕರ್ಣಿ ೧೦. ನಿನ್ನುಸಿರೇ ಸವಿಗಾನ ಸುಜಲ ಘೋರ್ಪಡೆ ಹನ್ನೊಂದರಿಂದ ಮೂವತ್ತನೆಯ ಸ್ಥಾನ ವಿಜೇತರ ಪಟ್ಟಿ: ಈ ಕೃತಿಗಳ ಕರ್ತೃಗಳಿಗೆ ತಲಾ 1,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ಸಾಹಿತಿಗಳ ವಿಶೇಷ ಪೋಸ್ಟ್ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಸ್ಥಾನ ಕೃತಿ ಕರ್ತೃ ೧೧. ಮಂದಾರ ಪುಷ್ಪ ವಿಜಯಲಕ್ಷ್ಮಿ ಎಸ್ ೧೨. ಸೂತಪುತ್ರ ಕರ್ಣ ಅಭಿವ್ಯಕ್ತಿ ೧೩. ಅಪರಿಮಿತ ನವಿ ೧೪. ಗಿಣಿ ಕಚ್ಚಿದ ಸೀಬೆ ವೇದಾ ಮಂಜುನಾಥ್ ೧೫. ತ್ರಿಕೋನ ಪ್ರೇಮ ಕಥೆ ಅಜೇಯ ನೀರ್ಕಜೆ ೧೬. ಮೋಹನ ರಾಗ! ಮನಶ್ರೀ ೧೭. ಮಾಯೆಯ ಮುಸುಕಿನಲ್ಲಿ ಹೃದಯ ಶೋಧನೆ ಪುಷ್ಪಲತಾ ಹರೀಶ್ ೧೮. ಕಲ್ಲರಳಿ ಹೂವಾಗಿ ಅಭಿಲಾಷ ೧೯. ಏಕೆ ಸುಳಿದೆ ನನ್ನೊಳಗೆ ನೀ ಹೀಗೆ ಸಹನಾ ಹೆಗಡೆ ೨೦. ಕಾರ್ಮೋಡ ರೇಖಾ ಕೆ. ಎಸ್. ೨೧. ಪದವಿರದ ಮೌನ ಕವನ ರೂಪಾ ರೈ ೨೨. ಶಪಿತ ಶಿಲೆಗಳು ಅಶ್ವಿನಿ ಜೈನ್ ೨೩. ರುಧಿರಾಭಿಷೇಕ ಮಾಲಾ ಶ್ರೀನಿವಾಸ್ ಭಟ್ ೨೪. ಪಂಗುಂ ಲಂಘಯತೇ ಗಿರಿಮ್ ಗೋಪಾಲ ಹೆಗಡೆ ೨೫. ನನ್ನಂತರಾಳವೇ ನೀನು ಸತ್ಯಪ್ರದ ೨೬. ಸಂಬಂಧಗಳು ರಂಗವಲ್ಲಿಸುತೆ ೨೭. ಸಮಯದ ಗೊಂಬೆ ಸಂಧ್ಯಾ ಭಟ್ ೨೮. ಕಡಲೊಳಗಿನ ಪ್ರೀತಿ ಶ್ರೀಲೇಖ ೨೯. ಅನುರಾಗ ಉತ್ಸವ ಸ್ವಾತಿ ಭೂಷಣ್ ೩೦. ನೀ ಇರಲು ಜೊತೆಯಲ್ಲಿ!!! ಕುಶಲ ಸಂಧ್ಯಾ 100 ಕ್ಕೂ ಅಧಿಕ ಅಧ್ಯಾಯಗಳನ್ನು ರಚಿಸಿದವರ ಯಾದಿ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 100 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಅವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು. ಈ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳಲ್ಲಿ, ಓದುಗರ ಎಂಗೇಜ್ಮೆಂಟ್ ಸ್ಕೋರ್ ಆಧಾರದ ಮೇಲೆ ಟಾಪ್ 20 ಧಾರಾವಾಹಿಗಳ ಕರ್ತೃಗಳು ನೀಡುವ ವಿಳಾಸಕ್ಕೆ ವಿಶೇಷ ಬಹುಮಾನವನ್ನು ಕಳುಹಿಸಲಾಗುವುದು. (ಈ ಕೆಳಗೆ ಎಂಗೇಜ್ಮೆಂಟ್ ಸ್ಕೋರ್ ಆಧಾರದ ಮೇಲೆ ಧಾರಾವಾಹಿಗಳನ್ನು ಕ್ರಮವಾಗಿ ಪಟ್ಟಿ ಮಾಡಲಾಗಿದೆ) ಸ್ಥಾನ ಕೃತಿ ಕರ್ತೃ ೧. ಅಪರಿಮಿತ ನವಿ ೨. ಕಾರ್ಮೋಡ ಕರಗಿತು ವಿದ್ಯಾ ವಾಮಂಜೂರು ೩. ಅಲ್ಲಿ ರಣದುಂದುಭಿ ಇಲ್ಲೊಂದು ಭಾವಗೀತೆ ಸವಿ ಸಾನಿಧ್ಯ ೪. ಉಸಿರೆನ್ನಲೇ ನಾ ನಿನ್ನ ಶುಭ ಸರಳ ಜೆ ೫. ಪರ್ವ - ಅನುರಾಗದ ಅಲೆಗಳ ಮೇಲೆ ಒಲಿದ ಸ್ವರಗಳು ಚೈತ್ರ ಯೋಗೇಶ್ ೬. ಮಿಡಿದಿದೆ ಹೃದಯ ಇರೆ ಮಾತೇಕೆ ಕೃಷ್ಣಾ ೭. ಮತ್ತೆ .... ಒಲಿಯುವುದೇ ಒಲವು? ಕೌಶಲ್ಯ ಕಾರ್ತಿಕ್ ೮. ದುರ್ಗಾಶಕ್ತಿ ಭಾಗ 2 ಮಧುಸೂರ್ಯ ಭಟ್ ೯. ಸಂರವ - ಗುಪ್ತ ಸಾಮ್ರಾಜ್ಯದ ಉದಯ ಶ್ರೀನಿವಾಸ್ ಸಂಡೂರ್ ೧೦. ಪದವಿರದ ಮೌನ ಕವನ ರೂಪಾ ರೈ ೧೧. ದೊರೆಸಾನಿ ಉಮಾ ರಾವ್. ಎಸ್. ಭಟ್. ೧೨. ಕಾರ್ಮೋಡ ರೇಖಾ ಕೆ. ಎಸ್. ೧೩. ನೀ ಸದ್ದಿರದೆ ಬೆಳಗಿದೆ ನನ್ನೊಲವಾ ಇಂದ್ರ ೧೪. ರುಧಿರಾಭಿಷೇಕ ಮಾಲಾ ಶ್ರೀನಿವಾಸ್ ಭಟ್ ೧೫. ಭಾವ ಲಹರಿ ಶ್ರೀ ಭಾಗ್ಯ ಪೂಜಾರಿ ೧೬. ತ್ರಿಕೋನ ಪ್ರೇಮ ಕಥೆ ಅಜೇಯ ನೀರ್ಕಜೆ ೧೭. ಕಾಣದ ಶಕ್ತಿ, ನಾನ ಅರಿಯುವೆನು? ಅಂಬಿಕಾ ಉಗಳೆ ೧೮. ಪಂಗುಂ ಲಂಘಯತೇ ಗಿರಿಮ್ ಗೋಪಾಲ ಹೆಗಡೆ ೧೯. ನಿನ್ನೊಲವಿನ ಕೊಳಲಿಗೆ ದನಿಯಾಗುವೆ ನಾ ನಾಗರತ್ನ ನಾಯ್ಕ್ ೨೦. ಮನೋಮಯ ವಿಜಯ ಭಾರತಿ ೨೧. ಚಂದದ ಗುಟ್ಟೊಂದು ಹೇಳಲೇನು ರಾಧಾಮಣಿ ಜೆ. ಹೆಚ್. ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ: ಚೈತ್ರ ಯೋಗೇಶ್ಅವರ ೨೯೮ ಅಧ್ಯಾಯಗಳಪರ್ವ - ಅನುರಾಗದ ಅಲೆಗಳ ಮೇಲೆ ಒಲಿದ ಸ್ವರಗಳು ಉದಯೋನ್ಮುಖ ಬರಹಗಾರರ ಯಾದಿ ಪ್ರತಿಲಿಪಿಯ ತಮ್ಮ ಪ್ರೊಫೈಲ್ನಲ್ಲಿ ಮೊದಲ ಬಾರಿಗೆ ಕನಿಷ್ಠ 70 ಅಧ್ಯಾಯಗಳ ಧಾರಾವಾಹಿ ರಚಿಸಿ ಪ್ರಕಟಿಸಿರುವ ಎಲ್ಲ ನವ ಬರಹಗಾರರ ಉತ್ಸಾಹ ಮತ್ತು ಪ್ರಯತ್ನ ಸಂತಸ ನೀಡಿದೆ. ಈ ಬರಹಗಾರರ ಸಾಹಿತ್ಯ ಪ್ರಯಾಣ ಎಲ್ಲಿಯೂ ವಿರಮಿಸದೇ ಮುಂದುವರೆಯಲಿ ಎಂದು ಆಶಿಸುತ್ತೇವೆ. ಈ ಬರಹಗಾರರಿಗೆ ಗೌರವ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು. ಕ್ರ.ಸಂ. ಕೃತಿ ಕರ್ತೃ 1 ಕಲ್ಲರಳಿ ಹೂವಾಗಿ ಅಭಿಲಾಷ 2 ಕಡಲೊಳಗಿನ ಪ್ರೀತಿ ಶ್ರೀಲೇಖ 3 ಸತಿ ರಮ್ಯಾ ಅಲೋಕ್ 4 ಅದೃಷ್ಟ ದೇವತೆ ಕಮಲಾಕ್ಷಿ ಶೆಟ್ಟಿಗಾರ್ 5 ಅನುರಾಗ ಉತ್ಸವ ಸ್ವಾತಿ ಭೂಷಣ್ 6 Mission ಕಾಶ್ಮೀರ ದಿ ಬ್ಲಾಕ್ 7 ಕಾಣದ ಶಕ್ತಿ, ನಾನ ಅರಿಯುವೆನು? ಅಂಬಿಕಾ ಉಗಳೆ 8 ಮಂದಾರ ಪುಷ್ಪ ವಿಜಯಲಕ್ಷ್ಮಿ ಎಸ್ 9 ಮುತ್ತಿನ ಮಳೆ ಲತಾ ರವಿ 10 ನೀ ಸದ್ದಿರದೆ ಬೆಳಗಿದೆ ನನ್ನೊಲವಾ ಇಂದ್ರ 11 ಅಂತರಾಳದ ತೀರ್ಪು ಸವಿತಾ ಮುದ್ಗಲ್ 12 ನಿಯತಿ ಮಂಗಳಾ ಬಾಡನಟ್ಟಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- 'ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8' ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ17 ಡಿಸೆಂಬರ್ 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ಕನ್ನಡ ಆಯೋಜಿಸಿದ್ದಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8 ಸ್ಪರ್ಧೆಉತ್ತಮ ಪ್ರತಿಕ್ರಿಯೆ ಪಡೆದು ಮುಕ್ತಾಯಗೊಂಡಿದೆ. ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಒಳ್ಳೆಯ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆ, ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಎಲ್ಲ ಕೃತಿಗಳು ವಿಭಿನ್ನ ಮತ್ತು ಉತ್ತಮ ಕಥಾವಸ್ತುವಿನ ಮೇಲೆ ರಚಿಸಲ್ಪಟ್ಟಿದ್ದವು; ನಿರೂಪಣೆ, ಕಥಾ ಸಾರ ಬಹಳ ಉತ್ತಮವಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರ ಪ್ರಯತ್ನವೂ ಶ್ಲಾಘನೀಯ. ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು. ಸ್ಪರ್ಧೆಯ ನಿಯಮಗಳನ್ನು ಪಾಲಿಸಿರದ ಕತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿಲ್ಲ. ಉಳಿದ ಕತೆಗಳಲ್ಲಿ ಬಹುತೇಕ ಎಲ್ಲಾ ಕತೆಗಳು ಭಿನ್ನವಾಗಿ ರಚಿಸಲ್ಪಟ್ಟಿದ್ದವು. ಪ್ರೀತಿ, ಕ್ರೈಮ್ ಥ್ರಿಲ್ಲರ್, ಭಯಾನಕ, ಕೌಟುಂಬಿಕ, ಸಾಮಾಜಿಕ ಹೀಗೆ ವಿವಿಧ ರೀತಿಯ ಕತೆಗಳು ಸಲ್ಲಿಸಲ್ಪಟ್ಟು ಸ್ಪರ್ಧೆಯ ಉದ್ದೇಶವನ್ನು ಸಾರ್ಥಕಗೊಳಿಸಿ, ಸ್ಪರ್ಧೆಗೆ ಇನ್ನಷ್ಟು ಮೆರುಗು ತಂದುಕೊಟ್ಟಿವೆ. ಆದರೂ ಕೆಲವು ಬರಹಗಾರರು ಚಿಹ್ನೆಗಳು, ವ್ಯಾಕರಣ ದೋಷಗಳ ಕುರಿತು ಇನ್ನಷ್ಟು ಗಮನ ಹರಿಸಬೇಕಾಗಿರುವುದು ಅಗತ್ಯ. ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ. ಎಲ್ಲಾ ಬರಹಗಾರರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ. ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು- ವಿಜೇತ ಕೃತಿಗಳು ಪ್ರಥಮ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವೈಶಾದಿತ್ಯಅವರಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಕತೆಯ ಕುರಿತು:ಕನ್ನಡ ವ್ಯಾಕರಣ ಮತ್ತು ಪುನರ್ಜನ್ಮವನ್ನು ಸಮೀಕರಿಸಿ ರಚಿತವಾದ ಈ ಕತೆ ವಿಭಿನ್ನ ಕಥಾಹಂದರ ಮತ್ತು ಉತ್ತಮ ಪ್ರಸ್ತುತಿಯಿಂದ ಗಮನ ಸೆಳೆಯುತ್ತದೆ. ದ್ವಿತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಪ್ರಶಾಂತ್ ಶಿರ್ವಅವರಒಂಟಿಗ ಕತೆಯ ಕುರಿತು:ಐತಿಹಾಸಿಕ ಕಾಲಘಟ್ಟದಲ್ಲಿ ಹಳ್ಳಿಯ ಜನಜೀವನ, ಪ್ರಾಣಿ ಪ್ರಪಂಚ ಮತ್ತು ಬ್ರಿಟಿಷ್ ಆಡಳಿತ, ಜನರ ನಂಬಿಕೆಗಳು ಇವುಗಳನ್ನೆಲ್ಲ ಅಚ್ಚುಕಟ್ಟಾಗಿ ಕತೆಯಲ್ಲಿ ಬಿಂಬಿಸಲಾಗಿದೆ. ಉತ್ತಮ ನಿರೂಪಣೆಯ ಮೂಲಕ ಕತೆ ಗಮನ ಸೆಳೆಯುತ್ತದೆ. ತೃತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವೀಣಾಅವರತುಡಿತ (ಸಮಗ್ರ) ಕತೆಯ ಕುರಿತು:ಸಾಮಾನ್ಯ ವ್ಯಕ್ತಿಯ ಜೀವನದ ಕಥಾಹಂದರವೊಂದನ್ನು ಉತ್ತಮ ನಿರೂಪಣೆಯ ಮೂಲಕ ಹೆಣೆಯಲಾಗಿದೆ. ಪ್ರತಿ ಹಂತದಲ್ಲಿಯೂ ಅಚ್ಚುಕಟ್ಟು ಪ್ರಸ್ತುತಿಯ ಮೂಲಕ ಮಧ್ಯಮ ವರ್ಗದ ಪುರುಷನೊಬ್ಬನ ಜೀವನವನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ. ನಾಲ್ಕನೆಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ರಮ್ಯ ನೆಕ್ಕರೆಕಾಡುಅವರ"ಸೀಳು" : ದ್ವಂದ್ವಗಳ ಸುಳಿಯಲ್ಲಿ ಐದನೆಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಡಾ. ರಾಜೇಶ್ವರಿ ಶ್ರೀನಿವಾಸಅವರಚಂದ್ರ- ಚಕೋರಿ ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಪ್ರಸನ್ನಾ ವಿ ಚೆಕ್ಕೆಮನೆಅವರಕಣ್ಣೀರ ಅಲೆಯಲ್ಲಿ ಕಾಗದದ ದೋಣಿ ಏಳನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಪುಷ್ಕರಿಣಿಅವರಆ... ಆ...!! (ಸಮಗ್ರ) ಎಂಟನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವಾಗ್ಮಿಯಅವರಭಾವಬಂಧನ ಒಂಬತ್ತನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶುಭಾ ಶ್ರೀನಾಥ್ಅವರಬಾಳ ಪಯಣದಲಿ ಹತ್ತನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಅಶೋಕ್ ಕುಮಾರ್ ಜಿ. ಎಸ್ಅವರಅಸಹನೆಯ ಜ್ವಾಲೆ ಹನ್ನೊಂದನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶಿವಶಂಕರ್ ಎಸ್. ಜಿಅವರನರ್ತಿಸದ ನವಿಲು! ಹನ್ನೆರಡನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವೇದಾ ಮಂಜುನಾಥನ್ಅವರಹೂವು ಮುಳ್ಳು ಜೋಡಿಯಾಗಿ ಹದಿಮೂರನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶ್ರುವಿಅವರಎಲ್ಲ ಮರೆತಿರುವಾಗ! ಹದಿನಾಲ್ಕನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಉಮಾ ಶಂಕರಿಅವರವಾತ್ಸಲ್ಯದ ಕರೆ ಹದಿನೈದನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಚೈತ್ರ ಭಟ್ಅವರಕತ್ತಲ ಕಾಮನಬಿಲ್ಲು ಹದಿನಾರನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವಿಜಯ ಭಾರತಿಅವರಅಂತರಾಳ ಹದಿನೇಳನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಸೌಮ್ಯ ಶ್ರೀಅವರಆರಿಗೆ ವಧುವಾದೆ(ಸಮಗ್ರ) ಹದಿನೆಂಟನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶ್ರೀ ಬಾಲಾಅವರಸಂಭವಾಮಿ ಹತ್ತೊಂಬತ್ತನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಸಂಧ್ಯಾ ಭಟ್ಅವರನೀಲಗಿರಿಯ ನೀಲ ಕುರುಂಜಿ ಇಪ್ಪತ್ತನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಅಚಲಾ ಬಿ ಹೆನ್ಲಿಅವರವಲ್ಲಿಯ ಬಳ್ಳಿ ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು ಉತ್ತಮ ಕಥಾಹಂದರ, ನಿರೂಪಣೆಗಳ ಮೂಲಕ ತೀರ್ಪುಗಾರರ ಮೆಚ್ಚುಗೆ ಪಡೆದ ಈ ಕೃತಿಗಳ ಕರ್ತೃಗಳಿಗೆ ಡಿಜಿಟಲ್ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು. ಎಲ್ಲ ಬರಹಗಾರರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳ ಮೂಲಕ ಸಾಹಿತ್ಯಾಸಕ್ತರ ಮನಗೆದ್ದು ಜನಪ್ರಿಯತೆ ಗಳಿಸುವಂತಾಗಲಿ ಎಂದು ಹಾರೈಸುತ್ತೇವೆ. ಕ್ರ. ಸಂ. ಕೃತಿ ಕರ್ತೃ 1 ಪ್ರಮದ್ವರೆ ಶುಭಾ ಗಿರಣಿಮನೆ 2 ನಾ ಬಿಡಲಾರೆ ಎಂದೂ ನಿನ್ನ... ವೆಂಕಟೇಶ್ ಡಿ ಎನ್ 3 ತಮಸೋಮಾ ಜ್ಯೋತಿರ್ಗಮಯ ಮಲ್ಲಿಕಾ ಶಾಂತಾರಾಮ್ ಶೆಟ್ಟಿ 4 ಪಂಜರದ ಬೇಟೆ ಅಭಿವ್ಯಕ್ತಿ 5 ದೇವರ ಆಟ ಬಲ್ಲವರಾರು!? ಉರ್ಮಿಲಾ ಪಾಶ್ಚಾಪೂರ 6 ಪದ್ಮಗಂಧಿನಿ ಲಕ್ಷ್ಮಿ ಗೌಡ 7 ಉಸಿರಾದೆ ನೀ ಜೀವಕೆ ವಿದ್ಯಾ ಮೂರ್ತಿ 8 ಭೂತಗನ್ನಡಿ ಓಂಪ್ರಕಾಶ್ ನಾಯ್ಕ್ 9 ಪಿರಮಿಡ್ ಆದರ್ಶ ಪಟೇಲ್ 10 "ಆಪರೇಷನ್ ವಿಸ್ಮಯ" ಮಧುಸೂರ್ಯ ಭಟ್ 11 ನಿಗೂಢ ನಾಯಕ ಸುಮನ ಕಾರಂತ್ 12 ಹೃದಯ ವೀಣೆ ಮಿಡಿಯಿತು ಸುಜಲ ಘೋರ್ಪಡೆ 13 ದೇವರ ಆಟ ಬಲ್ಲವರಾರು ಕೀರ್ತನ. ಎಂ 14 ಈ ಯಾನಕ್ಕೆ ನೀನೇ ನಾವಿಕ ಲಕ್ಷ್ಮಿ ಎಂ. ಆರ್ 15 ಸುಪ್ತಸಾಗರ ಸುನೇತ್ರೀ 16 ಪ್ರೀತಿಯ ರೀತಿ ನಿಯತಿಯ ನೀತಿ ಆಶ್ರಿತಾ ಕಿರಣ್ 17 ದೊರೆಸಾನಿ ಸ್ಫೂರ್ತಿ 18 ಕ್ಷಮಯಾಧರಿತ್ರಿ(ಪ್ರೀತಿಯ ಅಲೆಯಲಿ ನಲುಗಿತೆ ಹೃದಯ?) ಮಾಲಾ ಶ್ರೀನಿವಾಸ್ ಭಟ್ 19 ನಿನ್ನದೇ ಚಡಪಡಿಕೆ ಅಶ್ವಿನಿ ಜೈನ್ 20 ನಿನ್ನೊಂದಿಗೆ ಈ ಜೀವನ ಅನು 21 ಮಗದೊಮ್ಮೆ ಪ್ರೀತಿಸಲಾರೆಯ ನನ್ನ... ತುಳಸಿ ರಾಜೇಶ್ (ರಾಶಿ) 22 ತ್ರಿವೇಣಿ ಸ್ಪೂರ್ತಿಯ ಚಿಲುಮೆ ಅರ್ಚನಾ ಕುಲಕರ್ಣಿ 23 ನೀ ನನ್ನ ಕಡಲು ಸಾನ್ವಿ ಹೆಗಡೆ 24 ಹೃದಯದಿ ನೀನಿರಲು ಲಾವಣ್ಯ ಪರಮೇಶ್ 25 ಭಾರ್ಗವನ ಸೀತಾ ಕಾವ್ಯಶ್ರೀ 26 ಪರಿಶುದ್ಧವಾದ ಪ್ರೇಮವೆಂದರೆ ಅದು ಸಿಗಲಾರದ ಪ್ರೀತಿ!! ಎಸ್ ಸತ್ಯಪ್ರದ 27 ಪ್ರೇಮ ತೀರ ವರ ಲಕ್ಷ್ಮಿ 28 ಪ್ರೇಮ ಮತ್ಸರ ಆಮ್ರಪಾಲಿ 29 ಸು-ಮನ ಮಂಥನ.. ಪ್ರೀತಿಯ ಮನದಮಾತು.. ಮಧುಮತಿ ಕೆ 30 ಮುಸಂಜೆಯ ಮೌನರಾಗ.. ಆಶಾ 120 ಕ್ಕೂ ಅಧಿಕ ಅಧ್ಯಾಯಗಳನ್ನು ರಚಿಸಿದವರ ಯಾದಿ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 120 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 120 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಬರಹಗಾರರು ನೀಡುವ ವಿಳಾಸಕ್ಕೆ ಕಳುಹಿಸಲಾಗುವುದು. ಜೊತೆಗೆ ಬರಹಗಾರರ ಸಂದರ್ಶನವನ್ನು ಪ್ರತಿಲಿಪಿ ಬಳಗದ ಜೊತೆ ಹಂಚಲಾಗುವುದು. ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ: ಆಮ್ರಪಾಲಿಅವರಪ್ರೇಮ ಮತ್ಸರ ಕ್ರ. ಸಂ. ಕೃತಿ ಕರ್ತೃ 1 ಪ್ರೇಮ ಮತ್ಸರ ಆಮ್ರಪಾಲಿ 2 ಪ್ರೀತಿ ಬಂಧವೋ.ಬಂಧನವೋ...? ಎಸ್ ಪವಿತ್ರ 3 ಉಸಿರಾದೆ ನೀ ಜೀವಕೆ ವಿದ್ಯಾ ಮೂರ್ತಿ 4 ಕ್ಷಮಯಾಧರಿತ್ರಿ(ಪ್ರೀತಿಯ ಅಲೆಯಲಿ ನಲುಗಿತೆ ಹೃದಯ?) ಮಾಲಾ ಶ್ರೀನಿವಾಸ್ ಭಟ್ 5 ಕಥೆಯೊಂದು ಶುರುವಾಗಲಿದೆ ರಕ್ಷಿತಾ ಆರ್ ಭಟ್ 6 ನಾ ಬಿಡಲಾರೆ ಎಂದೂ ನಿನ್ನ... ವೆಂಕಟೇಶ್ ಡಿ ಎನ್ 7 ಪ್ರೇಮ ತೀರ ವರ ಲಕ್ಷ್ಮಿ 8 ವಿಶಿಷ್ಟಾ ವೈಭವ ಅದೀರ 9 ಎಲ್ಲ ಮರೆತಿರುವಾಗ! ಶ್ರುವಿ 10 ತ್ರಿವೇಣಿ ಸ್ಪೂರ್ತಿಯ ಚಿಲುಮೆ ಅರ್ಚನಾ ಕುಲಕರ್ಣಿ 11 ವಾತ್ಸಲ್ಯದ ಕರೆ ಉಮಾ ಶಂಕರಿ 12 "ಆರಿಗೆ ವಧುವಾದೆ(ಸಮಗ್ರ)" ಸೌಮ್ಯ ಶ್ರೀ 13 ಪದ್ಮಗಂಧಿನಿ ಲಕ್ಷ್ಮಿ ಗೌಡ 14 ಹೃದಯದ ಅಂತಪುರದಲ್ಲಿ ಹಚ್ಚುವೆಯ ದೀವಳಿಗೆ ಪಲ್ಲವಿ ನಾಯ್ಕ 15 ಕತ್ತಲ ಕಾಮನಬಿಲ್ಲು ಚೈತ್ರ ಭಟ್ 16 ದೇವರ ಆಟ ಬಲ್ಲವರಾರು ಕೀರ್ತನ. ಎಂ ನವ ಬರಹಗಾರರ ಯಾದಿ ಪ್ರತಿಲಿಪಿಯ ತಮ್ಮ ಪ್ರೊಫೈಲ್ನಲ್ಲಿ ಮೊದಲ ಬಾರಿಗೆ ಕನಿಷ್ಠ 80 ಅಧ್ಯಾಯಗಳ ಧಾರಾವಾಹಿ ರಚಿಸಿ ಪ್ರಕಟಿಸಿರುವ ಎಲ್ಲ ನವ ಬರಹಗಾರರ ಉತ್ಸಾಹ ಮತ್ತು ಪ್ರಯತ್ನ ಸಂತಸ ನೀಡಿದೆ. ಈ ಬರಹಗಾರರ ಸಾಹಿತ್ಯ ಪ್ರಯಾಣ ಎಲ್ಲಿಯೂ ವಿರಮಿಸದೇ ಮುಂದುವರೆಯಲಿ ಎಂದು ಆಶಿಸುತ್ತೇವೆ. ಈ ಬರಹಗಾರರಿಗೆ ಗೌರವ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು. ಕ್ರ. ಸಂ. ಕೃತಿ ಕರ್ತೃ 1 ಪ್ರೀತಿ ಬಂಧವೋ.ಬಂಧನವೋ...? ಎಸ್ ಪವಿತ್ರ 2 ನೀ ನನ್ನ ಕಡಲು ಸಾನ್ವಿ ಹೆಗಡೆ 3 ಆ... ಆ...!! (ಸಮಗ್ರ) ಪುಷ್ಕರಿಣಿ 4 ಪರಿಶುದ್ಧವಾದ ಪ್ರೇಮವೆಂದರೆ ಅದು ಸಿಗಲಾರದ ಪ್ರೀತಿ!! ಎಸ್ ಸತ್ಯಪ್ರದ 5 ಭಾರ್ಗವನ ಸೀತಾ ಕಾವ್ಯಶ್ರೀ 6 "ಸೀಳು" : ದ್ವಂದ್ವಗಳ ಸುಳಿಯಲ್ಲಿ ರಮ್ಯ ನೆಕ್ಕರೆಕಾಡು 7 ವಲ್ಲಿಯ ಬಳ್ಳಿ ಅಚಲಾ ಬಿ ಹೆನ್ಲಿ 8 ಒಂಟಿಗ ಪ್ರಶಾಂತ್ ಶಿರ್ವ 9 ತಮಸೋಮಾ ಜ್ಯೋತಿರ್ಗಮಯ ಮಲ್ಲಿಕಾ ಶಾಂತಾರಾಮ್ ಶೆಟ್ಟಿ 10 ನೀಲಗಿರಿಯ ನೀಲ ಕುರುಂಜಿ ಸಂಧ್ಯಾ ಭಟ್ 11 ಒಲವ ಕದನದಲ್ಲಿ ಖುಷಿ ಕೆ 12 ಪ್ರಮದ್ವರೆ ಶುಭಾ ಗಿರಣಿಮನೆ 13 ಕಥೆಯೊಂದು ಶುರುವಾಗಲಿದೆ ರಕ್ಷಿತಾ ಆರ್ ಭಟ್ 14 ನಿನ್ನುಸಿರಲ್ಲಿ ನನ್ನೆಸರಿದೆ ನಿಖಿಲ್ ಕುಮಾರ್ 15 ನರ್ತಿಸದ ನವಿಲು! ಶಿವಶಂಕರ್ ಎಸ್. ಜಿ 16 ಅರ್ಥನಾಧ (ಒಂದು ಹೆಣ್ಣಿನ ಕೂಗು) ಜಿ. ಎಸ್. ಅಂಬರೀಶ 17 ಪಿರಮಿಡ್ ಆದರ್ಶ ಪಟೇಲ್ 18 ನಿನ್ನೊಂದಿಗೆ ಈ ಜೀವನ ಅನು 19 ಪ್ರೀತಿಯ ರೀತಿ ನಿಯತಿಯ ನೀತಿ ಆಶ್ರಿತಾ ಕಿರಣ್ 20 ನಿಗೂಢ ನಾಯಕ ಸುಮನ ಕಾರಂತ್ 21 ದೇವರ ಆಟ ಬಲ್ಲವರಾರು!? ಉರ್ಮಿಲಾ ಪಾಶ್ಚಾಪೂರ 22 ದೊರೆಸಾನಿ ಸ್ಫೂರ್ತಿ 23 ಹೃದಯದ ಅಂತಪುರದಲ್ಲಿ ಹಚ್ಚುವೆಯ ದೀವಳಿಗೆ ಪಲ್ಲವಿ ನಾಯ್ಕ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು! ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ನಮ್ಮ ಕೆಲವು ಯಶಸ್ವೀ ಸಾಹಿತಿಗಳ ಮನದಾಳದ ನುಡಿಗಳು13 ಸೆಪ್ಟೆಂಬರ್ 2024ನಮ್ಮ ಕೆಲವು ಯಶಸ್ವೀ ಸಾಹಿತಿಗಳು ಪ್ರತಿಲಿಪಿಯ ಕುರಿತು ವ್ಯಕ್ತಪಡಿಸಿದ ಅಭಿಮಾನದ, ಪ್ರೀತಿಯ ನುಡಿಗಳು ಅವರದೇ ಮಾತಿನಲ್ಲಿ... "ಜೀವನದಲ್ಲಿ ಎಲ್ಲಾ ಇದ್ದರೂ ಏನಾದರೂ ಒಂದು ಕೊರಗು, ನೋವು ಇರೋದು ಸಹಜ ಅಲ್ವಾ..? ನನಗೂ ಹಾಗೆ, ರಾಜ್ಯ ಬಿಟ್ಟು ಈ ಮಹಾರಾಷ್ಟ್ರಕ್ಕೆ ಕಾಲಿಟ್ಟಾಗ ನಾನು ಕಳೆದುಕೊಂಡಿದ್ದು ನನ್ನ ಪ್ರೀತಿಯ ಭಾಷೆ ಕನ್ನಡವನ್ನು. ಕೇಳಲು ಇಂಪು, ಮನಸ್ಸಿಗೆ ಮುದ ನೀಡುವ ಭಾಷೆ ನನ್ನಿಂದ ನಿಧಾನಕ್ಕೆ ಮರೆಯಾಗುತ್ತಿದ್ದಂತೆ ಮನಸ್ಸಲ್ಲಿ ಏನೋ ಕಳೆದುಕೊಂಡ ಭಾವ. ಆಗ ನನಗೆ ಪರಿಚಯವಾಗಿದ್ದೇ ನನ್ನ ಪ್ರತಿಲಿಪಿ. ನನ್ನೊಳಗಿನ ನೋವು ಮರೆಸಿ, ಮರೆತು ಹೋದ ಅಕ್ಷರಗಳಿಗೆ ಜೀವ ತುಂಬಿ, ನನ್ನ ಬದುಕಿಗೆ ಒಂದು ಹೊಸ ಅರ್ಥವನ್ನೇ ಕೊಟ್ಟಿತು. ಎಲ್ಲರ ಕಥೆ ಓದುತ್ತಾ, ನಾನು ಬರೆಯಲು ಶುರುಮಾಡಿ ಪ್ರತಿಲಿಪಿಯೊಂದಿಗೆ ನನ್ನ ಬದುಕು ಬೆರೆತು ಹೋಯಿತು. ಅದರಲ್ಲಿ ಬರುವ ಸುಂದರ ಕಾಮೆಂಟ್, ಕೆಲವರು ಮೆಸೇಜ್ ಮಾಡಿ ಕೂಡಾ ತುಂಬಾ ಚೆನ್ನಾಗಿ ಬರೆಯುತ್ತಿರಿ ಎಂದಾಗ ಅದೇನೋ ಸಾಧಿಸಿದಂತಹ ಹೆಮ್ಮೆ. ಗೃಹಿಣಿಯಾಗಿ ಮನೆಯಲ್ಲೇ ಇರುವ ನನಗೆ ಇತ್ತೀಚಿಗೆ ಬರುತ್ತಿರುವ ಒಂದಿಷ್ಟು ಹಣ ನೋಡಿ ಮನಸಲ್ಲಿ ಹೇಳಲಾರದಷ್ಟು ಖುಷಿ. ನನ್ನ ಪ್ರತಿಲಿಪಿ ನನ್ನ ಹೆಮ್ಮೆ. ನನ್ನ ಬದುಕಿನ ಕೊನೆಯವರೆಗೂ ನನ್ನ ಜೊತೆಯಾಗಿರೋ ನನ್ನ ಬಂಧು" - ರೂಪ ರೈ "ಇದುವರೆಗೂ ಬರೀ ತೀರ್ಥ ಶಿವು ಎಂದು ನಾಲ್ಕಾರು ಜನರಿಗೆ ಪರಿಚಯವಿದ್ದ, ನನ್ನವರಿಂದಲೇ ತಿರಸ್ಕೃತಳಾಗಿದ್ದ ನಾನು ಇಂದು ನೂರಾರು, ಸಾವಿರಾರು ಜನರಿಗೆ ಪರಿಚಿತಳು. ಕೆಲವರಿಗೆ ಗೆಳತಿ, ಅಕ್ಕ, ತಂಗಿ, ಮಗಳು, ಅಮ್ಮ, ಸ್ಫೂರ್ತಿ ಕೂಡ ಆಗಿದ್ದೇನೆ. ನನಗೊಂದು ದೊಡ್ಡ ಕುಟುಂಬ ದೊರೆತಿದೆ ಅಂದ್ರೆ ಅದಕ್ಕೆ ಕಾರಣವೇ ಪ್ರತಿಲಿಪಿ. ಯಾರೆದಿರೂ ಕೈ ಚಾಚದೇ ಸ್ವಂತ ದುಡಿಮೆಯಿಂದಲೇ ಪುಟ್ಟ ಮನೆಯೊಂದನ್ನು ಕಟ್ಟಲು ನೆರವಾಗಿದ್ದು, ನನ್ನನ್ನು ಆರ್ಥಿಕವಾಗಿ ಸದೃಢಳನ್ನಾಗಿಸಿದ್ದು ಇದೇ ಪ್ರತಿಲಿಪಿ. ಇಷ್ಟು ಮಾತ್ರವೇ ಅಲ್ಲ ಬರಿದಾಗಿದ್ದ ನನ್ನ ಮಡಿಲನ್ನು ತುಂಬಿದ್ದು ಕೂಡ ಪ್ರತಿಲಿಪಿಯೇ. ಲಿಪಿಯಲ್ಲಿ ಓದುಗರೊಬ್ಬರ ಮೂಲಕ ಒಂದು ಮಗುವನ್ನು ದತ್ತು ಪಡೆದ ನಾನಿಂದು ಪರಮ ಸುಖಿ ಎನ್ನುವುದಕ್ಕೂ ಅಡ್ಡಿಯಿಲ್ಲ. ಒಟ್ಟಿನಲ್ಲಿ ಪ್ರತಿಲಿಪಿ ಎನ್ನುವುದು ನನ್ನ ಪಾಲಿಗೆ ಕೇವಲ ಬರೆಯುವ - ಓದುವ ಒಂದು ವೇದಿಕೆ ಮಾತ್ರವೇ ಅಲ್ಲ. ನನ್ನ ಬದುಕನ್ನೇ ಬದಲಿಸಿದ ಅಧ್ಭುತ. ನಾನೆಂದೂ ಪ್ರತಿಲಿಪಿಗೆ ಚಿರಋಣಿಯೇ ಸರಿ. ಇದರಲ್ಲಿ ಅತಿಶಯೋಕ್ತಿ ಏನೂ ಇಲ್ಲ" - ತೀರ್ಥ ಶಿವು ಪ್ರತಿಲಿಪಿಯಲ್ಲಿ 2017ರ ಕೊನೆಯ ದಿನ ನನ್ನ ಥ್ರಿಲ್ಲರ್ ಕಾದಂಬರಿ ಛದ್ಮವೇಷದ ಮೊದಲ ಕಂತು ಪ್ರಕಟವಾಯಿತು. ಅಂದೇ ಆರಂಭ. ಅಂದಿನಿಂದ ಒಂದು ದಿನವೂ ಎಡೆಬಿಡದೇ ಪ್ರತಿ ದಿನ ಕನಿಷ್ಠ ಒಂದೊಂದು ಬರಹ. ಆ ರೀತಿ ನನ್ನ ಎಲ್ಲ ಕಾದಂಬರಿಗಳೂ, ಎಲ್ಲ ಕಥೆಗಳೂ, ಅನೇಕ ಲೇಖನಗಳೂ ಪ್ರಕಟವಾಗಿವೆ. ನನಗೆ ಆಗುತ್ತಿದ್ದ ಸಂತೋಷವೇನೆಂದರೆ ನನ್ನ ಬರಹದ ಒಂದು ಕಂತು ಪ್ರಕಟವಾದೊಡನೆ ಓದುಗರಿಂದ ಬರುತ್ತಿರುವ ಪ್ರತಿಕ್ರಿಯೆಗಳು. ಅವರ ಆನಂದ, ದುಃಖ, ಕೋಪ ಎಲ್ಲವನ್ನೂ ಹೊರಹಾಕುತ್ತಾರೆ. ನನ್ನ ಅನೇಕ ಕಾದಂಬರಿ ನಾಯಕ ನಾಯಕಿಯರ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟವರಿದ್ದಾರೆ. ಇಂದು ನನಗೆ 32 ಲಕ್ಷಕ್ಕೂ ಹೆಚ್ಚು ಓದುಗರಿದ್ದಾರೆ. ಧನ್ಯವಾದಗಳು ಶ್ರೀ ರಂಜಿತ್ ಸಿಂಹ ಮತ್ತು ಶ್ರೀ ಅಕ್ಷಯ್ ಬಾಳೆಗೆರೆ" - ಯತಿರಾಜ್ ವೀರಾಂಬುಧಿ ಸಾಮಾನ್ಯ ಓದುಗಳಾಗಿದ್ದ ನಾನು ಇಂದು ಒಬ್ಬ ಲೇಖಕಿಯಾಗಿ ಗುರುತಿಸಿಕೊಂಡು ನನ್ನದೇ ಆದ ಅಭಿಮಾನಿಗಳನ್ನು ಅವರ ಪ್ರೀತಿ ವಿಶ್ವಾಸವನ್ನು ಹೊಂದಿದ್ದೇನೆ ಎಂದರೆ ಅದು ಸಾಧ್ಯವಾಗಿದ್ದು ಪ್ರತಿಲಿಪಿಯಿಂದ. ಈಗ ಪ್ರತಿಲಿಪಿ ನನ್ನ ಜೀವನದ ಅತಿ ಬಹು ಮುಖ್ಯ ಭಾಗವಾಗಿದೆ. ಹಾಗೆ ಆರ್ಥಿಕವಾಗಿಯೂ ಸಬಲಳನ್ನಾಗಿ ಮಾಡಿದೆ. ಇಂಥ ಒಂದು ಪ್ರತಿಲಿಪಿ ವೇದಿಕೆಗೆ ಹತ್ತು ವರ್ಷಗಳು ತುಂಬಿದೆ ಹೀಗೆ ನಿರಂತರವಾಗಿ ಸಾಗಲಿ ಎಂದು ಬಯಸುತ್ತೇನೆ. - ಶ್ರೀ ಮಂಗಳ ಶೆಟ್ಟಿ ಪ್ರತಿಲಿಪಿ ಬರೀ ಬರವಣಿಗೆಗಳನ್ನು ಸ್ವಯಂ ಪ್ರಕಾಶನಗೊಳಿಸುವ ವೇದಿಕೆ ಮಾತ್ರ ಅಲ್ಲ ನಮ್ಮ ಜ್ಞಾನಕ್ಕೆ ಒರೆ ಹಚ್ಚಿ ನಮ್ಮಲ್ಲಿ ಸುಪ್ತವಾಗಿ ಅಡಗಿರುವ ಅನೇಕಾನೇಕ ಪದಗಳನ್ನು ಹೊರ ತಂದು ಅರ್ಥ ತಿಳಿಸಿ, ನಮ್ಮ ಜ್ಞಾನಕ್ಕೆ ಸಾಣೆ ಹಿಡಿದ ಒಂದು ವೇದಿಕೆ. ಈ ಪ್ರತಿಲಿಪಿಯಿಂದಾಗಿ ಎಲ್ಲೋ ಹಳೆಯ ಪುಟಗಳಲ್ಲಿ ಕೊಳೆತು ಹೋಗಿದ್ದ ನನ್ನ ಬರವಣಿಗೆ ಮತ್ತೆ ಚಿಗುರೊಡೆದು ನಳನಳಿಸಿ ಸಾವಿರಾರು ಓದುಗರ ಮನದoಗಳದಲ್ಲಿ ಪುಷ್ಪವಾಗಿದ್ದು ನನ್ನ ಸುಕೃತ ಫಲ. ನನ್ನ ಒಂದೊಂದು ಬರಹದಲ್ಲಿ ಬರುವ ಒಂದೊಂದು ವಿಷಯದ ಬಗ್ಗೆ ಕೃಷಿ ಮಾಡಿದಾಗ ಕಲೆ ಹಾಕಿದ ಅದೆಷ್ಟೋ ಮಾಹಿತಿಗಳೆoಬ ದವಸ ಧಾನ್ಯಗಳು ನನ್ನ ಜ್ಞಾನದ ಕಣಜ ತುಂಬಲು ಸಹಾಯವಾಗಿದೆ. ಹಲವಾರು ಬರಹಗಾರರಿಗೆ ಅಥವಾ ಓದುಗರಿಗೆ ತಾನು ನಕ್ಕಾಗ ನಗುವ ಅತ್ತಾಗ ಅಳುವ ಒಂದು ಸಂಗಾತಿ ಈ ಪ್ರತಿಲಿಪಿ. ಈ ಪ್ರತಿಲಿಪಿ ಎನ್ನುವ ಸಂಗಾತಿಗೆ ಹತ್ತನೇ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು - ಕೃಷ್ಣಪ್ರಿಯೆ ಪ್ರತಿಲಿಪಿ ಪ್ರತಿದಿನದ ನನ್ನ ಜೀವನದ ಒಂದು ಭಾಗವೇ ಆಗಿದೆ. ಒಂದು ದಿನ ಪ್ರತಿಲಿಪಿ ಕಡೆ ಹೋಗಿಲ್ಲ ಅಂದ್ರೆ ಏನನ್ನೋ ಕಳ್ಕೊಂಡ ಅನುಭವ. 2019ರಲ್ಲಿ ಪ್ರತಿಲಿಪಿ ನಂಗೆ ಪರಿಚಯವಾಗಿದ್ದು. ಪಕ್ಕದ ಮಹಾರಾಷ್ಟ್ರದ ಪುಣೆಗೆ ಆಗತಾನೇ ಬಂದ ದಿನಗಳು. ಕನ್ನಡ, ತಕ್ಕಮಟ್ಟಿಗೆ ಇಂಗ್ಲಿಷ್ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ ನನಗೆ. ಮನೆಯಲ್ಲಿ ಒಬ್ಬಳೇ ಇದ್ದಾಗ ಮಾತನಾಡೋಕೆ ಕೂಡಾ ಯಾರೂ ಸಿಗದೇ ಸ್ವಚ್ಚಂದವಾಗಿ ಹಾರಾಡ್ಕೊಂಡು ಇದ್ದ ಹಕ್ಕಿಯನ್ನ ತಂದು ಪಂಜರದಲ್ಲಿ ಬಂಧಿಸಿದ ಹಾಗೆ ಆಗಿತ್ತು ನನ್ನ ಪರಿಸ್ಥಿತಿ. ಆಗ ಪರಿಚಯವಾದ ಆಪತ್ಬಾಂಧವನೇ ನನ್ನ ಪ್ರೀತಿಯ ಪ್ರತಿಲಿಪಿ. ಭಾಷೆ ಗೊತ್ತಿಲ್ದೆ ಇದ್ದಾಗ ಈ ಮರಾಠಿ ಜನಗಳ ನಡುವೆ ನನ್ನ ಭಾಷೆಯ ಬಗ್ಗೆ ಇನ್ನಷ್ಟು ಹೆಮ್ಮೆ ಎನಿಸಿದ್ದು ಪ್ರತಿಲಿಪಿಯಿಂದ ಮಾತ್ರ. ಒಂಟಿಯಾಗಿರುವೆ ಅನ್ನಿಸಿದಾಗ ಸ್ನೇಹಿತೆಯರು ಸಿಕ್ಕಿದ್ರು. ಒಂಟಿತನ ಕಳೆಯೋಕೆ ಒಂದು ಮಾರ್ಗ ಮಾಡಿಕೊಟ್ಟಿದ್ದು ಪ್ರತಿಲಿಪಿ. ನನ್ನ ಕೋಪ, ನೋವು ದುಃಖ ಖುಷಿಯ ಎಲ್ಲಾ ಕ್ಷಣಕ್ಕೂ ನಾನು ಪ್ರತಿಲಿಪಿಯನ್ನೇ ಆಶ್ರಯಿಸೋದು. ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕಥೆ ಬರೆದಾಗ ಓದುಗರು ಕಾಮೆಂಟ್ ಮಾಡಿದಾಗ ಅದೂ ನನಗೆ ಸಮಾಧಾನ ಮಾಡಿದ ಹಾಗೆ ಇರತ್ತೆ. ಓದುಗರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳೋಕೆ ಸಹಾಯ ಆಗಿದೆ. ಸೂಪರ್ ಸಾಹಿತಿ ಆರರ ಆವೃತ್ತಿಗೆ ಬರೆದ ಕಥೆ ಓದುಗರ ಆಯ್ಕೆಯ ವಿಜೇತ ಕೃತಿಯಲ್ಲಿ ಕಾಣಿಸಿಕೊಂಡಾಗ ಆದ ಖುಷಿ ಪ್ರತೀ ದಿನ ಹೊಸತನದ ಅನುಭವ ನೀಡತ್ತೆ. ಇನ್ನೂ ಪ್ರತಿಲಿಪಿಯ ಆದಾಯ ಗಳಿಕೆಯ ವಿಚಾರಕ್ಕೆ ಬಂದ್ರೆ, ಸಣ್ಣ ಪುಟ್ಟ ತಿಂಡಿ, ಅಗತ್ಯ ವಸ್ತುಗಳಿಂದ ಹಿಡಿದು ಮೊಬೈಲ್ ರೀಚಾರ್ಜ್'ಗೆ ಕೂಡಾ ಪತಿಯ ಬಳಿ ಕೇಳುತ್ತಿದ್ದವಳಿಗೆ ಈಗ ನನ್ನ ಸಣ್ಣ ಪುಟ್ಟ ಖರ್ಚುಗಳಿಗೆ ಪ್ರತಿ ಲಿಪಿಯಿಂದ ಬರುವ ಆದಾಯ ಸಾಕಷ್ಟು ಸಹಾಯಕಾರಿ ಆಗಿದೆ. ಹೇಳ್ತಾ ಹೋದ್ರೆ ಇನ್ನೂ ಇದೆ ಆದ್ರೆ ಅಷ್ಟನ್ನೂ ಇಲ್ಲಿ ಹೇಳೋಕೆ ಆಗಲ್ಲ. ಊಟ, ನಿದ್ದೆ ಬೇಕಾದ್ರೂ ಸುಲಭಕ್ಕೆ ಬಿಟ್ಟೇನು ಆದ್ರೆ ಪ್ರತಿಲಿಪಿ ಬಿಡೋದು ಹೆಚ್ಚೇ ಕಷ್ಟ. ಅಷ್ಟರ ಮಟ್ಟಿಗೆ ಪ್ರತಿಲಿಪಿ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ - ಚೈತ್ರ ಯೋಗೇಶ್ ಪ್ರತೀ ಕಷ್ಟದಲ್ಲೂ ಸಹ ಅವಕಾಶವನ್ನು ಕಂಡುಕೊಳ್ಳಬಹುದು ಎಂಬಂತೆ ಈ ಪ್ರತಿಲಿಪಿ ಎನ್ನುವ ಪುಟ್ಟ ಪ್ರಪಂಚ ಇಂದು ಬೃಹದಾಕಾರವಾಗಿ ಆಕಾಶದೆತ್ತರಕ್ಕೆ ಬೆಳೆದು ನಮ್ಮಿಂದ ಏನೂ ಸಾಧ್ಯ ಇಲ್ಲ ಎನ್ನುತ್ತಾ ಮನೆಯಲ್ಲಿ ಇದ್ದ ಎಷ್ಟೋ ಗೃಹಿಣಿಯರಿಗೆ ಬದುಕಿನ ದಾರಿ ದೀಪ ಆಗಿದೆ. ದುಡಿಮೆಯ ಶಕ್ತಿ ಆಗಿದೆ. ನಾನೂ ಸಾಧಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಹೆಚ್ಚಿಸುವ ಮಾರ್ಗ ಆಗಿದೆ. ಬೇಸರದಲ್ಲಿ ಇದ್ದಾಗ ನೋವು ಮರೆಯುವ ಮಾರ್ಗ, ಒಬ್ಬಂಟಿಯಾಗಿದ್ದಾಗ ನಾನಿರುವೆ ಜೊತೆಗೆ ಎನ್ನುವ ಧೈರ್ಯ ಕೊಟ್ಟಿದೆ. ಎಷ್ಟೋ ಬರಹಗಾರರಿಗೆ ನಿನ್ನಮೇಲೆ ನಿನಗೆ ನಂಬಿಕೆ ಇದ್ರೇ ಎಲ್ಲವೂ ಸಾಧ್ಯ ಎನ್ನುವ ವಚನ ಪೂರೈಸಿದೆ - ಕಾವ್ಯ ತನ್ಮಯಿ ಬರೆಯುವ ಹವ್ಯಾಸವಿದ್ದ ನನಗೆ ಪ್ರತಿಲಿಪಿ ಒಂದು ಉತ್ತಮ ವೇದಿಕೆಯಾಗಿ ಸಿಕ್ಕಿತ್ತು. ಸುಮಾರು ನಾಲ್ಕು ವರ್ಷಗಳಿಂದ ನಾನು ಪ್ರತಿಲಿಪಿ ಕನ್ನಡದಲ್ಲಿ ಬರೆಯುತ್ತಿದ್ದೇನೆ. ಪ್ರತಿಲಿಪಿ ನನ್ನ ಬರಹ ಮತ್ತು ಭಾಷೆಯ ನೈಪುಣ್ಯತೆಯನ್ನು ಹೆಚ್ಚಿಸಿದೆ. ಹಾಗೆಯೇ ಪ್ರತಿಲಿಪಿ ಆರ್ಥಿಕವಾಗಿಯೂ ನನಗೆ ಬೆಂಬಲವನ್ನು ನೀಡುತ್ತಿದೆ. ಈ ವೇದಿಕೆ ಅನೇಕ ಉತ್ತಮ ಬರಹಗಾರರ ಪರಿಚಯ ಮಾಡಿಕೊಟ್ಟಿದೆ. ಅಲ್ಲದೆ ಓದುಗರ ಪ್ರೀತಿ ಕಾಳಜಿ ಅಭಿಮಾನ ದೊರಕಿದೆ. ಹಾಗೆಯೇ ಓದುಗರು ನನ್ನ ಬರಹವನ್ನು ಓದಿ, ಪ್ರತಿಕ್ರಿಯೆ, ಪ್ರೋತ್ಸಾಹ ನೀಡಿ ಇನ್ನಷ್ಟು ಮತ್ತಷ್ಟು ಬರಹವನ್ನು ಬರೆಯಲು ಪ್ರೇರಣೆ ನೀಡುತ್ತಿದ್ದಾರೆ. ಇದರಿಂದ ಪ್ರತಿಲಿಪಿ ನನ್ನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಈ ವೇದಿಕೆ ಇನ್ನಷ್ಟು ಉತ್ತಮ ಬರಹಗಾರರನ್ನು ಈ ಸಮಾಜಕ್ಕೆ ನೀಡಲಿ ಹಾಗೂ ಉತ್ತಮ ಸ್ಥಾನಕ್ಕೆ ಏರಲಿ...! - ವಸುಧಾ ಶಾಸ್ತ್ರಿ ಅನಿಸುತಿದೆ ಯಾಕೋ ಇಂದು, ನನ್ನ ಮನಸಿನ ಮಾತ ನಿಮ್ಮೊಡನೆ ಹೇಳಿಕೊಳ್ಳಬೇಕೆಂದು... ಹೌದು... ನನ್ನ 67 ನೇ ವಯಸ್ಸಿನಲ್ಲಿ ನನಗೆ ಉಂಟಾಗಿದ್ದು ಪ್ರತಿಲಿಪಿಯ ಒಡನಾಟ. ನನ್ನ ಬದುಕಿನ ಮೊದಲ 66 ವರುಷಗಳಲ್ಲಿ, ಅಜ್ಞನಾಗಿದ್ದ ನನ್ನ ಸಾಹಿತ್ಯ ರಚನೆ ಸೊನ್ನೆಯಾಗಿತ್ತು. ಈಗ ನನಗೆ 71 ವರುಷ. ಪ್ರತಿಲಿಪಿಯಲ್ಲಿ ಚಿಕ್ಕ ಪುಟ್ಟ ಲೇಖನ, ಕಥೆ, ಕವನಗಳನ್ನು ಬರೆಯಲು ಶುರುಮಾಡಿದ ಈ 4 ವರುಷಗಳಲ್ಲಿ, ನಾನು 7 ಪುಸ್ತಕಗಳನ್ನು ಪ್ರಕಟಿಸಿದ್ದೇನೆ. ಅವುಗಳಲ್ಲಿ ನನ್ನ ವೃತ್ತಿ ಅನುಭವ ಕಥನ, ಸಣ್ಣ ಕಥೆಗಳು ಹಾಗೂ ಕವನದ ಪುಸ್ತಕಗಳಿವೆ. ನನ್ನ ಸಂಗೀತ ಪಯಣದ ನೆನಪುಗಳ ಪುಸ್ತಕವು ಸದ್ಯದಲ್ಲಿಯೇ 8 ನೇ ಪುಸ್ತಕವಾಗಿ ಲೋಕಾರ್ಪಣೆಯಾಗುವುದರಲ್ಲಿದೆ. ನಾಲ್ಕು ವರುಷಗಳ ಹಿಂದೆ, ನಾನು ಇಷ್ಟು ಪುಸ್ತಕಗಳನ್ನು ಪ್ರಕಟಿಸಬಹುದು ಎಂದು, ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ಅದು ಸಾಧ್ಯವಾದದ್ದಕ್ಕೆ ಪ್ರತಿಲಿಪಿಯೇ ಕಾರಣ. ಪ್ರತಿಲಿಪಿಯಲ್ಲಿ ನಾವು ಬರೆದಿದ್ದನ್ನು ಅತಿ ಸುಲಭವಾಗಿ ನಾವೇ ಪ್ರಕಟಿಸಬಹುದು. ನಮ್ಮ ಬರೆಹ ಪ್ರಕಟವಾದೊಡನೆ, ಆ ಬರೆಹಗಳನ್ನು ಓದಿ ಒಂದಿಷ್ಟು ಪ್ರತಿಕ್ರಿಯೆಗಳು ಬರುತ್ತವೆ. ಲೇಖಕನಿಗೆ, ಇದಕ್ಕಿಂತ ಉತ್ತಮವಾದ ಉತ್ತೇಜನ ಎಲ್ಲಿ ದೊರೆಯಲು ಸಾಧ್ಯ? ನಾವು ಬರೆದು ಆನಂದವನ್ನು ಅನುಭವಿಸಿ, ನಮ್ಮ ಬರೆಹವನ್ನು ಓದಿದವರಿಗೂ ಆನಂದವನ್ನು ಹಂಚುತ್ತೇವೆ! ಅದರ ಜೊತೆಯಲ್ಲಿ, ಪ್ರತಿಲಿಪಿಯಲ್ಲಿ ನಿತ್ಯವೂ, ಕಥೆ ರಚಿಸಲು ನಮಗೊಂದು ವಿಷಯವನ್ನು ನೀಡುತ್ತಾರೆ. ಆ ವಿಷಯವು ನಮಗೆ ಕಥೆ, ಕವನ, ವೈಚಾರಿಕ ಲೇಖನ, ಮುಂತಾದುವನ್ನು ರಚಿಸಲು, ಪ್ರೇರಣೆ ನೀಡುತ್ತದೆ! ಹಾಗಾಗಿಯೇ, ಇಲ್ಲಿಯವರೆಗೂ ನಾನು 418 ಸಣ್ಣ ಕಥೆಗಳನ್ನು ಹಾಗೂ 200 ಕ್ಕೂ ಹೆಚ್ಚು ಕವನಗಳನ್ನು, ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದೇನೆ. ನಿಜಕ್ಕೂ ಇವೆಲ್ಲಾ ನನ್ನ ಸಾಧನೆಯಲ್ಲ. ಇವೆಲ್ಲಾ ನನಗೆ ಸಾಧ್ಯವಾದದ್ದು ನನ್ನ ನೆಚ್ಚಿನ ಪ್ರತಿಲಿಪಿಯಿಂದ, ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ! ಈ ಮೇಲಿನ ಕಾರಣಗಳಿಂದಾಗಿ, ಪ್ರತಿಲಿಪಿಗೆ ನಾನು ಸರ್ವದಾ ಕೃತಜ್ಞನಾಗಿದ್ದೇನೆ. ನನಗೆ ಸಾಹಿತ್ಯ ರಚಿಸುವ ನಿತ್ಯದ ಗೀಳು ಹಚ್ಚಿಸಿದ ಪ್ರತಿಲಿಪಿಗೆ, ನನ್ನ ಒಂದು ಪುಸ್ತಕವನ್ನು ಕೃತಜ್ಞತಾಪೂರ್ವಕವಾಗಿ ಸಮರ್ಪಿಸಿದ್ದೇನೆ. ಪ್ರತಿಲಿಪಿ-ಕನ್ನಡಕ್ಕೆ ಹತ್ತರ ಸಂಭ್ರಮ! ಹತ್ತು ವರುಷವೇನು, ನೂರು, ಸಾವಿರಗಳ ಸಂಭ್ರಮ, ಪ್ರತಿಲಿಪಿಯದ್ದಾಗಲಿ! ಎಂಥ ಅಜ್ಞನಿಗೂ ಬರೆಯಲು ಕಲಿಸುವ ಪ್ರತಿಲಿಪಿಯ ಕೀರ್ತಿ ಜಗದಗಲಕ್ಕೂ ಹರಡಲಿ, ತನ್ಮೂಲಕ ಕನ್ನಡ ಸಾಹಿತ್ಯ ಸೇವೆ ಅಜರಾಮರವಾಗಲಿ, ಅನಂತವಾಗಲಿ ಎಂದು ಮನತುಂಬಿ ಹಾರೈಸುತ್ತೇನೆ. - ವೆಂಕಟೇಶ್ ಎಂ ಟಿಇನ್ನೂ ಹೆಚ್ಚು ತೋರಿಸಿ
- ಸಾಹಿತ್ಯಾಭಿಮಾನಿಗಳಿಗೆ ಪ್ರತಿಲಿಪಿಯ ಸಿ.ಇ.ಓ. ಅವರ ಪತ್ರ13 ಸೆಪ್ಟೆಂಬರ್ 2024ಆತ್ಮೀಯ ಸಾಹಿತ್ಯಾಭಿಮಾನಿಗಳಿಗೆ ನಮಸ್ಕಾರಗಳು, 10 ವರ್ಷಗಳ ಹಿಂದೆ ಅಂದರೆ 14 ಸೆಪ್ಟೆಂಬರ್, 2014 ರಂದು ಪ್ರತಿಲಿಪಿ ವೆಬ್ಸೈಟ್ನ ಮೊದಲ ಸಾರ್ವಜನಿಕ ಬೀಟಾ ಆವೃತ್ತಿಯನ್ನು ಬಿಡುಗಡೆಗೊಳಿಸಿದೆವು. ಆ ಸಮಯದಲ್ಲಿ ನಮ್ಮೊಂದಿಗಿದ್ದದ್ದು ನೂರಾರು ಪ್ರಶ್ನೆಗಳು ಮತ್ತು ಒಂದೇ ಒಂದು ಗುರಿ! ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳಿಗೆ ಯಾವುದೇ ಭಾಷೆಯ ತಡೆ ಇರುವುದಿಲ್ಲ. ನಮ್ಮ ಲೇಖಕ, ಲೇಖಕಿಯರು ತಮ್ಮ ಕಲ್ಪನೆ, ವಿಚಾರ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ದೇಶ, ಭಾಷೆಗಳ ಮಿತಿ ಇಲ್ಲದೇ ವಿಶ್ವಾದ್ಯಂತ ಹಂಚುವಂತಾಗಬೇಕು. ಪ್ರತಿಲಿಪಿ ಅದಕ್ಕೆ ವೇದಿಕೆಯಾಗಬೇಕು ಎಂಬ ಗುರಿ. ಈ ಪಯಣ ಅಷ್ಟು ಸುಲಭವಾದದ್ದೇನೂ ಅಲ್ಲ ಎಂಬುದು ನಮಗೆ ತಿಳಿದಿತ್ತು. ಹಾಗೆಯೇ ನಮ್ಮ ಈ ಮಹತ್ವಾಕಾಂಕ್ಷೆಯನ್ನು ಸಫಲಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಜಯ ಗಳಿಸಿದರೆ ಅದು ಅದ್ಭುತ ಯಶಸ್ಸಾಗಿ ಪರಿಣಮಿಸುವುದರಲ್ಲಿ ಸಂಶಯವಿರಲಿಲ್ಲ. ಈ ಪ್ರಯಾಣ ಇಷ್ಟು ಕಠಿಣ; ಜೊತೆಗೆ ಇಷ್ಟೊಂದು ಜನರ ಪ್ರೀತಿ, ಅಭಿಮಾನ ಗಳಿಸಿಕೊಡುತ್ತದೆಂದು ನಾವು ಭಾವಿಸಿರಲಿಲ್ಲ! ನಿಮ್ಮ ಕತೆಗಳು ಒಂದು ತಿಂಗಳಿನಲ್ಲಿ ನೂರಾರು ಬಾರಿ ಓದಲ್ಪಡುತ್ತಿದ್ದುದರಿಂದ ಹಿಡಿದು; ನಮ್ಮ ಈ ಪ್ರಯಾಣದಲ್ಲಿ ನೂರಾರು ಜನರು ನಮ್ಮೊಂದಿಗೆ ಸೇರುತ್ತಿರುವುದನ್ನು ಸಂಭ್ರಮಿಸಿದ ಕ್ಷಣಗಳು ಅವಿಸ್ಮರಣೀಯ. ಈಗ ನಾವು ಒಂದು ಮಿಲಿಯನ್ಗೂ ಅಧಿಕ ಬರಹಗಾರರ ಕುಟುಂಬವಾಗಿದ್ದು, ನಮ್ಮಲ್ಲಿ ಪ್ರಕಟಗೊಳ್ಳುತ್ತಿರುವ ಬರಹಗಳನ್ನು ಪ್ರತಿವಾರ ನೂರಾರು ಮಿಲಿಯನ್ ಜನರು ಓದುತ್ತಿರುವುದು ಹೆಮ್ಮೆಯೆನಿಸುತ್ತಿದೆ! 3 ವರ್ಷಗಳ ಹಿಂದೆ ನಾವು ಪ್ರತಿಲಿಪಿಯಲ್ಲಿ ಬರೆದು ಪ್ರಕಟಿಸುವ ತಮ್ಮ ಬರಹಗಳಿಂದಲೇ ನಮ್ಮ ಲೇಖಕ/ಲೇಖಕಿಯರು ಆದಾಯ ಗಳಿಕೆಯ ಸೌಲಭ್ಯವನ್ನು ಪರಿಚಯಿಸಿದೆವು. ಇದಕ್ಕೆ ನಿಮ್ಮ ಬೆಂಬಲ ನಿಜಕ್ಕೂ ಅವಿಸ್ಮರಣೀಯವಾದುದು. ನೀವೆಲ್ಲರೂ ಪ್ರತಿಲಿಪಿಯಲ್ಲಿ ಬರೆದು ಪ್ರಕಟಿಸಿ ಓದುಗರ ಮನಗೆಲ್ಲುತ್ತಿದ್ದೀರಿ. ಏಕೆಂದರೆ ನಿಮ್ಮ ಕತೆಯನ್ನು ಅಷ್ಟೊಂದು ಉತ್ಸಾಹದಿಂದ, ಕೌತುಕದಿಂದ ಓದುವ ಓದುಗರ, ಅಭಿಮಾನಿಗಳ ಬಳಗ ನಿಮ್ಮ ಹಿಂದಿದೆ. ಹಿಂದಿನ ತಿಂಗಳು ಅಂತಹ ಅಭಿಮಾನಿ ಓದುಗರು 1.5 ಕೋಟಿಗೂ ಅಧಿಕ ರಾಯಧನವನ್ನು ತಮ್ಮ ನೆಚ್ಚಿನ ಬರಹಗಾರರು ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿರುವುದನ್ನು ನೋಡಿದಾಗ; ಪ್ರತಿಲಿಪಿಯ ಲೇಖಕ/ಲೇಖಕಿಯರು ಮತ್ತು ಅವರ ಕೃತಿಗಳಿಗೆ ಮಾನ್ಯತೆ ಸಿಗಬಹುದೇ ಎಂದು ಹೊರಗಿನವರು ಅನುಮಾನಿಸುತ್ತಿದ್ದದ್ದು ನಿನ್ನೆ ಮೊನ್ನೆ ನಡೆದಂತೆ ತೋರುತ್ತದೆ. ನಾವೀಗ ಐದು ಟಿ.ವಿ. ಶೋಗಳನ್ನು ಹೊಂದಿದ್ದೇವೆ; ಪ್ರತಿಲಿಪಿಯ ಕಥೆಗಳ ಆಧಾರಿತ ವೆಬ್ ಸಿರೀಸ್ಗಳನ್ನು ರಚಿಸಿದ್ದೇವೆ. ಮತ್ತುಈ ಪಯಣ ಎಲ್ಲಿಯೂ ವಿರಮಿಸದೇ ಸಾಗಲಿ ಎನ್ನುವ ಹಂಬಲವನ್ನು ಹೊತ್ತು ನಡೆಯುತ್ತಿದ್ದೇವೆ. ಇದು ನೇರ ಮತ್ತು ಸುಲಲಿತ ಪ್ರಯಾಣವಾಗಿರಲಿಲ್ಲ. ಹಲವು ಬಾರಿ ದಿಕ್ಕುಗಾಣದ ಸ್ಥಿತಿಗಳೂ ಎದುರಾಗಿವೆ. ಇನ್ನಷ್ಟು ಬಾರಿ ಎದುರಾದ ಅಡೆತಡೆಗಳಿಂದ ಮುಗ್ಗರಿಸಿದ್ದೂ ಇದೆ. ಆದರೆ ಸತತ ಪ್ರಯತ್ನ ಮತ್ತು ಪರಿಶ್ರಮದ ಫಲ ಸಿಹಿಯಾಗಿರುತ್ತದೆ ಎಂಬುದರ ಅನುಭವಗಳು ಆಗಿವೆ; ಆಗುತ್ತಿವೆ. ಆ ಸಿಹಿಯಾದ ಫಲ ಉಣಿಸಿದ್ದು ನೀವು! ನಿಮ್ಮ ವಿಶ್ವಾಸ, ಪ್ರೀತಿ, ಅಭಿಮಾನಗಳು ಎಲ್ಲ ಹಂತಗಳನ್ನು ದಾಟಿ ಮುಂದುವರೆಯಲು ಪುಷ್ಟಿ ನೀಡಿದೆ, ನೀಡುತ್ತಲಿದೆ. ಕ್ರಮಿಸುವ ದಾರಿ ಇನ್ನೂ ಬಹಳ ದೂರವಿದೆ. ನಮ್ಮ ಸಾವಿರಾರು ಬರಹಗಾರರು ಬರವಣಿಗೆಯನ್ನು ವೃತ್ತಿಯನ್ನಾಗಿಸಿಕೊಳ್ಳುವ ಮೂಲಕ ಪ್ರತಿ ತಿಂಗಳೂ ಖಚಿತ ಆದಾಯ ಗಳಿಸಿ, ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದನ್ನು ಕಾಣಲು ನಾವು ಬಯಸುತ್ತೇವೆ. ನಮ್ಮಲ್ಲಿ ಬರೆದು ಪ್ರಕಟಿಸಲು ಪ್ರಾರಂಭಿಸಿದ ಸಾವಿರಾರು ಉದಯೋನ್ಮುಖ ಲೇಖಕ/ಲೇಖಕಿಯರು ಪ್ರತಿಲಿಪಿಯ ಹೊರಗೂ ಸಾಕಷ್ಟು ಮನ್ನಣೆ, ಯಶಸ್ಸು ಮತ್ತು ಜನಪ್ರಿಯತೆಯನ್ನು ಈಗಾಗಲೇ ಗಳಿಸುತ್ತಿದ್ದು, ಇದಿನ್ನೂ ಅಧಿಕಗೊಳ್ಳುವ ದಿನಗಳಿಗಾಗಿ ಎದುರು ನೋಡುತ್ತಿದ್ದೇವೆ. ಅವರ ಯಶಸ್ಸನ್ನು ಸಂಭ್ರಮಿಸಲು ಕಾಯುತ್ತಿದ್ದೇವೆ. ನಮ್ಮ ಮುಂದಿನ ಪ್ರಯಾಣದಲ್ಲಿ ನಮ್ಮ ಜೊತೆ ನಿಮ್ಮ ಹೆಜ್ಜೆಗಳೂ ಇರಲಿ ಎಂದು ಬಯಸುತ್ತೇವೆ. ನಿಮ್ಮ ಪ್ರೋತ್ಸಾಹ, ವಿಶ್ವಾಸ, ಅಭಿಮಾನಗಳೇ ಮುಂದಿನ ನಮ್ಮ ಮೈಲುಗಲ್ಲುಗಳಿಗೆ ಅಡಿಪಾಯ. ನಮ್ಮ ಪ್ರಯತ್ನ ನಿರಂತರವಾಗಿರುತ್ತದೆಇನ್ನೂ ಹೆಚ್ಚು ತೋರಿಸಿ
- 'ಸೂಪರ್ ಸಾಹಿತಿ ಅವಾರ್ಡ್ಸ್ : ಸೂಪರ್ 7 ಸೀಸನ್' ಸ್ಪರ್ಧೆಯ ಫಲಿತಾಂಶ22 ಜುಲೈ 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ಕನ್ನಡ ಆಯೋಜಿಸಿದ್ದ ಸೂಪರ್ ಸಾಹಿತಿ ಅವಾರ್ಡ್ಸ್: ಸೂಪರ್ 7 ಸೀಸನ್ ಸ್ಪರ್ಧೆ ಮುಕ್ತಾಯಗೊಂಡಿದ್ದು ಒಳ್ಳೆಯ ಪ್ರತಿಕ್ರಿಯೆ ದೊರಕಿದೆ. ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಒಳ್ಳೆಯ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಎಲ್ಲ ಕೃತಿಗಳು ವಿಭಿನ್ನ ಕಥಾವಸ್ತು, ಕಥಾಹಂದರಗಳನ್ನೊಳಗೊಂಡು ಸ್ಪರ್ಧೆಗೆ ಮೆರಗು ತಂದುಕೊಟ್ಟಿವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರ ಪ್ರಯತ್ನವೂ ಶ್ಲಾಘನೀಯ. ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು. ಕೆಲವು ಕೃತಿಗಳು ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿರಲಿಲ್ಲ. ಅಂತಹ ಕತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿಲ್ಲ. ಉಳಿದ ಕತೆಗಳಲ್ಲಿ ಸರಿಸುಮಾರು ಎಲ್ಲಾ ಕತೆಗಳು ಭಿನ್ನವಾಗಿ ರಚಿಸಲ್ಪಟ್ಟಿದ್ದವು. ಕ್ರೈಮ್ ಥ್ರಿಲ್ಲರ್, ಭಯಾನಕ, ಕೌಟುಂಬಿಕ, ಸಾಮಾಜಿಕ, ಕಾಲ್ಪನಿಕ ಪ್ರೇಮಕತೆಗಳು ಹೀಗೆ ವಿವಿಧ ರೀತಿಯ ಕತೆಗಳು ಸಲ್ಲಿಸಲ್ಪಟ್ಟು ಸ್ಪರ್ಧೆಯ ಉದ್ದೇಶವನ್ನು ಸಾರ್ಥಕಗೊಳಿಸಿವೆ. ಬರಹಗಾರರ ಕೌಶಲ್ಯ ಮತ್ತು ಉತ್ಸಾಹ ಶ್ಲಾಘನೀಯ. ಚಿಹ್ನೆಗಳು, ವ್ಯಾಕರಣ ದೋಷಗಳ ಕುರಿತು ಇನ್ನಷ್ಟು ಗಮನ ಹರಿಸಬೇಕಾಗಿರುವುದು ಅಗತ್ಯ. ಜೊತೆಗೆ ಒಂದು ಕತೆಯನ್ನು ರಚಿಸುವಾಗ ಅಂತ್ಯದವರೆಗೂ ಒಂದು ಸ್ಪಷ್ಟ ಚಿತ್ರಣವನ್ನು ಅಥವಾ ರೂಪುರೇಷೆಯನ್ನು ಹಾಕಿಕೊಂಡರೆ ಗೋಜಲುಗಳಿಲ್ಲದೆ ಅಧ್ಯಾಯಗಳನ್ನು ರಚಿಸಲು, ಧಾರಾವಾಹಿಯನ್ನು ಸುದೀರ್ಘವಾಗಿ ಬರೆಯಲು ಸುಲಭವಾಗಬಹುದು. ಕಥಾಪ್ರವೇಶಕ್ಕೂ ಮುನ್ನ ಹಲವು ರೀತಿಯ ಯೋಜನೆ, ಅಧ್ಯಯನಗಳು ಧಾರಾವಾಹಿ ರಚನೆಯನ್ನು ಪರಿಣಾಮಕಾರಿಯಾಗಿಸುತ್ತವೆ. ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ. ಎಲ್ಲಾ ಬರಹಗಾರರೂ ಸ್ಪರ್ಧೆಗೆ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸುವಂತಾಗಲಿ ಎಂದು ಆಶಿಸುತ್ತೇವೆ. ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು- ಓದುಗರ ಆಯ್ಕೆಯ ಕೃತಿಗಳು ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಕತೆಗಳಲ್ಲಿ; ಸ್ಪರ್ಧೆಯ ಪ್ರಾರಂಭದ ದಿನಾಂಕದಿಂದ ಮುಕ್ತಾಯದ ದಿನಾಂಕದವರೆಗಿನ ಅಂಕಿಅಂಶಗಳ ಆಧಾರದ ಮೇಲೆ, ಈ ಕೆಳಗಿನ ಅಂಶಗಳನ್ನು ಪರಿಗಣಿಸಿ, ಒಟ್ಟಾರೆ ರೇಶಿಯೋ ಪಡೆದು ಓದುಗರ ಆಯ್ಕೆಯ ಕೃತಿಗಳ ಸ್ಥಾನಗಳನ್ನು ತೀರ್ಮಾನಿಸಲಾಗಿದೆ. - ಕೃತಿಯ ಒಟ್ಟಾರೆ ಓದಿನ ಸಂಖ್ಯೆ - ಹೆಚ್ಚು ಓದುಗರಿಂದ ಚರ್ಚಿಸಲ್ಪಡುವ ಕೃತಿ (ಓದುಗರ ಎಂಗೇಜ್ಮೆಂಟ್ ರೇಶಿಯೋ) ಪ್ರಥಮ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಅನಿತಾ ಶಿವಭಕ್ತೆ ಅವರ ಇಬ್ಬನಿ ಕರಗಿತು ದ್ವಿತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶಿಲ್ಪ ಎಂ ಅವರ ಜೋಡಿಹಕ್ಕಿ ತೃತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಮನುಪ್ರಿಯ ಅವರ ನೂರು ಜನ್ಮಕೂ... ನೂರಾರೂ ಜನ್ಮಕೂ ನಾಲ್ಕನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವೀಣಾ ವಿನಾಯಕ ಅವರ ನೀರಿನಲ್ಲಿ ಹುಣ್ಣಿಮೆಯ ಚಂದ್ರಬಿಂಬ ಐದನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವಿದ್ಯಾ ಮೂರ್ತಿ ಅವರ ಕನಸಾಗಿ ಕಾಡುವೆ ಏಕೆ? ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸುಜಲ ಘೋರ್ಪಡೆ ಅವರ ಕಾದಂಬರಿ ಪ್ರೇಮಾನುಬಂಧ ಏಳನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ರಾಘವ್ ವಿಶ್ವಾಸಿ ಅವರ ಲಿಪಿ ಲೇಖಕನೊಬ್ಬನ ಕೊಲೆ ರಹಸ್ಯ ತೀರ್ಪುಗಾರರ ಆಯ್ಕೆಯ ಕೃತಿಗಳು ಓದುಗರ ಆಯ್ಕೆಯ ವಿಜೇತ ಕೃತಿಗಳನ್ನು ಆರಿಸಿದ ನಂತರ ಉಳಿದ ಎಲ್ಲಾ ಕತೆಗಳನ್ನು ತೀರ್ಪುಗಾರರು ಓದಿ; ಭಾಷೆ, ವ್ಯಾಕರಣ, ಕಥಾವಸ್ತು, ಕಥಾಹಂದರ, ಸೃಜನಶೀಲತೆ ಮುಂತಾದ ಮಾನದಂಡಗಳನ್ನು ಆಧರಿಸಿ, ವಿಶ್ಲೇಷಿಸಿ ಅವುಗಳಲ್ಲಿ ಉತ್ತಮವಾದ ಕೃತಿಗಳನ್ನು ವಿಜೇತ ಕೃತಿಗಳಾಗಿ ಆಯ್ಕೆ ಮಾಡಿದ್ದಾರೆ. ಪ್ರಥಮ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪಾರ್ಥಸಾರಥಿ ನರಸಿಂಗ ರಾವ್ ಅವರ ಶ್ರೀಮತಿ ರಾಮರುದ್ರ ಕೃತಿಯ ಕುರಿತು: ಐತಿಹಾಸಿಕ ಅಂಶಗಳನ್ನು ಒಳಗೊಂಡ ಉತ್ತಮ ಕಾಲ್ಪನಿಕ ಕತೆ. ಪ್ರಸ್ತುತ ಕಾಲದ ಅಂಶಗಳ ಜೊತೆಗೆ ಐತಿಹಾಸಿಕ ಕಲ್ಪನೆಯನ್ನು ಜೋಡಿಸಿ ಕತೆಯನ್ನು ಹೆಣೆದ ರೀತಿ ಬಹಳ ಸೊಗಸಾಗಿದೆ. ನಿರೂಪಣೆಯೂ ಮನಮುಟ್ಟುವಂತಿದೆ. ದ್ವಿತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶ್ರೀಷ ಅವರ ನನ್ನುಸಿರು ನಿನಗಾಗಿ ಕೃತಿಯ ಕುರಿತು: ಆಕ್ಷನ್, ಭಾವನಾತ್ಮಕತೆಯನ್ನೊಳಗೊಂಡ ಪ್ರೇಮಕತೆ ಇದಾಗಿದ್ದು ಪ್ರತಿ ಹಂತದಲ್ಲೂ ಕುತೂಹಲ ಉಂಟುಮಾಡುತ್ತ ಸಾಗುತ್ತದೆ. ಕಥಾವಿಷಯ ಸಾಮಾನ್ಯವೆನಿಸಿದರೂ ನಿರೂಪಣೆಯ ಮೂಲಕ ಗಮನ ಸೆಳೆಯುತ್ತದೆ. ತೃತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಉಮಾ ಶಂಕರಿ ಅವರ ಯಾವುದೀ ಹೊಸ ಸಂಚು..? ಕೃತಿಯ ಕುರಿತು: ಹೆಣ್ಣಿನ ಜೀವನದ ಕತೆ ಇದಾಗಿದ್ದು, ದೃಢ ನಿರ್ಧಾರ, ಛಲ ಒಂದು ಹೆಣ್ಣನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಅನೇಕ ಉತ್ತಮ ವಿಚಾರಗಳನ್ನೊಳಗೊಂದು ಇದು ಓದುಗರ ಮನಮುಟ್ಟುತ್ತದೆ. ನಾಲ್ಕನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸಂಧ್ಯಾ ಭಟ್ ಅವರ ಋಣಾನುಬಂಧ ಐದನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಕೃಷ್ಣಪ್ರಿಯೆ ಅವರ ನನ್ನ ನೀನು ಗೆಲ್ಲಲಾರೆ ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪ್ರಜ್ಞಾ ಅವರ ಮೂರನೆಯ ಅಡ್ಡರಸ್ತೆ ಏಳನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಕೌಸಲ್ಯ ಕಾರಂತ್ ಅವರ ಒಲವ ಭಾವಗೀತೆ 77 ಕ್ಕೂ ಅಧಿಕ ಅಧ್ಯಾಯಗಳನ್ನು ರಚಿಸಿದವರ ಯಾದಿ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 77 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 77 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ರಾಜಪತ್ರವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು. ಜೊತೆಗೆ ಪ್ರತಿಲಿಪಿ ತಂಡ ಈ ಕೃತಿಗಳಿಗೆ ವಿಶೇಷ ಮುಖಪುಟ(ಕವರ್ ಚಿತ್ರ)ವನ್ನು ವಿನ್ಯಾಸಗೊಳಿಸುತ್ತದೆ. ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ: ಬನಶಂಕರಿ ಕುಲಕರ್ಣಿ ಅವರ ಉರ್ಮಿಳಾ (ಭಾವನೆಗಳ ಸಂಘರ್ಷ) ಕ್ರಮಸಂಖ್ಯೆ ಕೃತಿ ಕರ್ತೃ 1 ಹೃದಯ ಬಡಿತ ನಿನದೇ ಭಾನು ಹೆಚ್. ಎಫ್. 2 ರಾಯಣ್ಣನ ರತ್ನ ಆಶಾ ಮಹೇಶ್ 3 ನಾ ನಿನಗೆ ಕಾವಲುಗಾರ ಸುಹಾನಿ 4 ನಿಧಿ ಸಿಕ್ಕಾಗ ರತ್ನ ಪಟವರ್ಧನ್ 5 ಲಿಪಿ ಲೇಖಕನೊಬ್ಬನ ಕೊಲೆ ರಹಸ್ಯ ರಾಘವ್ ವಿಶ್ವಾಸಿ 6 ನೂರು ಜನ್ಮಕೂ... ನೂರಾರೂ ಜನ್ಮಕೂ ಮನುಪ್ರಿಯ 7 ಅಂತರಾಳ ಡಾ ರಾಜೇಶ್ವರಿ ಶ್ರೀನಿವಾಸ 8 ಜೋಡಿಹಕ್ಕಿ ಶಿಲ್ಪ ಎಂ 9 ಮೊದಲಿನಿಂದ ಮೋಹಿಸುವೆನು ಮರಳಿ ಬಂದರೆ ಅವಳು ಶ್ರೀ ಭಾಗ್ಯ ಪೂಜಾರಿ 10 ಶ್ರಾವಣದ ಸಿರಿ ಮುಗಿಲು ಅಶೋಕ್ ಕುಮಾರ್ ಜಿ. ಎಸ್. 11 ಕನಸಾಗಿ ಕಾಡುವೆ ಏಕೆ? ವಿದ್ಯಾ ಮೂರ್ತಿ 12 ಒಲವಿನಾಗಮನ... ಜೆ. ಕೆ. 13 ನನ್ನುಸಿರು ನಿನಗಾಗಿ ಶ್ರೀಷ 14 ಯಾವುದೀ ಹೊಸ ಸಂಚು..? ಉಮಾ ಶಂಕರಿ 15 ಒಲವೇ ನೀ ಬಾಡದಿರು ಮಾನಸ ವಿಜಯ್ 16 ನೀರಿನಲ್ಲಿ ಹುಣ್ಣಿಮೆಯ ಚಂದ್ರಬಿಂಬ ವೀಣಾ ವಿನಾಯಕ 17 ಭಾವನವನವೀನ ವಿಜಯ ಭಾರತಿ 18 ಉರ್ಮಿಳಾ (ಭಾವನೆಗಳ ಸಂಘರ್ಷ) ಬನಶಂಕರಿ ಕುಲಕರ್ಣಿ 19 "ದ್ವೇಷಾನಲ"(ಅತೃಪ್ತ ಆತ್ಮದ ಪ್ರತೀಕಾರ) ಮಾಲಾ ಭಟ್ 20 ಮೊದಲನೆ ದಿನವೇ ಒಲಿದೆ... ಮನೋ'ರಮೆ' ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು ಈ ಬಾರಿ ಸಣ್ಣ ಅಂತರದಿಂದ ವಿಜೇತ ಕೃತಿಗಳ ಪಟ್ಟಿಗೆ ಬರಲು ಸಾಧ್ಯವಾಗದ ಕೆಲವು ಧಾರಾವಾಹಿಗಳನ್ನು ಕೆಳಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇವೆ. ಕ್ರಮಸಂಖ್ಯೆ ಕೃತಿ ಕರ್ತೃ 1 ಅವಶೇಷ! ಶಿವಶಂಕರ್ ಎಸ್ ಜಿ 2 ಚಾಂದಿನಿ ನಾಗಲಕ್ಷ್ಮಿ ಪ್ರಸನ್ನ ಕುಮಾರ್ 3 ಸಾಗರದ ಆಚೆ (ಎದೆ ತುಂಬಿ ಹಾಡಿದೆನು) ಶುಭಾ ಶ್ರೀನಾಥ್ 4 ಬದುಕು ಮಾಯೆಯ ಮಾಟ ಲತಾ ರವಿ 5 ಕವಲುದಾರಿ ಲಕ್ಷ್ಮಿ ಗೌಡ 6 ಚಂದ್ರಲೇಖಾ ಪುಷ್ಕರಿಣಿ ಕನ್ನಡತಿ 7 ಬಾಳೆಂಬ ಈ ಪಥದಲ್ಲಿ... ವೇದಾ ಮಂಜುನಾಥನ್ 8 ಜನ್ಮಾಂತರದ ಮೋಹ ಗುಪ್ತ ಗಾಮಿನಿ ಸೂಚನೆ: ಡಿಜಿಟಲ್ ಪ್ರಮಾಣಪತ್ರ ಮತ್ತು ರಾಜಪತ್ರಗಳನ್ನು ಬರಹಗಾರರ ಪ್ರತಿಲಿಪಿ ಪ್ರೊಫೈಲ್ಗೆ ಲಿಂಕ್ ಆಗಿರುವ ಈಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಸ್ಪರ್ಧೆಯ ಕೃತಿಗಳನ್ನು ಒಂದು ವಾರದೊಳಗೆ ಪ್ರತಿಲಿಪಿ ಹೋಮ್ ಪೇಜಿನಲ್ಲಿ ಬ್ಯಾನರ್ ಮೂಲಕ ಪ್ರಚಾರ ಮಾಡಲಾಗುವುದು. ನೀವು ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8 ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 80+ ಅಧ್ಯಾಯಗಳ ಧಾರಾವಾಹಿಯನ್ನು 15 ಅಕ್ಟೋಬರ್ 2024 ರ ಒಳಗೆ ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://kannada.pratilipi.com/event/q9s1uwrfzr ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಧಾರಾವಾಹಿಗಳನ್ನು ಪರಿಣಾಮಕಾರಿ ಮತ್ತು ಆಕರ್ಷಕವಾಗಿ ಬರೆಯಿರಿ14 ಮೇ 2024ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಧಾರಾವಾಹಿಗಳನ್ನು ಪರಿಣಾಮಕಾರಿ ಮತ್ತು ಆಕರ್ಷಕವಾಗಿ ಬರೆಯಿರಿ ಕೆಳಗೆ ನೀಡಲಾಗಿರುವ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡು ಅತ್ಯುತ್ತಮ ಕೃತಿ ರಚಿಸಿ, ಯಶಸ್ಸು ಗಳಿಸಿ: ಕಥಾವಸ್ತು ಮತ್ತು ಪಾತ್ರಪೋಷಣೆ: (1)ಒಂದು ಕಥಾವಸ್ತು/ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿಸುವುದು ಹೇಗೆ? (2)ಉಪಕತೆಗಳು ಮತ್ತು ಪಾತ್ರಪೋಷಣೆ ಮಾಡುವುದು ಹೇಗೆ? (3)ಓದುಗರನ್ನು ಆಕರ್ಷಿಸಲು ಜನಪ್ರಿಯ ಕಥಾವಿಷಯಗಳು; ಕ್ಲಿಫ್'ಹ್ಯಾಂಗರ್ ಮತ್ತು ಕೊಂಡಿಗಳ ಬಳಕೆ ನಿರ್ದಿಷ್ಟ ಪ್ರಕಾರದ ಕತೆಗಳನ್ನು ಬರೆಯುವಿಕೆ: (1)ಪ್ರೀತಿ-ಪ್ರೇಮ ವಿಷಯಾಧಾರಿತ ಕತೆಗಳನ್ನು ಆಸಕ್ತಿದಾಯಕವಾಗಿ ರಚಿಸುವುದು ಹೇಗೆ? (2)ಕೌಟುಂಬಿಕ, ಸಾಮಾಜಿಕ, ಮಹಿಳಾ ಕೇಂದ್ರಿತ ಕೃತಿಗಳನ್ನು ಆಸಕ್ತಿದಾಯಕವಾಗಿ ಹೇಗೆ ರಚಿಸಬಹುದು? (3)ಕಾಲ್ಪನಿಕ(ಫ್ಯಾಂಟಸಿ), ರಹಸ್ಯ, ಭಯಾನಕ ವಿಷಯಾಧಾರಿತ ಕತೆಗಳನ್ನು ಕುತೂಹಲಕಾರಿಯಾಗಿ ರಚಿಸುವುದು ಹೇಗೆ? (4)ಥ್ರಿಲ್ಲರ್ ಧಾರಾವಾಹಿಗಳನ್ನು ಕೌತುಕಭರಿತವಾಗಿಸುವುದು ಹೇಗೆ?? ಬರವಣಿಗೆಯ ತಂತ್ರಗಳು: (1)ಅಧಿಕ ಆದಾಯ ಗಳಿಸುವ ಧಾರಾವಾಹಿಗಳನ್ನು ಬರೆಯುವುದು ಹೇಗೆ? (2)ನಿರೂಪಣಾ ಶೈಲಿ ಮತ್ತು ಸನ್ನಿವೇಶಗಳ ಸೃಷ್ಟಿ, ಘಟನೆಗಳನ್ನು ಜೋಡಿಸುವುದು ಹೇಗೆ? (3)ಅಧ್ಯಾಯಗಳ ರೂಪುರೇಷೆ ಮತ್ತು ಸನ್ನಿವೇಶಗಳನ್ನು ಬರೆಯುವ ವಿಧಾನ (4)ಸಂಭಾಷಣಾ ಶೈಲಿ ಮತ್ತು ಕೃತಿಯ ಮೊದಲ ಅಧ್ಯಾಯವನ್ನು ಆರಂಭಿಸುವ ಬಗೆ (5)ತಿರುವುಗಳು ಮತ್ತು ಕಥಾ ಕೊಂಡಿಗಳನ್ನು ಬಳಸುವುದು; ಕತೆಯನ್ನು ಅಂತ್ಯಗೊಳಿಸುವ ಪರಿ (6)ವಿವಿಧ ಭಾವನೆಗಳನ್ನು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ? ಯೋಜನೆ ರೂಪಿಸುವಿಕೆ ಮತ್ತು ಬರೆಯುವಾಗ ಎದುರಾಗುವ ಸಮಸ್ಯೆಗಳಿಗೆ ಪರಿಹಾರ: (1)ಸತತವಾಗಿ ಬರೆಯಲು ವೇಳಾಪಟ್ಟಿ ತಯಾರಿಸುವುದು ಹೇಗೆ? (2)ಬರೆಯುವಾಗ ಎದುರಾಗುವ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ (3)ರೈಟರ್ಸ್ ಬ್ಲಾಕ್'ಅನ್ನು ಸಮರ್ಧವಾಗಿ ಎದುರಿಸಿ ಧಾರಾವಾಹಿಗಳನ್ನು ವಿಸ್ತರಿಸಲು ಕೆಲವು ವಿಧಾನಗಳು ಪ್ರತಿಲಿಪಿಯಲ್ಲಿ ಸುದೀರ್ಘ ಧಾರಾವಾಹಿಗಳನ್ನು ಬರೆಯುವುದರ ಪ್ರಯೋಜನ: (1)ಪ್ರತಿಲಿಪಿಯು ತನ್ನ ಬರಹಗಾರರಿಗೆ ಸುದೀರ್ಘ ಕೃತಿಗಳನ್ನು ರಚಿಸಲು ಏಕೆ ಪ್ರೇರೇಪಿಸುತ್ತದೆ? (2)ಓದುಗರನ್ನು ನಿಮ್ಮ ಕತೆಯಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಮಾಡುವುದು ಹೇಗೆ? (3)ಟ್ರೆಂಡಿಂಗ್ ಧಾರಾವಾಹಿಗಳ ವಿಶ್ಲೇಷಣೆ (4)ಓದುಗರನ್ನು ಆಕರ್ಷಿಸಬಲ್ಲ ವಿವಿಧ ಬಗೆಯ ಪ್ರಚಾರ ತಂತ್ರಗಳು (5)ಪ್ರತಿಲಿಪಿ ಶಿಫಾರಸ್ಸು ವ್ಯವಸ್ಥೆ(ರೆಕಮಂಡೇಶನ್ ಸಿಸ್ಟಂ) ಹೇಗೆ ಕಾರ್ಯ ನಿರ್ವಹಿಸುತ್ತದೆ? (6)ಪ್ರೀಮಿಯಂ ಧಾರಾವಾಹಿಗಳಿಂದ ಮಾಸಿಕ ಆದಾಯ ಗಳಿಸುವ ಬಗೆ (7)ಸೀಸನ್ಗಳನ್ನು ಬರೆಯುವಿಕೆ (8)ಬೋನಸ್ ಅಧ್ಯಾಯಗಳನ್ನು ಬರೆಯುವುದು ಹೇಗೆ? (9)ದೀರ್ಘ ಧಾರಾವಾಹಿಗಳನ್ನು ರಚಿಸುವುದರ ಪ್ರಯೋಜನಗಳು ಧಾರಾವಾಹಿಗಳನ್ನು ರಚಿಸುವ ಕುರಿತು ವಿಶೇಷ ಮಾಹಿತಿ ಮತ್ತು ಆನ್ಲೈನ್ ತರಬೇತಿಯ ರೆಕಾರ್ಡಿಂಗ್'ಗಳನ್ನು ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: 1.ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0 3.ಪ್ರತಿಲಿಪಿ ಕ್ರಿಯೇಟರ್ಸ್ ಪ್ರೋಗ್ರಾಮ್ 4.ಪ್ರತಿಲಿಪಿ ಕ್ರಿಯೇಟರ್ಸ್ ಪ್ರೋಗ್ರಾಮ್ 2.0 ಇಂದಿನಿಂದಲೇ ಯೋಜನೆಯನ್ನು ರೂಪಿಸಲು ಆರಂಭಿಸಿ!ಈ ರೀತಿಯಾಗಿ ಯೋಜನೆ ರೂಪಿಸಿಕೊಳ್ಳಲು 4-5 ದಿನಗಳ ಕಾಲಾವಕಾಶ ಬೇಕಾಗಬಹುದು. ಆದರೆ ಈ ಯೋಜನೆ ನಿಮ್ಮ ಕಥಾರಚನೆಗೆ ಖಂಡಿತವಾಗಿ ಸಹಾಯ ಮಾಡುತ್ತದೆ.ಈ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿ, ದೀರ್ಘ ಧಾರಾವಾಹಿ ಬರವಣಿಗೆ ನಿಮಗೆ ಎಷ್ಟು ಸರಳ ಮತ್ತು ಸುಲಭವಾಗಿ ತೋರುತ್ತದೆ ಎಂಬುದನ್ನು ನೀವು ಮನಗಾಣುವಿರಿ. ಶುಭವಾಗಲಿ! ಪ್ರತಿಲಿಪಿ ಸ್ಪರ್ಧಾ ವಿಭಾಗಇನ್ನೂ ಹೆಚ್ಚು ತೋರಿಸಿ
- ಸೂಪರ್ ಸಾಹಿತಿ ಅವಾರ್ಡ್ಸ್ | FAQ ಬ್ಲಾಗ್09 ಮೇ 20241. ಈ ಸ್ಪರ್ಧೆಯಲ್ಲಿ ಯಾರು ಭಾಗವಹಿಸಬಹುದು? ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಅಥವಾ ಹೊಂದಿರದ ಎಲ್ಲಾ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. 2. ನನ್ನ ಧಾರಾವಾಹಿಯಲ್ಲಿ ಮುನ್ನುಡಿ, ಪಾತ್ರ ಪರಿಚಯ ಅಥವಾ ಹೆಚ್ಚುವರಿ ಟಿಪ್ಪಣಿಗಳನ್ನು ಪ್ರತ್ಯೇಕ ಅಧ್ಯಾಯಗಳಾಗಿ ಪ್ರಕಟಿಸುವುದನ್ನು ನಾನು ಏಕೆ ತಪ್ಪಿಸಬೇಕು? ನಿಮ್ಮ ಧಾರಾವಾಹಿಯಲ್ಲಿ ಮುನ್ನುಡಿ, ಪಾತ್ರ ಪರಿಚಯ ಮತ್ತು ಹೆಚ್ಚುವರಿ ಟಿಪ್ಪಣಿಗಳನ್ನು ಪ್ರತ್ಯೇಕ ಅಧ್ಯಾಯಗಳಾಗಿ ಪ್ರಕಟಿಸುವುದನ್ನು ತಪ್ಪಿಸುವುದು ಏಕೆ ಉತ್ತಮ ಎಂಬುದು ಇಲ್ಲಿದೆ: (1) ರೀಡರ್ ಎಂಗೇಜ್ಮೆಂಟ್: ಮುಖ್ಯ ಕಥೆಯು ಮೊದಲ ಅಧ್ಯಾಯದಲ್ಲಿ ತಕ್ಷಣವೇ ಪ್ರಾರಂಭವಾಗಬೇಕೆಂದು ಓದುಗರು ನಿರೀಕ್ಷಿಸುತ್ತಾರೆ. ಧಾರಾವಾಹಿಯ ಭಾಗವಾಗಿ ಅಗತ್ಯವಿಲ್ಲದ ವಿಷಯವನ್ನು ಪ್ರಕಟಿಸುವುದರಿಂದ ಕಥೆಯನ್ನು ಓದುವ ಆಸಕ್ತಿಯನ್ನು ಓದುಗರು ಕಳೆದುಕೊಳ್ಳಬಹುದು. (2) ಸಲಹೆ: ನೀವು ಬಯಸಿದರೆ ನಿಮ್ಮ ಮೊದಲ ಅಧ್ಯಾಯವನ್ನು 4-5 ಸಾಲುಗಳ ಮುನ್ನುಡಿ ಅಥವಾ ಪರಿಚಯದೊಂದಿಗೆ ಪ್ರಾರಂಭಿಸಬಹುದು, ನಂತರ ನಿಮ್ಮ ಓದುಗರನ್ನು ಸೆಳೆಯಲು ನಿಮ್ಮ ಕಥೆಯ ಮೊದಲ ದೃಶ್ಯವನ್ನು ನೇರವಾಗಿ ಪ್ರಾರಂಭಿಸಿ. 3. ನನ್ನ ಧಾರಾವಾಹಿಯನ್ನು ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಸೇರಿಸುವುದು ಹೇಗೆ? ನೀವು ಹೊಸ ಧಾರಾವಾಹಿಯನ್ನು ರಚಿಸುವಾಗ ಮೊದಲ 15 ಅಧ್ಯಾಯಗಳು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸಲ್ಪಡುವುದಿಲ್ಲ ಅಂದರೆ ಲಾಕ್ ಆಗುವುದಿಲ್ಲ. 16 ನೆಯ ಅಧ್ಯಾಯ ಪ್ರಕಟಗೊಂಡಾಗ ನಿಮ್ಮ ಧಾರಾವಾಹಿ ತಾನಾಗಿಯೇ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸಲ್ಪಡುತ್ತದೆ. ಮೊದಲ 15 ಅಧ್ಯಾಯಗಳು ಪ್ರಕಟಗೊಂಡಾಗ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಆಯ್ಕೆ ನಿಮಗೆ ಕಾಣಿಸುವುದಿಲ್ಲ. 16 ನೆಯ ಅಧ್ಯಾಯದ ನಂತರ ನಿಮಗೆ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಆಯ್ಕೆ ಕಾಣಿಸುತ್ತದೆ. 16 ನೆಯ ಅಧ್ಯಾಯದಿಂದ ಎಲ್ಲಾ ಅಧ್ಯಾಯಗಳು ಲಾಕ್ ಆಗಲ್ಪಡುತ್ತವೆ ಮತ್ತು ಶಾಶ್ವತವಾಗಿ ಪ್ರತಿಲಿಪಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತವೆ. ಪ್ರೀಮಿಯಂ ಚಂದಾದಾರಿಕೆ, ನಾಣ್ಯಗಳನ್ನು ನೀಡುವಿಕೆ ಅಥವಾ ಮರುದಿನದವರೆಗೆ ಕಾಯುವುದರ ಮೂಲಕ ಓದುಗರು ನಿಮ್ಮ ಧಾರಾವಾಹಿಯ ಅಧ್ಯಾಯಗಳನ್ನು ಅನ್ಲಾಕ್ ಮಾಡಲು ಸಾಧ್ಯವಾಗುತ್ತದೆ. 4. ನಾನು ಗೋಲ್ಡನ್ ಬ್ಯಾಡ್ಜ್ ಹೊಂದಿಲ್ಲ, ಏನು ಮಾಡಬೇಕು? ನೀವು ಗೋಲ್ಡನ್ ಬ್ಯಾಡ್ಜ್ ಹೊಂದಿಲ್ಲದಿದ್ದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಯನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸಬಹುದು. ಸ್ಪರ್ಧೆಗೆ ಕೃತಿಯನ್ನು ಕಳುಹಿಸುವ ಅಂತಿಮ ದಿನಾಂಕದೊಳಗೆ ನೀವು ನಿಮ್ಮ ಪ್ರೊಫೈಲ್ ನಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆದರೆ ನಿಮ್ಮ ಕೃತಿ 15 ಅಧ್ಯಾಯಗಳ ನಂತರ ಸ್ವಯಂಚಾಲಿತವಾಗಿ ಪ್ರತಿಲಿಪಿ ಪ್ರೀಮಿಯಂಅನ್ನು ಸೇರುತ್ತದೆ. ಅಕಸ್ಮಾತ್ ನೀವು ಗೋಲ್ಡನ್ ಬ್ಯಾಡ್ಜ್ ಪಡೆಯದಿದ್ದರೂ ಕೃತಿಯು ಸ್ಪರ್ಧೆಗೆ ಪರಿಗಣಿಸಲ್ಪಡುತ್ತದೆ. ಸ್ಪರ್ಧೆಗೆ ಕೃತಿಯನ್ನುಧಾರಾವಾಹಿರೂಪದಲ್ಲಿ ಪ್ರಕಟಿಸಲು ಪ್ರಾರಂಭಿಸಿದ ಬಳಿಕ, ನೀವು ನಿಮ್ಮ ಪ್ರೊಫೈಲ್ ನಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿದಲ್ಲಿ; ಮತ್ತು ಆ ಬಳಿಕವೂ ನಿಮ್ಮ ಕೃತಿ ಸ್ವಯಂಚಾಲಿತವಾಗಿ ಸಬ್ಸ್ಕ್ರಿಪ್ಷನ್ ವಿಭಾಗಕ್ಕೆ ಸೇರ್ಪಡೆಯಾಗದಿದ್ದರೆ, 16 ನೆಯ ಅಧ್ಯಾಯದ ನಂತರ ನೀವು ಈ ಕೆಳಗಿನ ವಿಧಾನವನ್ನು ಅನುಸರಿಸುವುದರ ಮೂಲಕ ಕೃತಿಯನ್ನು ಪ್ರೀಮಿಯಂಗೆ ಸೇರಿಸಬಹುದು: 1: ಪ್ರತಿಲಿಪಿ ಅಪ್ಲಿಕೇಶನ್ನಿನ ಹೋಂ ಪೇಜಿನಲ್ಲಿ ಕಾಣುವ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 2: ನಿಮ್ಮ ಕೃತಿಯನ್ನು ಎಡಿಟ್ ಮಾಡುವಲ್ಲಿಗೆ ಹೋಗಿ, ಇತರೆ ಮಾಹಿಗಳನ್ನು ಎಡಿಟ್ ಮಾಡಿ ಎನ್ನುವಲ್ಲಿಗೆ ಹೋಗಿ; 3: ಸಬ್ಸ್ಕ್ರಿಪ್ಷನ್ ಸೌಲಭ್ಯಕ್ಕೆ ಸೇರಿಸಿ ಎಂಬಲ್ಲಿ ಹೌದು ಎಂದು ಆಯ್ಕೆ ಮಾಡಿ. ನಿಮ್ಮ ಕೃತಿ 24 ಗಂಟೆಗಳಲ್ಲಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತದೆ. 5. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವುದು ಹೇಗೆ? ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಸಾಹಿತಿಯಾಗಲು ಎರಡು ಮಾನದಂಡಗಳಿವೆ: 1. ನೀವು ಕನಿಷ್ಠ 200 ಹಿಂಬಾಲಕರನ್ನು ಹೊಂದಿರಬೇಕು. ನಂತರ; 2. ನೀವು ಹಿಂದಿನ 30 ದಿನಗಳಲ್ಲಿ ಕನಿಷ್ಠ 5 ಬರಹಗಳನ್ನು ಪ್ರಕಟಿಸರಬೇಕು. 6. ನನ್ನ ಕೃತಿ ಸ್ಪರ್ಧೆಗೆ ಪರಿಗಣಿತವಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ನಿಮ್ಮ ಕೃತಿ ಸ್ಪರ್ಧೆಗೆ ಪರಿಗಣಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು: (1) ಸ್ಪರ್ಧೆಯ ಕಾಲಾವಧಿಯ ಒಳಗೆ ನಿಮ್ಮ ಧಾರಾವಾಹಿಯ ಎಲ್ಲಾ ಅಧ್ಯಾಯಗಳನ್ನು ಪ್ರಕಟಿಸಬೇಕು: ಸ್ಪರ್ಧೆಯ ಪ್ರಾರಂಭ ಮತ್ತು ಮುಕ್ತಾಯದ ದಿನಾಂಕದೊಳಗೆ ನಿಮ್ಮ ಧಾರಾವಾಹಿಯ ಎಲ್ಲಾ ಅಧ್ಯಾಯಗಳು ಎಲ್ಲ ನಿಯಮಗಳನ್ನು ಪಾಲಿಸಿ ಪ್ರಕಟಗೊಂಡು, ಪೂರ್ಣಗೊಂಡಿರಬೇಕು. ಪ್ರತಿ ಅಧ್ಯಾಯ ಕನಿಷ್ಠ 1000 ಪದಗಳನ್ನು ಹೊಂದಿರಬೇಕು. ಗರಿಷ್ಠ ಪದಸಂಖ್ಯೆಗೆ ಯಾವುದೇ ಮಿತಿಯಿಲ್ಲ. (2) ಸ್ಪರ್ಧೆಯ ಪ್ರಭೇದವನ್ನು ಆಯ್ಕೆ ಮಾಡಬೇಕು: ನಿಮ್ಮ ಕೃತಿಯನ್ನು ಪ್ರಕಟಿಸುವಾಗ ಸ್ಪರ್ಧೆಯ ಪ್ರಭೇದ ಸೂಪರ್ ಸಾಹಿತಿ- 10ನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು. (3) ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಸ್ಪರ್ಧೆಯ ವಿವರಗಳಲ್ಲಿ ನೀಡಿರುವ ಎಲ್ಲಾ ಮಾಹಿತಿಗಳನ್ನು, ನಿಯಮಗಳನ್ನು ಗಮನವಿಟ್ಟು ಓದಿ, ಅರ್ಥೈಸಿಕೊಂಡು ಎಲ್ಲಾ ನಿಯಮಗಳನ್ನು ಪಾಲಿಸಿ ನಿಮ್ಮ ಕೃತಿಯನ್ನು ಪ್ರಕಟಿಸಬೇಕು. 7. ಸ್ಪರ್ಧೆಯ ವಿಜೇತ ಕೃತಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಸ್ಪರ್ಧೆಯ ಮುಕ್ತಾಯದ ದಿನದ ನಂತರ, ಸ್ಪರ್ಧೆಯ ಪ್ರಭೇದದ ಅಡಿಯಲ್ಲಿ ಪ್ರಕಟಿಸಲ್ಪಟ್ಟ ಎಲ್ಲಾ ಕೃತಿಗಳನ್ನು ನಮ್ಮ ತಂಡ ನಮ್ಮ ಸಿಸ್ಟಂ ಸಹಾಯದಿಂದ ಸಂಗ್ರಹಿಸುತ್ತದೆ. ಸಲ್ಲಿಸಲ್ಪಟ್ಟ ಕೃತಿಗಳ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿರುವುದರ ಬಗ್ಗೆ ನಮ್ಮ ತಂಡ ಪರಿಶೀಲಿಸುತ್ತದೆ. ನಂತರ ನಮ್ಮ ನಿರ್ಣಾಯಕರ ಹಾಗೂ ಸಂಪಾದಕರ ತಂಡ ಕೃತಿಯನ್ನು ಓದಿ; ಭಾಷೆ, ವ್ಯಾಕರಣ, ಕಥಾವಸ್ತು, ಕಥಾಹಂದರ, ಸೃಜನಶೀಲತೆ ಮುಂತಾದ ಮಾನದಂಡಗಳನ್ನು ಆಧರಿಸಿ ವಿಜೇತ ಕೃತಿಗಳನ್ನು ಆಯ್ಕೆ ಮಾಡುತ್ತದೆ. 8.ನಾನು ಈಗಾಗಲೇ ಪ್ರಕಟಿಸಿರುವ ಕೃತಿಯ ಮುಂದಿನ ಸೀಸನ್ಅನ್ನು ಸ್ಪರ್ಧೆಗಾಗಿ ಪ್ರಕಟಿಸಬಹುದೇ? ಖಂಡಿತ, ನೀವು ಈಗಾಗಲೇ ಪ್ರತಿಲಿಪಿಯಲ್ಲಿ ಪ್ರಕಟಿಸಿರುವ ಯಾವುದೇ ಕತೆಯ ಮುಂದಿನ ಸೀಸನ್ಅನ್ನು ಸ್ಪರ್ಧೆಗಾಗಿ ಪ್ರಕಟಿಸಬಹುದು. ಈಗಾಗಲೇ ಜನಪ್ರಿಯವಾಗಿರುವ ನಿಮ್ಮ ಕತೆಯ ಮುಂದಿನ ಸೀಸನ್ಅನ್ನು ಪ್ರಕಟಿಸುವುದು ಉತ್ತಮ ಯೋಚನೆ. ಆದರೆ ನಿಮ್ಮ ಪ್ರಸ್ತುತ ಕೃತಿ ಹಿಂದಿನ ಕೃತಿಯ ಮೇಲೆಯೇ ಹೆಚ್ಚು ಅವಲಂಬಿತವಾಗಿರದಂತೆ ನೋಡಿಕೊಳ್ಳುವುದು ಉತ್ತಮ; ಸಾಧ್ಯವಾದಷ್ಟು ತೀರ್ಪುಗಾರರಿಗೆ ಸ್ಪರ್ಧೆಗೆ ಸಲ್ಲಿಸಿರುವ ಕೃತಿಗಳನ್ನು ಓದಿ, ಪರಿಶೀಲಿಸಲು, ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು. 9.ನಾನು ಒಂದೇ ಕೃತಿಯನ್ನು ಎರಡು ಸ್ಪರ್ಧೆಗಾಗಿ ಪ್ರಕಟಿಸಬಹುದೇ? ಒಂದು ಕೃತಿ ಒಂದೇ ಸ್ಪರ್ಧೆಗಾಗಿ! ಪ್ರತಿಯೊಂದು ಸ್ಪರ್ಧೆಯ ಉದ್ದೇಶ, ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಹಾಗಾಗಿ ಒಂದು ಕೃತಿಯನ್ನು ಒಂದೇ ಸ್ಪರ್ಧೆಗಾಗಿ ಸಲ್ಲಿಸಬೇಕು. ಒಂದೇ ಕೃತಿಯನ್ನು ಬೇರೆ ಬೇರೆ ಸ್ಪರ್ಧೆಗಳಿಗೆ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ. 10.ಸ್ಪರ್ಧೆಯ ಫಲಿತಾಂಶವನ್ನು ನಾನು ಎಲ್ಲಿ ನೋಡಬಹುದು? ನೀವು ಸ್ಪರ್ಧೆಯ ಫಲಿತಾಂಶದ ವಿವರಗಳನ್ನು ಬ್ಲಾಗ್ ವಿಭಾಗದಲ್ಲಿ ನೋಡಬಹುದು. ಸ್ಪರ್ಧೆಯ ಫಲಿತಾಂಶಗಳು ಆಯಾ ಸ್ಪರ್ಧೆಯ ವಿವರಗಳಲ್ಲಿ ತಿಳಿಸುವ ದಿನಾಂಕದಂದು ಬ್ಲಾಗ್ ವಿಭಾಗದಲ್ಲಿ ಪ್ರಕಟಗೊಳ್ಳುತ್ತವೆ. ಬ್ಲಾಗ್ ವಿಭಾಗಕ್ಕೆ ಹೋಗಲು- 1. ಪ್ರತಿಲಿಪಿಯ ಹೋಂ ಪೇಜ್'ನಲ್ಲಿ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 2. ಆ ಪುಟದ ಕೆಳಗೆ ಅಂಕಿಅಂಶಗಳು, ಅಗ್ರಮಾನ್ಯ ಸಾಹಿತಿಗಳು ಆಯ್ಕೆಯ ಜೊತೆಗೆ ಬ್ಲಾಗ್ ವಿಭಾಗವನ್ನೂ ಕಾಣಬಹುದು. 3. ಬ್ಲಾಗ್ ವಿಭಾಗಕ್ಕೆ ಹೋಗಿ ಸ್ಪರ್ಧೆಯ ಫಲಿತಾಂಶವನ್ನು ವೀಕ್ಷಿಸಬಹುದು. ಸೂಪರ್ ಸಾಹಿತಿಯಾಗಿ ಗುರುತಿಸಿಕೊಳ್ಳಲು ಸಹಾಯ ಬೇಕೇ? = ಪ್ರತಿಲಿಪಿಯಲ್ಲಿ ಧಾರಾವಾಹಿಯನ್ನು ರಚಿಸುವ ವಿಧಾನವನ್ನು ಹಂತ ಹಂತವಾಗಿ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: ಸ್ವಪ್ರಕಾಶನ ಮಾರ್ಗದರ್ಶಿ = ನಿಮ್ಮ ಕೃತಿಯನ್ನು ರಚಿಸಲು ಟ್ರೆಂಡಿಂಗ್ ಕಥಾಹಂದರಗಳು, ಪಾತ್ರ ಪೋಷಣೆಗೆ ಅಗತ್ಯವಿರುವ ಮಾಹಿತಿಗಳು, ಇತರೆ ಸಂಪನ್ಮೂಲಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: ನಿಮಗಾಗಿ ಕೆಲವು ಸಲಹೆಗಳು : ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಗೆ ಅದ್ಭುತ ಕೃತಿಗಳನ್ನು ರಚಿಸಿ! ನೀವು ಯಾವುದೇ ಸಮಸ್ಯೆ, ಅನುಮಾನಗಳನ್ನು ಹೊಂದಿದ್ದಲ್ಲಿ [email protected] ಗೆ ಈಮೇಲ್ ಕಳುಹಿಸಿ. ನಮ್ಮ ತಂಡ 24 ಗಂಟೆಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಲು ಪ್ರಯತ್ನಿಸುತ್ತದೆ. ಸಾವಿರಾರು ಲೇಖಕರು ಈಗಾಗಲೇ ನಮ್ಮ ಪ್ಲಾಟ್ಫಾರ್ಮ್ನಲ್ಲಿ ತಮ್ಮ ಕೃತಿಗಳ ಪ್ರಕಟಣೆಯ ಮೂಲಕ ಯಶಸ್ಸನ್ನು ಕಂಡುಕೊಂಡಿದ್ದಾರೆ, ತಮ್ಮ ಪ್ರತಿಭೆಯನ್ನು ಆಕರ್ಷಕ ಕಥೆಗಳಾಗಿ ಪರಿವರ್ತಿಸಿ ಆ ಮೂಲಕ ಪ್ರತಿ ತಿಂಗಳೂ ಆದಾಯವನ್ನು ಗಳಿಸುತ್ತಿದ್ದಾರೆ. ನೀವೂ ಅವರೊಳಗೊಬ್ಬರಾಗಲು ಇಲ್ಲಿದೆ ಅವಕಾಶ! ಸ್ಪರ್ಧೆಯಲ್ಲಿ ಭಾಗವಹಿಸಿ ಸಾಹಿತ್ಯ ಲೋಕದಲ್ಲಿ ನಿಮ್ಮದೇ ಛಾಪು ಮೂಡಿಸುವ ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ! ಶುಭವಾಗಲಿ! ಪ್ರತಿಲಿಪಿ ಸ್ಪರ್ಧಾ ವಿಭಾಗಇನ್ನೂ ಹೆಚ್ಚು ತೋರಿಸಿ
