ಹೋಮ್
ವಿಭಾಗಗಳು ಬರೆಯಿರಿ

ಏನಿದು ಪ್ರತಿಲಿಪಿ?

ಪ್ರತಿಲಿಪಿಯನ್ನು ಕುರಿತು: 

ಪ್ರತಿಲಿಪಿ ಭಾರತದ ಅತಿ ದೊಡ್ಡ ಸ್ವಪ್ರಕಾಶನ ಸಂಸ್ಥೆಯಾಗಿದ್ದು, ಇಲ್ಲಿ ಯಾವುದೇ ಶುಲ್ಕವಿಲ್ಲದೆ ನಿಮ್ಮ ಬರಹವನ್ನು (ಕಥೆ, ಕವಿತೆ, ಲೇಖನಗಳು ಮತ್ತು ಕಾದಂಬರಿಗಳು) ಪ್ರಕಟಿಸಬಹುದು. ಮತ್ತು ಹನ್ನೆರೆಡು ಭಾಷೆಗಳಲ್ಲಿನ ಸಾಹಿತ್ಯವನ್ನು ಓದಿ ಆನಂದಿಸಬಹುದು.

ಪ್ರತಿಲಿಪಿಯ ಮೂಲ ಧ್ಯೇಯ :ಇನ್ನು ನಾಲ್ಕು ವರ್ಷಗಳಲ್ಲಿ ಅಂತರ್ಜಾಲದ ಸಂಪರ್ಕ ಪಡೆಯುವ ಸುಮಾರು ೪೦ ಕೋಟಿ ಭಾರತೀಯರಿಗೆ ಅವರ ಮಾತೃಭಾಷೆಯಲ್ಲಿಯೇ ಪ್ರತಿಲಿಪಿಯನ್ನು ಬರಹದ ತಾಣವಾಗಿಸುವ ಯೋಚನೆ ನಮಗಿದೆ.

ಪ್ರತಿಲಿಪಿ ಮೂಲತಃ ಸ್ವಪ್ರಕಾಶನ ಸಂಸ್ಥೆಯಾಗಿದ್ದು, ಈಗ ಮೂರು ಲಕ್ಷಕ್ಕೂ ಅಧಿಕ ಸಾಹಿತಿಗಳು ಮತ್ತು ಮಾಸಿಕ ಎರಡೂವರೆ ಕೋಟಿ ಬಳಕೆದಾರರು  ಹನ್ನೆರೆಡು ಭಾಷೆಗಳ ಸಾಹಿತ್ಯವನ್ನು ಆಸ್ವಾದಿಸುತ್ತಿದ್ದಾರೆ.

ನಾವು ಪ್ರತಿಲಿಪಿ ಎಫ್ ಎಂ ಎಂಬ ಧ್ವನಿಮುದ್ರಿತ ಸಾಹಿತ್ಯದ ಅಪ್ಲಿಕೇಶನ್ನನ್ನೂ ಕೂಡಾ ಹೊಂದಿದ್ದು, ಹತ್ತು ಸಾವಿರಕ್ಕೂ ಅಧಿಕ ಧ್ವನಿಮುದ್ರಿಕೆಗಳು, ಪಾಡ್ಕ್ಯಾಸ್ಟ್ ಗಳು, ಜಾನಪದ ಗೀತೆಗಳು ಮತ್ತು ಮೂರು ಲಕ್ಷಕ್ಕೂ ಅಧಿಕ ಸಕ್ರಿಯ ಕೇಳುಗರು ಇರುವ ಪ್ರತಿಲಿಪಿ ಎಫ್ ಎಂ ಅಪ್ಲಿಕೇಶನ್ ಮೂಲಕ ನೀವು ಸಾಹಿತ್ಯವನ್ನು ಕೇಳಿಯೂ ಆನಂದಿಸಬಹುದು.

ಪ್ರತಿಲಿಪಿ ಚಿತ್ರಕಥಾ : ಇದು ಪ್ರಸ್ತುತ ಹಿಂದಿ ಭಾಷೆಯಲ್ಲಿ ಮಾತ್ರ ಲಭ್ಯವಿದ್ದು, ಇದರಲ್ಲಿ ಐದು ಲಕ್ಷಕ್ಕೂ ಅಧಿಕ ಓದುಗರು ಸಾವಿರಕ್ಕೂ ಅಧಿಕ ಚಿತ್ರಕಥೆಗಳ ಮೂಲಕ ಓದಿ ಆನಂದಿಸುತ್ತಿದ್ದಾರೆ.

 

ಪ್ರತಿಲಿಪಿಯ ಅರ್ಥ : 

ಪ್ರತಿಲಿಪಿ ಸಂಸ್ಕೃತ ಪದವಾಗಿದ್ದು, ಪ್ರತಿ ಎಂದರೆ ನಕಲಿಸು ಲಿಪಿ ಎಂದರೆ ಅಕ್ಷರ ಎಂದರ್ಥ. ಒಬ್ಬ ಸಾಹಿತ್ಯಪ್ರೇಮಿ ತನ್ನಿಷ್ಟದ ಬರಹವನ್ನು ಓದುತ್ತಾ ಅದರ ಒಂದು ಭಾಗವೇ ಆಗಿಬಿಡುತ್ತಾನೆ. ಮತ್ತು ಸಾಹಿತ್ಯವೂ ಆತನ ಬದುಕಿನ ಒಂದು ಅತ್ಯಮೂಲ್ಯ ವಿಷಯವಾಗಿಬಿಡುತ್ತದೆ - 'ಸಾಹಿತ್ಯ ಸಮಾಜದ ಕನ್ನಡಿಯಂತೆ' ಎಂಬ ನಾಣ್ಣುಡಿಯಂತೆ

 

ಪ್ರತಿಲಿಪಿಯ ಮೂಲಕ ನೀವು ಯಾವೆಲ್ಲಾ ಭಾಷೆಯ ಸಾಹಿತ್ಯ ಓದಬಹುದು ಮತ್ತು ಬರೆಯಬಹುದು ?

ಪ್ರಸ್ತುತ ಪ್ರತಿಲಿಪಿಯು ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಲಿ, ಗುಜರಾತಿ, ಒಡಿಯಾ, ಪಂಜಾಬಿ ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿದೆ. ಮತ್ತು ಇದನ್ನು ಇತರೆ ಭಾರತೀಯ ಭಾಷೆಗಳಿಗೂ ವಿಸ್ತರಿಸುವ ಯೋಜನೆ ಇದೆ.

 

ನಾವು ಯಾರೆಂದು ತಿಳಿಯಬೇಕೇ ?

ಪ್ರತಿಲಿಪಿ ಎಂಬುದು ಎಂಬತ್ತು ಜನ ಉತ್ಸಾಹಿ,ಸ್ವಪ್ನಶೀಲ ತಂತ್ರಜ್ಞರು ಮತ್ತು ಸಮೂಹ ನಿರ್ವಾಹಕರ ತಂಡ. ನಮ್ಮ ಕಚೇರಿ ಬೆಂಗಳೂರಿನಲ್ಲಿದ್ದು, ಸಾಹಿತಿಗಳು ಮತ್ತು ಓದುಗರ ಸಮೂಹಕ್ಕೆ ಸಂಪರ್ಕ ಸೇತುವಾಗಿ ಉತ್ತಮ ಸಾಹಿತ್ಯದ ಸಂವಹನ ಮತ್ತು ಸಂವಾದಕ್ಕೆ ವೇದಿಕೆ ಒದಗಿಸಿ ಕೊಟ್ಟಿದೆ.

 

ಪ್ರತಿಲಿಪಿ ಬಳಗಕ್ಕೆ ಸೇರುವುದು ಹೇಗೆ ? 

ನೀವೊಬ್ಬ ಓದುಗರಾಗಿದ್ದರೆ :ನೀವು ಪ್ರತಿಲಿಪಿ ಅಪ್ಲಿಕೇಶನ್ ಅಥವಾ ವೆಬ್ಸೈಟ್ ನಲ್ಲಿ ಸೈನ್ ಅಪ್ ಆಗುವ ಮೂಲಕ ಯಾವುದೇ ಶುಲ್ಕವಿಲ್ಲದೆ ಅತ್ಯುತ್ತಮ ಕಥಾನಕಗಳನ್ನು ಓದುವ ಆನಂದ ನಿಮ್ಮದಾಗಿಸಿಕೊಳ್ಳಬಹುದು. ನಿಮ್ಮಿಷ್ಟದ ಸಾಹಿತಿಗಳನ್ನು ಹಿಂಬಾಲಿಸಿ ಅವರಿಗೆ ಸಂದೇಶಗಳನ್ನೂ ಸಹ ಕಳುಹಿಸಬಹುದು. ಯಾವುದೇ ಅಂತರ್ಜಾಲ ಸಂಪರ್ಕವಿಲ್ಲದೇ ಓದಲು ನಿಮ್ಮಿಷ್ಟದ ಬರಹಗಳನ್ನು ಡೌನ್ಲೋಡ್ ಮಾಡಿಕೊಂಡು 'ಗ್ರಂಥಾಲಯ' ವಿಭಾಗದಲ್ಲಿ ಆಫ್ಲೈನ್ ಮೂಲಕವೂ ಓದಿ ಆನಂದಿಸಬಹುದು

ನೀವು ಸಾಹಿತಿಯಾಗಿದ್ದರೆ : ಪ್ರತಿಲಿಪಿ ಅಪ್ಲಿಕೇಶನ್ನನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಸೈನ್ ಅಪ್ ಆಗಿ ಮುಖಪುಟದಲ್ಲಿ ಕಾಣುವ ಪೆನ್ನಿನ ಚಿತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಬರಹಗಳನ್ನು ಸ್ವತಃ ಪ್ರಕಟಿಸಬಹುದು. ಮತ್ತು ವಿಶ್ವಾದ್ಯಂತ ಇರುವ ಲಕ್ಷಾಂತರ ಕನ್ನಡ ಸಾಹಿತ್ಯಪ್ರಿಯರಿಗೆ ನಿಮ್ಮ ಬರಹವನ್ನು ಕ್ಷಣಾರ್ಧದಲ್ಲಿ ತಲುಪಿಸಬಹುದು. 

 

ಯಾವುದೇ ಪ್ರಶ್ನೆಗಳಿವೆಯೇ?

ನಮ್ಮನ್ನು [email protected] ನಾವು ೨೪ ಗಂಟೆಗಳ ಒಳಗೆ ನಿಮಗೆ ಪ್ರತಿಕ್ರಿಯಿಸುತ್ತೇವೆ.