→ ಕೃತಿ ಪ್ರಕಟಣೆಯ ಕಾಲಾವಧಿ – ಕೃತಿಗಳು ಸ್ಪರ್ಧೆಯ ಕಾಲಾವಧಿಯಲ್ಲಿಯೇ ಪ್ರಕಟಗೊಂಡಿರಬೇಕು.
→ ಕನಿಷ್ಠ ಅಧ್ಯಾಯಗಳ ಮಿತಿ – ಸ್ಪರ್ಧೆಯ ವಿವರಗಳಲ್ಲಿ ತಿಳಿಸಿರುವ ಕನಿಷ್ಠ ಅಧ್ಯಾಯಗಳ ಮಿತಿಯನ್ನು ಕೃತಿ ಪೂರೈಸಿರಬೇಕು.
→ ಪದಸಂಖ್ಯೆಯ ಮಿತಿ – ಕೃತಿಯ ಪ್ರತಿ ಅಧ್ಯಾಯ ಸ್ಪರ್ಧೆಯ ವಿವರಗಳಲ್ಲಿ ತಿಳಿಸಿರುವ ಕನಿಷ್ಠ ಪದಸಂಖ್ಯೆಗಳ ಮಿತಿಯನ್ನು ಪೂರೈಸಿರಬೇಕು.
→ ವಿಷಯ ನೀತಿ – ಕಥೆಯು ಪ್ರತಿಲಿಪಿಯ ಮಾರ್ಗಸೂಚಿಗಳ ಪ್ರಕಾರವಾಗಿರಬೇಕು. ನಿಷೇಧಿತ ವಿಷಯವನ್ನು ಹೊಂದಿರುವ ಕೃತಿಗಳನ್ನು ಅನರ್ಹಗೊಳಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
→ ನಕಲು ಅಥವಾ ಕೃತಿಚೌರ್ಯ ಮಾಡಿದ ಕೃತಿಗಳು ಅನರ್ಹವಾಗುತ್ತವೆ.
ನಿರ್ದಿಷ್ಟ ಪ್ರಾದೇಶಿಕ ಭಾಷೆಯಲ್ಲಿ ಪರಿಣಿತರಾಗಿರುವ ತೀರ್ಪುಗಾರ ಮತ್ತು ಸಂಪಾದಕ ಮಂಡಳಿಯ ಸಮಿತಿಯು ಕಿರು ಪಟ್ಟಿ ಮಾಡಲಾದ ಕೃತಿಗಳನ್ನು ಓದಿ ಈ ಕೆಳಗಿನ ಮಾನದಂಡಗಳ ಆಧಾರದ ಮೇಲೆ ವಿಜೇತ ಕೃತಿಗಳನ್ನು ನಿರ್ಣಯಿಸುತ್ತದೆ. ಕಥೆಯನ್ನು ಆಯ್ಕೆ ಮಾಡುವಾಗ ಈ ಕೆಳಗಿನ ಸಂಗತಿಗಳನ್ನು ಪರಿಗಣಿಸಲಾಗುತ್ತದೆ.
೧. ನಿರೂಪಣೆ - ಲೇಖಕರು ಕಥೆಯನ್ನು ಎಷ್ಟು ಚೆನ್ನಾಗಿ ನಿರೂಪಿಸುತ್ತಾರೆ, ಓದುಗರನ್ನು ಆರಂಭದಿಂದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಎಷ್ಟು ಸಫಲರಾಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ.
೨. ಸ್ವಂತಿಕೆ - ಪ್ರತಿಲಿಪಿಯಲ್ಲಿನ ಸಾಮಾನ್ಯ ಅಥವಾ ಪುನರಾವರ್ತಿತ ಕಥಾವಸ್ತುಗಳಿಗಿಂತ ಎದ್ದು ಕಾಣುವ ತಾಜಾ ಮತ್ತು ವಿಶಿಷ್ಟ ವಿಚಾರಗಳನ್ನು ಹೊಂದಿದೆಯೇ ಎಂದು ಗಮನಿಸಲಾಗುತ್ತದೆ.
೩. ಓದುಗರ ಮೇಲಿನ ಪ್ರಭಾವ – ಕಥೆಯು ನಿರ್ಮಿಸುವ ಭಾವನಾತ್ಮಕ ಸಂಬಂಧ, ಓದುಗರು ಓದಿದ ನಂತರವೂ ಅದರ ಬಗ್ಗೆ ಯೋಚಿಸುವಂತೆ ಮಾಡುವಂತಿದೆಯೇ ಎಂದು ನೋಡಲಾಗುತ್ತದೆ.
೪. ಕಥಾವಸ್ತುವಿನ ತಿರುವುಗಳು – ಮುಂದೆ ಏನಾಗುತ್ತದೆ ಎಂದು ತಿಳಿಯಲು ಓದುಗರನ್ನು ಕಾತರರನ್ನಾಗಿ ಮಾಡುವ, ಕಥಾಹಂದರದಲ್ಲಿನ ಅಚ್ಚರಿಯ ತಿರುವುಗಳು ಹೇಗೆ ಕೆಲಸ ಮಾಡಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ.
೫. ಕಥೆಯ ವೇಗ - ಎಳೆಯುವಿಕೆ ಅಥವಾ ಆತುರವಿಲ್ಲದ ಘಟನೆಗಳ ಸುಗಮ ಹರಿವು, ಓದುಗರ ಆಸಕ್ತಿಯನ್ನು ಜೀವಂತವಾಗಿರಿಸುತ್ತದೆ. ಇವುಗಳನ್ನು ಸಹ ಪರಿಗಣಿಸಲಾಗುತ್ತದೆ.
೬. ತಿರುವುಗಳು – ನಿರೂಪಣೆಯಲ್ಲಿನ ಅನಿರೀಕ್ಷಿತ ಬೆಳವಣಿಗೆಗಳು ರೋಮಾಂಚನ ಮತ್ತು ಸಸ್ಪೆನ್ಸ್ ಅನ್ನು ಹೆಚ್ಚಿಸುತ್ತವೆ. ಅವುಗಳ ಬಳಕೆ ಮತ್ತು ಪ್ರಸ್ತುತಿಯನ್ನು ಗಮನಿಸಲಾಗುತ್ತದೆ.
೭. ಪಾತ್ರ ಅಭಿವೃದ್ಧಿ - ಪಾತ್ರಗಳು ಎಷ್ಟು ಚೆನ್ನಾಗಿ ವಿಕಸನಗೊಳ್ಳುತ್ತವೆ ಮತ್ತು ನೈಜವಾಗಿ ಭಾಸವಾಗುತ್ತವೆ, ಓದುಗರು ಅವುಗಳ ಬಗ್ಗೆ ಆಳವಾಗಿ ಕಾಳಜಿ ವಹಿಸುವಂತೆ ಮಾಡುತ್ತದೆ ಎಂಬುದನ್ನು ಪರಿಗಣಿಸಲಾಗುತ್ತದೆ.
೮. ಇವುಗಳ ಜೊತೆಗೆ ಸೃಜನಶೀಲತೆ, ಭಾಷ ಶುದ್ಧತೆಗಳನ್ನೂ ಪರಿಗಣಿಸಿ ಅಂಕಗಳನ್ನು ನೀಡಲಾಗುತ್ತದೆ.
ಸೂಚನೆ: ತೀರ್ಪುಗಾರರ ಸಮಿತಿಯ ಎಲ್ಲಾ ಸದಸ್ಯರು ಕಥೆಗಳಿಗೆ ಪ್ರತ್ಯೇಕವಾಗಿ ಅಂಕ ನೀಡುತ್ತಾರೆ. ನಂತರ ಅವರ ಅಂಕಗಳನ್ನು ಸರಾಸರಿ ಮಾಡಲಾಗುತ್ತದೆ ಮತ್ತು ಹೆಚ್ಚಿನ ಅಂಕ ಪಡೆದ ಕೃತಿಯನ್ನು ವಿಜೇತ ಕೃತಿಯಾಗಿ ಘೋಷಿಸಲಾಗುತ್ತದೆ.
ತೀರ್ಪುಗಾರರು ಅಂಕಗಳನ್ನು ನೀಡಿದ ಮೇಲೆ, ಸಂಪಾದಕ ಮಂಡಳಿ ಮತ್ತೊಮ್ಮೆ ಕೃತಿಗಳನ್ನು ಪರಿಶೀಲಿಸುತ್ತದೆ. ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆಯೇ ಮತ್ತು ತೀರ್ಪು ನ್ಯಾಯಯುತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತದೆ. ಅದರ ನಂತರ, ವಿಜೇತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ತೀರ್ಪಿನ ನಿಖರತೆಗಾಗಿ ಎರಡು ಬಾರಿ ಪರಿಶೀಲಿಸಲಾಗುತ್ತದೆ.
ಫಲಿತಾಂಶಗಳನ್ನು ಸ್ಪರ್ಧೆಯ ವಿವರಗಳಲ್ಲಿ ತಿಳಿಸಿರುವ ಫಲಿತಾಂಶದ ದಿನಾಂಕದಂದು ಅಧಿಕೃತ ಪ್ರತಿಲಿಪಿ ಬ್ಲಾಗ್ ವಿಭಾಗದಲ್ಲಿ ಪ್ರಕಟಣೆ ಮಾಡಲಾಗುತ್ತದೆ. ವಿಜೇತರಿಗೆ ಅಪ್ಲಿಕೇಶನ್’ನಲ್ಲಿ ನೋಟಿಫಿಕೇಶನ್ ಅಥವಾ ಇಮೇಲ್ ಮೂಲಕ ಫಲಿತಾಂಶ ಮಾಹಿತಿಯನ್ನು ತಿಳಿಸಲಾಗುತ್ತದೆ.
ಕಥೆಗಳನ್ನು ಬರೆಯುವುದು ಮತ್ತು ನಿರ್ಣಯಿಸುವುದು ಹೆಚ್ಚು ವ್ಯಕ್ತಿನಿಷ್ಠವಾಗಿದೆ. ಒಬ್ಬ ವ್ಯಕ್ತಿ ಏನು ಇಷ್ಟಪಡುತ್ತಾನೆ, ಇನ್ನೊಬ್ಬರು ಏನು ಇಷ್ಟಪಡದಿರಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲರಿಗೆ ಸಮಾನ ಅವಕಾಶ ಒದಗಿಸಿ, ನ್ಯಾಯಯುತ, ಸ್ಥಿರ ಮತ್ತು ವಸ್ತುನಿಷ್ಠವಾಗಿ ಫಲಿತಾಂಶ ನೀಡಲು ಪ್ರಯತ್ನಿಸಲಾಗುತ್ತದೆ.
ಶುಭವಾಗಲಿ!
ಪ್ರತಿಲಿಪಿ ಸ್ಪರ್ಧಾ ವಿಭಾಗ