pratilipi-logo ಪ್ರತಿಲಿಪಿ
ಕನ್ನಡ

Reading

ನ್ಯಾವಿಗೇಟ್

ಮುಖಪುಟ

ಮುಖಪುಟದಲ್ಲಿ ನೀವು ‘ಓದನ್ನು ಮುಂದುವರೆಸಿ’ ಆಯ್ಕೆಯನ್ನುನೋಡುತ್ತೀರಿ. ಇದು ನೀವು ಯಾವುದಾದರೂ ಬರಹವನ್ನು ಅರ್ಧದಲ್ಲೇ ನಿಲ್ಲಿಸಿದ್ದರೆ ಓದನ್ನುಮುಂದುವರೆಸಲು ಸಹಾಯ ಮಾಡುತ್ತದೆ.ಮತ್ತು ಅದರ ಕೆಳಗೆ ಕಾಣುವ ‘ನಿಮಗಾಗಿ’ ಆಯ್ಕೆಯು ನಿಮ್ಮಿಷ್ಟದ ಪ್ರಭೇದಗಳ ಆಧಾರದ ಮೇಲೆ ಆಯಾ ಪ್ರಭೇದಗಳ ಬರಹಗಳನ್ನು ಓದಲು ಸಹಾಯ ಮಾಡುತ್ತದೆ.

ನಿಮ್ಮಿಷ್ಟದ ಬರಹಗಳು:

ನೀವು ನಿಮ್ಮ ಓದಿನ ಅಭಿರುಚಿಗಾನುಸಾರವಾಗಿ ಮುಖಪುಟದಲ್ಲಿ ಆಯಾ ಪ್ರಭೇದಗಳ ಬರಹಗಳು ದೊರಕುವಂತೆ ಮಾಡಿಕೊಳ್ಳಬಹುದು.

 ಪ್ರತಿಲಿಪಿ ಅಪ್ಲಿಕೇಶನ್ ನಲ್ಲಿ ನಿಮ್ಮ ಪ್ರೊಫೈಲ್ ಗೆ ಹೋಗಿ - ನಿಮ್ಮಿಷ್ಟದ ಪ್ರಭೇದಗಳು ಮೇಲೆ ಕ್ಲಿಕ್ ಮಾಡಿ.ನಿಮ್ಮಿಷ್ಟದ ಐದು ಪ್ರಭೇದಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

 

ನಿಮ್ಮಿಷ್ಟದ ಸಾಹಿತಿಗಳನ್ನು ಹಿಂಬಾಲಿಸಿ:

ನೀವು ಪ್ರತಿಲಿಪಿಯಲ್ಲಿ ನಿಮ್ಮಿಷ್ಟದ ಬರಹಗಾರರನ್ನು ಹಿಂಬಾಲಿಸುವ ಮೂಲಕ ಅವರಿಂದ ಪ್ರತಿಲಿಪಿಯಲ್ಲಿ ಪ್ರಕಟಿಸಲ್ಪಡುವ ಯಾವುದೇ ಬರಹದ ಮಾಹಿತಿಯನ್ನು  ನೋಟಿಫಿಕೇಶನ್ ಮೂಲಕ ಪಡೆಯಬಹುದು. ಅಲ್ಲದೇ ನೀವು ಹಿಂಬಾಲಿಸುತ್ತಿರುವ ಬಳಕೆದಾರರಿಗೆ ವೈಯುಕ್ತಿಕವಾಗಿಯೂ ಸಂದೇಶವನ್ನು ಕಳುಹಿಸಬಹುದು.

 

ಆಫ್ಲೈನ್ ಅಲ್ಲಿ/ ಅಂತರ್ಜಾಲದ ಸಂಪರ್ಕ ಇಲ್ಲದೆಯೂ ಓದುಬಹುದು

ನೀವು ನಿಮ್ಮಿಷ್ಟದ ಬರಹಗಳನ್ನು  ಡೌನ್ಲೋಡ್ ಮಾಡಿಕೊಂಡು ಅಂತರ್ಜಾಲದ ಸಂಪರ್ಕ ಇಲ್ಲದೆಯೂ ಓದಿ ಆನಂದಿಸಬಹುದು. ಅದು ಹೇಗೆಂದರೆ - 

 

i)ವೈಫೈ ಅಥವಾ  ಮೊಬೈಲ್ ಡೇಟಾ ಬಳಸಿ ಪ್ರತಿಲಿಪಿ ಅಪ್ಲಿಕೇಶನ್ ಡೌನ್ಲೋಡ್  ಮಾಡಿಕೊಳ್ಳಿ ಮತ್ತು ಸೈನ್ ಅಪ್ ಆಗಿರಿ

ii) ನಿಮ್ಮಿಷ್ಟದ ಬರಹಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.ಬಳಿಕ ‘ಗ್ರಂಥಾಲಯ’ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಂತರ್ಜಾಲವಿಲ್ಲದೆಯೂ ಅಥವಾ ಆಫ್ಲೈನ್ ನಲ್ಲಿಯೂ ಓದಿ  

ಸೂಚನೆ: ವೆಬ್ಸೈಟ್ ಬಳಸುತ್ತಿರುವಾಗ ಡೌನ್ಲೋಡ್ ಸೌಲಭ್ಯ ಅಲಭ್ಯ

 

ನೈಟ್ ಮೋಡ್ :

ನೀವು ನೈಟ್ ಮೋಡ್ ಸೌಲಭ್ಯವನ್ನು ಉಪಯೋಗಿಸಿ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಎರಡರಲ್ಲೂ ಓದಬಹುದು. ನೀವು ನೈಟ್ ಮೋಡ್ ಆಯ್ಕೆಯನ್ನು ಸೆಟ್ಟಿಂಗ್ಸ್ ನಲ್ಲಿ ಪಡೆಯಬಹುದು 

i) ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ ನೀವು ಓದುವ ಸ್ಕ್ರೀನ್ ನ ಮೇಲೆ ಸಿಂಗಲ್ ಟ್ಯಾಪ್ ಮಾಡುವ ಮೂಲಕ ನೈಟ್ ಮೋಡ್ ಆಯ್ಕೆಯನ್ನು ಪಡೆಯಬಹುದು. 

ii) ವೆಬ್ಸೈಟ್ ಅಲ್ಲಿ ಓದುತ್ತಿರುವಾಗ, ಬಲ ಮೇಲ್ಭಾಗದಲ್ಲಿರುವ ಮೂರು ಬಟನ್ ಪಕ್ಕದಲ್ಲಿರುವ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ -  ಹಿನ್ನೆಲೆ ಬಣ್ಣ, ಅಕ್ಷರಗಳ ಗಾತ್ರ ಮತ್ತು ಗೆರೆಗಳ ಅಂತರಗಳನ್ನು ನಿಮಗೆ ಅನುಕೂಲವಾಗುವಂತೆ ಬದಲಿಸಿಕೊಳ್ಳಬಹುದು

ಸರ್ಚ್:

ನಿಮ್ಮಿಷ್ಟದ ಪ್ರತಿಲಿಪಿಯ ಬರಹಗಾರರು ಮತ್ತು ಬರಹಗಳನ್ನು ಪ್ರತಿಲಿಪಿಯ ‘ಪ್ರತಿಲಿಪಿಯಲ್ಲಿನ ಹುಡುಕಾಟ’ ವಿಭಾಗದಲ್ಲಿ ಹುಡುಕುವ ಮೂಲಕ ಪಡೆಯಬಹುದು. 

ನಮ್ಮ ವೆಬ್ಸೈಟ್ ಮತ್ತು ಅಪ್ಲಿಕೇಶನ್ ನಲ್ಲಿ ‘ಹುಡುಕಾಟ’ ಬಾರ್ ಮುಖಪುಟದ ಮೇಲ್ಭಾಗದಲ್ಲಿ ಲಭ್ಯವಿರುತ್ತದೆ. ಯಾವ ಭಾಷೆಯ ಬರಹಗಳು/ಲೇಖಕರು ಬೇಕೋ ಆಯಾ ಭಾಷೆಗಳಲ್ಲಿಯೇ ಹುಡುಕಿದರೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚು. ಇಂಗ್ಲಿಷ್ ಭಾಷೆಯಲ್ಲಿ ಹೆಸರುಗಳನ್ನು ಹುಡುಕಿದರೆ ಈ ವಿವಿಚಾರಗಳು ಪರಿಪೂರ್ಣವಾಗಿ ಸಿಗುವ ಸಾಧ್ಯತೆಗಳು ಕಡಿಮೆ ಇರುತ್ತದೆ. 

ನೀವು ಹುಡುಕಿದಾಗ ಫಲಿತಾಂಶಗಳು ಲಭ್ಯವಿರದಿದ್ದರೆ, ಅದಕ್ಕೆ ಕೆಳಗಿನ ಯಾವುದೇ ಒಂದು ಅಂಶ ಕಾರಣವಾಗಿರಬಹುದು. 

1) ಆ ಲೇಖಕ/ಲೇಖಕಿ ಆ ಬರಹವನ್ನು ಡಿಲೀಟ್ ಮಾಡಿರಬಹುದು. 

2) ನೀವು ಹುಡುಕುತ್ತಿರುವ ಬರಹ ಪ್ರತಿಲಿಪಿಯಲ್ಲಿ ಲಭ್ಯವಿಲ್ಲದಿರಬಹುದು. 

3) ಅದು ತಾಂತ್ರಿಕ ಸಮಸ್ಯೆಯ ಕಾರಣದಿಂದಲೂ ಸಿಗದಿರಬಹುದು. ಹೀಗಾದಾಗ ನಿಮ್ಮ ಪ್ರೊಫೈಲ್ ಗೆ ಹೋಗಿ ‘ಸಹಾಯ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಪ್ರತಿಲಿಪಿಯ ಗಮನಕ್ಕೆ ತರಬಹುದು.  

ಗ್ರಂಥಾಲಯ:

 

ಬರಹಗಳನ್ನು ಸಂರಕ್ಷಿಸಿ:

ನೀವು ನಿಮಗಿಷ್ಟವಾದ ಬರಹಗಳನ್ನು ಗ್ರಂಥಾಲಯದಲ್ಲಿ ಸಂರಕ್ಷಿಸುವ ಮೂಲಕ ಮುಂದಿನ ಓದಿಗೆ ಗುರುತಿಸಿ ಇಟ್ಟುಕೊಳ್ಳಬಹುದು. ನೀವು ಯಾವುದೇ ಬರಹಗಳ ಮುಖಪುಟಕ್ಕೆ ಹೋದರೆ ಅಲ್ಲಿ ಡೌನ್ಲೋಡ್ ಮತ್ತು ಗ್ರಂಥಾಲಯ ಆಯ್ಕೆ ಇರುತ್ತದೆ. ಡೌನ್ಲೋಡ್ ಆಯ್ಕೆಯು ಮೇಲೆ ತಿಳಿಸಿದಂತೆ ಆಫ್ಲೈನ್ ಅಲ್ಲಿ ಓದುವ ಸೌಲಭ್ಯವಾಗಿದ್ದು, ‘ಗ್ರಂಥಾಲಯ’ ವು ನಿಮ್ಮಿಷ್ಟದ/ ನೀವು ಗ್ರಂಥಾಲಯಕ್ಕೆ ಸೇರಿಸಿದ ಬರಹಗಳನ್ನು ಆನ್ಲೈನ್ ಅಲ್ಲಿ ಓದಲು ಇರುವ ಸೌಲಭ್ಯ.  

ಬರಹ ಸಂಗ್ರಹ/ ಕಲೆಕ್ಷನ್ 

ಇದು ಅಪ್ಲಿಕೇಶನ್ ಅಲ್ಲಿ ಮಾತ್ರಾ: ನೀವು ನಿಮ್ಮಿಷ್ಟದ ಬರಹಗಳನ್ನು ಅವುಗಳ ವಿಧಗಳು/ಪ್ರಭೇದಗಳು/ಬರಹಗಾರರು ಮುಂತಾದ ವೈವಿಧ್ಯತೆಗಳಿಗನುಸಾರವಾಗಿ ಸಂಗ್ರಹಿಸಿಟ್ಟುಕೊಳ್ಳಬಹುದು. ಇದು ನಿಮ್ಮ ಪ್ರೊಫೈಲ್ ಗೆ ಭೇಟಿ ನೀಡುವ ಬಳಕೆದಾರರಿಗೆ ಕಾಣಿಸುತ್ತದೆ. ಮತ್ತು ಇತರಿಗೆ ಈ ಕಲೆಕ್ಷನ್ ಅನ್ನು ಹಂಚಿ ಓದಲು ಪ್ರೇರೇಪಿಸಬಹುದು. 

ನೀವು ಯಾವುದೇ ಬರಹವನ್ನು ಈ ಸಂಗ್ರಹಕ್ಕೆ ಸೇರಿಸಲು - ಬರಹದ ಮುಖಪುಟದಲ್ಲಿರುವ ‘ಕಲೆಕ್ಷನ್ಗಳು’ ಮೇಲೆ ಕ್ಲಿಕ್ ಮಾಡಿ. ಆಯಾ ಸಂಗ್ರಹಕ್ಕೆ ಹೊಂದುವ ಹೆಸರು ನೀಡಿ ( ಉದಾ: ‘ಪ್ರೇಮ ಕಥೆಗಳ ಸಂಗ್ರಹ’ , ‘ಸಾಮಾಜಿಕ ಕಥನ ಸಂಗ್ರಹ’ ಇತ್ಯಾದಿ). ನಿಮ್ಮಿಷ್ಟದ ಬರಹಗಳ ಕಲೆಕ್ಷನ್ ತಯಾರಿಸಬಹುದು. ನಿಮ್ಮ ಪ್ರೊಫೈಲ್ ಅಲ್ಲಿ ನೀವು ಮಾಡಿದ ಎಲ್ಲಾ ಕಲೆಕ್ಷನ್ ಗಳೂ ಲಭ್ಯವಿರುತ್ತವೆ. ಅವುಗಳಿಗೆ ಹೊಸಬರಹಗನ್ನು ಸೇರಿಸಬಹುದು ಅಥವಾ ಅವುಗಳಿಂದ ಅಗತ್ಯವಿರದ ಬರಹಗಳನ್ನು ತೆಗೆದುಹಾಕಬಹುದು. 

 

ಇತ್ತೀಚಿಗೆ ಓದಲ್ಪಟ್ಟ ಬರಹಗಳು:

ಇದು ಅಪ್ಲಿಕೇಶನ್ ಅಲ್ಲಿ ಮಾತ್ರಾ ಲಭ್ಯ: ನೀವು ‘ಗ್ರಂಥಾಲಯ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ‘ಇತ್ತೀಚಿಗೆ ಓದಲ್ಪಟ್ಟ ಬರಹಗಳು’ ಆಯ್ಕೆ ದೊರಕುತ್ತದೆ. ಇದರಿಂದ ನೀವು ಹಿಂದೆ ಓದಿದ ಬರಹಗಳನ್ನು ಸುಲಭವಾಗಿ ಹುಡುಕಿ ಓದನ್ನು ಮುಂದುವರೆಸಬಹುದು. 

ಓದಿನ ಅಂಕಿ ಅಂಶಗಳು: ನಿಮ್ಮ ಓದಿನ ಅಂಕಿ ಅಂಶಗಳು ನಿಮ್ಮ ಪ್ರೊಫೈಲ್ ಪೇಜ್ ನ ಕೊನೆಯಲ್ಲಿ ಲಭ್ಯವಾಗುತ್ತದೆ. 

 

ಇತರೆ: 

ನಿಮ್ಮ ಸಂಶಯಗಳು ಬಗೆಹರಿಯದಿದ್ದಲ್ಲಿ- 

ಈವರೆಗೂ ಪ್ರತಿಲಿಪಿಯ ಓದುಗರಿಗೆ ಸಾಮಾನ್ಯವಾಗಿ ಮೂಡುವ ಸಂಶಯಗಳ ಕುರಿತು ಮಾಹಿತಿ ನೀಡಲಾಗಿದೆ. ಇನ್ನೂ ಹೆಚ್ಚಿನ ಸಂಶಯಗಳು/ಗೊಂದಲಗಳು ಇದ್ದಲ್ಲಿ ಇಲ್ಲಿ ಕ್ಲಿಕ್ ಮಾಡುವ ಮೂಲಕ ನಮಗೆ ಕಳುಹಿಸಬಹುದು.