ಆತ್ಮೀಯ ಸಾಹಿತ್ಯಾಭಿಮಾನಿಗಳೇ,
‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 9’ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. ‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ.
12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಉತ್ತಮ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆ, ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.
ಹಿಂದಿನ ಆವೃತ್ತಿಗಳಂತೆ ‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 9’ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿ ಸ್ಪರ್ಧೆಯ ಯಶಸ್ಸಿಗೆ ಕಾರಣರಾದ ಎಲ್ಲ ಬರಹಗಾರರಿಗೆ ಧನ್ಯವಾದಗಳು. ಸ್ಪರ್ಧೆಯ ಕುರಿತು ನಿಮ್ಮ ಆಸಕ್ತಿ ಮತ್ತು ಉತ್ಸಾಹ ಶ್ಲಾಘನೀಯ.
ಸ್ಪರ್ಧೆಗೆ ಅರವತ್ತಕ್ಕೂ ಅಧಿಕ ಕೃತಿಗಳು ಸಲ್ಲಿಸಲ್ಪಟ್ಟಿದ್ದವು. ಆದರೆ ಅವುಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಧಾರಾವಾಹಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗಿದೆ. ದೀರ್ಘ ಧಾರಾವಾಹಿಗಳನ್ನು ರಚಿಸುವಾಗ ಬರಹಗಾರರಲ್ಲಿ ಕತೆಯನ್ನು ಮುಂದುವರೆಸುವಲ್ಲಿ ಅನೇಕ ತೊಡಕುಗಳು ಎದುರಾಗಬಹುದು. ಜೊತೆಗೆ ಸಮಯದ ಮಿತಿ ಒಳಪಟ್ಟಾಗ ಒತ್ತಡದ ಮನಸ್ಥಿತಿ ಒಂದು ಕೃತಿಯ ರೂಪುರೇಷೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಇವೆಲ್ಲವುಗಳನ್ನು ಸಮರ್ಥವಾಗಿ ಎದುರಿಸಿ ಬರಹಗಾರರು ಅತ್ಯುತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂದು ನಾವು ಬಯಸುತ್ತೇವೆ. ಬರಹಗಾರರಿಗೆ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಪ್ರತಿಯೊಬ್ಬ ಬರಹಗಾರನಿಗೂ ಅವನದೇ ಆದ ತಂತ್ರವಿರುತ್ತದೆ. ಅವುಗಳನ್ನು ಪ್ರತಿಯೊಬ್ಬ ಬರಹಗಾರ ಸ್ವತಃ ಗಮನಿಸಬೇಕು, ಆಗ ಎದುರಾಗುವ ತೊಡಕುಗಳಿಂದ ಸಮರ್ಥವಾಗಿ ಹೊರಬರಲು ಸಾಧ್ಯ.
ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಎಲ್ಲಾ ಕೃತಿಗಳೂ ಒಂದೊಂದು ರೀತಿಯಲ್ಲಿ ಉತ್ತಮವೆನಿಸುತ್ತಿದ್ದವು. ಬರವಣಿಗೆ ಒಂದು ಸೃಜನಾತ್ಮಕ ಕಲೆಯಾಗಿರುವುದರಿಂದ ಪ್ರತಿಯೊಬ್ಬರ ಭಾವ, ದೃಷ್ಟಿಕೋನಗಳೂ ವಿಭಿನ್ನವಾಗಿರುತ್ತವೆ. ಅದೇ ನಿಟ್ಟಿನಲ್ಲಿ ಆ ಕೃತಿಗಳನ್ನು ಓದಿ ತೀರ್ಪು ನೀಡುವ ಕಾಯಕವೂ ಸುಲಭದ್ದಲ್ಲ. ಆದರೂ ಸಲ್ಲಿಸಲ್ಪಟ್ಟಿರುವ ಕೃತಿಗಳಲ್ಲಿ ಕಥಾಹಂದರ, ಸೃಜನಾತ್ಮಕತೆ, ಪಾತ್ರಪೋಷಣೆ, ನಿರೂಪಣೆ, ಭಾಷೆ ಮತ್ತು ವ್ಯಾಕರಣ ಶುದ್ಧಿ ಮುಂತಾದ ಮಾನದಂಡಗಳ ಆಧಾರದ ಮೇಲೆ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳನ್ನು ರಚಿಸುವತ್ತ ಗಮನ ಹರಿಸುವಂತಾಗಲಿ ಎಂದು ಆಶಿಸುತ್ತೇವೆ.
ಪ್ರಥಮ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ‘ಸಾಹಿತಿಗಳ ವಿಶೇಷ ಪೋಸ್ಟ್’ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ
ಕತೆಯ ಕುರಿತು: ಉತ್ತಮ ಕಲ್ಪನೆಯಿಂದ ರಚನೆಯಾದ ಈ ಧಾರಾವಾಹಿ, ಮನುಷ್ಯನ ಆಸೆ, ಲಾಲಸೆ, ಅವುಗಳ ಪರಿಣಾಮಗಳನ್ನು ತೆರೆದಿಡುತ್ತಾ ಉತ್ತಮವಾಗಿ ಸಾಗುತ್ತದೆ. ಐತಿಹಾಸಿಕ ಮತ್ತು ಭೌಗೋಳಿಕ ಅಂಶಗಳು ಕತೆಯ ಮೆರಗನ್ನು ಹೆಚ್ಚಿಸುತ್ತವೆ.
ದ್ವಿತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ‘ಸಾಹಿತಿಗಳ ವಿಶೇಷ ಪೋಸ್ಟ್’ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ
ರಮ್ಯಾ ಅಲೋಕ್ ಅವರ ಸತಿ
ಕತೆಯ ಕುರಿತು: ಒಂದು ಸಾಮಾನ್ಯ ಗೃಹಿಣಿ ‘ಸತಿ’ಯಾದ ಕತೆ ಇದು. ಕೌಟುಂಬಿಕ ಭಿನ್ನಾಭಿಪ್ರಾಯಗಳು, ಮನಸ್ತಾಪಗಳನ್ನು ಬಳಸಿಕೊಂಡು, ಹೆಣ್ಣಿನ ಅಂತರಾಳವನ್ನು ತೆರೆದಿಡುವ ಈ ಧಾರಾವಾಹಿ ಉತ್ತಮ ನಿರೂಪಣೆಯಿಂದ ಮನಮುಟ್ಟುತ್ತದೆ.
ತೃತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ‘ಸಾಹಿತಿಗಳ ವಿಶೇಷ ಪೋಸ್ಟ್’ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ
ಶ್ರೀನಿವಾಸ್ ಸಂಡೂರ್ ಅವರ ಸಂರವ - ಗುಪ್ತ ಸಾಮ್ರಾಜ್ಯದ ಉದಯ
ಕತೆಯ ಕುರಿತು: ಐತಿಹಾಸಿಕ ಧಾರಾವಾಹಿಯ ಸಾಲಿಗೆ ಸೇರುವ ಈ ಕತೆ ಗುಪ್ತ ಸಾಮ್ರಾಜ್ಯದ ಆಳ-ಅಗಲವನ್ನು ವಿಶ್ಲೇಷಿಸುತ್ತಾ ಸಾಗುತ್ತದೆ. ಒಳ್ಳೆಯ ನಿರೂಪಣೆಯೊಂದಿಗೆ ಪ್ರತಿ ಅಧ್ಯಾಯದಲ್ಲಿ ಕುತೂಹಲ ಹುಟ್ಟಿಸುತ್ತದೆ.
ನಾಲ್ಕರಿಂದ ಹತ್ತನೆಯ ಸ್ಥಾನ ವಿಜೇತರ ಪಟ್ಟಿ:
ಈ ಕೃತಿಗಳ ಕರ್ತೃಗಳಿಗೆ ತಲಾ 3,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ‘ಸಾಹಿತಿಗಳ ವಿಶೇಷ ಪೋಸ್ಟ್’ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು
ಸ್ಥಾನ |
ಕೃತಿ |
ಕರ್ತೃ |
೪. |
||
೫. |
||
೬. |
||
೭. |
||
೮. |
||
೯. |
||
೧೦. |
ಹನ್ನೊಂದರಿಂದ ಮೂವತ್ತನೆಯ ಸ್ಥಾನ ವಿಜೇತರ ಪಟ್ಟಿ:
ಈ ಕೃತಿಗಳ ಕರ್ತೃಗಳಿಗೆ ತಲಾ 1,000/- ರೂಪಾಯಿಗಳ ನಗದು ಬಹುಮಾನ + ಸಾಮಾಜಿಕ ಜಾಲತಾಣದಲ್ಲಿ ‘ಸಾಹಿತಿಗಳ ವಿಶೇಷ ಪೋಸ್ಟ್’ ಹಂಚಲ್ಪಡುತ್ತದೆ + ಡಿಜಿಟಲ್ ವಿಜೇತ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು
ಸ್ಥಾನ |
ಕೃತಿ |
ಕರ್ತೃ |
೧೧. |
||
೧೨. |
||
೧೩. |
||
೧೪. |
||
೧೫. |
||
೧೬. |
||
೧೭. |
||
೧೮. |
||
೧೯. |
||
೨೦. |
||
೨೧. |
||
೨೨. |
||
೨೩. |
||
೨೪. |
||
೨೫. |
||
೨೬. |
||
೨೭. |
||
೨೮. |
||
೨೯. |
||
೩೦. |
ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 100 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಅವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು. ಈ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳಲ್ಲಿ, ಓದುಗರ ಎಂಗೇಜ್ಮೆಂಟ್ ಸ್ಕೋರ್ ಆಧಾರದ ಮೇಲೆ ಟಾಪ್ 20 ಧಾರಾವಾಹಿಗಳ ಕರ್ತೃಗಳು ನೀಡುವ ವಿಳಾಸಕ್ಕೆ ವಿಶೇಷ ಬಹುಮಾನವನ್ನು ಕಳುಹಿಸಲಾಗುವುದು. (ಈ ಕೆಳಗೆ ಎಂಗೇಜ್ಮೆಂಟ್ ಸ್ಕೋರ್ ಆಧಾರದ ಮೇಲೆ ಧಾರಾವಾಹಿಗಳನ್ನು ಕ್ರಮವಾಗಿ ಪಟ್ಟಿ ಮಾಡಲಾಗಿದೆ)
ಸ್ಥಾನ |
ಕೃತಿ |
ಕರ್ತೃ |
೧. |
||
೨. |
||
೩. |
||
೪. |
||
೫. |
||
೬. |
||
೭. |
||
೮. |
||
೯. |
||
೧೦. |
||
೧೧. |
||
೧೨. |
||
೧೩. |
||
೧೪. |
||
೧೫. |
||
೧೬. |
||
೧೭. |
||
೧೮. |
||
೧೯. |
||
೨೦. |
||
೨೧. |
ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ:
ಚೈತ್ರ ಯೋಗೇಶ್ ಅವರ ೨೯೮ ಅಧ್ಯಾಯಗಳ ಪರ್ವ - ಅನುರಾಗದ ಅಲೆಗಳ ಮೇಲೆ ಒಲಿದ ಸ್ವರಗಳು
ಪ್ರತಿಲಿಪಿಯ ತಮ್ಮ ಪ್ರೊಫೈಲ್’ನಲ್ಲಿ ಮೊದಲ ಬಾರಿಗೆ ಕನಿಷ್ಠ 70 ಅಧ್ಯಾಯಗಳ ಧಾರಾವಾಹಿ ರಚಿಸಿ ಪ್ರಕಟಿಸಿರುವ ಎಲ್ಲ ನವ ಬರಹಗಾರರ ಉತ್ಸಾಹ ಮತ್ತು ಪ್ರಯತ್ನ ಸಂತಸ ನೀಡಿದೆ. ಈ ಬರಹಗಾರರ ಸಾಹಿತ್ಯ ಪ್ರಯಾಣ ಎಲ್ಲಿಯೂ ವಿರಮಿಸದೇ ಮುಂದುವರೆಯಲಿ ಎಂದು ಆಶಿಸುತ್ತೇವೆ. ಈ ಬರಹಗಾರರಿಗೆ ಗೌರವ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು.
ಕ್ರ.ಸಂ. |
ಕೃತಿ |
ಕರ್ತೃ |
1 |
||
2 |
ಶ್ರೀಲೇಖ | |
3 |
||
4 |
||
5 |
||
6 |
||
7 |
||
8 |
||
9 |
||
10 |
||
11 |
||
12 |
ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು!
- ಪ್ರತಿಲಿಪಿ ಕನ್ನಡ