pratilipi-logo ಪ್ರತಿಲಿಪಿ
ಕನ್ನಡ

Copyright

ನಿಯಮಗಳು ಮತ್ತು ಕಾನೂನುಗಳು:

 

1.ನಿಯಮಗಳು ಮತ್ತು ನಿಬಂಧನೆಗಳು:

ಸೇವೆಯ ನಿಯಮಗಳು

ಗೌಪ್ಯತೆಯ ನಿಯಮಗಳು

 

2.ಪ್ರತಿಲಿಪಿಯ ಬಳಕೆದಾರರು ಗಮನದಲ್ಲಿಟ್ಟುಕೊಳ್ಳಬೇಕಾದ ಸಾಮಾನ್ಯ ನಿಯಮಗಳು: 

ಪ್ರತಿಲಿಪಿಯಲ್ಲಿ ಪ್ರಕಟಿಸಲ್ಪಡುವ ಬರಹಗಳು, ಕಳುಹಿಸುವ ಸಂದೇಶಗಳು  ಮತ್ತು ಬರಹಗಳಿಗೆ ವ್ಯಕ್ತಪಡಿಸುವ ಅಭಿಪ್ರಾಯಗಳು ಅಲ್ಲದೇ ಆಯಾ ಬಳಕೆದಾರರು ಬಹಿರಂಗಪಡಿಸುವ ತಮ್ಮಕುರಿತಾದ ಮಾಹಿತಿಗಳು ಪ್ರತಿಲಿಪಿಯ ನಿಯಮಗಳಿಗೆ ಸಂಪೂರ್ಣ ಬದ್ಧವಾಗಿರಬೇಕಾಗುತ್ತದೆ.

 

3.ಮಾನದಂಡಗಳು/ ನೀತಿ ನಿಯಮಗಳು:

i.ಪ್ರತಿಲಿಪಿಯಲ್ಲಿ ಬರೆದು ಪ್ರಕಟಿಸುವ ಬರಹವು ಯಾವುದೇ ವ್ಯಕ್ತಿಯ ಭಾವನೆಗಳು,ಜಾತಿ, ಧರ್ಮ,ಸಂಪ್ರದಾಯಗಳಿಗೆ ಧಕ್ಕೆಯುಂಟು ಮಾಡುವಂತಿರಬಾರದು.ವೈಯುಕ್ತಿಕ ನಿಂದನೆ ಅಥವಾ ಸೇಡಿನ ಭಾವನೆಗಳು ಬರಹಗಳಲ್ಲಿದ್ದರೆ, ಅಂತಹ ಬರಹಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ii.ದ್ವೇಷಮಯ ಬರಹ: ಇತರರ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಅಥವಾ ಇತರರ ಭಾವನೆಗಳನ್ನು ಕೆರಳಿಸುವ ಬರಹಗಳು ಎಂದರೆ ಇತರರ ಜಾತಿ, ಧರ್ಮ, ಆಚಾರ, ವಿಚಾರ,ಸಂಪ್ರದಾಯ, ಮಾತುಕತೆ, ದೈಹಿಕ ಸ್ವರೂಪ,ಭಾಷೆ, ವಯಸ್ಸು,ವರ್ತನೆ ಗಳನ್ನು ಟೀಕಿಸಿ ಬರೆಯುವ ಬರಹಗಳನ್ನು ಪ್ರತಿಲಿಪಿಯಲ್ಲಿ ಪ್ರಕಟಿಸಿದರೆ ಅಂತಹ ಸಾಹಿತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

Iii.ನಿಯಮಗಳ ಉಲ್ಲಂಘನೆ -  ಬಳಕೆದಾರರು ಆಯಾ ಸಾಹಿತಿಯ ಅನುಮತಿ/ಒಪ್ಪಿಗೆ ಇಲ್ಲದೆ ಬರಹಗಳನ್ನು ಏನೂ ಮಾಡಬಾರದು.

iv. ಕೃತಿ ಹಕ್ಕುಸ್ವಾಮ್ಯ ಉಲ್ಲಂಘನೆ: - ಪ್ರತಿಲಿಪಿಯಲ್ಲಿ ಪ್ರಕಟವಾಗುವ ಬರಹಗಳು ಆಯಾ ಸಾಹಿತಿಯ ರಚನೆಗಳಾಗಿರುತ್ತವೆ. ಇತರರ ಬರಹಗಳನ್ನು ನಕಲಿಸಿ ಬರೆಯುವುದನ್ನು ಪ್ರತಿಲಿಪಿಯಲ್ಲಿ ನಿಷೇಧಿಸಲಾಗಿದೆ.

V.ಕಾಮ ಪ್ರಚೋದಿತ ಮತ್ತು ಅತಿಯಾದ ಶೃಂಗಾರ ಬರಹಗಳನ್ನು ನಿಷೇಧಿಸಲಾಗಿದೆ.

Vi.ಬಳಕೆದಾರರು ಕಾನೂನಿನ ವಿರುದ್ಧವಿರುವ ಮತ್ತು ಸಾಂವಿಧಾನಿಕವಲ್ಲದ ಪದಗಳನ್ನು/ಬರಹಗಳನ್ನು ಬರೆಯುವಂತಿಲ್ಲ.

Vii.ಪ್ರತಿಲಿಪಿಯಲ್ಲಿ ಸ್ಪ್ಯಾಮ್ ಸಂದೇಶಗಳು ಮತ್ತು ಬರಹಗಳ ಹಂಚುವಿಕೆ ನೆಡೆಯಬಾರದು.ಜಾಹಿರಾತುಗಳು, ನಕಲಿಸುವಿಕೆಗಳಿಗೆ ಅನುಮತಿಇರುವುದಿಲ್ಲ

viii.ಆಟೋಮೇಟೆಡ್ ಸ್ಕ್ರಿಪ್ಟ್ ಗಳ ಮೂಲಕ ನೆಡೆಯಲ್ಪಡುವ ಯಾವುದೇ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

Ix.ಪಾವತಿತ ಜಾಹಿರಾತುಗಳು, ಆಮಿಷಗಳನ್ನು ನಿಷೇಧಿಸಲಾಗಿದೆ.

x.ನಕಲಿ ಪ್ರೊಫೈಲ್ಗಳು, ಮತ್ತು ವಿಚಿತ್ರ ಹೆಸರುಗಳಲ್ಲಿ ಬಳಕೆದಾರರಿಗೆ ತೊಂದರೆ ನೀಡುವುದನ್ನುನಿಷೇಧಿಸಲಾಗಿದೆ


ಮೇಲಿನ ಚಟುವಟಿಕೆಗಳಲ್ಲಿ ಯಾವುದೇ ಬಳಕೆದಾರರು ಭಾಗಿಯಾದದ್ದು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

i.ಇವರ ಬರಹಗಳು ಹೆಚ್ಚು ಓದುಗರಿಗೆ ತಲುಪದಂತೆ ತಡೆಯಲಾಗುವುದು.

Ii.ಇಂಥವರ ಪ್ರೊಫೈಲ್ಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಲಾಗುವುದು.

Iii.ಬಳಕೆದಾರರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅವಕಾಶಗಳೂ ಮುಕ್ತವಾಗಿವೆ.

ಪ್ರತಿಲಿಪಿಯು ಈ ರೀತಿಯ ನಡುವಳಿಕೆಗಳು ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳುವ ಎಲ್ಲಾ ಅವಕಾಶಗಳನ್ನೂ ಮುಕ್ತವಾಗಿರಿಸಿಕೊಂಡಿದೆ

 

4.ಕೃತಿಸ್ವಾಮ್ಯದ ನಿಯಮಗಳು:

I.ಪ್ರತಿಲಿಪಿಯಲ್ಲಿ ಪ್ರಕಟವಾಗುವ ಪ್ರತಿ ಬರಹವೂ ಆಯಾ ಬರಹಗಾರರ ಹಕ್ಕಾಗಿರುತ್ತದೆ.ಈ ಕೃತಿಗಳ ಮೇಲೆ ಇತರರಿಗಾಗಲಿ ಅಥವಾ ಪ್ರತಿಲಿಪಿಗಾಗಲಿ ಯಾವುದೇ ಹಕ್ಕು ಇರುವುದಿಲ್ಲ.ಬರಹಗಾರರು ಯಾವುದೇ ಸಮಯದಲ್ಲಿಅವುಗಳನ್ನು ಅಪ್ರಕಟಿತಗೊಳಿಸುವ ಮತ್ತು ಡಿಲೀಟ್ ಮಾಡುವ ಸಂಪೂರ್ಣ ಹಕ್ಕುಗಳನ್ನು ಹೊಂದಿರುತ್ತಾರೆ.ಮತ್ತು ಅನುಮತಿಯಿಲ್ಲದೆ ಯಾರಾದರೂ ಪ್ರತಿಲಿಪಿಯ ಬರಹಗಳನ್ನು ನಕಲಿಸಿದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಹಕ್ಕು ಆಯಾ ಬರಹಗಾರರಿಗಿದೆ.

Ii.ಬರಹಗಾರರು ತಮ್ಮ ಸ್ವಂತ ಬರಹಗಳನ್ನು ಮಾತ್ರಾ ಪ್ರಕಟಿಸತಕ್ಕದ್ದು.ಆಯಾ ಬರಹಗಳ ಹಕ್ಕುಗಳು ಮತ್ತು ಜವಾಬ್ದಾರಿ ಆಯಾ ಬರಹಗಾರರದ್ದೇ ಆಗಿರುತ್ತದೆ.ಯಾವುದೇ ಬರಹಗಾರ/ಬರಹಗಾರ್ತಿ ಪ್ರತಿಲಿಪಿಯ ಬರಹಗಳನ್ನು ನಕಲಿಸಿದ್ದುಕಂಡುಬಂದಲ್ಲಿ ಅಂತವರ ಖಾತೆಗಳನ್ನು ಬ್ಲಾಕ್ ಮಾಡಲಾಗುವುದು ಮತ್ತು ಇಮೇಲ್ ಗಳನ್ನೂಸಹಾ ಕಪ್ಪು ಪಟ್ಟಿಗೆ ಸೇರಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅವಕಾಶಗಳಿವೆ.

 iii. ಪ್ರತಿಲಿಪಿಯಲ್ಲಿ ಬರಹಗಳನ್ನು ಪ್ರಕಟಿಸಿದ ಬಳಿಕವೂ ಆಯಾ ಬರಹಗಳ ಹಕ್ಕು ಮತ್ತು ಜವಾಬ್ದಾರಿಗಳು ಆಯಾ ಲೇಖಕರದ್ದೇ ಆಗಿರುತ್ತವೆ. ಪ್ರತಿಲಿಪಿಯು ಅವುಗಳ ಮೇಲೆ ಯಾವುದೇ ಹಕ್ಕು ಅಧಿಕಾರ ಹೊಂದಿರುವುದಿಲ್ಲ.

iv. ಬಳಕೆದಾರರು ಪ್ರತಿಲಿಪಿಯ ಬೇರೆ ಬರಹಗಾರರ ಬರಹಗಳನ್ನು ಅವರ ಅನುಮತಿಯಿಲ್ಲದೆ ಇತರ ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ.ಇದು ಕೃತಿಸ್ವಾಮ್ಯಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇವೆ.

 

ಎಚ್ಚರಿಕೆ: 

ಬಳಕೆದಾರರ ಮೇಲಿನ ದೂರುಗಳು: 

ಯಾವುದೇ ಬಳಕೆದಾದರರು ಅಸಾಂವಿಧಾನಿಕ ಪದ ಬಳಕೆ, ಲೈಂಗಿಕ/ಕಾಮಪ್ರಚೋದಕ ಬರಹಗಳು, ದ್ವೇಷಮಯ ಬರಹ, ನಕಲಿಸುವುದು -  ಈ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ ದಯವಿಟ್ಟು ಅದನ್ನು ನಮ್ಮಗಮನಕ್ಕೆತನ್ನಿರಿ.ನಾವು ಅದರ ಕುರಿತು ಸೂಕ್ತ ತನಿಖೆ ನೆಡೆಸಿ 72 ಗಂಟೆಗಳಲ್ಲಿ  ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮತ್ತು ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಈ ರೀತಿಯ ವ್ಯಾಟಿಕಗಳ/ಬರಹಗಳನ್ನು ನಮಗೆ ರಿಪೋರ್ಟ್ ಮಾಡಲು ಆಯಾ ವ್ಯಕ್ತಿಗಳ ಪ್ರೊಫೈಲ್ ಅಥವಾ ಬರಹದ ಮುಖಪುಟದ ಬಲ ಮೇಲ್ಭಾಗದಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ ‘ಸಮಸ್ಯೆ ತಿಳಿಸಿ’  ಮೂಲಕ ಮಾಹಿತಿ ನೀಡಬಹುದು.

ನೀವು ವೆಬ್ಸೈಟ್ ಮೂಲಕ ಪ್ರತಿಲಿಪಿಯನ್ನು ಬಳಸುತ್ತಿದ್ದರೆ, ಆಯಾ ಬರಹಗಾರರ ಪ್ರೊಫೈಲ್ ನ ಬಲ ಮೇಲ್ಭಾಗದಲ್ಲಿ ಕಂಡು ಬರುವ '!' ಮೇಲೆ ಕ್ಲಿಕ್ ಮಾಡವುವ ಮೂಲಕ ದೂರು ನೀಡಬಹುದು.

 

ವಿಮರ್ಶೆಗಳ ಕುರಿತಾದ ದೂರು

ಪ್ರತಿಲಿಪಿಯ ಬರಹಗಳಿಗೆ ನೀಡಿದ ವಿಮರ್ಶೆಗಳ ಕುರಿತು ನೀವು  ದೂರು ನೀಡಲು ಬಯಸುವಿರಾದರೆ - ಆಯಾ ವಿಮರ್ಶೆಗಳ ಎದಿರಿನಲ್ಲಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ ಸೂಕ್ತ ವಿವರಗಳನ್ನು ನೀಡಿ ದೂರು ದಾಖಲಿಸಬಹುದು.ನಮ್ಮ ತಂಡ ನೀವು ನೀಡಿದ ದೂರನ್ನು  ಪರಿಶೀಲಿಸಿ ಆದಷ್ಟು ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತದೆ.

 

ಬಳಕೆದಾರರ ಮಾಹಿತಿ ಸಂರಕ್ಷಣೆ

ನೀವು ನಿಮ್ಮಪ್ರೊಫೈಲ್ ಅಲ್ಲಿ ನೀಡುವ ಮಾಹಿತಿ ಸಂಪೂರ್ಣ ಗೌಪ್ಯ ಮತ್ತು ಭದ್ರತೆಯಿಂದ ಕೂಡಿರುತ್ತದೆ. ಪ್ರತಿಲಿಪಿಯು ನೀವು ನಮೂದಿಸುವ ನಿಮ್ಮ ಫೋನ್ ನಂಬರ್, ಇಮೇಲ್ ವಿಳಾಸ ಗಳನ್ನು ನಿಮ್ಮೊಡನೆ ಸಂವಹನಕ್ಕೆ ಉಪಯೋಗಿಸುತ್ತದೆ. ಇದು ಪ್ರತಿಲಿಪಿಯ ಹೊರಗಿನವರಿಗೆ ಲಭ್ಯವಾಗುವುದಿಲ್ಲ.

 

ನಿಮ್ಮ ಸಂಶಯಗಳು ಬಗೆಹರಿಯದಿದ್ದಲ್ಲಿ- 

ಈವರೆಗೂ ಪ್ರತಿಲಿಪಿಯ ಓದುಗರಿಗೆ ಸಾಮಾನ್ಯವಾಗಿ ಮೂಡುವ ಸಂಶಯಗಳ ಕುರಿತು ಮಾಹಿತಿ ನೀಡಲಾಗಿದೆ. ಇನ್ನೂ ಹೆಚ್ಚಿನ ಸಂಶಯಗಳು/ಗೊಂದಲಗಳು ಇದ್ದಲ್ಲಿ ಇಲ್ಲಿ ಕ್ಲಿಕ್ ಮಾಡುವ ಮೂಲಕ ಬಗೆಹರಿಸಿಕೊಳ್ಳಬಹುದು.