ಆತ್ಮೀಯ ಸಾಹಿತ್ಯಾಭಿಮಾನಿಗಳೇ,
‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 10’ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. ‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. ಇದು ‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆಯ ಕೊನೆಯ ಆವೃತ್ತಿಯಾಗಿದ್ದು ಸಾಹಿತ್ಯಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡಿದೆ.
12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಉತ್ತಮ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆ, ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.
‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆಯ ಕೊನೆಯ ಆವೃತ್ತಿಯಾದ ‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 10’ ಸ್ಪರ್ಧೆ ಹಿಂದಿನ ಆವೃತ್ತಿಗಳಂತೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿ ಸ್ಪರ್ಧೆಯ ಯಶಸ್ಸಿಗೆ ಕಾರಣರಾದ ಎಲ್ಲ ಬರಹಗಾರರಿಗೆ ಧನ್ಯವಾದಗಳು. ಸ್ಪರ್ಧೆಯ ಕುರಿತು ನಿಮ್ಮ ಆಸಕ್ತಿ ಮತ್ತು ಉತ್ಸಾಹ ಶ್ಲಾಘನೀಯ.
ಸ್ಪರ್ಧೆಗೆ ಅರವತ್ತೈದಕ್ಕೂ ಅಧಿಕ ಕೃತಿಗಳು ಸಲ್ಲಿಸಲ್ಪಟ್ಟಿದ್ದವು. ಆದರೆ ಅವುಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಧಾರಾವಾಹಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗಿದೆ. ಕೆಲವು ಕೃತಿಗಳು ಕೊನೆಯ ಹಂತದಲ್ಲಿ ನಿಯಮ ಪಾಲಿಸದೆ ಸ್ಪರ್ಧೆಯಿಂದ ಹೊರಗುಳಿಯುವಂತಾದದ್ದು ವಿಷಾದದ ಸಂಗತಿ. ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲ ನಿಯಮಗಳು ಮತ್ತು ಕಾಲಾವಧಿಯನ್ನು ಗಮನದಲ್ಲಿಟ್ಟುಕೊಂಡು ಕೃತಿಗಳನ್ನು ಬರೆಯಲು ನಾವು ಸಲಹೆ ನೀಡುತ್ತೇವೆ.
ದೀರ್ಘ ಧಾರಾವಾಹಿಗಳನ್ನು ರಚಿಸುವಾಗ ಬರಹಗಾರರಲ್ಲಿ ಕತೆಯನ್ನು ಮುಂದುವರೆಸುವಲ್ಲಿ ಅನೇಕ ತೊಡಕುಗಳು ಎದುರಾಗಬಹುದು. ಜೊತೆಗೆ ಸಮಯದ ಮಿತಿ ಒಳಪಟ್ಟಾಗ ಒತ್ತಡದ ಮನಸ್ಥಿತಿ ಒಂದು ಕೃತಿಯ ರೂಪುರೇಷೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಇವೆಲ್ಲವುಗಳನ್ನು ಸಮರ್ಥವಾಗಿ ಎದುರಿಸಿ ಬರಹಗಾರರು ಅತ್ಯುತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂದು ನಾವು ಬಯಸುತ್ತೇವೆ.
ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಎಲ್ಲಾ ಕೃತಿಗಳೂ ವಿಭಿನ್ನ ಕಥಾಹಂದರ, ಪಾತ್ರಗಳು, ನಿರೂಪಣೆಯ ಮೂಲಕ ಗಮನ ಸೆಳೆಯುವಂತಿದ್ದವು. ಸಲ್ಲಿಸಲ್ಪಟ್ಟಿರುವ ಕೃತಿಗಳಲ್ಲಿ ಕಥಾಹಂದರ, ಸೃಜನಾತ್ಮಕತೆ, ಪಾತ್ರಪೋಷಣೆ, ನಿರೂಪಣೆ, ಭಾಷೆ ಮತ್ತು ವ್ಯಾಕರಣ ಶುದ್ಧಿ ಮುಂತಾದ ಮಾನದಂಡಗಳ ಆಧಾರದ ಮೇಲೆ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳನ್ನು ರಚಿಸುವತ್ತ ಗಮನ ಹರಿಸುವಂತಾಗಲಿ ಎಂದು ಆಶಿಸುತ್ತೇವೆ.
ಪ್ರಥಮ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ಪ್ರಶಾಂತ್ ಶಿರ್ವ ಅವರ ಸುಮೇರು
ಕತೆಯ ಕುರಿತು: ಪ್ರಕೃತಿ ಮಾನವನ ನಡುವಿನ ಸಂಬಂಧ, ಕತೆಯ ಕಾಲಘಟ್ಟದ ಜನಜೀವನದ ಬಿಂಬ, ಮಾನವನ ಆಸೆ, ಪರಿಣಾಮಗಳು ಕೃತಿಯಲ್ಲಿ ಹದವಾಗಿ ಬೆರೆತಿವೆ. ಕೊನೆಯವರೆಗೂ ಓದಿಸಿಕೊಂಡು ಹೋಗಬಲ್ಲ ನಿರೂಪಣೆಯೊಂದಿಗೆ ಕತೆ ಚೆನ್ನಾಗಿ ಮುಡಿಬಂದಿದೆ.
ದ್ವಿತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ಶ್ರೀನಿವಾಸ್ ಸಂಡೂರ್ ಅವರ ಧಾರವ - ಸಮುದ್ರ ಗುಪ್ತ ಪರಾಕ್ರಮಾಂಕ
ಕತೆಯ ಕುರಿತು: ಐತಿಹಾಸಿಕ ವಸ್ತು ವಿಷಯವನ್ನೊಳಗೊಂಡ ಈ ಕತೆ ಅಧ್ಯಯನದ ಹಿನ್ನೆಲೆಯೊಂದಿಗೆ, ಉತ್ತಮ ಪಾತ್ರಪೋಷಣೆ, ಹದವಾದ ಸಂಭಾಷಣೆ, ಕಣ್ಣಿಗೆ ಕಟ್ಟುವಂತಹ ಸನ್ನಿವೇಶ ಚಿತ್ರಣಗಳ ಮೂಲಕ ಓದುಗನ ಗಮನ ಸೆಳೆಯುತ್ತದೆ.
ತೃತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ಅಭಿವ್ಯಕ್ತಿ ಅವರ ಹೈಜಾಕ್
ಕತೆಯ ಕುರಿತು: ಸಾಮಾಜಿಕ ಸಮಸ್ಯೆಯೊಂದರ ಸುತ್ತ ಹೆಣೆಯಲ್ಪಟ್ಟಿರುವ ಈ ಕತೆ ವಿಭಿನ್ನವಾದ ಕಥಾಹಂದರ, ಪಾತ್ರಚಿತ್ರಣ, ಸಾಮಾಜಿಯ ನ್ಯಾಯದ ಕುರಿತು ಕಾಳಜಿ ಮತ್ತು ಉತ್ತಮ ನಿರೂಪಣೆಯೊಂದಿಗೆ ಓದುಗರ ಮನಸೆಳೆಯುತ್ತದೆ.
ನಾಲ್ಕನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ಸಂಧ್ಯಾ ಭಟ್ ಅವರ ಪಾಂಚಜನ್ಯ
ಐದನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ಉಮಾ ಶಂಕರಿ ಅವರ ಬಾಳ್ವೆಯ ತೆನೆ ತೂಗುವುದೇ..?
ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ಸುಜಾತ ಗುರುಪಾದಸ್ವಾಮಿ ಅವರ ಸಂಯೋಗ (ಅವನ ಒಲವು)
ಏಳನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ವಿಜಯಲಕ್ಷ್ಮಿ ಎಸ್. ಅವರ ಗಗನ ಕುಸುಮ
ಎಂಟನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ಜ್ಯೋತಿ ಬಾಳಿಗಾ ಅವರ ಬಂದೆಯಾ ಬಾಳಿಗೆ ಬೆಳಕಾಗಿ
ಒಂಬತ್ತನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ಶ್ರೀಲೇಖ ಅವರ ಜೀವನ ಸಾಹಿತ್ಯ
ಹತ್ತನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ರಂಗವಲ್ಲಿಸುತೆ ಅವರ ಸಾಧನೆಯ ಹಾದಿಯಲ್ಲಿ
ಈ ಕೃತಿಗಳ ಕರ್ತೃಗಳಿಗೆ ತಲಾ 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ
ಕ್ರ.ಸಂ. |
ಕೃತಿ |
ಕರ್ತೃ |
11 |
||
12 |
||
13 |
||
14 |
||
15 |
||
16 |
||
17 |
||
18 |
||
19 |
ಅಶ್ವಿನಿ ಜೈನ್ | |
20 |
||
21 |
||
22 |
||
23 |
||
24 |
||
25 |
ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 100 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಅವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
ಕ್ರ.ಸಂ. |
ಕೃತಿ |
ಕರ್ತೃ |
1 |
||
2 |
||
3 |
ಅಶ್ವಿನಿ ಜೈನ್ | |
4 |
||
5 |
||
6 |
||
7 |
||
8 |
||
9 |
||
10 |
||
11 |
||
12 |
||
13 |
||
14 |
||
15 |
||
16 |
||
17 |
||
18 |
||
19 |
||
20 |
||
21 |
||
22 |
||
23 |
||
24 |
||
25 |
||
26 |
ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ: ರೇಖಾ ಕೆ ಎಸ್ ಅವರ ೧೭೦ ಅಧ್ಯಾಯಗಳ ಪುಟ್ಟ ಗೌರಿ ಮದುವೆ
ಪ್ರತಿಲಿಪಿಯ ತಮ್ಮ ಪ್ರೊಫೈಲ್’ನಲ್ಲಿ ಮೊದಲ ಬಾರಿಗೆ ಕನಿಷ್ಠ 80 ಅಧ್ಯಾಯಗಳ ಧಾರಾವಾಹಿ ರಚಿಸಿ ಪ್ರಕಟಿಸಿರುವ ಎಲ್ಲ ನವ ಬರಹಗಾರರ ಉತ್ಸಾಹ ಮತ್ತು ಪ್ರಯತ್ನ ಸಂತಸ ನೀಡಿದೆ. ಈ ಬರಹಗಾರರ ಸಾಹಿತ್ಯ ಪ್ರಯಾಣ ಎಲ್ಲಿಯೂ ವಿರಮಿಸದೇ ಮುಂದುವರೆಯಲಿ ಎಂದು ಆಶಿಸುತ್ತೇವೆ. ಈ ಬರಹಗಾರರಿಗೆ ಗೌರವ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು.
ಕ್ರ.ಸಂ. |
ಕೃತಿ |
ಕರ್ತೃ |
1 |
||
2 |
||
3 |
||
4 |
||
5 |
||
6 |
||
7 |
||
8 |
||
9 |
||
10 |
||
11 |
ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು!
- ಪ್ರತಿಲಿಪಿ ಕನ್ನಡ