ಸೃಷ್ಟಿ
ಬರಹ
ಪ್ರತಿಲಿಪಿಯಲ್ಲಿ ಯಾರು ಬರೆದು ಪ್ರಕಟಿಸಬಹುದು ?
ಪ್ರತಿಲಿಪಿ ಸ್ವಪ್ರಕಾಶನ ವೇದಿಕೆಯಾಗಿದ್ದು ತಮ್ಮ ಮನದ ಭಾವನೆಗಳನ್ನು ಕಥೆ ,ಕವನ , ಲೇಖನಗಳಾಗಿ ಬಹಿರಂಗಪಡಿಸಲು ಇಚ್ಛಿಸುವ ಯಾರೇ ಆದರೂ ಇಲ್ಲಿ ಪ್ರಕಟಿಸಿ ಓದುಗರ ಮುಂದೆ ತೆರೆದಿಡಬಹುದು.
ಪ್ರತಿಲಿಪಿಯಲ್ಲಿ ಬರೆದು ಪ್ರಕಟಿಸುವುದು ಹೇಗೆ ?
ಮೊಬೈಲ್ ಅಪ್ಲಿಕೇಶನ್ ಬಳಸಿ ಪ್ರಕಟಿಸುವ ವಿಧಾನ:
i.ದಯವಿಟ್ಟುಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಪ್ರತಿಲಿಪಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.( ನಾವು ಮೊಬೈಲ್ ಬ್ರೌಸರ್ ಮೂಲಕ ಪ್ರಕಟಿಸುವುದನ್ನು ಬೆಂಬಲಿಸುವುದಿಲ್ಲ)
ಐಫೋನ್ ಬಳಕೆದಾರರಿಗೆ - ಶೀಘ್ರದಲ್ಲೇ ಐಫೋನ್ ಆವೃತ್ತಿ ಬಿಡುಗಡೆಯಾಗಲಿದೆ.ಅಲ್ಲಿಯವರೆಗೂ ವೆಬ್ಸೈಟ್ ಮೂಲಕ ಪ್ರಕಟಿಸಬಹುದು.
ii.ನೀವು ಹೊಸ ಬಳಕೆದಾರರಾಗಿದ್ದಲ್ಲಿ ಪ್ರತಿಲಿಪಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ನಿಮ್ಮ ಜಿಮೈಲ್ ಅಥವಾ ಫೇಸ್ಬುಕ್ ಖಾತೆಯನ್ನು ಬಳಸಿ ಸೈನ್ ಅಪ್ ಆಗಿರಿ.
Iii.ಸೈನ್ ಅಪ್ ಆದ ಬಳಿಕ ಹೋಂ ಪೇಜ್ ನಲ್ಲಿ ಪೆನ್ನಿನ ಚಿನ್ಹೆ ಕಾಣಿಸುತ್ತದೆ. ಅದು ‘ಬರೆಯಿರಿ’ ಎಂಬ ಸೂಚನೆಯನ್ನೂ ಹೊಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿ. ಇದು ಹೋಂ ಸ್ಕ್ರೀನ್ ನ ಕೆಳಭಾಗದಲ್ಲಿ ಲಭ್ಯವಾಗುತ್ತದೆ.
iv.ನೀವು ರಚಿಸಲು ಇಚ್ಛಿಸಿರುವ ಬರಹದ ವಿಧದ ಮೇಲೆ ಕ್ಲಿಕ್ ಮಾಡಿ - ಕಥೆ/ಧಾರಾವಾಹಿಗಳು/ಕವಿತೆ/ಇತರೆ - ಇವುಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿ ‘ಬರಹವನ್ನು ಇಲ್ಲಿ ನಮೂದಿಸಿ’ ಜಾಗದಲ್ಲಿ ಟೈಪ್ ಮಾಡಿ ಅಥವಾ ಇತರೆಡೆ ನಿಮ್ಮ ಬರಹ ಈಗಾಗಲೇ ಟೈಪ್ ಮಾಡಲ್ಪಟ್ಟಿದ್ದರೆ ಅದನ್ನು ಕಾಪಿ ಮಾಡಿ ಇಲ್ಲಿ ಪೇಸ್ಟ್ ಮಾಡಿ. ಬಳಿಕ ಮೇಲ್ಭಾಗದಲ್ಲಿ ಕಾಣುವ ‘ಪ್ರಕಟಿಸಿ’ ಮೇಲೆ ಕ್ಲಿಕ್ ಮಾಡಿ. ಸೂಕ್ತ ಶೀರ್ಷಿಕೆ ಮತ್ತು ಬರಹಕ್ಕೊಪ್ಪುವ ಚಿತ್ರವನ್ನು ಆರಿಸಿ ‘ನಂತರ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಸೂಕ್ತ ಪ್ರಭೇದ ಆಯ್ಕೆ ಮಾಡಿ. ‘ಪ್ರಕಟಿಸಿ’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬರಹ ಪ್ರಕಟವಾಗಿರುತ್ತದೆ. ಇದನ್ನು ನಿಮ್ಮ ಪ್ರೊಫೈಲ್ ಅಲ್ಲಿ ನೋಡಬಹುದು.
ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಉಪಯೋಗಿಸಿ ಪ್ರಕಟಿಸುವ ವಿಧಾನ:
i.ನಮ್ಮ ವೆಬ್ಸೈಟ್ ವಿಳಾಸ “http://www.pratilipi.com
ii.ಪ್ರತಿಲಿಪಿಗೆ ಸೈನ್ ಇನ್ ಆಗಿರಿ. ನೀವು ಹೊಸ ಬಳಕೆದಾರರಾಗಿದ್ದಲ್ಲಿ, ಫೇಸ್ಬುಕ್ ಅಥವಾ ಜಿಮೈಲ್ ಮೂಲಕ ಸೈನ್ ಅಪ್ ಆಗಿರಿ. ನೀವು ಈಗಾಗಲೇ ಸೈನ್ ಅಪ್ ಆಗಿ ನಿಮ್ಮ ಪ್ರತಿಲಿಪಿಯ ಪ್ರೊಫೈಲ್ ಹೊಂದಿದ್ದಲ್ಲ, ಸೈನ್ ಅಪ್ ಮಾಡಲು ಬಳಸಿದ ಜಿಮೈಲ್ ಅಥವಾ ಫೇಸ್ಬುಕ್ ಖಾತೆಯ ಮೂಲಕವೇ ಲಾಗಿನ್ ಆಗಿರಿ.
iii.ಬಲ ಮೇಲ್ಭಾಗದಲ್ಲಿ ಬರೆಯಿರಿ ಆಯ್ಕೆ ದೊರಕುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ‘ಹೊಸ ಬರಹವನ್ನು ಸೇರಿಸಿ’ ಆಯ್ಕೆ ದೊರಕುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಭಾಷೆ,ಶೀರ್ಷಿಕೆ ಮತ್ತು ಬರಹದ ವಿಧವನ್ನು ಆಯ್ಕೆ ಮಾಡಿಕೊಳ್ಳಿ.
iv. ಮುಂದಿನ ಸ್ಕ್ರೀನ್ ಅಲ್ಲಿ ನಿಮ್ಮ ಬರಹವನ್ನು ಟೈಪ್ ಮಾಡಬಹುದು ಅಥವಾ ಬೇರೆಡೆ ಈಗಾಗಲೇ ಟೈಪ್ ಮಾಡಿರುವ ನಿಮ್ಮ ಬರಹವನ್ನು ಕಾಪಿ ಮಾಡಿ ಇಲ್ಲಿ ಪೇಸ್ಟ್ ಮಾಡಬಹುದು.ಬಳಿಕ ನಿಮ್ಮ ಬರಹವನ್ನು ‘ಸಂರಕ್ಷಿಸಿ’ ಮೇಲೆ ಕ್ಲಿಕ್ ಮಾಡಿ ಬಳಿಕ ‘ಮುಕ್ತಾಯ’ ದ ಮೇಲೆ ಕ್ಲಿಕ್ ಮಾಡುವ ಮೂಲಕ ಪ್ರಕಟಿಸಬಹುದು.
ರೈಟಿಂಗ್ ಕಾರ್ನರ್:
ಪ್ರತಿಲಿಪಿ ಅಪ್ಲಿಕೇಶನ್ ಬಳಕೆದಾರರು ಮುಖಪುಟದಲ್ಲಿ ಪೆನ್ ಚಿಹ್ನೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಈ ವಿಭಾಗಕ್ಕೆ ಹೋಗಬಹುದು.ಪ್ರತಿಲಿಪಿ ವೆಬ್ಸೈಟ್ ಬಳಕೆದಾರರು ತಮ್ಮ ಹೋಂ ಸ್ಕ್ರೀನ್ ನ ಬಲ ಮೇಲ್ಭಾಗದ ‘ಬರೆಯಿರಿ’ ಮೇಲೆ ಕ್ಲಿಕ್ ಮಾಡುವ ಈ ವಿಭಾಗಕ್ಕೆ ಭೇಟಿ ನೀಡಬಹುದು.
ಇಲ್ಲಿ ನೀವು ಬರಹಗಳನ್ನು ರಚಿಸಿ ಪ್ರಕಟಿಸಬಹುದು ಅಲ್ಲದೇ ನಿಮ್ಮ ಬರಹಗಳನ್ನು ‘ ಡ್ರಾಫ್ಟ’ಲ್ಲಿ ಸಂರಕ್ಷಿಸಿಡಬಹುದು.
ಕನ್ನಡದಲ್ಲಿ ಟೈಪ್ ಮಾಡಲು:
1) ವೆಬ್ಸೈಟ್ ನಲ್ಲಿ - ನಾವು ವೆಬ್ಸೈಟ್ ನಲ್ಲಿ ನೀವು ಆಯ್ಕೆ ಮಾಡುವ ಭಾಷೆಯು ತಾನಾಗಿಯೇ ಮೂಡಲು ಸೂಕ್ತ ಕ್ರಮ ಕೈಗೊಂಡಿದ್ದೇವ.ಉದಾಹರಣೆಗೆ: ನೀವು ಕನ್ನಡವನ್ನು ನಿಮ್ಮ ಭಾಷೆಯಾಗಿ ಆಯ್ಕೆ ಮಾಡಿದ್ದರೆ, ಪ್ರತಿಲಿಪಿ ವೆಬ್ಸೈಟ್ ಉಪಯೋಗಿಸಿ ಬರೆಯುವಾಗ - ‘hesaru’ ಎಂದು ಇಂಗ್ಲಿಷ್ ಭಾಷೆಯಲ್ಲಿ ಟೈಪ್ ಮಾಡಿದರೆ ಅದು ಕನ್ನಡದಲ್ಲಿ ‘ಹೆಸರು’ ಎಂದು ನಮೂದಿಸಲ್ಪಡುತ್ತದೆ.
2) ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ- ನೀವು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಇಂಡಿಕಾ, ಸ್ವರಚಕ್ರಕನ್ನಡ ದಂತಹ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ಕನ್ನಡದಲ್ಲಿ ಟೈಪ್ ಮಾಡಬಹುದು. ಇದರ ಸಂಪೂರ್ಣ ಮಾರ್ಗದರ್ಶನಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.youtube.com/watch?v=3MDmSs63n1Y
ಬರಹದ ವಿಧ
ಒಂದೇ ಅಧ್ಯಾಯದ ಕಥೆಗಳು/ಕವಿತೆಗಳು/ಲೇಖನಗಳನ್ನು ರಚಿಸಿ ಪ್ರಕಟಿಸಲು - ಪ್ರತಿಲಿಪಿ - ‘ಸ್ವಪ್ರಕಾಶನ ಮಾರ್ಗದರ್ಶಿ’ ಮೇಲೆ ಕ್ಲಿಕ್ ಮಾಡಿ.
ತಮ್ಮ ಕೃತಿಗಳನ್ನು ಒಂದೆಡೆ ಜೋಡಿಸಿ ಅಥವಾ ಕಾದಂಬರಿಗಳ ವಿವಿಧ ಅಧ್ಯಾಯಗಳನ್ನು ಒಟ್ಟಿಗೇ ದೊರಕುವಂತೆ ಮಾಡಲು ಕೆಳಗಿನ ವಿಧಾನ
ಅನುಸರಿಸಿ:
ಸಂಕಲನ ಮಾಡುವ ವಿಧಾನ:
ಯಾವುದೇ ಅಧ್ಯಾಯದ 'ಎಡಿಟ್ ಮಾಡಿ' ಆಯ್ಕೆಗೆ ಹೋಗಿ - 'ಅಪ್ಡೇಟ್' ಮೇಲೆ ಕ್ಲಿಕ್ ಮಾಡಿ - 'ನಂತರ' ಬಟನ್ ಮೇಲೆ ಕ್ಲಿಕ್ ಮಾಡಿ - 'ಹೆಚ್ಚಿನ ಮಾಹಿತಿ'ಮೇಲೆ ಕ್ಲಿಕ್ ಮಾಡಿ -'ಧಾರಾವಾಹಿಗೆ ಸೇರಿಸಿ' ಮೇಲೆ ಕ್ಲಿಕ್ ಮಾಡಿ - 'ಹೊಸ ಧಾರಾವಾಹಿಯನ್ನು ರಚಿಸಿ' ಮೇಲೆ ಕ್ಲಿಕ್ ಮಾಡಿ - ಕಿರುಗತೆ/ಕವಿತೆ/ಲೇಖನ ಸಂಕಲನದ ಹೆಸರು ನೀಡಿ - ಸೂಕ್ತವಾದ ಚಿತ್ರ ನೀಡಿ ( ಇದು ನೀವು ಮಾಡುವ ಎಡಿಷನ್ ನ ಕವರ್ ನ ಚಿತ್ರವಾಗಿರುತ್ತದೆ) - 'ಸಾರಾಂಶ' ಬರೆಯಿರಿ (ಇದರಲ್ಲಿ ಆ ಕಥೆ/ಕವಿತೆ/ಲೇಖನ ಯಾವ ರೀತಿಯವು, ಯಾವೆಲ್ಲ ಕಥೆಗಳಿವೆ ಎಂಬುದರ ಕಿರು ಮಾಹಿತಿಯಾಗಿರುತ್ತದೆ)- 'ನಂತರ' ಬಟನ್ ಮೇಲೆ ಕ್ಲಿಕ್ ಮಾಡಿ- 'ಪ್ರಭೇದ' ಆಯ್ಕೆ ಮಾಡಿ (ಇದು ನೀವು ಯಾವೆಲ್ಲಾ ಪ್ರಭೇದದ ಕಥೆ/ಕವಿತೆ/ಲೇಖನಗಳನ್ನು ಒಂದುಗೂಡಿಸುತ್ತಿದ್ದೀರೋ ಆ ಪ್ರಭೇದದ ಮಾಹಿತಿಯಾಗಿರುತ್ತದೆ)-'ಪ್ರಕಟಿಸಿ' ಮೇಲೆ ಕ್ಲಿಕ್ ಮಾಡಿ - ಈಗ ನಿಮ್ಮ ಒಂದು ಬರಹ ಈ ಸಂಕಲನದ ಅಡಿಯಲ್ಲಿ ಸೇರಿದಂತಾಯಿತು- ಮುಂದಿನ ಸ್ಕ್ರೀನ್ ಅಲ್ಲಿ - 'ಎಡಿಟ್ ಮಾಡಿ' ಮೇಲೆ ಕ್ಲಿಕ್ ಮಾಡಿ -ಅಲ್ಲಿ ನಿಮಗೆ - 'ಡ್ರಾಫ್ಟ್' 'ಪ್ರಕಟಿತ ಬರಹಗಳು' 'ಮಾಹಿತಿ' ಎಂಬ ಆಯ್ಕೆಗಳು ದೊರಕುತ್ತವೆ - ಅಲ್ಲಿ ಪ್ರಕಟಿತ ಬರಹಗಳು ಮೇಲೆ ಕ್ಲಿಕ್ ಮಾಡಿ - ಅಲ್ಲಿ ನೀವು ಈಗಾಗಲೇ ಸೇರಿಸಿರುವ ಒಂದು ಬರಹ ಇರುತ್ತದೆ ಮತ್ತು ಅದರ ಕೆಳಗೆ 'ಈಗಾಗಲೇ ಪ್ರಕಟಿಸಲ್ಪಟ್ಟ ಧಾರಾವಾಹಿಗೆ ಬಿಟ್ಟು ಹೋದ ಅಧ್ಯಾಯವನ್ನು ಜೋಡಿಸಲು ಇಚ್ಛಿಸುವಿರಾ?' ಮೇಲೆ ಕ್ಲಿಕ್ ಮಾಡಿ - ನೀವು ರಚಿಸಿ ಯಾವುದೇ ಸಂಕಲನಕ್ಕೂ ಸೇರಿಸದ ಸಿಂಗಲ್ ಎಪಿಸೋಡ್ ಕಂಟೆಂಟ್ಸ್ ಕಾಣಿಸುತ್ತದೆ - ಅದರ ಎದಿರಿನಲ್ಲಿರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ - ಕೆಳಗಿನ 'ಸೇರಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ - ಈಗ ನೀವು ಆಯ್ಕೆ ಮಾಡಿ ಸೇರಿಸಿದ ಬರಹಗಳು ಒಂದೆಡೆ ಲಭ್ಯವಾಗಿರುತ್ತವೆ - ಅವುಗಳ ಸ್ಥಾನ ಬದಲಿಸಲು ಬಯಸುವಿರಾದರೆ ಲಾಂಗ್ ಪ್ರೆಸ್ ಮಾಡಿ ಡ್ರ್ಯಾಗ್ & ಡ್ರಾಪ್ ಮಾಡಿ - ಅಕಸ್ಮಾತ್ ತಪ್ಪಾಗಿ ( ಅಂದರೆ ಕಥೆಯ ಸಂಕಲನಕ್ಕೆ ಕವಿತೆ ಸೇರಿದ್ದರೆ, ಅಥವಾ ಕವಿತೆಯ ಸಂಕಲನಕ್ಕೆ ಲೇಖನ ಸೇರಿದ್ದರೆ ಅಥವಾ ಪ್ರಭೇದವಾರು ಸಂಕಲನ ಮಾಡುವಾಗ {ಉದಾ: ಪ್ರೇಮ ಕಥಾ ಸಂಕಲನಕ್ಕೆ ಹಾರರ್ ಅಥವಾ ಸಾಮಾಜಿಕ ಪ್ರಭೇದಗಳು ಸೇರಿದ್ದರೆ} ಅವುಗಳನ್ನು ಸಂಕಲನದಿಂದ ಬೇರ್ಪಡಿಸಲು ಅದರ ಎದಿರಿನಲ್ಲಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ - 'ಧಾರಾವಾಹಿಯಿಂದ ತೆಗೆದುಹಾಕಿ' ಮೇಲೆ ಕ್ಲಿಕ್ ಮಾಡಿ - ಹೀಗೆ ಮಾಡುವುದರಿಂದ ಅದು ಮತ್ತೆ ನಿಮ್ಮ ಪ್ರೊಫೈಲ್ ಅಲ್ಲಿ ಯಾವುದೇ ಸಂಕಲನಕ್ಕೆ ಸೇರದ ಬರಹವಾಗಿ ಇಂಡಿಪೆಂಡೆಂಟ್ ಆಗಿರುತ್ತದೆ, ಬಳಿಕ ಬೇಕಾದ ವಿಧ/ಪ್ರಭೇದದ ಸಂಕಲನಕ್ಕೆ ಅದನ್ನು ಸೇರಿಸಿ.
ಇದು ನಿಮ್ಮ ಎಲ್ಲಾ ಬರಹಗಳನ್ನು ಹೆಚ್ಚು ಓದುಗರಿಗೆ ತಲುಪಿಸುವ ಹೆಚ್ಚು ಸಹಾಯಕ.ಅಲ್ಲದೇ ಬೇರೆ ಬೇರೆ ಸಾಹಿತ್ಯದ ವಿಧಗಳನ್ನು (ಕಥೆ/ಕವಿತೆ/ಲೇಖನ) ಅಥವಾ ಬೇರೆ ಬೇರೆ ಪ್ರಭೇದದ ಬರಹಗಳನ್ನು ಇಷ್ಟಪಡುವ ಓದುಗರು ಸುಲಭವಾಗಿ ಅದನ್ನೇ ಆಯ್ದು ಓದಲು ನೆರವಾಗುವ ಒಂದು ಸೌಲಭ್ಯ.ದಯವಿಟ್ಟು ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಿ.ಮಾತ್ರವಲ್ಲ ಪ್ರತಿಲಿಪಿಯ ಎಲ್ಲಾ ಬರಹಗಾರರಿಗೆ ಈ ಮಾಹಿತಿ ತಲುಪಿಸಿ.ನಾನು ಈ ಮಾಹಿತಿಯನ್ನು ಸಾಧ್ಯವಾಗುವ ಎಲ್ಲಾ ವೇದಿಕೆಗಳಲ್ಲಿ (ಪ್ರತಿಲಿಪಿಯ ಫೇಸ್ಬುಕ್ ಗ್ರೂಪ್,ಪೇಜ್,ಇನ್ಸ್ಟಾಗ್ರಾಮ್, ಟ್ವಿಟ್ಟರ್ ಎಲ್ಲಾ ಕಡೆ)ಹಂಚುತ್ತೇನೆ.ನೀವೂ ಕೂಡಾ ಈ ಮಾಹಿತಿಯನ್ನು ನಿಮ್ಮಿಷ್ಟದ ಬರಹಗಾರರಿಗೆ ರವಾನಿಸಿ ಪ್ರೊಫೈಲ್ ಸುಂದರವಾಗಿ ಕಾಣಲು ಸಹಕರಿಸಿ.
ಸಮಸ್ಯೆಗಳು/ ಎರರ್ ಗಳು
ಬರಹ ಅಳಿಸಿಹೋಗುವಿಕೆ:
i. ನೀವು ನಿಮ್ಮ ಬರಹವನ್ನು ಡಿಲೀಟ್ ಮಾಡಿದರೆ ಅದು ಮತ್ತೆ ದೊರಕುವುದಿಲ್ಲ.ಆದ್ದರಿಂದ ಡಿಲೀಟ್ ಮಾಡುವ ಮೊದಲು ಸರಿಯಾಗಿ ಯೋಚಿಸಿ ಡಿಲೀಟ್ ಮಾಡಿ.
ii. ಕೆಲವು ಸಂದರ್ಭಗಳಲ್ಲಿ ನಮ್ಮ ತಾಂತ್ರಿಕ ಅಡಚಣೆಯಿಂದ ನಿಮ್ಮ ಬರಹಗಳು ಅಳಿಸಿಹೋಗುವ ಸಾಧ್ಯತೆಗಳೂ ಇವೆ.ಹೀಗಾದಾಗ ನೀವು ನಮ್ಮನ್ನು ಫೋನ್ ಮೂಲಕ ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು.
ಪ್ರಕಟಣೆ ವಿಫಲವಾಗುವಿಕೆ:
ನಿಮ್ಮ ಬರಹ ಪ್ರಕಟವಾಗಲು ವಿಫಲವಾಗುತ್ತಿದ್ದಲ್ಲಿ, ನಿಮ್ಮ ಪ್ರೊಫೈಲ್ ಗೆ ಹೋಗಿ ‘ಸಹಾಯ’ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಬಹುದು.ಅಥವಾ 9999698309 ಸಂಖ್ಯೆಗೆ ಕರೆ ಮಾಡುವ ಮೂಲಕ ನಮ್ಮ ಗಮನಕ್ಕೆ ತರಬಹುದು.
ಬರಹಗಳ ನಿರ್ವಹಣೆ:
ಎಡಿಟ್ ಮಾಡುವುದು:
ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ - ರೈಟಿಂಗ್ ಕಾರ್ನರ್ / ಪೆನ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿದಾಗ ದೊರಕುವ ಪುಟ - ಇಲ್ಲಿ ನೀವು ಬರೆದು ಪ್ರಕಟಿಸಿದ ಮತ್ತು ಅರ್ಧ ಬರೆದು ಮುಂದೆ ಪ್ರಕಟಿಸಲು ‘ಡ್ರಾಫ್ಟ್’ಅಲ್ಲಿ ಇಟ್ಟಿರುವ ಬರಹಗಳು ದೊರಕುತ್ತವೆ.ಅವುಗಳನ್ನು ಎಡಿಟ್ ಮಾಡಿ ಪ್ರಕಟಿಸಬಹುದು. ‘ನನ್ನ ಮಾಹಿತಿ’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಒಂದೇ ಅಧ್ಯಾಯದ ಕಥೆ/ಕವಿತೆ/ಲೇಖನಗಳು ‘ಸಾಹಿತ್ಯ’ ವಿಭಾಗದಲ್ಲೂ ಮತ್ತು ಬಹುಅಧ್ಯಾಯದ ಧಾರಾವಾಹಿಗಳು,ಕಥಾ/ಕವನ/ಲೇಖನ ಸಂಕಲನಗಳು ‘ಧಾರಾವಾಹಿಗಳು’ ವಿಭಾಗದಲ್ಲೂ ದೊರಕುತ್ತವೆ. ಇವೆಲ್ಲವುಗಳನ್ನೂ ಅಗತ್ಯವೆನಿಸಿದಾಗ ನೀವು ಅಪ್ರಕಟಿತಗೊಳಿಸಿ ಎಡಿಟ್ ಮಾಡಬಹುದು.
ಪ್ರಮೋಷನ್ :
ಪ್ರತಿಲಿಪಿಯ ‘ಶಿಫಾರಸು ವಿಧಾನ’ವು ನಿಮ್ಮ ಬರಹದ ಗುಣಮಟ್ಟದ ಆಧಾರದ ಮೇಲೆ ಹೊಸ ಓದುಗರಿಗೆ ನಿಮ್ಮ ಬರಹಗಳನ್ನು ಓದಲು ಶಿಫಾರಸು ಮಾಡುತ್ತದೆ.ನಿಮ್ಮ ಓದುಗರು ಯಾವ ರೀತಿ ನಿಮ್ಮ ಬರಹಗಳಿಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಅವಲಂಬಿಸಿ ಆ ಬರಹವನ್ನು ಪ್ರಕಟಿಸುವಾಗ ನೀವು ಆಯ್ಕೆ ಮಾಡಿದ ಪ್ರಭೇದಗಳನ್ನು ಗಮನದಲ್ಲಿಟ್ಟುಕೊಂಡು - ಆಯಾ ಪ್ರಭೇದಗಳನ್ನು ಇಷ್ಟಪಡುವ ಓದುಗರಿಗೆ ಹೆಚ್ಚು ತೋರಿಸುತ್ತದೆ.ನಿಮ್ಮ ಬರಹಗಳು ಹೆಚ್ಚು ಜನರಿಗೆ ಈ ವ್ಯವಸ್ಥೆಯಡಿಯಲ್ಲಿ ಪ್ರದರ್ಶಿತವಾಗುವಂತಾಗಲು ಕೆಳಗಿನ ವಿಧಾನಗಳನ್ನುಅನುಸರಿಸಬಹುದು:
I.ನಿಮ್ಮ ಬರಹ ಸ್ವಂತದ್ದಾಗಿರಬೇಕು.ವ್ಯಾಕರಣ ಕಾಗುಣಿತ ದೋಷಗಳಿಂದ ಸಂಪೂರ್ಣ ಮುಕ್ತವಾಗಿರಬೇಕು.ಬರಹಕ್ಕೆ ಒಪ್ಪುವ ಸೂಕ್ತ ಚಿತ್ರ ಹಾಕಿರಬೇಕು ಮತ್ತು ಆ ಬರಹ ಯಾವ ಪ್ರಭೇದಕ್ಕೆ ಸೇರುತ್ತದೆ ಎಂಬುದನ್ನು ಸರಿಯಾಗಿ ನಮೂದಿಸಿರಬೇಕು.ಈ ವಿಧಾನಗಳನ್ನು ಅನುಸರಿಸಿದರೆ ನಮ್ಮ ಶಿಫಾರಸು ವ್ಯವಸ್ಥೆ ಅಂತಹ ಬರಹಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಅವುಗಳನ್ನು ಹೆಚ್ಚಿನ ಓದುಗರಿಗೆ ತೋರಿಸುತ್ತದೆ.
ii.ನಿಮ್ಮಲ್ಲಿ ಬಹುತೇಕರಿಗೆ ತಿಳಿದಿರುವಂತೆ ಫೇಸ್ಬುಕ್ಕಿನಲ್ಲಿ ಪ್ರತಿಲಿಪಿಯ ಪೇಜ್ ಮತ್ತು ಗ್ರೂಪ್ ಎಂಬ ಎರಡು ವಿಭಾಗಗಳಿದ್ದು, ಪೇಜಿನಲ್ಲಿ ಆಯ್ದ ಬರಹಗಳನ್ನು ಪೋಸ್ಟ್ ಮಾಡಿ ಪ್ರಮೋಟ್ ಮಾಡಲಾಗುವುದು ಹಾಗೂ ಗ್ರೂಪ್ ನಲ್ಲಿ ನಿಮ್ಮ ಬರಹಗಳನ್ನು ನೀವೇ ಪ್ರಮೋಟ್ ಮಾಡಿಕೊಳ್ಳಬಹುದು.ಇಮೇಜ್ ಟೆಕ್ಸ್ಟ್ ಸೌಲಭ್ಯ ಬಳಸಿಕೊಂಡು ಪ್ರತಿಲಿಪಿಯಲ್ಲಿ ಪ್ರಕಟವಾದ ನಿಮ್ಮ ಬರಹದ ಪರಿಣಾಮಕಾರಿ ವಾಕ್ಯ ಮತ್ತು ಆ ಬರಹದ ಲಿಂಕ್ ಅನ್ನು ಪ್ರತಿಲಿಪಿ fb ಗ್ರೂಪಿನಲ್ಲಿ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರೆ ಅದು ಗ್ರೂಪಿನ ಬಹುತೇಕರಿಗೆ ತಲುಪುತ್ತದೆ.ಹೀಗೆ ಪ್ರತಿಲಿಪಿ fb ಗ್ರೂಪ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.ಅಲ್ಲದೆ ನಿಮ್ಮ ಸ್ನೇಹಿತರು/ಬಂಧುಗಳು/ಗೊತ್ತಿರುವವರು ಈಗಾಗಲೇ ಪ್ರತಿಲಿಪಿಯಲ್ಲಿ ಬರೆಯುತ್ತಿದ್ದು ಅವರಿಗೆ ಪ್ರತಿಲಿಪಿ fb ಗ್ರೂಪ್ ಮತ್ತು ಪೇಜುಗಳ ಕುರಿತು ಮಾಹಿತಿ ಇರದಿದ್ದರೆ ಮಾಹಿತಿ ನೀಡಿ,ಇಲ್ಲದಿದ್ದರೆ ಗ್ರೂಪ್ ಗೆ ನೀವೇ ಅವರನ್ನು ಸೇರಿಸಲೂಬಹುದು.ಕೇವಲ ಪ್ರತಿಲಿಪಿಯ ಬರಹಗಾರರು/ಬಳಕೆದಾರರು ಮಾತ್ರವಲ್ಲದೇ ಸಾಹಿತ್ಯದಲ್ಲಿ ಆಸಕ್ತಿ ಇರುವ ಯಾರನಾದರೂ ಈ ಗ್ರೂಪ್ ಗೆ ಸೇರಿಸಬಹುದು.ಆ ಮೂಲಕ ನಿಮ್ಮ ಬರಹಗಳನ್ನು ಹೆಚ್ಚು ಸಂಖ್ಯೆಯ ಸಾಹಿತ್ಯಾಸಕ್ತರಿಗೆ ತಲುಪಿಸುವ ಕಾರ್ಯ ಮಾಡಬಹುದು.
ಸ್ಪರ್ಧೆಗಳು:
ಸ್ಪರ್ಧೆಯಲ್ಲಿ ಭಾಗವಹಿಸುವ ವಿಧಾನ:
ನಾವು ಆನ್ಲೈನ್ ಸ್ಪರ್ಧೆಗಳನ್ನು ನೆಡೆಸುತ್ತೇವೆ. ಸ್ಪರ್ಧೆಗಳ ಕುರಿತು ಸಂಪೂರ್ಣ ಮಾಹಿತಿಗಾಗಿ ರೈಟಿಂಗ್ ಕಾರ್ನರ್ ನಲ್ಲಿ ಕಾಣಸಿಗುವ ‘ಸ್ಪರ್ಧೆಗಳು’ ವಿಭಾಗಕ್ಕೆ ಭೇಟಿ ನೀಡಿ.
ವಿಜೇತರ ಆಯ್ಕೆ: ಆಯಾ ಸ್ಪರ್ಧೆಗಳ ವಿಜೇತರ ಆಯ್ಕೆ ಆಯಾ ಸ್ಫರ್ಧೆಗಳ ಮಾಹಿತಿಯಲ್ಲಿ ವಿವರಿಸಿದಂತೆ ನೆಡೆಯುತ್ತದೆ.
i) ತೀರ್ಪುಗಾರರ ಆಯ್ಕೆ: ಆಯಾ ಪ್ರಭೇದಗಳಲ್ಲಿ ಪ್ರಖ್ಯಾತರೆನಿಸಿದ ಕನ್ನಡದ ಹೆಸರಾಂತ ಸಾಹಿತಿಗಳಿಗೆ ಸ್ಪರ್ಧೆಯ ಎಲ್ಲಾ ಬರಹಗಳನ್ನೂ ಕಳುಹಿಸಲಾಗುತ್ತದೆ. ತೀರ್ಪುಗಾರರು ಅವುಗಳನ್ನು ಓದಿ, ಆಯಾ ಬರಹಗಳ ಸಾಹಿತ್ಯ, ವಿಷಯ ಮಂಡನೆ, ಕಾಗುಣಿತ ಮತ್ತು ವ್ಯಾಕರಣಗಳೆಲ್ಲವುಗಳನ್ನೂ ಸೂಕ್ಷ್ಮವಾಗಿ ಗಮನಿಸಿ ವಿಜೇತ ಕೃತಿಗಳನ್ನು ಘೋಷಿಸುತ್ತಾರೆ.
ii) ಓದುಗರ ಆಯ್ಕೆ: ಸ್ಪರ್ಧೆಯ ಎಲ್ಲಾ ಕಥೆಗಳನ್ನೂ ಕಳೆದ ಬೇರೆ ಬೇರೆ ಮಾಧ್ಯಮಗಳನ್ನು ಬಳಸಿ ಓದುಗರ ಮುಂದೆ ಇಡಲಾಗುತ್ತದೆ..ಎಲ್ಲಾ ಕಥೆಗಳನ್ನೂ ಓದುಗರ ಮುಂದಿಟ್ಟು ಅವರು ಮೆಚ್ಚಿ ಆಯ್ಕೆ ಮಾಡುವ ಕಥೆಗಳಿಗೆ ಬಹುಮಾನ ನೀಡಲಾಗುತ್ತದೆ..ಓದುಗರ ಆಯ್ಕೆ ಎಂದಾಗ ಅದು ಕೇವಲ ಓದಿದವರ 'ಸಂಖ್ಯೆ'ಯಾಗಿರದೇ,ಒಟ್ಟು ಓದುಗರು,ಅವರು ವ್ಯಯಿಸಿದ ಸಮಯ,ಪ್ರತೀ ಬರಹದ ಮೂಲಕ ಪ್ರತಿಲಿಪಿಗೆ ಮೊದಲ ಬಾರಿಗೆ ಭೇಟಿ ನೀಡಿದ ಓದುಗರ ಸಂಖ್ಯೆ,ಸರಾಸರಿ ರೇಟಿಂಗ್,ಚರ್ಚೆಗೊಳಗಾದ ವಿಷಯ,ಬರಹಗಳು ಹಂಚಲ್ಪಟ್ಟ ಸಂಖ್ಯೆ,ವ್ಯಾಕರಣ ಶುದ್ಧತೆ,ಚಿತ್ರಗಳ ಆಯ್ಕೆ – ಹೀಗೆ ಅನೇಕ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ಅವಲೋಕನದ ಮೂಲಕ ಬರಹದ ಪ್ರತೀ ತಾಂತ್ರಿಕ ಮಾಹಿತಿಗಳನ್ನೂ ಅಳೆದೂ ತೂಗಿ ವೈಟೆಡ್ ಆವರೇಜ್ ವಿಧಾನ ಉಪಯೋಗಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಆಡಿಯೋ:
ಧ್ವನಿಮುದ್ರಿಸುವ ವಿಧಾನ:
ಪ್ರಸ್ತುತ - ಬಳಕೆದಾರರು ಆಡಿಯೋ ಕಥೆಗಳನ್ನು ಅಪ್ಲೋಡ್ ಮಾಡುವ ವ್ಯವಸ್ಥೆ ನಮ್ಮಲ್ಲಿಲ್ಲ. ನಾವು ಆಯ್ಕೆ ಮಾಡುವ ಕಥೆಗಳನ್ನು ಪರಿಣಿತ ಧ್ವನಿ ಕಲಾವಿದರು ಓದಿ ಧ್ವನಿ ಮುದ್ರಿಸಿ ನಮಗೆ ನೀಡುತ್ತಾರೆ. ನಾವು ಅವುಗಳನ್ನು ಅಪ್ಲೋಡ್ ಮಾಡುತ್ತೇವೆ.ಮುಂಬರುವ ದಿನಗಳಲ್ಲಿ ಬಳಕೆದಾರರೂ ಸ್ವಯಂ ಧ್ವನಿಮುದ್ರಿಸಿ ಬರಹಗಳನ್ನು ಅಪ್ಲೋಡ್ ಮಾಡುವ ವಿಧಾನ ಜಾರಿಗೆ ಬರುತ್ತದೆ.
ಇತರೆ:
ನಿಮ್ಮ ಸಂಶಯಗಳು ಬಗೆಹರಿಯದಿದ್ದಲ್ಲಿ-
ಈವರೆಗೂ ಪ್ರತಿಲಿಪಿಯ ಓದುಗರಿಗೆ ಸಾಮಾನ್ಯವಾಗಿ ಮೂಡುವ ಸಂಶಯಗಳ ಕುರಿತು ಮಾಹಿತಿ ನೀಡಲಾಗಿದೆ. ಇನ್ನೂ ಹೆಚ್ಚಿನ ಸಂಶಯಗಳು/ಗೊಂದಲಗಳು ಇದ್ದಲ್ಲಿ ಇಲ್ಲಿ ಕ್ಲಿಕ್ ಮಾಡುವ ಮೂಲಕ ನಮಗೆ ಕಳುಹಿಸಬಹುದು.