ಆತ್ಮೀಯ ಸಾಹಿತ್ಯಾಭಿಮಾನಿಗಳೇ,
ಪ್ರತಿಲಿಪಿ ಕನ್ನಡ ಆಯೋಜಿಸಿದ್ದ ‘ಸೂಪರ್ ಸಾಹಿತಿ ಅವಾರ್ಡ್ಸ್: ಸೂಪರ್ 7 ಸೀಸನ್’ ಸ್ಪರ್ಧೆ ಮುಕ್ತಾಯಗೊಂಡಿದ್ದು ಒಳ್ಳೆಯ ಪ್ರತಿಕ್ರಿಯೆ ದೊರಕಿದೆ. ‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ.
12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಒಳ್ಳೆಯ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.
ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಎಲ್ಲ ಕೃತಿಗಳು ವಿಭಿನ್ನ ಕಥಾವಸ್ತು, ಕಥಾಹಂದರಗಳನ್ನೊಳಗೊಂಡು ಸ್ಪರ್ಧೆಗೆ ಮೆರಗು ತಂದುಕೊಟ್ಟಿವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರ ಪ್ರಯತ್ನವೂ ಶ್ಲಾಘನೀಯ. ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು. ಕೆಲವು ಕೃತಿಗಳು ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿರಲಿಲ್ಲ. ಅಂತಹ ಕತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿಲ್ಲ.
ಉಳಿದ ಕತೆಗಳಲ್ಲಿ ಸರಿಸುಮಾರು ಎಲ್ಲಾ ಕತೆಗಳು ಭಿನ್ನವಾಗಿ ರಚಿಸಲ್ಪಟ್ಟಿದ್ದವು. ಕ್ರೈಮ್ ಥ್ರಿಲ್ಲರ್, ಭಯಾನಕ, ಕೌಟುಂಬಿಕ, ಸಾಮಾಜಿಕ, ಕಾಲ್ಪನಿಕ ಪ್ರೇಮಕತೆಗಳು ಹೀಗೆ ವಿವಿಧ ರೀತಿಯ ಕತೆಗಳು ಸಲ್ಲಿಸಲ್ಪಟ್ಟು ಸ್ಪರ್ಧೆಯ ಉದ್ದೇಶವನ್ನು ಸಾರ್ಥಕಗೊಳಿಸಿವೆ. ಬರಹಗಾರರ ಕೌಶಲ್ಯ ಮತ್ತು ಉತ್ಸಾಹ ಶ್ಲಾಘನೀಯ. ಚಿಹ್ನೆಗಳು, ವ್ಯಾಕರಣ ದೋಷಗಳ ಕುರಿತು ಇನ್ನಷ್ಟು ಗಮನ ಹರಿಸಬೇಕಾಗಿರುವುದು ಅಗತ್ಯ.
ಜೊತೆಗೆ ಒಂದು ಕತೆಯನ್ನು ರಚಿಸುವಾಗ ಅಂತ್ಯದವರೆಗೂ ಒಂದು ಸ್ಪಷ್ಟ ಚಿತ್ರಣವನ್ನು ಅಥವಾ ರೂಪುರೇಷೆಯನ್ನು ಹಾಕಿಕೊಂಡರೆ ಗೋಜಲುಗಳಿಲ್ಲದೆ ಅಧ್ಯಾಯಗಳನ್ನು ರಚಿಸಲು, ಧಾರಾವಾಹಿಯನ್ನು ಸುದೀರ್ಘವಾಗಿ ಬರೆಯಲು ಸುಲಭವಾಗಬಹುದು. ಕಥಾಪ್ರವೇಶಕ್ಕೂ ಮುನ್ನ ಹಲವು ರೀತಿಯ ಯೋಜನೆ, ಅಧ್ಯಯನಗಳು ಧಾರಾವಾಹಿ ರಚನೆಯನ್ನು ಪರಿಣಾಮಕಾರಿಯಾಗಿಸುತ್ತವೆ.
ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ. ಎಲ್ಲಾ ಬರಹಗಾರರೂ ಸ್ಪರ್ಧೆಗೆ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸುವಂತಾಗಲಿ ಎಂದು ಆಶಿಸುತ್ತೇವೆ.
ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು-
ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಕತೆಗಳಲ್ಲಿ; ಸ್ಪರ್ಧೆಯ ಪ್ರಾರಂಭದ ದಿನಾಂಕದಿಂದ ಮುಕ್ತಾಯದ ದಿನಾಂಕದವರೆಗಿನ ಅಂಕಿಅಂಶಗಳ ಆಧಾರದ ಮೇಲೆ, ಈ ಕೆಳಗಿನ ಅಂಶಗಳನ್ನು ಪರಿಗಣಿಸಿ, ಒಟ್ಟಾರೆ ರೇಶಿಯೋ ಪಡೆದು ಓದುಗರ ಆಯ್ಕೆಯ ಕೃತಿಗಳ ಸ್ಥಾನಗಳನ್ನು ತೀರ್ಮಾನಿಸಲಾಗಿದೆ.
- ಕೃತಿಯ ಒಟ್ಟಾರೆ ಓದಿನ ಸಂಖ್ಯೆ
- ಹೆಚ್ಚು ಓದುಗರಿಂದ ಚರ್ಚಿಸಲ್ಪಡುವ ಕೃತಿ (ಓದುಗರ ಎಂಗೇಜ್ಮೆಂಟ್ ರೇಶಿಯೋ)
ಪ್ರಥಮ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಅನಿತಾ ಶಿವಭಕ್ತೆ ಅವರ ಇಬ್ಬನಿ ಕರಗಿತು
ದ್ವಿತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ತೃತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಮನುಪ್ರಿಯ ಅವರ ನೂರು ಜನ್ಮಕೂ... ನೂರಾರೂ ಜನ್ಮಕೂ
ನಾಲ್ಕನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ವೀಣಾ ವಿನಾಯಕ ಅವರ ನೀರಿನಲ್ಲಿ ಹುಣ್ಣಿಮೆಯ ಚಂದ್ರಬಿಂಬ
ಐದನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ವಿದ್ಯಾ ಮೂರ್ತಿ ಅವರ ಕನಸಾಗಿ ಕಾಡುವೆ ಏಕೆ?
ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಸುಜಲ ಘೋರ್ಪಡೆ ಅವರ ಕಾದಂಬರಿ ಪ್ರೇಮಾನುಬಂಧ
ಏಳನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ರಾಘವ್ ವಿಶ್ವಾಸಿ ಅವರ ಲಿಪಿ ಲೇಖಕನೊಬ್ಬನ ಕೊಲೆ ರಹಸ್ಯ
ಓದುಗರ ಆಯ್ಕೆಯ ವಿಜೇತ ಕೃತಿಗಳನ್ನು ಆರಿಸಿದ ನಂತರ ಉಳಿದ ಎಲ್ಲಾ ಕತೆಗಳನ್ನು ತೀರ್ಪುಗಾರರು ಓದಿ; ಭಾಷೆ, ವ್ಯಾಕರಣ, ಕಥಾವಸ್ತು, ಕಥಾಹಂದರ, ಸೃಜನಶೀಲತೆ ಮುಂತಾದ ಮಾನದಂಡಗಳನ್ನು ಆಧರಿಸಿ, ವಿಶ್ಲೇಷಿಸಿ ಅವುಗಳಲ್ಲಿ ಉತ್ತಮವಾದ ಕೃತಿಗಳನ್ನು ವಿಜೇತ ಕೃತಿಗಳಾಗಿ ಆಯ್ಕೆ ಮಾಡಿದ್ದಾರೆ.
ಪ್ರಥಮ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಪಾರ್ಥಸಾರಥಿ ನರಸಿಂಗ ರಾವ್ ಅವರ ಶ್ರೀಮತಿ ರಾಮರುದ್ರ
ಕೃತಿಯ ಕುರಿತು: ಐತಿಹಾಸಿಕ ಅಂಶಗಳನ್ನು ಒಳಗೊಂಡ ಉತ್ತಮ ಕಾಲ್ಪನಿಕ ಕತೆ. ಪ್ರಸ್ತುತ ಕಾಲದ ಅಂಶಗಳ ಜೊತೆಗೆ ಐತಿಹಾಸಿಕ ಕಲ್ಪನೆಯನ್ನು ಜೋಡಿಸಿ ಕತೆಯನ್ನು ಹೆಣೆದ ರೀತಿ ಬಹಳ ಸೊಗಸಾಗಿದೆ. ನಿರೂಪಣೆಯೂ ಮನಮುಟ್ಟುವಂತಿದೆ.
ದ್ವಿತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಕೃತಿಯ ಕುರಿತು: ಆಕ್ಷನ್, ಭಾವನಾತ್ಮಕತೆಯನ್ನೊಳಗೊಂಡ ಪ್ರೇಮಕತೆ ಇದಾಗಿದ್ದು ಪ್ರತಿ ಹಂತದಲ್ಲೂ ಕುತೂಹಲ ಉಂಟುಮಾಡುತ್ತ ಸಾಗುತ್ತದೆ. ಕಥಾವಿಷಯ ಸಾಮಾನ್ಯವೆನಿಸಿದರೂ ನಿರೂಪಣೆಯ ಮೂಲಕ ಗಮನ ಸೆಳೆಯುತ್ತದೆ.
ತೃತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಉಮಾ ಶಂಕರಿ ಅವರ ಯಾವುದೀ ಹೊಸ ಸಂಚು..?
ಕೃತಿಯ ಕುರಿತು: ಹೆಣ್ಣಿನ ಜೀವನದ ಕತೆ ಇದಾಗಿದ್ದು, ದೃಢ ನಿರ್ಧಾರ, ಛಲ ಒಂದು ಹೆಣ್ಣನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಅನೇಕ ಉತ್ತಮ ವಿಚಾರಗಳನ್ನೊಳಗೊಂದು ಇದು ಓದುಗರ ಮನಮುಟ್ಟುತ್ತದೆ.
ನಾಲ್ಕನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಸಂಧ್ಯಾ ಭಟ್ ಅವರ ಋಣಾನುಬಂಧ
ಐದನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಕೃಷ್ಣಪ್ರಿಯೆ ಅವರ ನನ್ನ ನೀನು ಗೆಲ್ಲಲಾರೆ
ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಏಳನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ
ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 77 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 77 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ರಾಜಪತ್ರವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು. ಜೊತೆಗೆ ಪ್ರತಿಲಿಪಿ ತಂಡ ಈ ಕೃತಿಗಳಿಗೆ ವಿಶೇಷ ಮುಖಪುಟ(ಕವರ್ ಚಿತ್ರ)ವನ್ನು ವಿನ್ಯಾಸಗೊಳಿಸುತ್ತದೆ.
ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ:
ಬನಶಂಕರಿ ಕುಲಕರ್ಣಿ ಅವರ ಉರ್ಮಿಳಾ (ಭಾವನೆಗಳ ಸಂಘರ್ಷ)
ಕ್ರಮಸಂಖ್ಯೆ |
ಕೃತಿ |
ಕರ್ತೃ |
1 |
||
2 |
||
3 |
||
4 |
||
5 |
||
6 |
||
7 |
||
8 |
||
9 |
||
10 |
||
11 |
||
12 |
||
13 |
||
14 |
||
15 |
||
16 |
||
17 |
||
18 |
||
19 |
||
20 |
ಈ ಬಾರಿ ಸಣ್ಣ ಅಂತರದಿಂದ ವಿಜೇತ ಕೃತಿಗಳ ಪಟ್ಟಿಗೆ ಬರಲು ಸಾಧ್ಯವಾಗದ ಕೆಲವು ಧಾರಾವಾಹಿಗಳನ್ನು ಕೆಳಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇವೆ.
ಕ್ರಮಸಂಖ್ಯೆ |
ಕೃತಿ |
ಕರ್ತೃ |
1 |
||
2 |
||
3 |
||
4 |
||
5 |
||
6 |
||
7 |
||
8 |
ಸೂಚನೆ: ಡಿಜಿಟಲ್ ಪ್ರಮಾಣಪತ್ರ ಮತ್ತು ರಾಜಪತ್ರಗಳನ್ನು ಬರಹಗಾರರ ಪ್ರತಿಲಿಪಿ ಪ್ರೊಫೈಲ್’ಗೆ ಲಿಂಕ್ ಆಗಿರುವ ಈಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಸ್ಪರ್ಧೆಯ ಕೃತಿಗಳನ್ನು ಒಂದು ವಾರದೊಳಗೆ ಪ್ರತಿಲಿಪಿ ಹೋಮ್ ಪೇಜಿನಲ್ಲಿ ಬ್ಯಾನರ್ ಮೂಲಕ ಪ್ರಚಾರ ಮಾಡಲಾಗುವುದು.
ನೀವು ‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8’ ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 80+ ಅಧ್ಯಾಯಗಳ ಧಾರಾವಾಹಿಯನ್ನು 15 ಅಕ್ಟೋಬರ್ 2024 ರ ಒಳಗೆ ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://kannada.pratilipi.com/event/q9s1uwrfzr
ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ!
- ಪ್ರತಿಲಿಪಿ ಕನ್ನಡ