ಓದು ಹೆಚ್ಚು ಇಷ್ಟ. ಬರಹಗಾರರು, ಪುಸ್ತಕಗಳ ಹೆಸರಿನ ಹಂಗಿಲ್ಲ. ಎಲ್ಲದರಲ್ಲೂ ಒಂದಲ್ಲಾ ಒಂದು ಒಳ್ಳೆಯದು ಇದ್ದೇ ಇದೆ ಎಂಬ ನಂಬಿಕೆ. ಕಂಡದ್ದು, ಕಾಡಿದ್ದು ಎಲ್ಲವನ್ನೂ ಬರೆಯಬೇಕೆಂಬ ಹಂಬಲ. ಬರೆಯಲು ಸಮಯದ ಹಂಗಿಲ್ಲ. ತಪ್ಪಿದ್ದಲ್ಲಿ ತಿದ್ದಿಕೊಳ್ಳುವ ಬುದ್ಧಿ ಇದೆ. ಬರಹ ಹೀಗೇ ಇರಬೇಕೆಂಬ ಕಟ್ಟುಪಾಡಿಲ್ಲದೆ ಬರೆಯುವೆ. ಜೊತೆಗೆ ಹಾಡು ಕೇಳುವ ಹವ್ಯಾಸ. ಮಾತಿಗಿಂತ ಮೌನದ ಶಕ್ತಿ ಹೆಚ್ಚು ಎಂಬ ನಂಬಿಕೆ. ನನ್ನದೇ ಲೋಕ ಕಟ್ಟಿಕೊಳ್ಳುವಲ್ಲಿ ಬರಹದ ಪಾತ್ರ ಹೆಚ್ಚು. ಹೊಸತನಕ್ಕೆ ತೆರೆದುಕೊಳ್ಳುವಲ್ಲಿ ಖುಷಿ. ಸವಾಲುಗಳಿಗೆ ಮೈಯೊಡ್ಡಿ ಹೊಸ ರೀತಿಯ ಪ್ರಯತ್ನ ಮಾಡುವುದರಲ್ಲಿ ಆಸಕ್ತಿ. ಜೊತೆಗೆ ನನ್ನದೇ ಪುಟ್ಟ ಬ್ಲಾಗ್ ಇದೆ. ಭುವಿಯ ಭಾವಯಾನ (http://vibhavishwanath.blogspot.com/?m=1) ದಲ್ಲಿ ಹೆಚ್ಚು ಕಡಿಮೆ ನನ್ನ ಎಲ್ಲಾ ಬರಹಗಳಿವೆ.
ಎಲ್ಲರನ್ನೂ ಹಿಂಬಾಲಿಸಲು ಸಾಧ್ಯವಿಲ್ಲ, ಅದರದ್ದೇ ನೋಟಿಫಿಕೇಶನ್ ಹೊರೆಯಾಗುತ್ತದೆ ಅಲ್ಲದೆ ಎಲ್ಲವನ್ನೂ ಓದಲು ಸಾಧ್ಯವಾಗುವುದಿಲ್ಲ, ನಿಮ್ಮ ಬರಹವನ್ನು ನಾನು ಓದಲು ನೀವು ಬಯಸಿದಲ್ಲಿ ಪ್ರತಿಲಿಪಿ ಮೆಸ್ಸೆಂಜರ್ ಅಲ್ಲಿ ಅದರ ಲಿಂಕ್ ಕಳುಹಿಸಿ, ತಪ್ಪದೇ ಓದಿ ಪ್ರತಿಕ್ರಿಯಿಸುವೆ. ಓದು ಅತ್ಯಂತ ಆಪ್ತ ಸಂಗಾತಿ ನನಗೆ.
[email protected] ಗೆ ಮೇಲ್ ಮಾಡುವುದರ ಮೂಲಕ ಕೂಡಾ ನನ್ನನ್ನು ಸಂಪರ್ಕಿಸಬಹುದು
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ