1.ನಾನು ಪ್ರತಿಲಿಪಿಯಲ್ಲಿ ಬರೆಯಬಹುದೇ ?
ಸಾಹಿತ್ಯದಲ್ಲಿ ಆಸಕ್ತಿ ಇರುವ ಯಾರೇ ಆದರೂ ತಮ್ಮ ಬರಹಗಳನ್ನು ಪ್ರತಿಲಿಪಿಯಲ್ಲಿ ಬರೆದು ಸ್ವತಃ ಪ್ರಕಟಿಸಬಹುದು.ಬರಹಗಳು ಕಥೆ, ಕವನ, ಲೇಖನ ಅಥವಾ ಧಾರಾವಾಹಿಯ ರೂಪದಲ್ಲಿರಬಹುದು. ಇಲ್ಲಿ ಬರೆಯುವವರು ವೃತ್ತಿನಿರತ ಬರಹಗಾರರಾಗಿರಬೇಕೆಂಬ ನಿಯಮವೇನೂ ಇಲ್ಲ.
2.ನಾನು ಪ್ರತಿಲಿಪಿಯನ್ನು ಉಪಯೋಗಿಸುವುದು ಹೇಗೆ ?
i.ಮೊದಲನೆಯದಾಗಿ ನೀವು ಆಂಡ್ರಾಯ್ಡ್ ಮೊಬೈಲಿನಲ್ಲಿ ಗೂಗಲ್ ಪ್ಲೇ ಸ್ಟೋರಿನಲ್ಲಿ 'pratiilipi' ಎಂದು ಟೈಪ್ ಮಾಡಿ, ನಮ್ಮ ಅಪ್ಲಿಕೇಶನ್ ಡೌನ್ಲೋಡ್
ಮಾಡಿಕೊಳ್ಳಿ. ಅಪ್ಲಿಕೇಶನ್ ಅನ್ನು ಓಪನ್ ಮಾಡಿದೊಡನೆ 'ಕನ್ನಡ' ಭಾಷೆಯನ್ನು ಆಯ್ಕೆ ಮಾಡಿ.
ii.ನಂತರ ಲಾಗಿನ್ ಅಥವಾ ಸೈನ್ ಅಪ್ ಸ್ಕ್ರೀನ್ ದೊರಕುತ್ತದೆ. ಇಲ್ಲಿ ನೀವು ಫೇಸ್ಬುಕ್ ಅಥವಾ ಜೀಮೈಲ್ ಗಳ ಮೂಲಕ ಸೈನ್ ಅಪ್ ಆಗಿ ನಿಮ್ಮ ಖಾತೆ ತೆರೆಯಬಹುದು.
iii.ಒಮ್ಮೆ ಸೈನ್ ಅಪ್ ಆದ ನಂತರ ನಿಮ್ಮ ಅಪ್ಲಿಕೇಶನ್ ಭಾಷೆಯನ್ನು ಕನ್ನಡ ಅಥವಾ ಇಂಗ್ಲಿಷ್ ಗೆ ಬದಲಾಯಿಸಬಹುದು. 'ಟ್ರೆಂಡಿಂಗ್' 'ವಿಭಾಗಗಳು' 'ನಿಮಗೆ' ಮೂರು ಆಯ್ಕೆಗಳು ವಿವಿಧ ಬರಹಗಳನ್ನು ನಿಮಗೆ ಹುಡುಕಲು ಸಹಾಯ ಮಾಡುತ್ತವೆ.ಇದು ಮೊದಲನೇ ಸ್ಕ್ರೀನ್ ನಲ್ಲಿ ದೊರಕುತ್ತವೆ. ಇವುಗಳ ಮೂಲಕ ನೀವು ನಿಮಗಿಷ್ಟವಾದ ಸಾಹಿತ್ಯ ಪ್ರಕಾರಗಳನ್ನು ಆಯ್ಕೆಮಾಡಿಕೊಂಡು ಓದಬಹುದು.
3. ನಾನು ಪ್ರತಿಲಿಪಿಯಲ್ಲಿ ಬರೆಯುವುದು ಹೇಗೆ ?
ನಿಮ್ಮ ಸ್ಕ್ರೀನ್ ನಲ್ಲಿ ಪ್ರತಿಲಿಪಿ ಅಪ್ಲಿಕೇಶನ್ ನ ಕೆಳಗಿನ ಸಾಲಿನಲ್ಲಿ ಕೆಲವು ಐಕಾನ್ ಗಳು ಕಾಣಿಸುತ್ತವೆ. ಇದರಲ್ಲಿ ಮೂರನೆಯ ಗುರುತಾದ ಪೆನ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ,ನಿಮ್ಮ ಬರಹಗಳನ್ನು ಸ್ವತಃ ಬರೆಯುವ ಆಯ್ಕೆ ದೊರಕುತ್ತದೆ.'ಹೊಸ ಬರಹವನ್ನು ಬರೆಯಿರಿ' - ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ - ಬರಹದ ಸ್ಕ್ರೀನ್ ಓಪನ್ ಆಗುತ್ತದೆ.
i. 'ಅಧ್ಯಾಯದ ಶೀರ್ಷಿಕೆ' - ಜಾಗದಲ್ಲಿ ನಿಮ್ಮ ಬರಹದ ಶೀರ್ಷಿಕೆ (ಟೈಟಲ್) ಅನ್ನು ನಮೂದಿಸಿ. 'ಬರಹವನ್ನು ಇಲ್ಲಿ ನಮೂದಿಸಿ' - ಈ ಸೂಚನೆ ಇರುವ ಜಾಗದಲ್ಲಿ ನಿಮ್ಮ ಬರಹವನ್ನು ಟೈಪ್ ಮಾಡಿ ಅಥವಾ ಬೇರೆಲ್ಲಾದರೂ ಟೈಪ್ ಮಾಡಿದ ಬರಹ ಪ್ರಕಟಿಸಲು ತಯಾರಿದ್ದರೆ ಅದನ್ನು ಕಾಪಿ ಪೇಸ್ಟ್ ಮಾಡಬಹುದು. ನಿಮ್ಮ ಬರಹವನ್ನು ಸಂಪೂರ್ಣವಾಗಿ ಟೈಪ್ ಅಥವಾ ಪೇಸ್ಟ್ ಮಾಡಿದ ನಂತರ ಅದೇ ಸ್ಕ್ರೀನ್ ನ ಮೇಲ್ಭಾಗದಲ್ಲಿರುವ ಮುಮ್ಮುಖ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಬರಹವನ್ನು ಅಪ್ಲೋಡ್ ಮಾಡಿ.ನೀವು ಮೇಲ್ಮುಖ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿದ ನಂತರ ಕೆಳಗಿನ ಚಿತ್ರದಲ್ಲಿರುವ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಬರಹದ ಶೀರ್ಷಿಕೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಟೈಪ್ ಮಾಡಿ. ಕೆಳಗಿನ ಲೈನಿನಲ್ಲಿ 'ಸಾರಾಂಶ' ದ ವಿವರಣೆ ಐಚ್ಛಿಕವಾಗಿರುತ್ತದೆ.ಒಮ್ಮೆ ನಿಮ್ಮ ಕಂಟೆಂಟ್ ಅಪ್ಲೋಡ್ ಮಾಡಿ, ಅದರ ಶೀರ್ಷಿಕೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೊಟ್ಟ ನಂತರ ನಿಮ್ಮ ಬರಹಕ್ಕೆ ಸೂಕ್ತ ಫೋಟೋ ವನ್ನೂ ಸಹಾ ಮುಖಚಿತ್ರವಾಗಿ ಬಳಸಬಹುದು. ಇದೂ ಕೂಡಾ ಐಚ್ಛಿಕವಾಗಿದ್ದು, ನೀವೇ ಸ್ವತಃ ಚಿತ್ರಿಸಿದ ಫೋಟೋ, ಅಥವಾ ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಂಡ ಫೋಟೋವನ್ನೂ ಸಹ ಹಾಕಬಹುದು.
ii.ಫೋಟೋ ಅಪ್ಲೋಡ್ ಮಾಡಿದ ನಂತರ ಇನ್ನೊಂದು ಸ್ಕ್ರೀನ್ ತೆರೆದುಕೊಳ್ಳುತ್ತದೆ, ಇದರಲ್ಲಿ ನಿಮ್ಮ ಬರಹವನ್ನು ಕಥೆ, ಕವಿತೆ ಅಥವಾ ಲೇಖನ ವಿಭಾಗಕ್ಕೆ ಸೇರಿಸಬಹುದು.ಮತ್ತು ಪ್ರಬೇಧ (ಸಬ್ ಕೆಟಗರಿ) ಯನ್ನೂ ಸಹಾ ಆಯ್ಕೆ ಮಾಡಬಹುದು. ನಂತರ ಆ ಸ್ಕ್ರೀನ್ ನ ಕೊನೆಯಲ್ಲಿ ಕಾಣುವ 'ಪ್ರಕಟಿಸಿ' ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬರಹ ಪ್ರಕಟವಾಗುತ್ತದೆ.ನೀವು ಪ್ರಕಟಿಸಿದ ಬರಹಗಳು 'ಪ್ರಕಟಿತ' ವಿಭಾಗದಲ್ಲಿ ಲಭ್ಯವಿರುತ್ತವೆ.
iii.ನಿಮ್ಮ ಪ್ರಕಟಿತ ಬರಹದ ಮೇಲೆ ಕ್ಲಿಕ್ ಮಾಡಿದರೆ ಅದರ ಸಂಪೂರ್ಣ ವಿವರಗಳು - ಓದುಗರ ಸಂಖ್ಯೆ, ರೇಟಿಂಗ್ ಕೊಟ್ಟವರ ಸಂಖ್ಯೆ, ಸರಾಸರಿ ರೇಟಿಂಗ್, ಪ್ರಕಟಿತ ದಿನಾಂಕ, ಬರಹಕ್ಕೆ ಪ್ರತಿಕ್ರಿಯೆಗಳ ಕುರಿತು ಮಾಹಿತಿ ದೊರಕುತ್ತದೆ. ಜೊತೆಗೆ 'ಶೇರ್ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಪ್ರಕಟಿತ ಬರಹವನ್ನು ವಾಟ್ಸ್ ಅಪ್ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಬಹುದು.
4. ನನ್ನ ಪ್ರಕಟಿತ ಬರಹಗಳು ಎಲ್ಲಿ ಕಾಣಸಿಗುತ್ತವೆ ?
ಪ್ರತಿಲಿಪಿ ಅಪ್ಲಿಕೇಶನ್ನಿನಲ್ಲಿ ನಿಮ್ಮ ಪ್ರಕಟಿತ ಬರಹಗಳು ಅನೇಕ ವಿಭಾಗಗಳಲ್ಲಿ ಕಾಣಸಿಗುತ್ತವೆ.
i.ಬರೆಯಿರಿ ವಿಭಾಗದಲ್ಲಿ ( ಪೆನ್ನಿನ ಚಿನ್ಹೆ) - ನೀವು ಡ್ರಾಫ್ಟ್ ಅಲ್ಲಿಟ್ಟ ಬರಹಗಳು ಮತ್ತು ನಿಮ್ಮ ಪ್ರಕಟಿತ ಬರಹಗಳು ಎರಡೂ ಬೇರೆ ಬೇರೆಯಾಗಿ ಕಾಣಸಿಗುತ್ತವೆ.
ii.ನಿಮ್ಮ ಪ್ರೊಫೈಲಿನಲ್ಲಿ ನಿಮ್ಮೆಲ್ಲಾ ಪ್ರಕಟಿತ ಬರಹಗಳು ಸಿಗುತ್ತವೆ.
5. ನನ್ನ ಬರಹಗಳು ಪ್ರಕಟವಾಗದಿದ್ದರೆ ಏನು ಮಾಡಬೇಕು ?
ಅದು ತಾತ್ಕಾಲಿಕ ತಾಂತ್ರಿಕ ಸಮಸ್ಯೆ ಅಥವಾ ನಿಮ್ಮ ನೆಟ್ವರ್ಕ್ ಸಮಸ್ಯೆಯಾಗಿರಬಹುದು. ಮತ್ತೊಮ್ಮೆ ಪ್ರಕಟಿಸಲು ಪ್ರಯತ್ನಿಸಿ. ಪದೇ ಪದೇ ಪ್ರಕಟಣೆ ವಿಫಲವಾದರೆ ಇಲ್ಲಿ ಕ್ಲಿಕ್ ಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಿ.