ಹೆಸರು ಚೈತ್ರ,
ಲಿಪಿಯಲ್ಲಿ ಗುರುತು with ❤ ಕನಸು.
ಕಾವ್ಯನಾಮ. ✍🏻 "ಹಿಮೀಶತನಯೆ"
ಕನಸಿನ ಕನವರಿಕೆಗಳಿಗೆ ಕುಂಚ ನೀಡಿ ನನಸಾಗಿಸುವಾಸೆ.. 📝🖋
ಮೌನ ಪದವಾಗಿ ಹೊರಬಂದಾಗ ಕವಿಯ ಜನನ.
ತೋಚಿದ್ದು ಗೀಚಿದರೂ ಅದೆಲ್ಲವೂ ನನ್ನ ಭಾವನೆಗಳ ಪ್ರತಿಬಿಂಬ.
ಎನ್ನ ಆಲೋಚನೆಗಳೇ ಸ್ನೇಹ, ಒಬ್ಬಂಟಿಯೇ ಜೊತೆಗಾರ. ಸುಮ್ಮನೆ ಕುಳಿತಷ್ಟು ಆಲೋಚನೆ ಹೆಚ್ಚು, ಎನ್ನ ಬದುಕಿನ ತಪ್ಪು ಒಪ್ಪುಗಳ ಅಳತೆ ತೂಗಿಕೊಂಡು, ಮುಂಬರುವ ಬದುಕಿನ ದಿನಗಳ ಕನಸು ಕಾಣುವವಳು ನಾನು.
ಬರೆದು ತಾನಾಗಲಾರೆ ತಾರೆ,
ಬರೆಯುತ್ತಾ ಕನಸುಗಳ ಹೆಕ್ಕಿ ತಾರೆ.
ಆಗಸದಲ್ಲಿ ಹಾರುವ ಹಕ್ಕಿ ತಾನಾಗಲಾರೆ,
ಕನಸುಗಳ ಹೆಕ್ಕಿತಂದು ಹಾರು ಬಾರೆ.
ನನ್ನ ಕಾವ್ಯನಾಮದ ಅರ್ಥ : ತಾಯಿ ಹಿಮಮಣಿ ತಂದೆ ಈಶ್ವರಯ್ಯ ತನಯೆ ( ಮಗಳು)
ಹಿಮೀಶ ತನಯೆ = ಹಿಮೀಶತನಯೆ. ಚೈತ್ರ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ