ಕೆ.ಎಂ.ವಿಶ್ವನಾಥ ಮರತೂರ ಇವರು ಚಿತ್ತಾಪೂರ ತಾಲೂಕಿನ ಕಲಬುರಗಿ ಜಿಲ್ಲೆಯ ಸುಕ್ಷೇತ್ರ ಮರತೂರ ಗ್ರಾಮದಲ್ಲಿ ಜನಿಸಿದವರು. ಬಾಲ್ಯದಿಂದಲೇ ಸಾಹಿತ್ಯ ಕಲೆಯಲ್ಲಿ ಆಸಕ್ತಿಯಿರುವ ಇರುವ ಇವರು ಸಧ್ಯ ಸಾಹಿತ್ಯದ ಹಲವು ಮಜಲುಗಳಲ್ಲಿ ಕೃಷಿ ಮಾಡುತ್ತಿದ್ದು ಇಲ್ಲಿಯವರೆಗೆ ಸುಮಾರು 500ಕ್ಕೂ ಹೆಚ್ಚು ಲೇಖನಗಳು ಕರ್ನಾಟಕದ ವಿವಿಧ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥೆ, ಕವನ, ಪ್ರಬಂಧ,ಲೇಖನಗಳಲ್ಲಿ ಆಸಕ್ತಿಯಿರುವ ಇವರು ಹಲವು ಪತ್ರಿಕೆಗಳಿಗೆ ಹವ್ಯಾಸಿ ಲೇಖಕರಾಗಿ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಇವರು ರಾಜ್ಯ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಪೇಪರ್ ಪ್ರಜೆಂಟೇಷನ್ ಮಾಡಿರುತ್ತಾರೆ. ಹಲವು ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿರುವ ಅನುಭವ ಇವರಿಗಿದೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ