pratilipi-logo ಪ್ರತಿಲಿಪಿ
ಕನ್ನಡ

ಮಳೆಗೆ ಶುರು ಬಾಲ್ಯದ ನೆನಪ ತೇರು

4.2
668

ಬರಡಾಗಿ ಬೆಂಡಾದ ಭುವಿಗೆ ತಂಪಾಗೋ ಕಾಲ ಸನ್ನಿಹಿತವಿನ್ನೂ.. ಶುರುವಾಗುತ್ತದೆ ಎಲ್ಲೆಲ್ಲೂ ಹನಿಮಳೆಯ ಪುಳಕವಿನ್ನೂ... ಜಯಂತ್ ಕಾಯ್ಕಿಣಿ ಹೇಳುವಂತೆ "ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು".. ನಿಜ.! ಎಂಥಾ ಸಾಲುಗಳಲ್ವಾ!, ಇಷ್ಟುದಿನ ಮೇಲೆ ...

ಓದಿರಿ
ಲೇಖಕರ ಕುರಿತು

ಹುಟ್ಟಿದ್ದು ಕುಂದಾಪುರದ ಹೊಸೂರು ಹೆಗ್ಗದ್ದೆ ಎನ್ನುವ ಪುಟ್ಟ ಹಳ್ಳಿಯಲ್ಲಿ...ಮನೆಯಲ್ಲಿ ಮಣಿ, ಹೊರಗೆ ಬಿದ್ದರೆ ಸಂದೀಪ್, ಜನ ಗುರುತಿಸುವುದು ಸಂದೀಪ್ ಶೆಟ್ಟಿ ಹೆಗ್ಗದ್ದೆ... ಹುಟ್ಟೂರು ಹಾಗೂ ಕುಂದಾಪುರದಲ್ಲಿ ಓದಿದ್ದು... ಒತ್ತಾಯಕ್ಕಾಗಿ, ಮೂಲಭೂತ ಅವಶ್ಯಕತೆ ಎನ್ನುವಂತೆ ಬಿ.ಕಾಂ ಎಂ.ಕಾಂ ಪದವಿ ಬಗಲಲ್ಲಿದೆ... ಡಿಗ್ರಿಯಲ್ಲಿರುವಾಗಲೇ ಬರೆಯುವ ಹವ್ಯಾಸ ಜೊತೆಗೆ, ಸಿಕ್ಕಿದನ್ನು ಓದುವ ಒಲವು... 21 ನೇ ವಯಸ್ಸಿಗೆ 3 ಕವನಕ್ಕೆ 'ಯುವಕವಿ ಪ್ರಶಸ್ತಿ' ಪ್ರಾಪ್ತಿ. 22ನೇ ವಯಸ್ಸಿಗೆ "ಛಾಯಾ ಕನ್ನಡಿಗ" ಬಿರುದು... ನಡುವೆ ಒಂದಿಷ್ಟು ಹಾಡು,ಹಾಡಬೇಕೆನ್ನುವ ಬಯಕೆ. ಅದಕ್ಕಾಗಿ ಅವಕಾಶ ಸಿಗದೇ ನನ್ನದೇ 'ಸೋನು ಗ್ರೂಪ್ ಆಫ್ ಟ್ರ್ಯಾಕ್ ಮ್ಯೂಸಿಕ್' ತಂಡದ ಸ್ಥಾಪನೆ... ಜಾಸ್ತಿ ಬಡವ, ಅಷ್ಟಕ್ಕಷ್ಟೇ ಶ್ರೀಮಂತ...ಬಗಲಲ್ಲಿ ಗೆಲುವು, ಸುತ್ತಮುತ್ತಲೆಲ್ಲ ಸೋಲಿನ ಕತ್ತಲು... ಬದುಕಲು ಕಷ್ಟ ಎನ್ನುವಾಗ ಊರಿಗೆ ಗುಡ್ ಬೈ ಹೇಳಿ, ಬೆಂಗಳೂರಿಗೆ ಪಾದಾರ್ಪಣೆ. ಮಹಾನಗರಿಗೆ ಬಂದಾಗ ಯಾವುದೋ ಕಟೌಟ್ ನೋಡಿ ಸಿನಿಮಾ ಹಾಡು ಬರೆಯಬೇಕೆಂಬ ಆಸೆ ಹುಟ್ಟಿ 6 ತಿಂಗಳು ಇಂಡಸ್ಟ್ರಿಯಲ್ಲಿ ಅಲೆದಾಟ. ಮತ್ತೆ ಊಟಕ್ಕೂ ಕಷ್ಟ. ಇದು ವರ್ಕೌಟ್ ಆಗಲ್ಲ ಎನ್ನುವ ಹಂತದಲ್ಲಿ ಖಾಸಗಿ ಛಾನೆಲ್ ಒಂದರಲ್ಲಿ ಕೆಲಸ... ಮತ್ತೆ ಅನಾರೋಗ್ಯದ ಪ್ರಯುಕ್ತ ಆ ಕೆಲಸಕ್ಕೂ ಫುಲ್ ಸ್ಟಾಪ್. ಬ್ಯಾಕ್ ಟು ನೇಟಿವ್. ಸತ್ತೇ ಎನ್ನುವಾಗ ಬದುಕಿಸಿದ್ದು ಡಾಕ್ಟರ್ ಔಷಧ. ಅದಾದ ನಂತರ ಮತ್ತೆ ಬೆಂಗಳೂರಿಗೆ... ಮರಳಿ ಕೆಲಸಕ್ಕೆ ಪ್ರಯತ್ನ... ಸಿರಿ ಪತ್ರಿಕೆಯಲ್ಲಿ ಸಂಪಾದಕನಾಗಿ ಕೆಲಸಕ್ಕೆ ಆಹ್ವಾನ. ಸಿಕ್ಕಿದ್ದು ಸವಿ ಎನ್ನುವಂತೆ ಕೆಲಸಕ್ಕೆ ಹಾಜರು. ಅಲ್ಲಿಂದ ಮತ್ತೆ ಬರವಣಿಗೆ ಪ್ರಾರಂಭ... 2015 ಎಪ್ರೀಲ್ 19 ರಂದು ಮೊದಲ ಕವನ ಸಂಕಲನ 'ಮಡಕೆ ಮಾರುವ ಹುಡುಗ' ಲೋಕಾರ್ಪಣೆ... ಮೊನ್ನೆ ಮೊನ್ನೆ ಅಂದರೆ 25 ನವೆಂಬರ್ 2016 ರಂದು ನನ್ನೂರ ಭಾಷೆ ಕುಂದಾಪ್ರ ಕನ್ನಡದಲ್ಲಿ "ಗಂಡ್ ಹಡಿ ಗಂಡ್" ಆಲ್ಭಮ್ ಸಾಂಗ್ ರಿಲೀಸ್...ಒಂಥರಾ ಬದುಕು ಸುಂದರವಾಗಿದೆ. ಇದೀಗ ಮತ್ತೆ ಹೊಸ ಹೊಸ ಪ್ರಯೋಗಗಳೆನ್ನುವಂತೆ ಡಾಕ್ಯುಮೆಂಟರಿಗಳನ್ನು ಮಾಡುವ ಹುಚ್ಚುತನ...ಯೋಚನೆ ಬಹಳ ಇದೆ... ಅಪ್ಪ-ಅಮ್ಮ ಅಣ್ಣಂದಿರೇ ಬೆಂಬಲದ ಸ್ಫೂರ್ತಿ. ಜೊತೆಗೆ ಚಂದದ ಗೆಳೆಯ ಗೆಳತಿಯರ ಪ್ರೋತ್ಸಾಹ... ಪ್ರತಿಯೊಬ್ಬರಿಗೂ ಜೀವನದಲ್ಲಿ ನೀಡಬೇಕಾದ ಅತ್ಯಮೂಲ್ಯ ವಂದನೆಯಂತೂ ಮನದಲ್ಲಿದೆ. ಅದಕ್ಕಾಗಿ ಒಳ್ಳೆ ಸಮಯಕ್ಕಾಗಿ ಕಾಯುತ್ತಿರುವ ಮುದ್ದಾದ ಮನಸ್ಸಿದೆ. ಅನ್ನ ಹಾಕಿ ಬೆಳೆಸಿದವರ ಋಣವಿದೆ...ಜೀವನ ಹೊಸ ಹೊಸ ದಾರಿಯನ್ನು ದಿನವೂ ಹುಡುಕುತ್ತಿದೆ..ಅಲ್ಲಲ್ಲಿ ಅಭಿಮಾನಿಗಳು ಇದ್ದಾರೆ, ರೊಚ್ಚಿಗೆದ್ದ ವೈರಿಗಳು ಇದ್ದಾರೆ... ಬದುಕು ಸಾಗುತ್ತಿದೆ.. ಏನಾದರೂ ಸಾಧಿಸಬೇಕೆಂಬ ಛಲವಿದೆ... ಭಾನು ನಕ್ಷತ್ರ ತೋರಿಸುತ್ತದೆ.., ನಕ್ಷತ್ರ ಸ್ಟಾರ್ ಆಗು ಎಂದೇಳುತ್ತದೆ.. ಪ್ರೀತಿಯಿದೆ...ಪಯಣವಿದೆ... ನಿಮ್ಮೆಲ್ಲರಿಗೂ ಮನದಲ್ಲಿ ವಂದನೆಯಿದೆ... Follow in Face Book: Sandeep shetty heggadde OR YouTube: www.youtube.com/c/sandeepShettyHeggadde

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sowmya Tanvi
    22 জুলাই 2021
    ತುಂಬಾ ಕುಸಿಯಾನ್ನಿಸಿತು ಅಂತ ಫ್ರೆಂಡ್ ಶಿಪ್ ಮರಿಯಾಕೆ agalla
  • author
    ಶಶಿ. ಎಸ್. ಭಟ್
    17 এপ্রিল 2017
    ಸವಿಯಲು ಬಾಲ್ಯದ ಸವಿಸವಿ ನೆನಪುಗಳು ಕೊಟ್ಟಿರುವಿರಿ,ಧನ್ಯವಾದಗಳು
  • author
    ದೊರೆರಾಜ್ DK
    05 সেপ্টেম্বর 2021
    thank you sir ಬಾಲ್ಯವನ್ನು ನೆವಪಿಸಿದಕ್ಕೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sowmya Tanvi
    22 জুলাই 2021
    ತುಂಬಾ ಕುಸಿಯಾನ್ನಿಸಿತು ಅಂತ ಫ್ರೆಂಡ್ ಶಿಪ್ ಮರಿಯಾಕೆ agalla
  • author
    ಶಶಿ. ಎಸ್. ಭಟ್
    17 এপ্রিল 2017
    ಸವಿಯಲು ಬಾಲ್ಯದ ಸವಿಸವಿ ನೆನಪುಗಳು ಕೊಟ್ಟಿರುವಿರಿ,ಧನ್ಯವಾದಗಳು
  • author
    ದೊರೆರಾಜ್ DK
    05 সেপ্টেম্বর 2021
    thank you sir ಬಾಲ್ಯವನ್ನು ನೆವಪಿಸಿದಕ್ಕೆ