ಹಳೆಹುಡುಗಿ ಕನಸಲ್ಲೆ ರಾತ್ರಿ ಕಳೆಯುತಿದೆ, ಕೊಡಮಾಡು ಗ್ಯಾಪಲ್ಲೆ ಸ್ವಲ್ಪ ಕನವರಿಕೆ. ಪ್ರಾಯದಿಂದ್ರಿಯಗಳಿಗೆ ಬರಿದಾದ ಆಕಾಂಕ್ಷೆ, ಮರೀಬೇಡ ಹಳೆಹುಡುಗಿ ನೀನಂದ್ರೆ ಚಡಪಡಿಕೆ.. ಅರ್ಧ ರಾತ್ರಿಯ ಚಂದ್ರ ಮಳೆಯಲ್ಲಿ ನೆನೆದು, ಛಳಿಯ ಒಳಗಿನ ಕವಲು ಮನದಲಿ ತನ್ನನ್ನೆ ಮರೆತು, ಪರಿಧಿ ಮೀರುತ್ತ ಕಾವು ಕೊಡಲು ನಿಂತಿರಲು, ಬೆವರು ಹನಿಗಳು ಮಾತ್ರ ನಿನ್ನ ಮುಂಗುರುಳ ಸುತ್ತ. ಒಲೆಯ ಮುಂದಿದ್ದ ಬೆಂಕಿಪೊಟ್ಟಣದಿಂದ, ಒಂಚೂರು ಘಾಟು ವಾಸನೆ ಬಡಿದಿತ್ತು ಬಲೆಯ ಹಾಕಿದ್ದ ಬೆಸ್ತನ ಕೈಯಿಂದ ಹಿಡಿಮೀನು ಸಾಯುತ್ತ ಕುಡಿಕೆಯೊಳು ಸೇರಿತ್ತು. ರಾತ್ರಿಗಳೆ ಹೀಗೆ ನೀ ಭೇಟಿ ಕೊಡುವಾಗ, ಕಂಜೂಸು ರಾತ್ರಿಗೆ ಹಗಲ ಹಂಬಲ ಜೋರು. ಒಣ ಪರಿಹಾರ ಹೇಳು, ಹಣದ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ