ಬಾಲ್ಯದಿಂದಲೂ ಓದುವ ಹುಚ್ಚು. ಬಾಲ್ಯದಲ್ಲಿ ಬಾಲಮಂಗಳ, ಚಂದಮಾಮ ಓದುತ್ತಿದ್ದರೆ ಹರೆಯದಲ್ಲಿ ತುಷಾರ, ಮಯೂರ, ತರಂಗ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದರ ಜೊತೆಗೆ ಕಾದಂಬರಿಗಳ ಹುಚ್ಚು. ಪೌರಾಣಿಕ ಕಥೆ ಎಂದರೆ ಪ್ರಾಣ. ಹಾಗೆಯೇ ಪತ್ತೇದಾರಿ ಮತ್ತು ನಿಗೂಢ ಕತೆಗಳೂ ಇಷ್ಟ. ಮದುವೆಯಾದ ಮೇಲೆ ಅದಕ್ಕೆಲ್ಲ ವಿರಾಮ ಬಿತ್ತು. ಮತ್ತೆ ಪ್ರತಿಲಿಪಿಯಿಂದ ನನ್ನ ಹವ್ಯಾಸ ಕಂಡುಕೊಂಡ. ಬರೀ ಓದುಗಾರಳಾದ ನನಗೆ ಬರೆಯಬೇಕೆಂಬ ಆಸೆ ಹುಟ್ಟಿದ್ದು ಪ್ರತಿಲಿಪಿಯಿಂದ. ಪ್ರತಿಲಿಪಿಯನ್ನ ಪರಿಚಯಿಸಿದ ಗೆಳತಿಗೆ ತುಂಬು ಧನ್ಯವಾದಗಳು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ