"ಗೊಂಬೆ" ನನ್ನ ಲೇಖನಿಗೆ(🖋️ ) ನಾನಿಟ್ಟ ಹೆಸರು. ಅದರ ಅರ್ಥ ಗೊಂಬೆಗಳ ಹಾಗೇ ಭಾವರಹಿತ ಲೇಖನಿಗೆ ನನ್ನೊಳಗಿನ ಭಾವಗಳನ್ನು ತುಂಬಿ ಪದಗಳ ಸೃಷ್ಟಿಗೆ ಕಾರಣವಾಗುವುದು ಎಂದು. ಪರಶುರಾಮನ ಸೃಷ್ಟಿ, ಕರಾವಳಿಯ ದಕ್ಷಿಣಕನ್ನಡ ಜಿಲ್ಲೆ ನಾನು ಹುಟ್ಟಿ ಬೆಳೆದ ಊರು. ಓದುವ ಗೀಳು ಓದಲು ಬರೆಯಲು ಕಲಿತಾಗಿಂದ ಶುರು. ಬಾಲಮಂಗಳ, ಚಿತ್ರಕಥೆ, ತುಂತುರು, ಚಂದಮಾಮ, ಗಿಳಿವಿಂಡುಗಳು ಈ ಗೀಳನ್ನು ಇನ್ನಷ್ಟು ಬಲಿಷ್ಠವಾಗಿಸಿತು. ಬರೆಯುವ ಅಭ್ಯಾಸಕ್ಕೆ ಅಂಬೆಗಾಲಿಟ್ಟದ್ದು ಪದವಿ ಓದುವಾಗ ಕಾಲೇಜಿನ ವಾರ್ಷಿಕ ಪತ್ರಿಕೆಗೆ. ಅದರ ಮುಂದುವರಿಕೆಗೆ ಪ್ರತಿಲಿಪಿಯೇ ಸ್ಫೂರ್ತಿ. ಇಲ್ಲಿ ಓದಿ ಕಲಿತದ್ದು ಸಾಕಷ್ಟಿದೆ. ಪ್ರತಿಲಿಪಿಗೆ ಅನಂತಾನಂತ ಧನ್ಯವಾದಗಳು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ