ಸಾವಿರ ದಿನಗಳ ಕಾಲ ಸಂಪಾದಕನಾಗಿ ''ಜ್ವಲಂತ" ಪಾಕ್ಷಿಕ ಪತ್ರಿಕೆಯನ್ನು ತೀರ್ಥಹಳ್ಳಿ ಸೀಮೆಯಲ್ಲಿ ಆರಂಭಿಸಿದ್ದೆ.
ಆ ಸಮಯದಲ್ಲೇ "ಮೌನ" ಎಂಬ ನನ್ನ ಕವನ ಸಂಕಲನವು ಸಹ ಬಿಡುಗಡೆಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಪತ್ರಿಕೆ ಹಾಗು ಪತ್ರಕರ್ತ ಅದೆಲ್ಲಾ ಈಗ ಜೀವನದಲ್ಲಿ ಮುಗಿದು ಹೋದ ಹಳೆಯ ಅಧ್ಯಾಯದ ನೆನಪಿನ ಪುಟಗಳು ಮಾತ್ರ.
ಕಾಲಚಕ್ರದ ರನ್ನಿಂಗ್ ರೇಸ್ ನಲ್ಲಿ....
ಕ್ಯಾಮರಾ ಕಣ್ಣಲ್ಲೇ ನೆರಳು ಮತ್ತು ಮಂದ ಬೆಳಕಿನ ದೃಶ್ಯ ಕಾವ್ಯವನ್ನು ಸೃಷ್ಟಿಸುವ ಕನ್ನಡ ನಾಡಿನ ಹೆಮ್ಮೆಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಸರ್ ಅವರ ಗರಡಿಯಲ್ಲಿ ಒಂದು ವರ್ಷಗಳ ಕಾಲ 'ಸೀತೆ' ಧಾರಾವಾಹಿಯಲ್ಲಿ ಸ್ಥಿರ ಛಾಯಾಗ್ರಾಹಕನಾಗಿ ಕೆಲಸ ಮಾಡಿದ ಅನುಭವವಿದೆ. ರಾಷ್ಟ್ರಪ್ರಶಸ್ತಿ ವಿಜೇತ ಕಲಾತ್ಮಕ ಛಾಯಾಗ್ರಾಹಕ ಹೆಚ್.ಎಂ. ರಾಮಚಂದ್ರ ಅವರ ಜೊತೆಯಲ್ಲೇ 'ಮೌನಿ' ಕನ್ನಡ ಚಲನಚಿತ್ರದಲ್ಲಿ ಸ್ಥಿರ ಛಾಯಾಗ್ರಹಣ ಮಾಡುತ್ತಾ, ಕಿರುತೆರೆಯಿಂದ ಬೆಳ್ಳಿತೆರೆಯ ಕಡೆಗೆ ಸಾಗಿದ ಪುಟ್ಟ ಹೆಜ್ಜೆಯ ಗುರುತಿದೆ. 'ಫೇಸ್ ಬುಕ್' ನಾ ಜೊತೆಯಲ್ಲೇ "ಬ್ಲಾಗ್" ಬರವಣಿಗೆ ನನ್ನ ಪ್ಯಾಷನ್. ಏಲ್ಲಾಕ್ಕಿಂತ ಮುಖ್ಯವಾಗಿ ವೃತ್ತಿಯಲ್ಲಿ ನಾನಿಂದು ಫೋಟೋಗ್ರಾಫರ್.
ಸ್ನೇಹಿತರೆ ಈ ನಿಮ್ಮ ಪ್ರೋತ್ಸಾಹ ಮತ್ತು ಪ್ರೀತಿ ವಿಶ್ವಾಸ ಸದಾಕಾಲ ಶಾಶ್ವತವಾಗಿರಲಿ, ನಮಸ್ತೇ.
9483100888
https://www.facebook.com/varnajoji
[email protected]
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ