ನಾನು ; ಶಿಶುವು ತಾಯ ತೊಡೆಯನಪ್ಪುವಂತೆ ಬಿಗಿದಪ್ಪಿ ಮುದ್ದುಗೈದು ನೂರು ಕನಸ ಹಾದಿ ಹಚ್ಚಿ ಹಕ್ಕಿಯಂತೆ ರೆಕ್ಕೆ ಬಿಚ್ಚಿ ಶ್ವೇತವರ್ಣಿಯಾಗಿ ಗಾಳಿ ಅಲೆಯ ಮೇಲೆ ತೇಲುತ್ತಾ ಗಗನ ವರ್ಣಿಯಾಗಿ, ಚಿತ್ರ ವಿಚಿತ್ರ ರೂಪು ಪಡೆಯುತ್ತಾ ಕೊರಳ ...
ಕವಿಯಾಲೋಚನೆ ಏನಿದೆಯೋ ಅರಿಯೆ...ನನ್ನ ಕಲ್ಪನೆಗೆ ನಿಲುಕಿದ ಚಿತ್ತಾರ ಮೇಘಗಳದ್ದು...ಚಿತ್ತಾರ ಮೂಡಿದೆ ಮೇಘಗಳದ್ದು ಹೇಗೆ..ಅದು ಅಪ್ಪಿಯೂ ಅಪ್ಪದಂತಿದೆ ಗಗನವನ್ನು ಆದರಿಲ್ಲಿ ಕವಿಮನಸ್ಸಿನ ಭಾವ ಕೂಸು ತನ್ನ ತಾಯ ಮಡಿಲೇರಿ ಕೊರಳಿಗೆ ಹಾರವಾಗಿ ಮುದ್ದುಗೈಯ್ವಂತೆ ಅಪ್ಪಿದಂತೆ, ಮತ್ತು ಶ್ವೇತ ರಂಗಿನಲ್ಲಿ ತೇಲುತ್ತಾ ಹಾರಾಡಿ ಚಿತ್ರ ವಿಚಿತ್ರವಾಗಿ ಗಗನದ ತುಂಬಾ ಹರಡಿ ಹಾರವಾಗಿ ಅಪ್ಪಟ ಪ್ರೇಮಿಯಾಗಿ ಗೋಚರಿಸುತ್ತಿದ್ದೇನೆಂದು ಮೋಡವೇ ಮಾತಾಡಿದೆ...
ಮುಂದಿನ ಸಾಲುಗಳಲ್ಲಿರುವ ವಿಚಾರ ಸಾಮಾನ್ಯ ಜ್ಞಾನವಾದರೂ ಇಲ್ಲಿ ಅದ್ಭುತ ಕಲ್ಪನೆಯಾಗಿ ಯಾರಿಗೂ ಬಾರದಂತೆ ಬಂದಿದೆ..ಹೌದು ಮೋಡದ ನಿರ್ಮಾಣ ಭುವಿಯಿಂದಲೇ ಆಗುವುದು ಇಲ್ಲಿನ ನೀರು ಆವಿಯಾಗಿ ಮೋಡವಾಗಿ ಆಗಸವೇರುತ್ತದೆ ಅದನ್ನೇ ಇಲ್ಲಿನ ಸಾಲುಗಳು ಭುವಿಯ ಕಂದ ನಾನು ಎಂದು ಹೇಳುವಲ್ಲಿ ಹೇಳಿದ್ದಾರೆ ಕವಿವರ್ಯರು..
ನಿನ್ನ ಸೇರಲು ಬರುವ ಧರಣಿಯ ಆಶಯ ನಾನು..ನಿನ್ನ ಸನಿಹ ಬರುವ ಹಂಬಲ ಭುವಿಗೆ, ಆಗ ನಾನು ಮತ್ತೆ ಮತ್ತೆ ಸುರುಳಿ ಸುತ್ತಿ ಹರಡಿ ತೇಲಾಡಿ ಆಟವನ್ನು ಹೂಡುವೆ..
ಮುಂದಿನ ಸಾಲುಗಳಲ್ಲಿನ ರೂಪಕ ಇನ್ನೂ ಅದ್ಭುತವೆಂಬಂತೆ ಮೂಡಿಬಂದಿದೆ...ಇಲ್ಲಿ ಮೋಡ ಒಂದು ಹೆಜ್ಜೆ ಮುಂದೆ ಸಾಗಿದಂತೆ ಮಿಂಚಾಗಿ ಕಾಣುತ್ತದೆ...ಭುವಿಯೊಡಲ ಪ್ರೇಮಿಯ ಕರೆಗೆ ಓಡಿ ಸೇರುವ ಬಗೆಯನ್ನು ಬಣ್ಣಿಸುತ್ತದೆ...ಸುಮ್ಮನೆ ಇಳಿದು ಬರುವುದಿಲ್ಲ ಅಲ್ಲೊಂದು ಮದುವೆಯ ಸಂಭ್ರಮದ ದಿಬ್ಬಣವೇ ಇದೆ..ಮಿಂಚು ಗುಡುಗಿನ ಮೇಳವಿದೆ..ಸೇರುವ ಕೊನೆಯ ಹಂತ ನಾದ ವಾದ್ಯ ಅದು ಮಳೆಯಾಗಿ ಸುರಿದು...ಮಳೆಯ ಸದ್ದನ್ನೇ ಇಲ್ಲಿ ನಾದವಾದ್ಯ ಎಂದು ಬಣ್ಣಿಸಿದೆ ಸಾಲುಗಳು... ನಂತರದ ಫಲ... ಕರೆದಾಗ ಬರುನ ನಲ್ಲನ ಎದುರುಗೊಳ್ಳಲು ಧರೆ ಮದುವಣಗಿತ್ತಿಯಂತೆ ಸಿಂಗರಿಸಿರುವುದು..ಹೇಗೆ.. ತವರಿನಿಂದ ಮಂಗಳಕರಳಾಗಿ ಬರುವ ತರುಣಿಯಂತೆ...ಇಲ್ಲಿ ಅಂತೆ ಎಂಬ ಉಪಮಾ ವಾಚಕವಿಲ್ಲ...ಧರಣಿ ತರುಣಿಯೇ ಎಂಬ ರೂಪಕವಿದೆ...ಮಳೆ ಸುರಿದು ಇಳೆ ಹಸಿರುಟ್ಟು ಸಿಂಗರಿಸಿದ ಬಗೆಯನ್ನು ಈ ರೀತಿಯಾಗಿ ಬಣ್ಣಿಸಿದೆ ಸಾಲುಗಳು...ಭುವಿ ಚಿಗುರಿದ್ದಾಳೆ ತನ್ನವರ ಹಸಿವು ನೋವು ನೀಗಿಸಿದ್ದಾಳೆ ಈ ಮೂಲಕ ತವರ ನೋವ ಮರೆಸಿ, ಬಂದ ನಲ್ಲನಿಗೆ ನಲಿವಿತ್ತಿದ್ದಾಳೆ. ಮತ್ತೆ ಮತ್ತೆ ಮಳೆಯಾಗಿ ಸುರಿದ ಮೋಡದೊಡನೆ ನಲಿದಿದ್ದಾಳೆ...
ಚಂದದ ಪ್ರಕೃತಿ ವಿಸ್ಮಯದ ಸಾಲುಗಳು...ಅಂದವಾದ ಪದಗಳ ಪೋಣಿಸಿ ಬರೆದು ಓದಲಿತ್ತಿದ್ದಕ್ಕೆ ಧನ್ಯವಾದ ನಿಮಗೆ 🙏💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ