1969ರಲ್ಲಿ ನಾನು 10ನೇ ತರಗತಿಯಲ್ಲಿದ್ದಾಗ ನಮ್ಮ ಮೈಸೂರಿನ ಬನುಮಯ್ಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿದ ಕುವೆಂಪುರವರ ಬಗ್ಗೆ ನಾನು ಬರೆದ ಪುಟ್ಟ ಕವನವನ್ನು ನಾನೇ ಓದಿದೆ. ಅದನ್ನು ಆಲಿಸಿದ ಬಳಿಕ
ರಾಷ್ಟ್ರಕವಿ ಅವರ ಬಾಯಿಂದ ಬಂದ ಉದ್ಘಾರ
"ಯಾರೀ,,,,,, ಕುಮಾರ ಕವಿ..." ಅಂದಿನಿಂದ ಬಿ.ಎನ್.ನಟರಾಜ ಆದ ನಾನು "ಕುಮಾರಕವಿ"ಯನ್ನು ನನ್ನ "ಕಾವ್ಯನಾಮ"ವಾಗಿಸಿ ಸಹಸ್ರಾರು ಸಾಹಿತ್ಯ ಪ್ರಾಕಾರಗಳನ್ನು
ಬರೆಯುವ ಮೂಲಕ ನನ್ನ ಕನ್ನಡ ಕಾವ್ಯಕೃಷಿ ಪ್ರಾರಂಭ ಮಾಡಿದೆ. ನೂರಾರು ಬರಹಗಳು ದೇಶದ ಬಹುತೇಕ ಎಲ್ಲ ದಿನ, ವಾರ, ಮಾಸ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣ, ಕವನ, ಹನಿಗವನ, ಚುಟುಕು, ಕತೆ, ಕಾದಂಬರಿ, ಮಕ್ಕಳಸಾಹಿತ್ಯ, ವಿಮರ್ಶೆ, ಲೇಖನ ಮುಂತಾದವು ಈಗಲೂ
ಪ್ರಕಟವಾಗುತ್ತಿವೆ.
2021 ರವರೆಗೆ ನನ್ನ ಒಟ್ಟು 42ಕೃತಿಗಳು ಪ್ರಕಟವಾಗಿದೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ