ಹಾಯ್, ನಮ್ಮ ಮಂಗಳೂರಿನ ಹುಡುಗಿ ನಾನು. ನನ್ನಷ್ಟಕ್ಕೆ ನಾನಿರುವುದೇ ಇಷ್ಟ. ಮಾತುಗಾರ್ತಿ ಅಲ್ಲ, ಕೆಲವೊಮ್ಮೆ ಭಾವಜೀವಿ ಖಂಡಿತ ಹೌದು! ಓದುವುದು ನನ್ನ ಹವ್ಯಾಸ, ಬರೆಯುತ್ತಿರುವುದು ಇದೆ ಮೊದಲ ಬಾರಿ. ಕರಾವಳಿಯ ಸಾಂಪ್ರದಾಯಿಕ ತಿನಿಸುಗಳನ್ನು ತಿನ್ನುತ್ತಾ ಬೆಳೆದವಳು ನಾನು. ಮದುವೆಯಾಗಿ ಮುಂಬಯಿ ಮಹಾನಗರ ಸೇರಿದ ನಂತರ ಅಮ್ಮನ ಮನೆಯಲ್ಲಿ ಮಾಡುತ್ತಿದ್ದ ತಿನಿಸುಗಳ ನೆನಪಾಗುತ್ತಿತ್ತು. ಸಾಂಪ್ರದಾಯಿಕ ಕುಟುಂಬದಿಂದ ಬಂದ ನಾನು ಅಡುಗೆ ಮಾಡುವುದನ್ನು ನನ್ನ ಹಿರಿಯರಿಂದ ಚೆನ್ನಾಗಿ ಕಲಿತ್ತಿದ್ದೆ. ಆದ್ದರಿಂದ ಅದನ್ನ ನಿಮ್ಮೊಂದಿಗೆ ಹಂಚಿಕೊಳ್ಳಲು ನನ್ನ ಒಂದು ಚಿಕ್ಕ ಪ್ರಯತ್ನ ಅಷ್ಟೆ. ಕೆಲವು ತಪ್ಪು ಒಪ್ಪುಗಳು ಇರುವುದು ಸಹಜ. ಪ್ರೀತಿಯ ಓದುಗರೇ ಅದನ್ನೆಲ್ಲ ಮನ್ನಿಸಿ, ನನ್ನ ಬರಹಗಳನ್ನು ಹಿಂಬಾಲಿಸಿ😀
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ