ನನ್ನಲ್ಲಿ ಮೂಡುವುದು ಬರಿ ವಿರಹದ ಕಥಾಕವನ
ಒಮ್ಮೊಮ್ಮೆ ಗೀಚುವೆ ಒಲವಿನ ಕವನ
ಬರವಣಿಗೆ ಎಂದರೆ ಬಲು ಇಷ್ಟ
ಮನೆ ಕೆಲಸವೆಂದರೆ ಬಲು ಕಷ್ಟ
ಡ್ರಾಯಿಂಗ್ ಅಂದ್ರೆ ಪ್ರಾಣ
ಹಾಗೆ ಹೀಗೆ ಸಾಗ್ತಿದೆ ನನ್ನ ಪಯಣ
ಗಿಡ ಮರ ಬೆಳೆಸೊದ್ರಲ್ಲಿ ನಾ ಮುಂದು
ಅಡುಗೆ ಮಾಡೊದ್ರಲಿ ನಾ ಹಿಂದು
ನಿದ್ದೆ ಎಂದರೆ ಕುಣಿದು ಕುಪ್ಪಳಿಸುವೆ
ಊಟ ಎಂದರೆ ಓಡಿ ಹೋಗುವೆ
ಬಿರಿಯಾನಿ ಎಂದರೆ ತುಸು ಹೆಚ್ಚು ಪ್ರೀತಿ
ಬಸ್ಸಾರು ಎಂದರೆ ಎಲ್ಲಿಲ್ಲದ ಭೀತಿ
ಸ್ವಾಭಿಮಾನಿ ಹೆಣ್ಣು
ಹೆಗ್ಗಡೆಯ ಪ್ರಿಯ ಸತಿ ನಾನು
ನಿಮ್ಮೆಲ್ಲರ ಮುದ್ದು ಸಹೋದರಿ ನಾನು
....
ಸಮಸ್ಯೆಯನ್ನು ವರದಿ ಮಾಡಿ