ಹೇ ಹೃದಯ ವಾಸಿ.........🙈.
❤️ನಿನ್ನ ಹೆಸರು ಕೇಳಿದರೆ ಸಾಕು ಮನಕ್ಕೆ
ಮುದವಾಗಿ ಗೊತ್ತಿಲದೇ ನನಗೆ ನಾಚಿಕೆ
ಆವರಿಸಿ ಬಿಡುತ್ತದೆ..
ನಿನ್ನ ಪ್ರೀತಿಯೇ ಹಾಗೆ ಮಾಧವ..
ನೀ ನೀಡು ಈ ರಾಧೆಗೆ ತುಂಬು ಒಲವ..
ಕಾಣದ ವಿಧಿ ಬರಹ
ನನ್ನ ನಿನ್ನ ಪ್ರೀತಿಯಲ್ಲಿ ತುಂಬಿದೆ ಬರಿ ವಿರಹ
ನನ್ನ ಹೃದಯಕ್ಕೆ ಬೇರಾರೂ ಬರಲಾರು
ನಿನ್ನ ವಿನಹ..
ನೀ ಇರು ಎಂದಿಗೂ ನನ್ನ ಮನಕ್ಕೆ ಸನಿಹ..
ನೀನೊಂದು ಪ್ರೇಮ ಕಡಲು..
ಪ್ರೇಮ ಸುಧೆಯ ನೀ ನನ್ನೆಡೆಗೆ ಬೀರಲು..
ತಂಪಾಯ್ತು ನನ್ನಿ ಒಡಲು..
ಕೃಷ್ಣ ನಿನ್ನ ಮೋಹಕ ರಾಗಕ್ಕೆ
ಸೋತಳು ಈ ಬೃಂದಾವನದ ಕನ್ನಿಕೆ..
ನಿನ್ನ ಕೊಳಲ ಮಧುರ ನಾದಕ್ಕೆ
ಸೋತು ಹೋಗಿಹಳು ಈ ರಾಧಿಕೆ..
ತುಳಸಿ ಪ್ರಿಯ ನೀನು
ನಿನ್ನ ಆರಾಧಿಸುವ ರಾಧೆ ನಾನು..
ತನುಮನದಿ ನಿನ್ನದೆ ಕನವರಿಕೆ..
ನನ್ನ ಬಿಟ್ಟು ಭಾಮೆ ರುಕ್ಮಿಣಿಯ
ವರಿಸಿದೆ ನೀ ಯಾಕೆ..?
ರಾಧೆಯ ಹೃದಯವಾಸಿ ನೀ ಗೋವಿಂದ..
ನಿನ್ನ ಹೃದಯದಲಿ ಸದಾ
ಇರಬೇಕು ನಾ ಮುಕುಂದ...
ಮಧುರೈ ಕಡೆಗೆ ನಿನ್ನ ಪಯಣ
ನಿನ್ನೆ ಕಾದಿಹಳು ಈ ರಾಧೆ ಪ್ರತಿಕ್ಷಣ...!!!
ಇಂತಿ
ಹರಿ ನಿನ್ನ ಪ್ರಿಯೆ..😘✍️✍️
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ