pratilipi-logo ಪ್ರತಿಲಿಪಿ
ಕನ್ನಡ

ಅಮ್ಮ ನೀನಿಲ್ಲದಾ ಹೊತ್ತು...

4.7
1035

ಅದೊಂದು ಶುದ್ಧ ‘ಬ್ಯಾಡ್ ಡ್ರೀಮ್’... ಕನಸುಗಳೇ ಹಾಗೆ ಎಲ್ಲಿ ಕಾಡುತ್ತವೋ, ಎಲ್ಲಿ ತೂರುತ್ತವೋ, ಎಲ್ಲಿ ಸತ್ಯಾಸತ್ಯದಿಂದ ಕೂಡಿರುತ್ತವೋ, ಮನಸಿನ ಕಣ್ಣುಗಳಿಗೆ ಯಾವ ರೀತಿಯ ‘ಫಿಲ್ಮ್’ಗಳನ್ನು ತೋರಿಸುತ್ತವೆಯೋ, ಹೇಳಲಾಗದು, ಮರೆತರಂತೂ ವರ್ಣಿಸಲೂ ...

ಓದಿರಿ
ಲೇಖಕರ ಕುರಿತು

ಹುಟ್ಟಿದ್ದು ಕುಂದಾಪುರದ ಹೊಸೂರು ಹೆಗ್ಗದ್ದೆ ಎನ್ನುವ ಪುಟ್ಟ ಹಳ್ಳಿಯಲ್ಲಿ...ಮನೆಯಲ್ಲಿ ಮಣಿ, ಹೊರಗೆ ಬಿದ್ದರೆ ಸಂದೀಪ್, ಜನ ಗುರುತಿಸುವುದು ಸಂದೀಪ್ ಶೆಟ್ಟಿ ಹೆಗ್ಗದ್ದೆ... ಹುಟ್ಟೂರು ಹಾಗೂ ಕುಂದಾಪುರದಲ್ಲಿ ಓದಿದ್ದು... ಒತ್ತಾಯಕ್ಕಾಗಿ, ಮೂಲಭೂತ ಅವಶ್ಯಕತೆ ಎನ್ನುವಂತೆ ಬಿ.ಕಾಂ ಎಂ.ಕಾಂ ಪದವಿ ಬಗಲಲ್ಲಿದೆ... ಡಿಗ್ರಿಯಲ್ಲಿರುವಾಗಲೇ ಬರೆಯುವ ಹವ್ಯಾಸ ಜೊತೆಗೆ, ಸಿಕ್ಕಿದನ್ನು ಓದುವ ಒಲವು... 21 ನೇ ವಯಸ್ಸಿಗೆ 3 ಕವನಕ್ಕೆ 'ಯುವಕವಿ ಪ್ರಶಸ್ತಿ' ಪ್ರಾಪ್ತಿ. 22ನೇ ವಯಸ್ಸಿಗೆ "ಛಾಯಾ ಕನ್ನಡಿಗ" ಬಿರುದು... ನಡುವೆ ಒಂದಿಷ್ಟು ಹಾಡು,ಹಾಡಬೇಕೆನ್ನುವ ಬಯಕೆ. ಅದಕ್ಕಾಗಿ ಅವಕಾಶ ಸಿಗದೇ ನನ್ನದೇ 'ಸೋನು ಗ್ರೂಪ್ ಆಫ್ ಟ್ರ್ಯಾಕ್ ಮ್ಯೂಸಿಕ್' ತಂಡದ ಸ್ಥಾಪನೆ... ಜಾಸ್ತಿ ಬಡವ, ಅಷ್ಟಕ್ಕಷ್ಟೇ ಶ್ರೀಮಂತ...ಬಗಲಲ್ಲಿ ಗೆಲುವು, ಸುತ್ತಮುತ್ತಲೆಲ್ಲ ಸೋಲಿನ ಕತ್ತಲು... ಬದುಕಲು ಕಷ್ಟ ಎನ್ನುವಾಗ ಊರಿಗೆ ಗುಡ್ ಬೈ ಹೇಳಿ, ಬೆಂಗಳೂರಿಗೆ ಪಾದಾರ್ಪಣೆ. ಮಹಾನಗರಿಗೆ ಬಂದಾಗ ಯಾವುದೋ ಕಟೌಟ್ ನೋಡಿ ಸಿನಿಮಾ ಹಾಡು ಬರೆಯಬೇಕೆಂಬ ಆಸೆ ಹುಟ್ಟಿ 6 ತಿಂಗಳು ಇಂಡಸ್ಟ್ರಿಯಲ್ಲಿ ಅಲೆದಾಟ. ಮತ್ತೆ ಊಟಕ್ಕೂ ಕಷ್ಟ. ಇದು ವರ್ಕೌಟ್ ಆಗಲ್ಲ ಎನ್ನುವ ಹಂತದಲ್ಲಿ ಖಾಸಗಿ ಛಾನೆಲ್ ಒಂದರಲ್ಲಿ ಕೆಲಸ... ಮತ್ತೆ ಅನಾರೋಗ್ಯದ ಪ್ರಯುಕ್ತ ಆ ಕೆಲಸಕ್ಕೂ ಫುಲ್ ಸ್ಟಾಪ್. ಬ್ಯಾಕ್ ಟು ನೇಟಿವ್. ಸತ್ತೇ ಎನ್ನುವಾಗ ಬದುಕಿಸಿದ್ದು ಡಾಕ್ಟರ್ ಔಷಧ. ಅದಾದ ನಂತರ ಮತ್ತೆ ಬೆಂಗಳೂರಿಗೆ... ಮರಳಿ ಕೆಲಸಕ್ಕೆ ಪ್ರಯತ್ನ... ಸಿರಿ ಪತ್ರಿಕೆಯಲ್ಲಿ ಸಂಪಾದಕನಾಗಿ ಕೆಲಸಕ್ಕೆ ಆಹ್ವಾನ. ಸಿಕ್ಕಿದ್ದು ಸವಿ ಎನ್ನುವಂತೆ ಕೆಲಸಕ್ಕೆ ಹಾಜರು. ಅಲ್ಲಿಂದ ಮತ್ತೆ ಬರವಣಿಗೆ ಪ್ರಾರಂಭ... 2015 ಎಪ್ರೀಲ್ 19 ರಂದು ಮೊದಲ ಕವನ ಸಂಕಲನ 'ಮಡಕೆ ಮಾರುವ ಹುಡುಗ' ಲೋಕಾರ್ಪಣೆ... ಮೊನ್ನೆ ಮೊನ್ನೆ ಅಂದರೆ 25 ನವೆಂಬರ್ 2016 ರಂದು ನನ್ನೂರ ಭಾಷೆ ಕುಂದಾಪ್ರ ಕನ್ನಡದಲ್ಲಿ "ಗಂಡ್ ಹಡಿ ಗಂಡ್" ಆಲ್ಭಮ್ ಸಾಂಗ್ ರಿಲೀಸ್...ಒಂಥರಾ ಬದುಕು ಸುಂದರವಾಗಿದೆ. ಇದೀಗ ಮತ್ತೆ ಹೊಸ ಹೊಸ ಪ್ರಯೋಗಗಳೆನ್ನುವಂತೆ ಡಾಕ್ಯುಮೆಂಟರಿಗಳನ್ನು ಮಾಡುವ ಹುಚ್ಚುತನ...ಯೋಚನೆ ಬಹಳ ಇದೆ... ಅಪ್ಪ-ಅಮ್ಮ ಅಣ್ಣಂದಿರೇ ಬೆಂಬಲದ ಸ್ಫೂರ್ತಿ. ಜೊತೆಗೆ ಚಂದದ ಗೆಳೆಯ ಗೆಳತಿಯರ ಪ್ರೋತ್ಸಾಹ... ಪ್ರತಿಯೊಬ್ಬರಿಗೂ ಜೀವನದಲ್ಲಿ ನೀಡಬೇಕಾದ ಅತ್ಯಮೂಲ್ಯ ವಂದನೆಯಂತೂ ಮನದಲ್ಲಿದೆ. ಅದಕ್ಕಾಗಿ ಒಳ್ಳೆ ಸಮಯಕ್ಕಾಗಿ ಕಾಯುತ್ತಿರುವ ಮುದ್ದಾದ ಮನಸ್ಸಿದೆ. ಅನ್ನ ಹಾಕಿ ಬೆಳೆಸಿದವರ ಋಣವಿದೆ...ಜೀವನ ಹೊಸ ಹೊಸ ದಾರಿಯನ್ನು ದಿನವೂ ಹುಡುಕುತ್ತಿದೆ..ಅಲ್ಲಲ್ಲಿ ಅಭಿಮಾನಿಗಳು ಇದ್ದಾರೆ, ರೊಚ್ಚಿಗೆದ್ದ ವೈರಿಗಳು ಇದ್ದಾರೆ... ಬದುಕು ಸಾಗುತ್ತಿದೆ.. ಏನಾದರೂ ಸಾಧಿಸಬೇಕೆಂಬ ಛಲವಿದೆ... ಭಾನು ನಕ್ಷತ್ರ ತೋರಿಸುತ್ತದೆ.., ನಕ್ಷತ್ರ ಸ್ಟಾರ್ ಆಗು ಎಂದೇಳುತ್ತದೆ.. ಪ್ರೀತಿಯಿದೆ...ಪಯಣವಿದೆ... ನಿಮ್ಮೆಲ್ಲರಿಗೂ ಮನದಲ್ಲಿ ವಂದನೆಯಿದೆ... Follow in Face Book: Sandeep shetty heggadde OR YouTube: www.youtube.com/c/sandeepShettyHeggadde

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅವನಿ
    10 அக்டோபர் 2019
    ತುಂಬಾ ಚೆನ್ನಾಗಿದೆ.ಇದನ್ನು ಓದಿದಾಗ ನಾ ಕಂಡ ಅದೇ ಕೆಟ್ಟ ಕನಸೊಂದು ನನ್ನ ಕಣ್ಣ ಮುಂದೆ ಹಾದುಹೋದಂತಾಗಿತ್ತು ಮತ್ತೆ ನನ್ನನ್ನ ನಡುಗಿಸಿತ್ತು. ಕನಸೆಂದರೆ ಭಯವಾಗುವಷ್ಟು. ಒಳ್ಳೆಯ ತಂದೆ ತಾಯಿಯರ ಆರೈಕೆಯಲ್ಲಿ ಬೆಳೆಯುತ್ತಿರುವ ನಾವೇ ಅದೃಷ್ಟವಂತರು. ಈ ಭಾಗ್ಯ ಎಲ್ಲರಿಗೂ ದೊರೆಯೋದಿಲ್ಲ. ಅಪ್ಪ ಎಂದರೆ ಪ್ರೀತಿ,ಗೌರವ ಹೆಚ್ಚು. ಆದರೆ ಅಪ್ಪನ ಮುಂದೆ ಕೆಲವು ಬಾರಿ ಮಾತು ಹೊರಡಲು ಕಷ್ಟವಾದಾಗ ಅದು ಅಮ್ಮನ ಮುಂದೆ ಸಲೀಸಾಗಿ ಹೊರಬಂದಿರತ್ತೆ. ಅಮ್ಮ ಅಂದರೆ ಅಷ್ಟೇ ಸಲುಗೆ ನಮಗೆ. ಅವರ ಜೊತೆಗೆ ಹೆಚ್ಚು ಜಗಳವಾಡಬೇಕು ಅನ್ನಿಸತ್ತೆ,ಮತ್ತೆ ನಾನಾಗಿಯೇ ಅವರಿಗೆ ಸಮಾಧಾನ ಮಾಡುವಾಗ ಅವರ ಮುಖದಲ್ಲಿ ಮೂಡುವ ಮಂದಹಾಸ ಎಲ್ಲದನ್ನು ಮರೆಸತ್ತೆ. ಅಮ್ಮ ಎಂದರೆ ತ್ಯಾಗಮಯಿ, ಕರುಣಾಮಯಿ ಮಮತೆ ವಾತ್ಸಲ್ಯಗಳ ಕಣಜ ಹೀಗೆ ಅಮ್ಮನ ಬಗ್ಗೆ ಮಾತಾಡಲು ಪದಪುಂಜಗಳೇ ಸಾಲದು ಈ ಜನ್ಮಕ್ಕೆ. ಅವರು ನಮಗೆ ಏನೇ ಹೇಳಿದರು ಅದು ನಮ್ಮ ಒಳಿತಿಗೆ.ನಾನು ಅವರ ಬೆಲೆ ಅರಿತಿದ್ದು ಅವರಿಂದ ಕೆಲ ಕಾಲ ದೂರವಿದ್ದಾಗ.ಅಂದಿನಿಂದ ನನ್ನ ತಪ್ಪಿನ ಅರಿವಾಗಿ ಅವರ ಮನಸ್ಸಿಗೆ ನೋವಾಗೊ ಕೆಲಸ ಮಾಡುತ್ತಿಲ್ಲ ಅನ್ನೋದೇ ಖುಷಿ.ಅವರು ನಮ್ಮಿಂದ ಹೆಚ್ಚೇನೂ ನಿರೀಕ್ಷಿಸರು .ನಾವು ಸರಿಯಾದ ರೀತಿಯಲ್ಲಿ ಬಾಳಿ ಬದುಕಬೇಕೆಂಬದು ಅವರ ಆಸೆ. ಹಾಗೆಯೇ ನಾವು ಸಹ ಅವರನ್ನು ಖುಷಿಯಿಂದಿಡುವ ಕೆಲಸ ಮಾಡಬೇಕು.ಅವರ ತ್ಯಾಗದ ಮುಂದೆ ನಾವೇನೇ ಮಾಡಿದರು ತೃಣಕ್ಕೆ ಸಮ ಅನ್ನೋದು ನನ್ನ ಅಭಿಪ್ರಾಯ.
  • author
    Sneha Dev
    18 மே 2021
    nija nivu helidu amma andre enu anta helali padave illa avalu illadagle aval bagge tiliyodu .adre tilidaga bittu bahala doora hogirittare
  • author
    Rashmi RK
    11 நவம்பர் 2016
    Missing my mother very badly.... Am always fighting with her for silly matter... Nw I understood she tolerated me