ಕಲ್ಪತರು ನಾಡು ತುಮಕೂರಿನವಳಾದ ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನ ಸಮೀಪದ ನೆಲಮಂಗಲ. ಚಿಕ್ಕಂದಿನಿಂದ ಓದುವ ಹುಚ್ಚಿದ್ದ. ನನಗೆ ಆಗಲೆ ದಿನಕ್ಕೊಂದು ಕಾದಂಬರಿ ಓದುತ್ತಿದ್ದೆ. ಪೂರ್ಣಚಂದ್ರ ತೇಜಸ್ವಿಯವರು ನನ್ನ ನೆಚ್ಚಿನ ಬರಹಗಾರರು. ಅವರ ನರಭಕ್ಷಕ ಸಿರೀಸ್ ಗಳು ನನಗೆ ಓದುವ ಹುಚ್ಚು ಹಿಡಿಸಿತು. ಈ ನಡುವೆ ಸುಮಾರು ನಾಲ್ಕು ವರ್ಷ ಓದಿನಿಂದ ದೂರ ಇದ್ದ ನನಗೆ ಈಗ ಪ್ರಾಣಸಖಿಯಾಗಿರುವುದು ಪ್ರತಿಲಿಪಿ. ಓದಲು ಸಾಗರವಷ್ಟೇ ಆಗಿದ್ದ ನನ್ನ ಪ್ರತಿಲಿಪಿ ಈಗ ನನ್ನ ಬರೆಯಬೇಕೆಂಬ ಕನಸಿಗೆ ನೀರೆರೆಯುತ್ತಿದೆ. ನನ್ನ ಬರವಣಿಗೆಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟ ಪ್ರತಿಲಿಪಿಗೆ ನನ್ನ ಅನಂತನಂತ ಧನ್ಯವಾದಗಳು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ