→ ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಅಥವಾ ಹೊಂದಿರದ ಎಲ್ಲಾ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
→ ನಿಮ್ಮ ಧಾರಾವಾಹಿಯಲ್ಲಿ ಮುನ್ನುಡಿ, ಪಾತ್ರ ಪರಿಚಯ ಮತ್ತು ಹೆಚ್ಚುವರಿ ಟಿಪ್ಪಣಿಗಳನ್ನು ಪ್ರತ್ಯೇಕ ಅಧ್ಯಾಯಗಳಾಗಿ ಪ್ರಕಟಿಸುವುದನ್ನು ತಪ್ಪಿಸುವುದು ಏಕೆ ಉತ್ತಮ ಎಂಬುದು ಇಲ್ಲಿದೆ:
(1) ರೀಡರ್ ಎಂಗೇಜ್‌ಮೆಂಟ್: ಮುಖ್ಯ ಕಥೆಯು ಮೊದಲ ಅಧ್ಯಾಯದಲ್ಲಿ ತಕ್ಷಣವೇ ಪ್ರಾರಂಭವಾಗಬೇಕೆಂದು ಓದುಗರು ನಿರೀಕ್ಷಿಸುತ್ತಾರೆ. ಧಾರಾವಾಹಿಯ ಭಾಗವಾಗಿ ಅಗತ್ಯವಿಲ್ಲದ ವಿಷಯವನ್ನು ಪ್ರಕಟಿಸುವುದರಿಂದ ಕಥೆಯನ್ನು ಓದುವ ಆಸಕ್ತಿಯನ್ನು ಓದುಗರು ಕಳೆದುಕೊಳ್ಳಬಹುದು.
(2) ಸಲಹೆ: ನೀವು ಬಯಸಿದರೆ ನಿಮ್ಮ ಮೊದಲ ಅಧ್ಯಾಯವನ್ನು 4-5 ಸಾಲುಗಳ ಮುನ್ನುಡಿ ಅಥವಾ ಪರಿಚಯದೊಂದಿಗೆ ಪ್ರಾರಂಭಿಸಬಹುದು, ನಂತರ ನಿಮ್ಮ ಓದುಗರನ್ನು ಸೆಳೆಯಲು ನಿಮ್ಮ ಕಥೆಯ ಮೊದಲ ದೃಶ್ಯವನ್ನು ನೇರವಾಗಿ ಪ್ರಾರಂಭಿಸಿ.
→ ನೀವು ಹೊಸ ಧಾರಾವಾಹಿಯನ್ನು ರಚಿಸುವಾಗ ಮೊದಲ 15 ಅಧ್ಯಾಯಗಳು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸಲ್ಪಡುವುದಿಲ್ಲ ಅಂದರೆ ಲಾಕ್ ಆಗುವುದಿಲ್ಲ. 16 ನೆಯ ಅಧ್ಯಾಯ ಪ್ರಕಟಗೊಂಡಾಗ ನಿಮ್ಮ ಧಾರಾವಾಹಿ ತಾನಾಗಿಯೇ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸಲ್ಪಡುತ್ತದೆ. ಮೊದಲ 15 ಅಧ್ಯಾಯಗಳು ಪ್ರಕಟಗೊಂಡಾಗ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಆಯ್ಕೆ ನಿಮಗೆ ಕಾಣಿಸುವುದಿಲ್ಲ. 16 ನೆಯ ಅಧ್ಯಾಯದ ನಂತರ ನಿಮಗೆ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಆಯ್ಕೆ ಕಾಣಿಸುತ್ತದೆ. 16 ನೆಯ ಅಧ್ಯಾಯದಿಂದ ಎಲ್ಲಾ ಅಧ್ಯಾಯಗಳು ಲಾಕ್ ಆಗಲ್ಪಡುತ್ತವೆ ಮತ್ತು ಶಾಶ್ವತವಾಗಿ ಪ್ರತಿಲಿಪಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತವೆ. ಪ್ರೀಮಿಯಂ ಚಂದಾದಾರಿಕೆ, ನಾಣ್ಯಗಳನ್ನು ನೀಡುವಿಕೆ ಅಥವಾ ಮರುದಿನದವರೆಗೆ ಕಾಯುವುದರ ಮೂಲಕ ಓದುಗರು ನಿಮ್ಮ ಧಾರಾವಾಹಿಯ ಅಧ್ಯಾಯಗಳನ್ನು ಅನ್ಲಾಕ್ ಮಾಡಲು ಸಾಧ್ಯವಾಗುತ್ತದೆ.
→ ನೀವು ಗೋಲ್ಡನ್ ಬ್ಯಾಡ್ಜ್ ಹೊಂದಿಲ್ಲದಿದ್ದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಯನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸಬಹುದು. ಸ್ಪರ್ಧೆಗೆ ಕೃತಿಯನ್ನು ಕಳುಹಿಸುವ ಅಂತಿಮ ದಿನಾಂಕದೊಳಗೆ ನೀವು ನಿಮ್ಮ ಪ್ರೊಫೈಲ್ ನಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆದರೆ ನಿಮ್ಮ ಕೃತಿ 15 ಅಧ್ಯಾಯಗಳ ನಂತರ ಸ್ವಯಂಚಾಲಿತವಾಗಿ ಪ್ರತಿಲಿಪಿ ಪ್ರೀಮಿಯಂ’ಅನ್ನು ಸೇರುತ್ತದೆ. ಅಕಸ್ಮಾತ್ ನೀವು ಗೋಲ್ಡನ್ ಬ್ಯಾಡ್ಜ್ ಪಡೆಯದಿದ್ದರೂ ಕೃತಿಯು ಸ್ಪರ್ಧೆಗೆ ಪರಿಗಣಿಸಲ್ಪಡುತ್ತದೆ.
→ ಸ್ಪರ್ಧೆಗೆ ಕೃತಿಯನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸಲು ಪ್ರಾರಂಭಿಸಿದ ಬಳಿಕ, ನೀವು ನಿಮ್ಮ ಪ್ರೊಫೈಲ್ ನಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿದಲ್ಲಿ; ಮತ್ತು ಆ ಬಳಿಕವೂ ನಿಮ್ಮ ಕೃತಿ ಸ್ವಯಂಚಾಲಿತವಾಗಿ ಸಬ್ಸ್ಕ್ರಿಪ್ಷನ್ ವಿಭಾಗಕ್ಕೆ ಸೇರ್ಪಡೆಯಾಗದಿದ್ದರೆ, 16 ನೆಯ ಅಧ್ಯಾಯದ ನಂತರ ನೀವು ಈ ಕೆಳಗಿನ ವಿಧಾನವನ್ನು ಅನುಸರಿಸುವುದರ ಮೂಲಕ ಕೃತಿಯನ್ನು ಪ್ರೀಮಿಯಂಗೆ ಸೇರಿಸಬಹುದು:
1: ಪ್ರತಿಲಿಪಿ ಅಪ್ಲಿಕೇಶನ್ನಿನ ಹೋಂ ಪೇಜಿನಲ್ಲಿ ಕಾಣುವ ‘ಬರೆಯಿರಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2: ನಿಮ್ಮ ಕೃತಿಯನ್ನು ಎಡಿಟ್ ಮಾಡುವಲ್ಲಿಗೆ ಹೋಗಿ, ‘ಇತರೆ ಮಾಹಿಗಳನ್ನು ಎಡಿಟ್ ಮಾಡಿ’ ಎನ್ನುವಲ್ಲಿಗೆ ಹೋಗಿ;
3: ‘ಸಬ್ಸ್ಕ್ರಿಪ್ಷನ್ ಸೌಲಭ್ಯಕ್ಕೆ ಸೇರಿಸಿ’ ಎಂಬಲ್ಲಿ ‘ಹೌದು’ ಎಂದು ಆಯ್ಕೆ ಮಾಡಿ. ನಿಮ್ಮ ಕೃತಿ 24 ಗಂಟೆಗಳಲ್ಲಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತದೆ.
→ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಸಾಹಿತಿಯಾಗಲು ಎರಡು ಮಾನದಂಡಗಳಿವೆ:
1. ನೀವು ಕನಿಷ್ಠ 200 ಹಿಂಬಾಲಕರನ್ನು ಹೊಂದಿರಬೇಕು. ನಂತರ;
2. ನೀವು ಹಿಂದಿನ 30 ದಿನಗಳಲ್ಲಿ ಕನಿಷ್ಠ 5 ಬರಹಗಳನ್ನು ಪ್ರಕಟಿಸರಬೇಕು.
→ ನಿಮ್ಮ ಕೃತಿ ಸ್ಪರ್ಧೆಗೆ ಪರಿಗಣಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು:
(1) ಸ್ಪರ್ಧೆಯ ಕಾಲಾವಧಿಯ ಒಳಗೆ ನಿಮ್ಮ ಧಾರಾವಾಹಿಯ ಎಲ್ಲಾ ಅಧ್ಯಾಯಗಳನ್ನು ಪ್ರಕಟಿಸಬೇಕು: ಸ್ಪರ್ಧೆಯ ಪ್ರಾರಂಭ ಮತ್ತು ಮುಕ್ತಾಯದ ದಿನಾಂಕದೊಳಗೆ ನಿಮ್ಮ ಧಾರಾವಾಹಿಯ ಎಲ್ಲಾ ಅಧ್ಯಾಯಗಳು ಎಲ್ಲ ನಿಯಮಗಳನ್ನು ಪಾಲಿಸಿ ಪ್ರಕಟಗೊಂಡು, ಪೂರ್ಣಗೊಂಡಿರಬೇಕು.
→ ಪ್ರತಿ ಅಧ್ಯಾಯ ಕನಿಷ್ಠ 1000 ಪದಗಳನ್ನು ಹೊಂದಿರಬೇಕು. ಗರಿಷ್ಠ ಪದಸಂಖ್ಯೆಗೆ ಯಾವುದೇ ಮಿತಿಯಿಲ್ಲ.
(2) ಸ್ಪರ್ಧೆಯ ಪ್ರಭೇದವನ್ನು ಆಯ್ಕೆ ಮಾಡಬೇಕು: ನಿಮ್ಮ ಕೃತಿಯನ್ನು ಪ್ರಕಟಿಸುವಾಗ ಸ್ಪರ್ಧೆಯ ಪ್ರಭೇದ ‘ಸೂಪರ್ ಸಾಹಿತಿ- 10’ನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು.
(3) ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಸ್ಪರ್ಧೆಯ ವಿವರಗಳಲ್ಲಿ ನೀಡಿರುವ ಎಲ್ಲಾ ಮಾಹಿತಿಗಳನ್ನು, ನಿಯಮಗಳನ್ನು ಗಮನವಿಟ್ಟು ಓದಿ, ಅರ್ಥೈಸಿಕೊಂಡು ಎಲ್ಲಾ ನಿಯಮಗಳನ್ನು ಪಾಲಿಸಿ ನಿಮ್ಮ ಕೃತಿಯನ್ನು ಪ್ರಕಟಿಸಬೇಕು.
→ ಸ್ಪರ್ಧೆಯ ಮುಕ್ತಾಯದ ದಿನದ ನಂತರ, ಸ್ಪರ್ಧೆಯ ಪ್ರಭೇದದ ಅಡಿಯಲ್ಲಿ ಪ್ರಕಟಿಸಲ್ಪಟ್ಟ ಎಲ್ಲಾ ಕೃತಿಗಳನ್ನು ನಮ್ಮ ತಂಡ ನಮ್ಮ ಸಿಸ್ಟಂ ಸಹಾಯದಿಂದ ಸಂಗ್ರಹಿಸುತ್ತದೆ. ಸಲ್ಲಿಸಲ್ಪಟ್ಟ ಕೃತಿಗಳ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿರುವುದರ ಬಗ್ಗೆ ನಮ್ಮ ತಂಡ ಪರಿಶೀಲಿಸುತ್ತದೆ.
→ ನಂತರ ನಮ್ಮ ನಿರ್ಣಾಯಕರ ಹಾಗೂ ಸಂಪಾದಕರ ತಂಡ ಕೃತಿಯನ್ನು ಓದಿ; ಭಾಷೆ, ವ್ಯಾಕರಣ, ಕಥಾವಸ್ತು, ಕಥಾಹಂದರ, ಸೃಜನಶೀಲತೆ ಮುಂತಾದ ಮಾನದಂಡಗಳನ್ನು ಆಧರಿಸಿ ವಿಜೇತ ಕೃತಿಗಳನ್ನು ಆಯ್ಕೆ ಮಾಡುತ್ತದೆ.
→ ಖಂಡಿತ, ನೀವು ಈಗಾಗಲೇ ಪ್ರತಿಲಿಪಿಯಲ್ಲಿ ಪ್ರಕಟಿಸಿರುವ ಯಾವುದೇ ಕತೆಯ ಮುಂದಿನ ಸೀಸನ್’ಅನ್ನು ಸ್ಪರ್ಧೆಗಾಗಿ ಪ್ರಕಟಿಸಬಹುದು. ಈಗಾಗಲೇ ಜನಪ್ರಿಯವಾಗಿರುವ ನಿಮ್ಮ ಕತೆಯ ಮುಂದಿನ ಸೀಸನ್’ಅನ್ನು ಪ್ರಕಟಿಸುವುದು ಉತ್ತಮ ಯೋಚನೆ. ಆದರೆ ನಿಮ್ಮ ಪ್ರಸ್ತುತ ಕೃತಿ ಹಿಂದಿನ ಕೃತಿಯ ಮೇಲೆಯೇ ಹೆಚ್ಚು ಅವಲಂಬಿತವಾಗಿರದಂತೆ ನೋಡಿಕೊಳ್ಳುವುದು ಉತ್ತಮ; ಸಾಧ್ಯವಾದಷ್ಟು ತೀರ್ಪುಗಾರರಿಗೆ ಸ್ಪರ್ಧೆಗೆ ಸಲ್ಲಿಸಿರುವ ಕೃತಿಗಳನ್ನು ಓದಿ, ಪರಿಶೀಲಿಸಲು, ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು.
→ ಒಂದು ಕೃತಿ ಒಂದೇ ಸ್ಪರ್ಧೆಗಾಗಿ! ಪ್ರತಿಯೊಂದು ಸ್ಪರ್ಧೆಯ ಉದ್ದೇಶ, ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಹಾಗಾಗಿ ಒಂದು ಕೃತಿಯನ್ನು ಒಂದೇ ಸ್ಪರ್ಧೆಗಾಗಿ ಸಲ್ಲಿಸಬೇಕು. ಒಂದೇ ಕೃತಿಯನ್ನು ಬೇರೆ ಬೇರೆ ಸ್ಪರ್ಧೆಗಳಿಗೆ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.
→ ನೀವು ಸ್ಪರ್ಧೆಯ ಫಲಿತಾಂಶದ ವಿವರಗಳನ್ನು ‘ಬ್ಲಾಗ್’ ವಿಭಾಗದಲ್ಲಿ ನೋಡಬಹುದು. ಸ್ಪರ್ಧೆಯ ಫಲಿತಾಂಶಗಳು ಆಯಾ ಸ್ಪರ್ಧೆಯ ವಿವರಗಳಲ್ಲಿ ತಿಳಿಸುವ ದಿನಾಂಕದಂದು ಬ್ಲಾಗ್ ವಿಭಾಗದಲ್ಲಿ ಪ್ರಕಟಗೊಳ್ಳುತ್ತವೆ.
ಬ್ಲಾಗ್ ವಿಭಾಗಕ್ಕೆ ಹೋಗಲು-
1. ಪ್ರತಿಲಿಪಿಯ ಹೋಂ ಪೇಜ್'ನಲ್ಲಿ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2. ಆ ಪುಟದ ಕೆಳಗೆ ಅಂಕಿಅಂಶಗಳು, ಅಗ್ರಮಾನ್ಯ ಸಾಹಿತಿಗಳು ಆಯ್ಕೆಯ ಜೊತೆಗೆ ಬ್ಲಾಗ್ ವಿಭಾಗವನ್ನೂ ಕಾಣಬಹುದು.
3. ಬ್ಲಾಗ್ ವಿಭಾಗಕ್ಕೆ ಹೋಗಿ ಸ್ಪರ್ಧೆಯ ಫಲಿತಾಂಶವನ್ನು ವೀಕ್ಷಿಸಬಹುದು.
=> ಪ್ರತಿಲಿಪಿಯಲ್ಲಿ ಧಾರಾವಾಹಿಯನ್ನು ರಚಿಸುವ ವಿಧಾನವನ್ನು ಹಂತ ಹಂತವಾಗಿ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: ಸ್ವಪ್ರಕಾಶನ ಮಾರ್ಗದರ್ಶಿ
=> ನಿಮ್ಮ ಕೃತಿಯನ್ನು ರಚಿಸಲು ಟ್ರೆಂಡಿಂಗ್ ಕಥಾಹಂದರಗಳು, ಪಾತ್ರ ಪೋಷಣೆಗೆ ಅಗತ್ಯವಿರುವ ಮಾಹಿತಿಗಳು, ಇತರೆ ಸಂಪನ್ಮೂಲಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:
ನಿಮಗಾಗಿ ಕೆಲವು ಸಲಹೆಗಳು : ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಗೆ ಅದ್ಭುತ ಕೃತಿಗಳನ್ನು ರಚಿಸಿ!
ನೀವು ಯಾವುದೇ ಸಮಸ್ಯೆ, ಅನುಮಾನಗಳನ್ನು ಹೊಂದಿದ್ದಲ್ಲಿ [email protected] ಗೆ ಈಮೇಲ್ ಕಳುಹಿಸಿ. ನಮ್ಮ ತಂಡ 24 ಗಂಟೆಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಲು ಪ್ರಯತ್ನಿಸುತ್ತದೆ.
ಸಾವಿರಾರು ಲೇಖಕರು ಈಗಾಗಲೇ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಕೃತಿಗಳ ಪ್ರಕಟಣೆಯ ಮೂಲಕ ಯಶಸ್ಸನ್ನು ಕಂಡುಕೊಂಡಿದ್ದಾರೆ, ತಮ್ಮ ಪ್ರತಿಭೆಯನ್ನು ಆಕರ್ಷಕ ಕಥೆಗಳಾಗಿ ಪರಿವರ್ತಿಸಿ ಆ ಮೂಲಕ ಪ್ರತಿ ತಿಂಗಳೂ ಆದಾಯವನ್ನು ಗಳಿಸುತ್ತಿದ್ದಾರೆ. ನೀವೂ ಅವರೊಳಗೊಬ್ಬರಾಗಲು ಇಲ್ಲಿದೆ ಅವಕಾಶ! ಸ್ಪರ್ಧೆಯಲ್ಲಿ ಭಾಗವಹಿಸಿ ಸಾಹಿತ್ಯ ಲೋಕದಲ್ಲಿ ನಿಮ್ಮದೇ ಛಾಪು ಮೂಡಿಸುವ ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ!
ಶುಭವಾಗಲಿ!
ಪ್ರತಿಲಿಪಿ ಸ್ಪರ್ಧಾ ವಿಭಾಗ