pratilipi-logo ಪ್ರತಿಲಿಪಿ
ಕನ್ನಡ

‘ಸೂಪರ್ ಸಾಹಿತಿ ಅವಾರ್ಡ್ಸ್ 5’ ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ

30 ಸೆಪ್ಟೆಂಬರ್ 2023

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಬಹು ನಿರೀಕ್ಷಿತ ‘ಸೂಪರ್ ಸಾಹಿತಿ ಅವಾರ್ಡ್ಸ್ 5’ ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ!

ಹಿಂದಿನ ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಬರಹಗಾರರಿಂದ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ನವ ಬರಹಗಾರರು ಗೋಲ್ಡನ್ ಬ್ಯಾಡ್ಜ್ ಪಡೆದು, ಈ ಸ್ಪರ್ಧೆಯಲ್ಲಿ ಭಾಗವಹಿಸಿ 60+ ಅಧ್ಯಾಯಗಳ ಧಾರಾವಾಹಿ ರಚಿಸಿರುವುದನ್ನು ನಾವು ಗಮನಿಸಿದ್ದೇವೆ.

 

ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ.

 

ಸ್ಪರ್ಧೆಯಲ್ಲಿ ವಿಜೇತ ಸಾಹಿತಿಗಳಾಗಿ ಗುರುತಿಸಿಕೊಂಡು, ಉತ್ತಮ ಕೃತಿಗಳನ್ನು ರಚಿಸಿರುವ ಸೂಪರ್ ಸಾಹಿತಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ. ನಿಮ್ಮ ಸಾಹಿತ್ಯ ಕೃಷಿ ಇನ್ನಷ್ಟು ಉತ್ತಮ ರೀತಿಯಲ್ಲಿ ಮುಂದುವರೆದು ಕನ್ನಡ ಸಾಹಿತ್ಯಕ್ಕೆ ನಿಮ್ಮಿಂದ ಅತ್ಯುತ್ತಮ ಕೃತಿಗಳು ಪ್ರತಿಲಿಪಿಯ ಮೂಲಕ ಸಿಗುವಂತಾಗಲಿ ಎಂದು ಆಶಿಸುತ್ತೇವೆ. 

 

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಪರಿಶ್ರಮದಿಂದ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶ ಕಂಡು ಮುಕ್ತಾಯಗೊಂಡಿದೆ. ಪ್ರತಿಭಾವಂತ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. 

 

ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಕತೆಗಳನ್ನು ತೀರ್ಪುಗಾರರು ಓದಿ, ವಿಶ್ಲೇಷಿಸಿ ಅವುಗಳಲ್ಲಿ ಉತ್ತಮವಾದ ಕೃತಿಗಳನ್ನು ಆಯ್ಕೆ ಮಾಡಿದ್ದಾರೆ. ವಿಜೇತ ಕೃತಿಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು-

 

ವಿಜೇತ ಕೃತಿಗಳ ವಿವರ:

 

ಪ್ರಥಮ ಬಹುಮಾನ: 10,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಪುಷ್ಕರಿಣಿ ಅವರ ಆರೋಕ್ಷ

 

ಕತೆಯ ಕುರಿತು: ದೇಶ ವಿರೋಧಿ ಚಟುವಟಿಕೆಗಳನ್ನು ಬೇಧಿಸುವ ಕರ್ತವ್ಯನಿರತ ಕಥಾನಾಯಕಿ ಅದರ ಜಾಲದೊಳಗೆ ತನಗೇ ತಿಳಿಯದಂತೆ ಸಿಕ್ಕಿಬಿದ್ದು, ಅದರಿಂದ ಹೊರಬರುವಾಗ ಅನಾವರಣವಾಗುವ ಹಲವು ಸತ್ಯಗಳನ್ನು ಕತೆ ತೆರೆದಿಡುತ್ತ ಸಾಗುತ್ತದೆ. ಕಥಾಹಂದರ, ನಿರೂಪಣೆ, ಭಾಷೆ ಎಲ್ಲವೂ ಉತ್ತಮವಾಗಿದ್ದು, ಪ್ರತಿ ಹಂತದಲ್ಲಿ ಓದುಗರಲ್ಲಿ ಕುತೂಹಲ ಹುಟ್ಟಿಸಲು ಈ ಕತೆ ಸಫಲವಾಗುತ್ತದೆ.

 

ದ್ವಿತೀಯ ಬಹುಮಾನ: 7000 ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಜ್ಯೋತಿ ಬಾಳಿಗಾ ಅವರ ವಿಧಿಯಾಟವನ್ನು ಬಲ್ಲವರು ಯಾರು?

 

ಕತೆಯ ಕುರಿತು: ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯ ಕೂಡ ಮನುಷ್ಯನಿಗೆ ಬಹಳ ಮುಖ್ಯ. ಬಹಳ ಬಾರಿ ನಮ್ಮ ಸುತ್ತಲಿನ ಪರಿಸರ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ; ಇನ್ನು ಕೆಲವು ಬಾರಿ ವ್ಯಕ್ತಿಗತವಾಗಿ ಬರುತ್ತವೆ. ಅದಕ್ಕಾಗಿ ಪೋಷಕರ, ಪಾಲಕರ, ಸುತ್ತಲಿನವರ ಸಹಕಾರ ಎಷ್ಟು ಅಗತ್ಯ ಎಂಬುದನ್ನು ಕತೆ ಸಾರುತ್ತದೆ. ಉತ್ತಮ ಸಂದೇಶವುಳ್ಳ ಮಾಹಿತಿಯುಕ್ತ ಕಥಾಹಂದರದಿಂದ ಕತೆ ಓದುಗರ ಮನಸ್ಸನ್ನು ತಲುಪುತ್ತದೆ. 

 

ತೃತೀಯ ಬಹುಮಾನ: 4000 ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಶ್ವೇತಾ ಹೆಗಡೆ ಅವರ ಹೃದಯ ನಾರಂಗಿ

 

ಕತೆಯ ಕುರಿತು: ತನ್ನದಲ್ಲದ ತನ್ನ ಮಗುವೊಂದನ್ನು ಸಲಹುವ ತಾಯಿಯೊಬ್ಬಳ ಕತೆ. ಕಳೆದುಕೊಂಡ ತನ್ನ ಒಲವನ್ನು ಜೀವನದ ದಾರಿಯಲ್ಲಿ ಎದುರಿಸಿದಾಗ ಉಂಟಾಗುವ ತಳಮಳಗಳು, ಭಾವತಲ್ಲಣಗಳು, ಗತದ ರಹಸ್ಯಗಳು ಇವೆಲ್ಲವನ್ನು ಹದವಾಗಿ ಬೆರೆಸಿ ಕತೆಯನ್ನು ರಚಿಸಲಾಗಿದೆ. ಉತ್ತಮ ನಿರೂಪಣೆಯೊಂದಿಗೆ ಕತೆ ಓದುಗನ ಮನಸ್ಸಿನಲ್ಲಿ ಜಾಗ ಪಡೆಯುತ್ತದೆ.

 

ನಾಲ್ಕನೆಯ ಬಹುಮಾನ: 2000 ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಬನಶಂಕರಿ ಕುಲಕರ್ಣಿ ಅವರ ಭಾರ್ಯ ರೂಪವತಿ ಶತೃ

 

ಕತೆಯ ಕುರಿತು: ಸ್ಕ್ರಿಜೋಫ್ರೀನಿಯಾ ಖಾಯಿಲೆ ಒಂದು ಕುಟುಂಬದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂಬ ಕಥಾಹಂದರವನ್ನು ಹೊಂದಿರುವ ಈ ಕತೆ ಪ್ರತಿಯೊಂದು ಪಾತ್ರಗಳ ಭಾವನೆಗಳು, ಮನಸ್ಥಿತಿಯ ಚಿತ್ರಣವನ್ನು ಓದುಗನ ಮನಸ್ಸಿನಲ್ಲಿ ಚಿತ್ರಿಸುವ ಕಾಯಕವನ್ನು ಮಾಡುತ್ತದೆ. ಮಹಿಳೆಯರು ಎದುರಿಸುವ ಕೌಟುಂಬಿಕ ಸಮಸ್ಯೆ, ನೋವುಗಳನ್ನು ಬಿಚ್ಚಿಡುವ ಕತೆ ಉತ್ತಮವಾಗಿ ಮೂಡಿಬಂದಿದೆ.

 

ಐದನೆಯ ಬಹುಮಾನ: 2000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಶ್ರುವಿ ಅವರ ರಾಗ.. ಡಾನ್ಸ್ ಆಫ್ ಡಿಸೈರ್!

 

ಕತೆಯ ಕುರಿತು: ಮನುಷ್ಯರ ಚಂಚಲ ಮನಸ್ಸಿನ ಮುಖಗಳನ್ನು ಪರಿಚಯಿಸುತ್ತಾ ಸಾಗುವ ಕತೆಯಿದು. ಪಾತ್ರಚಿತ್ರಣ, ಕತೆಯ ಶೀರ್ಷಿಕೆ, ನಿರೂಪಣೆಯ ಮೂಲಕ ಓದುಗರ ಗಮನ ಸೆಳೆಯುತ್ತದೆ. ‘ರಾಗ- ದ್ವೇಷಗಳು’ ಎಂಬ ಶಬ್ದಪುಂಜದ ಆಧಾರಿತವಾಗಿ ರಚಿತವಾದ ಕತೆ, ಕೊನೆಯವರೆಗೂ ಓದುಗರ ಕುತೂಹಲ ತಣಿಸುತ್ತಾ ಉತ್ತಮವಾಗಿ ಮೂಡಿಬಂದಿದೆ.

 

ಆರನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಶಿವಶಂಕರ್ ಎಸ್ ಜಿ ಅವರ ನೆರಳು!! 

 

ಏಳನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ವೀಣಾ ಅವರ ಎಲ್ಲಿ ಮರೆಯಾದೆ? ಏಕೆ ದೂರಾದೆ?

 

ಎಂಟನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಸವಿ ಹೆಬ್ಬಾರ ಅವರ ಸರ್ಪಮಂದಿರವಂತೆ ಕಂಪಿನೊಡಲು...

 

ಒಂಬತ್ತನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಪ್ರಸನ್ನಾ ಚೆಕ್ಕೆಮನೆ ಅವರ ಹೃದಯ ಮುರಳಿ ಮಿಡಿದ ರಾಗ

 

ಹತ್ತನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ರಿತು ಅವರ ಸರ್ವಮಂಗಳ ಮಾಂಗಲ್ಯೆ

 

ಹನ್ನೊಂದನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ರಂಗವಲ್ಲಿಸುತೆ ಅವರ ಮನೋಯುಜ್ಯತೆ

 

ಹನ್ನೆರಡನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ವಿಜಯ ಭಾರತಿ ಅವರ ಕಾಲ: ಕ್ರೀಡತಿ

 

ಹದಿಮೂರನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ವೇದಾ ಮಂಜುನಾಥ್ ಅವರ ಸ್ವತಂತ್ರ ಹಕ್ಕಿ

 

ಹದಿನಾಲ್ಕನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಗುರು ರಾಘವೇಂದ್ರ ಅವರ "ದೃತಿ ವೃಂದ" ಒಂದು ಅಲೌಕಿಕ ಗುಃಯ

 

ಹದಿನೈದನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಲಕ್ಷ್ಮಿ ನಂದ ಅವರ ಪಾರ್ಥಸಾರಥಿ

 

ಹದಿನಾರನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಕಸ್ತೂರಿ ಕಮರವೆ ಅವರ ಈ ಹೃದಯ ಮಿಡಿಯುವುದು ನಿನಗಾಗಿ

 

ಹದಿನೇಳನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಲಕ್ಷ್ಮಿ ಗೌಡ ಅವರ ದೊರೆಸಾನಿ

 

ಹದಿನೆಂಟನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಅಕ್ಷಯ್ ಕೆ ರೈಟರ್ ಅವರ ವಸುಂಧರ

 

ಹತ್ತೊಂಬತ್ತನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ತೇಜಸ್ವಿನಿ ಯಾದವ್ ಅವರ ರುದ್ರಭೈರವಿ

 

ಇಪ್ಪತ್ತನೆಯ ಬಹುಮಾನ: 2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಅನಿತಾ ಅವರ ರುದ್ರ - ಸತ್ಯ ಮಿಥ್ಯಗಳ ನಡುವೆ



ವಿಶೇಷ ಮೆಚ್ಚುಗೆ ಪಡೆದ ಕೃತಿಗಳು:

 

ಈ ಬಾರಿ ಸಣ್ಣ ಅಂತರದಿಂದ ವಿಜೇತ ಕೃತಿಗಳ ಪಟ್ಟಿಗೆ ಬರಲು ಸಾಧ್ಯವಾಗದ ಕೆಲವು ಧಾರಾವಾಹಿಗಳನ್ನು ಕೆಳಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇವೆ.

 

ಕೃತಿ 

ಕರ್ತೃ

ನನ್ನಾತ್ಮ ನಿವೇದನೆ ನೀ ಆಲಿಸು

ರಾಧಾಮಣಿ ಜೆ. ಹೆಚ್

ವೀರಾಂಜನೇಯಂ

ಚೈತ್ರ ಭಟ್

ಬದುಕೆಂಬ ಮಾಯಾವಿ

ಮೌನ ವಿ

ಸಂಜೆಯು ಮೋಹನ

ಡಾ. ಲಾವಣ್ಯ ಪ್ರಭೆ

ಅಮ್ನೋರ ಮಗಳು

ವಿಷ್ಣುಪ್ರಿಯಾ

ಒಂದೇ ದೋಣಿಯ ಪಯಣಿಗರು

ಸಂಗೀತ ಲೇವಿಸ್

ಮತ್ತೆ ಒಲವ ಮಳೆಯಾಗುವುದೇ?

ವೀಣಾ

ನನ್ನ ನಾ ಮರೆತಾಗ

ರೂಪಾ ರೈ

ಅನುರಾಗ ಸಂಗಮ

ಸುಜಲ ಘೋರ್ಪಡೆ

ರಾಧಾ ರಮಣ

ವಿನುತಾಮುರಳಿ

ಆಂತರ್ಯದ ಆರ್ತನಾದ

ವಿನು ಪಿ

ಮಳೆಯ ಮನದರಾಗ ನೀ ನುಡಿದೇ...

ಮೇಘನಾ

ಯಾವುದೀ ಬಿಡಿಸದ ಬಂಧ

ವಸುಧಾ ಶಾಸ್ತ್ರಿ

ಮರಳಿ ಬರುವಳೇ ಸೀತೆ...??

ಮನುಪ್ರಿಯ

ಶಿವರಂಜನಿ

ಸಂಧ್ಯಾ ಭಟ್

ಗೆದ್ದು ಸೋತವನು

ಗೋಪಾಲ

ಕಲ್ಪತರು

ರಾಜೇಶ್ವರಿ ಮಾಲಿಪಾಟೀಲ್

ನಿನ್ನ ಜೊತೆ ನನ್ನ ಕಥೆ ಬೇರೊಂದು ಲೋಕ ಸೃಷ್ಟಿಸಿದೆ

ಕುಶಲ ಸಂಧ್ಯಾ

ಆರಕ್ಕೇರದವರು

ಗಜಲಕ್ಷ್ಮಿ ಗೋವಿಂದ ರಾಜು

ಮಧುರಾನುರಾಗ

ಕೃಷ್ಣಪ್ರಿಯೆ

 

ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ:

 

ಹಿಂದಿನ ಆವೃತ್ತಿಗಳಂತೆ ಸೂಪರ್ ಸಾಹಿತಿ ಅವಾರ್ಡ್ಸ್- 5 ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿ ಸ್ಪರ್ಧೆಯ ಯಶಸ್ಸಿಗೆ ಕಾರಣರಾದ ಎಲ್ಲ ಬರಹಗಾರರಿಗೆ ಧನ್ಯವಾದಗಳು. ಸ್ಪರ್ಧೆಯ ಕುರಿತು ನಿಮ್ಮ ಆಸಕ್ತಿ ಮತ್ತು ಉತ್ಸಾಹ ಶ್ಲಾಘನೀಯ.

 

ಸ್ಪರ್ಧೆಗೆ ನೂರಾ ಹತ್ತಕ್ಕೂ ಕೃತಿಗಳು ಸಲ್ಲಿಸಲ್ಪಟ್ಟಿದ್ದವು. ಆದರೆ ಅವುಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಧಾರಾವಾಹಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗಿದೆ. ದೀರ್ಘ ಧಾರಾವಾಹಿಗಳನ್ನು ರಚಿಸುವಾಗ ಬರಹಗಾರರಲ್ಲಿ ಕತೆಯನ್ನು ಮುಂದುವರೆಸುವಲ್ಲಿ ಅನೇಕ ತೊಡಕುಗಳು ಎದುರಾಗಬಹುದು. ಜೊತೆಗೆ ಸಮಯದ ಮಿತಿ ಒಳಪಟ್ಟಾಗ ಒತ್ತಡದ ಮನಸ್ಥಿತಿ ಒಂದು ಕೃತಿಯ ರೂಪುರೇಷೆಯನ್ನು ಬದಲಾಯಿಸಬಹುದು. ಆದರೆ ಇವೆಲ್ಲವುಗಳನ್ನು ಸಮರ್ಥವಾಗಿ ಎದುರಿಸಿ ಬರಹಗಾರರು ಅತ್ಯುತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂದು ನಾವು ಬಯಸುತ್ತೇವೆ. ಬರಹಗಾರರಿಗೆ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಪ್ರತಿಯೊಬ್ಬ ಬರಹಗಾರನಿಗೂ ಅವನದೇ ಆದ ತಂತ್ರವಿರುತ್ತದೆ. ಬರವಣಿಗೆಗೆ ಸ್ಪೂರ್ತಿ ಕೂಡ ಬೇರೆ ಬೇರೆ ಮೂಲಗಳಿಂದ ಬರುತ್ತದೆ. ಅವುಗಳನ್ನು ಪ್ರತಿಯೊಬ್ಬ ಬರಹಗಾರ ಸ್ವತಃ ಗಮನಿಸಬೇಕು, ಗುರುತಿಸಬೇಕು. ಆಗ ಎದುರಾಗುವ ತೊಡಕುಗಳಿಂದ ಸಮರ್ಥವಾಗಿ ಹೊರಬರಲು ಸಾಧ್ಯ.

 

ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಎಲ್ಲಾ ಕೃತಿಗಳೂ ಒಂದೊಂದು ರೀತಿಯಲ್ಲಿ ಉತ್ತಮವೆನಿಸುತ್ತಿದ್ದವು. ಬರವಣಿಗೆ ಒಂದು ಸೃಜನಾತ್ಮಕ ಕಲೆಯಾಗಿರುವುದರಿಂದ ಪ್ರತಿಯೊಬ್ಬರ ಭಾವ, ದೃಷ್ಟಿಕೋನಗಳೂ ವಿಭಿನ್ನವಾಗಿರುತ್ತವೆ. ಅದೇ ನಿಟ್ಟಿನಲ್ಲಿ ಆ ಕೃತಿಗಳನ್ನು ಓದಿ ತೀರ್ಪು ನೀಡುವ ಕಾಯಕವೂ ಸುಲಭದ್ದಲ್ಲ. ಆದರೂ ಸಲ್ಲಿಸಲ್ಪಟ್ಟಿರುವ ಕೃತಿಗಳಲ್ಲಿ ಕಥಾಹಂದರ, ಸೃಜನಾತ್ಮಕತೆ, ಪಾತ್ರಪೋಷಣೆ, ನಿರೂಪಣೆ, ಭಾಷೆ ಮತ್ತು ವ್ಯಾಕರಣ ಶುದ್ಧಿ ಮುಂತಾದ ಮಾನದಂಡಗಳ ಆಧಾರದ ಮೇಲೆ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳನ್ನು ರಚಿಸುವತ್ತ ಗಮನ ಹರಿಸುವಂತಾಗಲಿ ಎಂದು ಆಶಿಸುತ್ತೇವೆ. 

 

ನೀವು ‘ಸೂಪರ್ ಸಾಹಿತಿ ಅವಾರ್ಡ್ಸ್ 6’ ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 60+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://kannada.pratilipi.com/event/9ys4h3faop

 

ಶುಭವಾಗಲಿ!

-ಪ್ರತಿಲಿಪಿ ಕನ್ನಡ