ಕಾಮಪ್ರಚೋದಕ ಸಾಹಿತ್ಯ

 

ಯಾವುದೇ ಪ್ರಕಟಿತ ಕೃತಿಗಳು ಈ ಕೆಳಗಿನ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು:

 

  1. ಲೈಂಗಿಕ ಕ್ರಿಯೆಯನ್ನು ವೈಭವೀಕರಿಸುವುದು, ಲೈಂಗಿಕ ಹಿಂಸೆ ಮತ್ತು/ಅಥವಾ ಕಾನೂನುಬಾಹಿರ ಲೈಂಗಿಕ ಕ್ರಿಯೆಗಳನ್ನು ಪ್ರಚಾರ ಮಾಡುವುದು ಅಥವಾ ಅಪ್ರಾಪ್ತ ವಯಸ್ಕರನ್ನೊಳಗೊಂಡ ಲೈಂಗಿಕ ಕ್ರಿಯೆಗಳನ್ನು ಒಳಗೊಂಡ ಕೃತಿಗಳನ್ನು ಪ್ರಕಟಿಸಬಾರದು.

  2. ದೇಹದ ಭಾಗಗಳನ್ನು ವರ್ಣಿಸಲು ಅಸಭ್ಯ ಭಾಷೆ / ಅನುಚಿತ ಪದಗಳನ್ನು ಬಳಸುವಂತಿಲ್ಲ. 

  3. ಲೈಂಗಿಕ ಕ್ರಿಯೆಗಳ ಅಸಭ್ಯ/ಸ್ಪಷ್ಟ ಚಿತ್ರಣ ಅಥವಾ ವಿವರಣೆಯನ್ನು ಒಳಗೊಂಡ ಕೃತಿಗಳನ್ನು ಪ್ರಕಟಿಸುವಂತಿಲ್ಲ.

  4. ಯಾವುದೇ ಕಲಾತ್ಮಕ ಮೌಲ್ಯವನ್ನು ಹೊಂದಿರದ, ಲೈಂಗಿಕ ಪ್ರಚೋದನೆಯನ್ನು ಮಾತ್ರ ಒಳಗೊಂಡಿರುವ ಕೃತಿಗಳನ್ನು ಪ್ರಕಟಿಸುವಂತಿಲ್ಲ.

  5. ಲೈಂಗಿಕ ಸೇವೆಗಳನ್ನು ನೀಡುವಂತೆ ಅಥವಾ ವಿನಂತಿಸಿ ಬರಹಗಳನ್ನು ಪ್ರಕಟಿಸುವಂತಿಲ್ಲ.

 

ನಗ್ನತೆಯನ್ನು ಒಳಗೊಂಡಿರುವ ಅಥವಾ ಬಿಂಬಿಸುವ ಚಿತ್ರಗಳನ್ನು ವೆಬ್‌ಸೈಟ್/ಅಪ್ಲಿಕೇಶನ್‌ನಲ್ಲಿ ಯಾವುದೇ ರೀತಿಯಲ್ಲಿ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

 

ಮೇಲಿನವುಗಳನ್ನು ಅನುಸರಿಸುವ ಆದರೆ ಅಪ್ರಾಪ್ತರ ಬಳಕೆಗೆ ಸೂಕ್ತವಲ್ಲದ ಲೈಂಗಿಕ ವಿಷಯವನ್ನು ಒಳಗೊಂಡಿರುವ ಕೃತಿಗಳನ್ನು 'ಟ್ಯಾಗಿಂಗ್ ನೀತಿ'ಗೆ ಅನುಗುಣವಾಗಿ ಸೂಕ್ತವಾಗಿ ಟ್ಯಾಗ್ ಮಾಡಬೇಕು(ಸೂಕ್ತ ಪ್ರಭೇದವನ್ನು ಆಯ್ಕೆ ಮಾಡಿ ಪ್ರಕಟಿಸಬೇಕು).

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?