ಸರಿಯೋ ತಪ್ಪೋ, ಸಿನಿಮಾ ಮಾಡುವ ಆಸೆಯಿಂದ ಕತೆ ಹುಡುಕುವವರಿಗೆ–“ಯಾಕೆ ಕತೆ ಜಾಡು ಹಿಡಿದು ದೃಶ್ಯ ಕಟ್ಟುತ್ತೀರಿ? ಬದಲಾಗಿ ದೃಶ್ಯಗಳ ಚಲನೆಯೊಳಗೆ ಕತೆ ಕಾಣಿಸಿ” ಎನ್ನುತ್ತಿದ್ದೆ. ‘ತಿಥಿ’ ಸಿನೆಮಾ ನೋಡಿದಾಗ ನನ್ನ ಮನಸ್ಸೊಳಗೆ ಅಂದಾಜು ಇದ್ದುದು ಚಲನಚಿತ್ರವಾಗಿ ಮೂಡಿದೆ ಅನಿಸಿತು. ಅದೂ ಕನ್ನಡದಲ್ಲಿ! ನನಗೆ ಹೆಚ್ಚು ಖುಷಿಯಾಗಲು ಇದೂ ಕಾರಣವೇ. ‘ತಿಥಿ’ ಟ್ರೈಲರ್ ನೋಡಿದಾಗ ತುಂಬಾ ಮಜವಾಗಿದೆ ಅನಿಸುತಿತ್ತು. ಆದರೆ ಇದು ತಮಾಷೆಯಲ್ಲೋ ಲೇವಡಿಯಲ್ಲೋ ಕೇವಲ ಮನರಂಜನೆಯಾಗಿ ಅಂತ್ಯಕಂಡುಬಿಟ್ಟರೆ ಎಂಬ ಆತಂಕವೂ ಜತೆಗೆ ಸುಳಿದಾಡುತ್ತಿತ್ತು. ಸಿನೆಮಾ ನೋಡಿದಾಗ ನನ್ನ ಆತಂಕ ಸುಳ್ಳಾಗಿ ನೆಮ್ಮದಿಯಾಯಿತು. ಯಾಕೆಂದರೆ ಸಿನೆಮಾ ಮುಗಿದಾಗ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ