ಸಮಯದ ಗಾಲಿಯ ಅಡಿಯಲ್ಲಿ ಸಿಲುಕಿದ್ದ ಜೀವಿಗೆ ಬೇಕಿದೆ ವಿರಾಮ, ಬೇಕಾಗಿಲ್ಲ ಬೇರೆಯವರ ಸಮಯ ವ್ಯರ್ಥ. ಪೆನ್ನು ಹಿಡಿಯದೆ ಸಮಯಗಳೇ ಸರಿದಿದೆ. ಈಗ ಅನಿಸುತಿದೆ ವಿರಹ. ಅದನ್ನು ತಣಿಸಲು ಬಂದಿರುವೆ ಇಲ್ಲಿಗೆ. ಬೇಕೆನಗೆ ನಿಮ್ಮೆಲ್ಲರ ಹಾರೈಕೆ. ನಾನು ಸಾಹಿತಿಯಲ್ಲ, ವಿಜ್ಯಾನಿಯೂ ಅಲ್ಲ. ನಾನು ನಿರ್ಭಾವುಕ. ನನಗಿಲ್ಲ ಆಕಾಂಕ್ಷೆ. ಬರೆಯುವುದು ಆತ್ಮ ಸಂತೃಪ್ತಿಗೆ. ನನ್ನ ಬರಹದಲ್ಲಿಲ್ಲ ಯಾವುದೇ ಹೊಸ ಅನ್ವೇಷಣೆ. ಬರೆಯುವೆ ನನ್ನ ಮನಸಿನ ಘರ್ಷಣೆ. ಧನ್ಯವಾದ.