ಬದುಕೇ ನಶ್ವರ , ಇದ್ದು ಬಿಡು ನೀ ಇದ್ದಂತೆ...
ನಿನ್ನನ್ನು ನೀ ನಂಬದಿರು ನಾಟಕದ ಪಾತ್ರದಂತೆ....
ನಂಬಿಕೆ ಇಲ್ಲದ ಕಾಣದ ಕಡಲಿಗೆ ಹಂಬಲಿಸಿದಂತೆ.....
ಧುಮ್ಮಿಕ್ಕುವ ಜಲಧಾರೆಯಲ್ಲೂ ವಿಷ ಸುರಿದಂತೆ....
ಕಲ್ಪನೆಯ ಕನಸಿಗೆ ಕೊನೆ ಎಂಬುದಿಲ್ಲ
ವಾಸ್ತವ ಬದುಕಲ್ಲಿ ಖುಷಿ ಎಂಬುದಿಲ್ಲ
ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ
ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ
ಮನದ ಮರೆಯಲ್ಲಿ ಅವಿತು ಕುಳಿತಿದೆ ಅಂಧಕಾರ
ಅದನು ಆಚೆ ಓಡಿಸ ಬೇಕು ಆತ್ಮವಿಶ್ವಾಸದ ಬೆಳಕು ಚೆಲ್ಲಿ
ಕತ್ತಲೆ ಕಳೆದು ಬೆಳಕು ಹರಿದರೆ ಹೊಸ ಬದುಕು
ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಲೀ
ಆ ಕ್ಷಣ ಆಗುವುದು ಬದುಕೊಂದು ಸ್ವರ್ಗದ ಹಂದರ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ