"ಮಕ್ಕಳ ಲೋಕಕ್ಕೆ ಸುಸ್ವಾಗತ". ಅಜ್ಜಿ ಮತ್ತು ಅಮ್ಮನಿಂದ ಸೃಷ್ಟಿಯಾದ ಲೋಕವೇ ಮಕ್ಕಳ ಲೋಕ. ದೇವರು ಎಲ್ಲಿದ್ದಾನೆ ? ಎಂದು ಯಾರಾದರು ಕೇಳಿದಾಗ ತಿಳಿದವರು ಹೇಳುವುದು ಒಂದೇ ಉತ್ತರ, “ಮಕ್ಕಳನ್ನು ನೋಡಿ !” ಎಂದು... ನಿಜ!! ಪ್ರತ್ಯಕ್ಷ ದೇವರುಗಳು ಎಂದರೆ ಮಕ್ಕಳೇ!! ಹೊಸದಾಗಿ ರೂಪುಗೊಂಡಿರುವ ಮುಗ್ಧ ಸ್ವರೂಪದ ಪುಟ್ಟ ಚೇತನಾ ಶಕ್ತಿಗಳು. ಎಷ್ಟು ಶುದ್ಧವಾದ ಮನಸ್ಸು! ಸ್ವಲ್ಪವೂ ಕಲ್ಮಷ ಇಲ್ಲದ, ಅದ್ಭುತವಾಗಿ ಹೆಣೆದಂತಹ ಹಗುರವಾದ ನೂಲಿನ ಬಟ್ಟೆಗಳಂತೆ. ಮುಗ್ಧತೆಯ ತಾಣಗಳಿದ್ದಂತೆ! ನೇರ ನುಡಿ, ಕಂಡದ್ದನ್ನು ಕಂಡಂತೆ ಹೇಳುವುದು, ತೊದಲು ನುಡಿ, ಏನು ಮಾಡಿದರೆ ಏನಾಗುವುದು ಎಂಬ ಅರಿವೇ ಇಲ್ಲದ, ಎಷ್ಟು ಸುಂದರ ಮನಸ್ಸುಳ್ಳವರಾಗಿರುತ್ತಾರೆ. ಇವೆಲ್ಲವೂ ಎಷ್ಟು ಚಂದ... ಮಕ್ಕಳು ಅಜ್ಜ ಅಜ್ಜಿಗಳಿಂದ ದೂರವಾಗತೊಡಗಿದರೂ... ಅವರು ಮಾಡುತ್ತಿದ್ದ ಅಡುಗೆ.... ಕೈರುಚಿಯೇ ರುಚಿ... ಹಾಗೇ... ಅವರು ಹೇಳುವ ಲಾಲಿಪದಗಳು,.. ಪ್ರಾಸಬದ್ಧವಾದ ಆಟದ ಪದಗಳು, ಒಗಟುಗಳು, ಗಾದೆ, ಜಾನಪದ, ವಚನ, ಹಾಡು... ಮಕ್ಕಳ ಕಥೆ...ನೀತಿ ಕಥೆಗಳು..ಅದರಲ್ಲೂ ರಾಜಕುಮಾರಿಯರ ಕಥೆ.. ಅದ್ಭುತ ರಮ್ಯ ಕಥೆ... ಕಾಗಕ್ಕ ಗುಬ್ಬಕ್ಕನ ಕಥೆ.. ಪಂಚತಂತ್ರದ ಕಥೆ, ಹೀಗೆ ... ಆಚಾರ - ವಿಚಾರ, ಸಂಪ್ರದಾಯ.. ಸಂಸ್ಕೃತಿ , ಅಬ್ಬಾ ..ಆಟದಲ್ಲೇ - ಪಾಠ...ಅದನ್ನು ಮಾತ್ರ ಯಾರು ಮರೆಯಲು ಸಾಧ್ಯವಿಲ್ಲ. ......
ಸುನಂದ ಗೋಸಿ
( Sunanda Gosi )
Gosi Universe.