🇮🇳ಜೈ ಭಾರತ್🇮🇳
ಜ್ಞಾನ ಭಂಡಾರವೆಂಬುದು ನಿಂತ ನೀರ ಬಾವಿಯಲ್ಲ, ವಿಶಾಲ ಸಮುದ್ರ. ಅದಕ್ಕೆ ನಿತ್ಯ ಹೊಸ ಹೊಸ ನದಿಗಳ ನೀರು ಸೇರುತ್ತಿರಬೇಕು. ಮುತ್ತು ರತ್ನ ಹವಳಗಳಂತ ಸಂಪತ್ತಲ್ಲಿ ಜ್ಞಾನ ಸಮುದ್ರ ತುಂಬಿ ತುಳುಕಬೇಕು.
ಹಿರಿಯರ ಆಶೀರ್ವಾದ, ಕಿರಿಯರ ಹಾರೈಕೆ, ತಾಯಿ ತೌಳವೇಶ್ವರಿಯ ಅನುಗ್ರಹ, ಅಭಿಮಾನಿಗಳ ಅಕ್ಕರೆ, ಸ್ನೇಹಿತರ ಪ್ರೀತಿ ವಿಶ್ವಾಸಗಳೇ ನನ್ನ ಯಶಸ್ಸಿನ ಹಿರಿಮಂತ್ರ..
ಬಿಡುವಿನಲ್ಲಿ ಕತೆ ಕವಿತೆ ಲೇಖನ ಕಾದಂಬರಿಗಳನ್ನು ಬರೆಯುವ ನಾನು ಸಣ್ಣ ಮಟ್ಟಿನ ತುಳು, ಕನ್ನಡ, ತೆಲುಗು ಬರಹಗಾರ್ತಿ.
ಬರಹಗಳನ್ನು ಓದಿ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವ ಎಲ್ಲಾ ಸಾಹಿತ್ಯಾಸಕ್ತ ಹಿತೈಷಿಗಳಿಗೂ ಮನಪೂರ್ವಕ ಧನ್ಯವಾದಗಳು..🙏🏻🙏🏻🙏🏻