ಕತೆಗಳನ್ನು ಬರೆಯುವುದಕ್ಕಿಂತ ಓದುವುದು ತುಂಬಾ ಇಷ್ಟ. ಕಲಿಯುವುದು ತುಂಬಾ ಇದೆ. ನಾನು ಇನ್ನೂ ಬರವಣಿಗೆಗೆ ಅಂಬೆಗಾಲು ಇಡುತ್ತಿರುವೆ. ತಪ್ಪಾದರೆ ಕ್ಷಮಿಸಿ, ಬಿದ್ದವಳನ್ನು ಕೈ ಹಿಡಿದು ಮೇಲೆ ಎತ್ತಿ ಪ್ರೋತ್ಸಾಹಿಸಿ. ನಾನು ಕತೆ ಬರೆಯುವುದು ನನ್ನ ಖುಷಿ, ಆತ್ಮತೃಪ್ತಿಗೆ ಮಾತ್ರ. ಕಲ್ಪನೆಯಲ್ಲಿ ಬಂದ ಕತೆಗಳನ್ನು ಹಿಡಿದಿಟ್ಟು ಬರೆಯುವುದು ನನ್ನ ಹವ್ಯಾಸ. ಕವನ ಬರೆಯುವ ಆಸಕ್ತಿ ಹುಟ್ಟಿದ್ದು 10 ನೇ ತರಗತಿಯಲ್ಲಿ, ಆಗಿದ್ದ ಪುಸ್ತಕದಲ್ಲಿ ಕುವೆಂಪು ಹಾಗೂ ಮಹಾಕವಿಗಳ ಕವನಗಳನ್ನು ಓದಿ ಕವನ ಬರೆಯುವ ಆಸಕ್ತಿ ಹುಟ್ಟಿಕೊಂಡಿತು. ಕತೆ ಬರೆಯುವ ಆಸಕ್ತಿ ಮೊದಲಿನಿಂದ ಇತ್ತು ಆದರೆ ನನ್ನ ಕಲ್ಪನೆಯಲ್ಲಿ ಮೂಡಿಬಂದ ಕತೆಗಳನ್ನು ಬರೆಯುವ ಅವಕಾಶ ವೇದಿಕೆ ಸಿಕ್ಕಿದ್ದು ಪ್ರತಿಲಿಪಿಯಲ್ಲಿ, ಓದುವ ಆಸಕ್ತಿ ಹುಟ್ಟಿದ್ದು ಪ್ರತಿಲಿಪಿ ಸಿಕ್ಕಮೇಲೆಯೇ, ಬರೀ ಓದುವ ಹವ್ಯಾಸವಿರುವ ವ್ಯಕ್ತಿಯು ಕೂಡ ಪ್ರತಿಲಿಪಿಯ ಎಷ್ಟೋ ಯುವ ಸಾಹಿತಿಗಳ ಕತೆ ಓದಿ ತನ್ನಲ್ಲಿ ಒಬ್ಬ ಸಾಹಿತಿ ಇರುವನೆಂಬ ಮನದಟ್ಟು ಮಾಡಿ ಯುವ ಸಾಹಿತಿಗಳನ್ನು ಮಾಡಿದ ಗೌರವ ಪ್ರತಿಲಿಪಿಗೆ ಸಲ್ಲುತ್ತದೆ. ಎಷ್ಟೋ ರಾಜ್ಯಗಳ ಯುವ ಸಾಹಿತಿಗಳು ತಮ್ಮ ಪ್ರತಿಭೆ ಹೊರ ತರುತ್ತಿರುವುದು ಪ್ರತಿಲಿಪಿ ವೇದಿಕೆ. ಇಂತಹ ವೇದಿಕೆ ಕೊಟ್ಟ ಪ್ರತಿಲಿಪಿ ರಂಜಿತ್ ಸರ್ ಗು ಹಾಗೂ ಅಕ್ಷಯ್ ಸರ್ ಗು ಧನ್ಯವಾದಗಳು 🙏.
ನಿಮ್ಮ ಕಲ್ಪನೆ ಖೈದಿ ✍️.