ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 5 ವರ್ಷದ ಮುಂಚೆ ನನ್ನ ಮದುವೆ ಆಗಬೇಕಿತ್ತು.. ಏನದರ ಕಥೆ, ಓದಿ
ಬಾಲ್ಯದಿಂದಲೇ ಬರೆಯುವ ಅಭ್ಯಾಸವಿತ್ತು, ಆಗಲೇ ದಿನಕ್ಕೆ 4 ಪುಸ್ತಕ ಓದುತ್ತಿದ್ದೆ, 20 ಪುಟ ಬರೆಯದೆ ನಿದ್ದೆ ಬರುತ್ತಿರಲಿಲ್ಲ ಅಂತ ನಾನು ಹೇಳಿದರೆ ನೀವು ಬಿಡಿ, ಸ್ವತಃ ನಾನೇ ನಂಬುವುದಿಲ್ಲ! ಹಾಗೆ ನೋಡಿದರೆ ನಾನು ಬರವಣಿಗೆ ಅಂತ ಶುರುಮಾಡಿದ್ದು ಇಂಜಿನೀರಿಂಗ್ ಸೇರಿದಮೇಲೆಯೇ, ಪರೀಕ್ಷೆಗೆ ಏನನ್ನು ಓದದೇ 30 ಪುಟ ತುಂಬಿಸಿಬರುತ್ತಿದ್ದೆ! ಆ ಲೆಕ್ಕದಲ್ಲಿ ನಾನು ಒಂಥರ 'Technical Writer!' ನಂತರ ಮೈಸೂರಿನ 'ಅಮೋಘ ಚಾನಲ್' ಅಲ್ಲಿ ಆಂಕರ್ / ವಿಡಿಯೋ ಜಾಕಿಯಾಗಿದ್ದಾಗ ಸ್ಕ್ರಿಪ್ಟ್ ಬರೆದುಕೊಳ್ಳುತ್ತಿದದ್ದು ಬಿಟ್ಟರೆ ಹೆಚ್ಚುಕಡಿಮೆ 8 ವರ್ಷ ಬರವಣಿಗೆಯಿಂದ ದೂರ! ಮೇ 2017 ನಾನು ಬೆಂಗಳೂರಿಗೆ ಶಿಫ್ಟ್ ಆಗುತ್ತೀನಿ, ಆಗ ಸಿಕ್ಕಾಪಟ್ಟೆ ಪುರುಸೊತ್ತಾಗಿದ್ದ ನನಗೆ 2-3 ವರ್ಷದ ಪರಿಚಯವಿದ್ದರೂ ಮಾತುಕತೆ ಏನು ಇರದಿದ್ದ ಗೆಳತಿಯೊಬ್ಬರ ಕವನ ಮತ್ತು ಪುಸ್ತಕವಿಮರ್ಶೆ ಕಣ್ಣಿಗೆ ಬಿದ್ದು, ಅದು ಇಷ್ಟವಾಗಿ ಅದಕ್ಕೊಂದು ಕಾಮೆಂಟಿಸಿ, ಆಕೆ ಅದಕ್ಕೆ 'ನಿಮ್ಮ ಬರಹ ಓದಲು ಚೆಂದ, ಬರವಣಿಗೆ ಮುಂದುವರಿಸಿ' ಅಂತ ಉತ್ತೇಜನ ನೀಡಿ, ಅಪರೂಪಕ್ಕೆ ಸಿಕ್ಕ encouragement ವೇಸ್ಟ್ ಆಗಬಾರದು ಅನ್ನುವ ಕಾರಣಕ್ಕೆ ಬರೆಯಲು ಶುರು ಮಾಡಿದೆ! ಈ 'ಕವಿರತ್ನ ಕಾಳಿದಾಸ' ಫಿಲ್ಮ್ ಅಲ್ಲಿ ಕುರಿ ಕಾಯುವವನು ರಾತ್ರೋರಾತ್ರಿ ಕವಿಯಾಗಲ್ವಾ ಹಾಗೆ ಬರೆಯಲು ಆಸಕ್ತಿಯೇ ಇರದಿದ್ದ ವ್ಯಕ್ತಿಯೊಬ್ಬ ರಾತ್ರೋರಾತ್ರಿ 'ಬರಹಗಾರ'ನಾದ ಕಥೆಯಿದು! ಈ 5 ತಿಂಗಳಲ್ಲಿ 55ಕ್ಕು ಹೆಚ್ಚು ಬರಹ ಬರೆದಿದ್ದೀನಿ, ನನ್ನದು 'freestyle writing', ನಾನು ಹೇಗೆ ಮಾತಾಡುತ್ತೀನೋ ಹಾಗೆಯೇ ಬರೆಯುತ್ತೀನಿ (ಬೇಕಿದ್ದರೆ ಸ್ವಲ್ಪ ಜೋರಾಗಿ ಓದಿನೋಡಿ ನಿಮಗೆ ಗೊತ್ತಾಗುತ್ತೆ!), ಓದುಗರು ನನ್ನ ಬರಹವನ್ನು ಪ್ರೀತಿಸುತ್ತಾರೆ, ಬರೆಯಲು ಅದಕ್ಕಿಂತ ನೆಪ ಬೇಕೆ?!

ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ