ಎಚ್.ಡಿ.ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರ್ ಹೀರೋ ಆಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಚಿತ್ರ ಜಾಗ್ವಾರ್'ನ ಜಾತಕ ಇಂದು ಬಯಲಾಗಿದೆ.. ಪ್ರಾರಂಭದಲ್ಲೇ ಟಿ.ವಿ ಚಾನಲ್ ವೊಂದನ್ನು ಹ್ಯಾಕ್ ಮಾಡಿ ಲೈವ್ ಆಗಿ ಕೊಲೆ ತೋರಿಸಿ, ಸಾಮಾನ್ಯ ಎಂಟ್ರೀ ಪಡೆಯುವ ನಿಖಿಲ್, ಆನಂತರದಲ್ಲಿ ಮೆಡಿಕಲ್ ಕಾಲೇಜ್ ಸ್ಟೂಡೆಂಟ್ ಆಗಿ ಲವರ್ ಬಾಯ್ ಥರ ಕಾಣಿಸಿಕೊಳ್ಳುವುದು ಹಾಗೂ ಸಸ್ಫೆನ್ಸ್ ಆಗಿ ಮೆಡಿಕಲ್ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸ್ಟೂಡೆಂಟ್ಸ್ ಮತ್ತು ಆಡಳಿತ ಮಂಡಳಿಯ ಒಳ ಆಟಗಳನ್ನು ತೋರಿಸುವುದು ಮತ್ತು ಅಂತಿಮದಲ್ಲಿ ಹೀರೋ ಯಾಕೆ ಆ ಥರ ಒಬ್ಬೊಬ್ಬರನ್ನೇ ಲೈವ್ ಮರ್ಡರ್ ಮಾಡುತ್ತಾನೆ ಎನ್ನುವುದು ಕಥೆಯ ಒಂದೆಳೆ... ಸಿನಿಮಾ ರಿಚ್ ...