ಈಗತಾನೆ ಅಕ್ಷರಗಳ ಲೋಕಕ್ಕೆ ಅಂಬೆಗಾಲಿಡುತ್ತಿರುವ ಹಸುಗೂಸು ನಾನು... ಅಕ್ಷರಗಳ ಜಾಡು ಹಿಡಿದು ತಿರುಗುವ ಓದಿನ ಅಲೆಮಾರಿ... ನನ್ನ ಪಾಡಿಗೆ ನಾನು ಕಂಪ್ಯೂಟರು, ಎಲಿಯನ್ನು, ಕೋಡಿಂಗು, ಖಗೋಳ, ಹ್ಯಾಕಿಂಗೂ, ಯಾವ ಥಿಯರಿ ಥೈರ್ಮೋಡೈನಾಮಿಕ್ಸ್ ಲಾ ಅನ್ನು ಸೂಪರ್ ನಾಚುರಲ್ ಪವರ್ ಗೆ ಸರಿಹೋಗಬಹುದು ಅಂತಾ, ನನ್ನದೇ ಲೋಕದಲ್ಲಿ ವಿರಹಿಸುತ್ತಿದ್ದವನನ್ನು ಗೊತ್ತೇ ಆಗದಂತೆ ಮಾಂತ್ರಿಕವಾಗಿ ಈ ಸಾಹಿತ್ಯದ ಸಾಮ್ರಾಜ್ಯಕ್ಕೆ ತಂದು ನಿಲ್ಲಿಸಿ ಅಕ್ಷರ ಕೃಷಿಗೆ ಹಚ್ಚಿಸಿದ ದ್ರೋಣಾಚಾರ್ಯರು ಪೂಚಂತೆ... ಇನ್ನು ಹೈಸ್ಕೂಲೇ ಪಾರಾಗದಿದ್ದ ಕಾಲಕ್ಕೆ ಶುರುವಾದ ಈ ಅಕ್ಷರಗಳ ಕುಡುಕ ಚಟ ಇವತ್ತಿಗೂ ಬಿಟ್ಟು ಬಿಡದೆ ನನ್ನನ್ನ ಆವರಿಸಿಕೊಂಡಿದೆ. ಓದಿದ್ದು ಗಣಕಯಂತ್ರದ ವಿಜ್ಞಾನವಾದರು,ಹಿಡಿಸಿದ್ದು ಅಕ್ಷರ ಲೋಕ. ಓದು, ತಿರುಗಾಟ-ಆಟ. ಗೀಚುವುದು-ಬರೆಯುವುದು. ಇವಿಷ್ಟು ನನ್ನ ಕಿತಾಪತಿಗಳು. ಇತಿಹಾಸ, ವಿಮರ್ಶೆ, ಹುಡುಕಾಟ, ಸಂಶೋಧನೆ ನನ್ನ ಲವಲವಿಕೆಗಳು. ಆಗೊಮ್ಮೆ ಈಗೊಮ್ಮೆ ಸ್ಟೇಜ್ ಹತ್ತಿ ಮಾತನಡುವುದಕ್ಕೆ ವಾಗ್ಮಿಯಾದೆ. ಜೊತೆಗೆ ಒಂದಿಷ್ಟು ತುಂಟಾಟ ತರಲೇಗಳ ಗಣಿ,ಮಾತಿನ ಮೌನಿ.... ನೌಕರಿ ಹಿಡಿಯಲೇಬೇಕು ಅಂತ ಹೊರಟವನಿಗೆ ಕಲಿಯುವುದು ಬಹಳವೇ ಇದೆ ಎಂದೆನಿಸಿ ವಿದ್ಯಾರ್ಥಿಯಾಗಿಯೇ ಉಳಿದಿದ್ದೇನೆ; ಜೀವನದ.. ಬದುಕಿನ... ಸದ್ಯಕ್ಕಿಷ್ಟೇ ನನ್ನ ಬಗ್ಗೆ. ಉಳಿದ ವಿವರಗಳ ಬೆನ್ನು ಹತ್ತಿ ನಾನು ತಿರುಗುತ್ತಿದ್ದೇನೆ. ಕಂಡುಕೊಂಡರೆ ಹೇಳೇ ಹೇಳುತ್ತೇನೆ......
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ