<p><span style="color: #333333; font-family: 'Helvetica Neue', Helvetica, Arial, sans-serif; line-height: 20px;">ಈಕೆ ಅನುಭಾವಿಕ ನೆಲೆಯ ತುಂಬ ಎತ್ತರದ ಶರಣೆ. ಈಕೆಯ ತವರೂರು ಲಕ್ಕುಂಡಿ, ಗಂಡನೂರು ಮಸಳಿಕಲ್ಲು. ಶರಣ ಅಜಗಣ್ಣ ಈಕೆಯ ಸಹೋದರ ಮತ್ತು ಗುರು. ಈತನ ಲಿಂಗೈಕ್ಯ ಸಂದರ್ಭದಲ್ಲಿ ದು:ಖಿಯಾದ ಈಕೆಯನ್ನು ಅಲ್ಲಮಪ್ರಭು ಅರಿವಿನ ಕಣ್ಣು ತೆರೆಸುವ ಮೂಲಕ ಸಾಂತ್ವನಪಡಿಸುತ್ತಾನೆ. ಕಾಲ-೧೧೬೦.</span><br style="box-sizing: border-box; color: #333333; font-family: 'Helvetica Neue', Helvetica, Arial, sans-serif; line-height: 20px;" /><span style="color: #333333; font-family: 'Helvetica Neue', Helvetica, Arial, sans-serif; line-height: 20px;">'ಅಜಗಣ್ಣ ತಂದೆ' ಅಂಕಿತದಲ್ಲಿ ರಚಿಸಿದ ೩೨ ವಚನಗಳು ದೊರೆತಿವೆ. ಇವೆಲ್ಲ ಅಣ್ಣನ ಅಗಲಿಕೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ ಶೋಕಗೀತೆಗಳಂತಿವೆ. ಅಲ್ಲಮಪ್ರಭುವಿನ ಜೊತೆ ನಡೆಸಿದ ಆಧ್ಯಾತ್ಮ ಸಂವಾದದಲ್ಲಿ ಮೂಡಿ ಬಂದ ಅನುಭಾವ ಗೀತೆಗಳೆನಿಸಿವೆ. ಶೂನ್ಯ ಸಂಪಾದನೆಯಲ್ಲಿ ಮೂಡಿದ ಈ ಸಂವಾದ ತುಂಬ ಪ್ರಸಿದ್ಧವಾಗಿದೆ.</span></p>
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ