pratilipi-logo ಪ್ರತಿಲಿಪಿ
ಕನ್ನಡ

Mahile Kathegalu | Women Stories in Kannada

ಆಸ್ಪತ್ರೆಯಲ್ಲಿ ಆ ಕಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಇತ್ತ ಆ ಕಂದನನ್ನು ಹೇಗೆ ಉಳಿಸಿಕೊಳ್ಳುವುದೋ? ಆಲೋಚಿಸಿ ಆಲೋಚಿಸಿ ಎಲ್ಲ ಮುಚ್ಚಿರುವ ಬಾಗಿಲುಗಳನ್ನ ಬಡೆದು ಸೋತು, ಬತ್ತು ಹೋದ ಕಣ್ಣುಗಳನ್ನು ಹೊತ್ತು, ಗಾಜಿನ ಬಾಗಿಲಿನಿಂದ ಮಗುವನ್ನ ನೋಡ್ತಾ ನಿಂತಿದ್ದಾಳೆ. ಕೊರಳಲ್ಲಿ ಮಾಂಗಲ್ಯವಿದೆ, ಹಣೆಯಲ್ಲಿ ಸಿಂಧೂರವಿದೆ, ಕಾಲುಂಗರವು ಇನ್ನು ಜೀವಂತವಿದೆ. ಆದ್ರೆ ಈ ಸಮಯದಲ್ಲಿ ಧೈರ್ಯ ನೀಡಬೇಕಿದ್ದ ಆ ಮಗುವಿನ ತಂದೆ ಅಲ್ಲಿಲ್ಲ. ದೇವಸ್ಥಾನಗಳಿಗಿಂತ ಹೆಚ್ಚಿನ ಪ್ರಾರ್ಥನೆ ಕೇಳಿಸಿಕೊಳ್ಳುವುದು ಕೇವಲ ಆಸ್ಪತ್ರೆಯ ಗೋಡೆಗಳೇ ಎನ್ನುವ ಮಾತಿನಂತೆ ಅಲ್ಲಿದ್ದವರು ಮಗುವಿನ ಆರೋಗ್ಯದ ಕುರಿತು ಸಾಕಷ್ಟು ಕೇಳಿಕೊಂಡರು. ...
4.8 (48K)
7L+ ಓದುಗರು