ಪ್ರೊಫೈಲ್ & ಇತರೆ ಮಾಹಿತಿಗಳು
ಪ್ರಸ್ತಾವನೆ
ಪ್ರತಿಲಿಪಿಯ ಉದ್ದೇಶ:
ವಿಶ್ವಾದ್ಯಂತ ಇರುವ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಡಿಜಿಟಲ್ ಮಾಧ್ಯಮದಲ್ಲಿ ಕನ್ನಡ ಸಾಹಿತ್ಯವನ್ನು ಓದಲು,ಓದಿದ ಬಳಿಕ ತಮ್ಮ ಅಭಿಪ್ರಾಯ/ವಿಮರ್ಶೆಗಳನ್ನು ನೇರವಾಗಿ ಸಾಹಿತಿಗಳಿಗೆ ತಲುಪಿಸಲು ಅಷ್ಟೇ ಅಲ್ಲದೆ ಸಾಹಿತ್ಯಪ್ರಿಯರಲ್ಲಿ ಬರೆಯುವ ಆಸಕ್ತಿಯನ್ನೂ ಸಹಾ ಪ್ರೋತ್ಸಾಹಿಸಲು ಪ್ರತಿಲಿಪಿ ಸೂಕ್ತ ಮಾಧ್ಯಮ.ನೀವು ಪ್ರತಿಲಿಪಿ ವೇದಿಕೆಯಲ್ಲಿ ವಿವಿಧ ಪ್ರಕಾರದ ಸಾಹಿತ್ಯವನ್ನು ಓದುವುದು,ರಚಿಸಿ ಸ್ವತಃ ಪ್ರಕಟಿಸುವುದು ಮಾತ್ರವಲ್ಲದೇ,ನಿಮ್ಮಿಷ್ಟದ ಬರಹಗಳನ್ನು ಗ್ರಂಥಾಲಯಕ್ಕೆ ಸೇರಿಸಿ ಬೇಕಾದಾಗ ಓದಬಹುದು.ಅಥವಾ ಡೌನ್ಲೋಡ್ ಮಾಡಿಕೊಂಡು ಅಂತರ್ಜಾಲ ಸಂಪರ್ಕ ಇಲ್ಲದೆಯೂ ಓದಬಹುದು.ಅಲ್ಲದೇ ನಿಮ್ಮಿಷ್ಟದ ಪ್ರತಿಲಿಪಿ ಸಾಹಿತಿಗಳನ್ನು ಹಿಂಬಾಲಿಸುವುದರ ಮೂಲಕ ಅವರ ಬರಹಗಳು ಪ್ರಕಟವಾದ ಕೂಡಲೇ ಆ ಮಾಹಿತಿಯನ್ನು ನೋಟಿಫಿಕೇಶನ್ ಮೂಲಕ ಪಡೆಯಬಹುದು.
ಅಪ್ಲಿಕೇಶನ್ ಡೌನ್ಲೋಡ್ ಮಾಡಲು:
ಗೂಗಲ್ ಪ್ಲೇ ಸ್ಟೋರ್ ನಲ್ಲಿ Pratilipi ಎಂದು ಟೈಪ್ ಮಾಡಿ ಅಥವಾ ಕೆಳಗಿನ ಲಿಂಕ್ ಲೆ ಕ್ಲಿಕ್ ಮಾಡಿ (https://play.google.com/store/apps/details?id=com.pratilipi.mobile.android&hl=en)
ಲಾಗಿನ್:
ಸೈನ್ ಅಪ್ ಆಗುವ ವಿಧಾನ:
ನೀವು ನಿಮ್ಮ ಜಿಮೈಲ್ ಅಥವಾ ಇನ್ಯಾವುದೇ ಇಮೇಲ್ ವಿಳಾಸದ ಮೂಲಕ ಅಷ್ಟೇ ಅಲ್ಲದೇ ಫೇಸ್ಬುಕ್ ಮೂಲಕವೂ ಪ್ರತಿಲಿಪಿಗೆ ಸೈನ್ ಅಪ್ ಮಾಡಿಕೊಳ್ಳಬಹುದು.
ನೀವು ಪಾಸ್ವರ್ಡ್ ಮರೆತಿದ್ದರೆ:
ಸೈನ್ ಇನ್ ಪೇಜ್ ನಲ್ಲಿ:
೧)ನಿಮ್ಮ ಇಮೇಲ್ ವಿಳಾಸವನ್ನು ಸೈನ್ ಇನ್ ಪೇಜ್ ನಲ್ಲಿ ನಮೂದಿಸಿ
೨)ಇಮೇಲ್ ಕೊನೆಯಲ್ಲಿರುವ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ. ಮುಂದಿನ ಸ್ಕ್ರೀನ್ ಅಲ್ಲಿ ‘ಮರೆತಿರುವಿರಾ’ ಪ್ರಶ್ನೆಯ ಮೇಲೆ ಕ್ಲಿಕ್ ಮಾಡಿ.
೩)ಬಳಿಕ ಕಾಣಸಿಗುವ ಬಾಕ್ಸ್ ಅಲ್ಲಿ ನಿಮ್ಮ ಇಮೇಲ್ ವಿಳಾಸ ನಮೂದಿಸಿ. ಮತ್ತು ‘ಲಿಂಕ್ ಕಳುಹಿಸಿ’ ಮೇಲೆ ಕ್ಲಿಕ್ ಮಾಡಿ.
೪)ನೀವು ನಮೂದಿಸಿರುವ ಇಮೇಲ್ ನ ಇನ್ಬಾಕ್ಸ್ ಗೆ ಹೋಗಿ ಮತ್ತು ಪ್ರತಿಲಿಪಿಯಿಂದ ಬಂದ ಇಮೇಲ್ ಮೇಲೆ ಕ್ಲಿಕ್ ಮಾಡಿ.
೫) ನಮ್ಮಿಂದ ಕಳುಹಿಸಲ್ಪಟ್ಟ ಪಾಸ್ವರ್ಡ್ ರಿಸೆಟ್ ಲಿಂಕ್ ನಿಮ್ಮ ಇಮೇಲ್ ಅಲ್ಲಿರುತ್ತದೆ.ಅದರ ಮೇಲೆ ಕ್ಲಿಕ್ ಮಾಡಿ.ಹೊಸ ಪಾಸ್ವರ್ಡ್ ನಮೂದಿಸಿ.
೬)ಪುನಃ ಪ್ರತಿಲಿಪಿಗೆ ಮರಳಿ.ಹೊಸ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.ಸಾಹಿತ್ಯಾಸ್ವಾಧನೆಯಲ್ಲಿ ತೊಡಗಿರಿ!
ಸೈನ್ ಔಟ್ ಆಗುವ ವಿಧಾನ :
ಪ್ರತಿಲಿಪಿ ಅಪ್ಲಿಕೇಶನ್ ಅಥವಾ ವೆಬ್ಸೈಟ್ ನಲ್ಲಿ
i)ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ
ii) ಸೆಟ್ಟಿಂಗ್ಸ್ ಗೆ ಹೋಗಿ
iii) ಸೈನ್ ಔಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಖಾತೆಯನ್ನು ಡಿಲೀಟ್ ಮಾಡುವ ವಿಧಾನ :
ನೀವು ನಿಮ್ಮ ಖಾತೆಯನ್ನು ಡಿಲೀಟ್ ಮಾಡಲು ಬಯಸಿದರೆ ನಿಮ್ಮ ಪ್ರೊಫೈಲ್ ಲಿಂಕ್ ಅನ್ನು kannada@pratilipi.com ಗೆ ಇಮೇಲ್ ಕಳುಹಿಸುವ ಮೂಲಕ ಮನವಿ ಮಾಡಬಹುದು. ಕಾರಣಗಳು ಸೂಕ್ತವಾಗಿದ್ದಲ್ಲಿ ನಾವು ನಿಮ್ಮ ಪ್ರೊಫೈಲ್ ಅನ್ನು ಡಿಲೀಟ್ ಮಾಡುತ್ತೇವೆ.
ಪ್ರೊಫೈಲ್ ಸೆಟಿಂಗ್ಸ್ :
ನನ್ನ ಖಾತೆ :
ನಿಮ್ಮ ಪ್ರೊಫೈಲ್ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ. ನೀವು ಬರೆದು ಪ್ರಕಟಿಸಿದ ಬರಹಗಳು ನಿಮ್ಮ ಹಿಂಬಾಲಕರು, ನೀವು ಹಿಂಬಾಲಿಸುತ್ತಿರುವವರ ಸಂಖ್ಯೆ,ನಿಮ್ಮ ಬರಹಕ್ಕೆ ದೊರೆತ ಒಟ್ಟು ಓದಿನ ಸಂಖ್ಯೆ,ನಿಮ್ಮ ಕಲೆಕ್ಷನ್ಗಳು,ನೀವು ಭಾಗವಹಿಸಿದ ಚರ್ಚೆಗಳು ಮತ್ತು ನೀವು ಓದಿದ ಪದಗಳ ಸಂಖ್ಯೆ - ಈ ಎಲ್ಲಾ ಮಾಹಿತಿಗಳೂ ಲಭ್ಯವಾಗುತ್ತವೆ.
ನೋಟಿಫಿಕೇಶನ್ ಸೆಟ್ಟಿಂಗ್ಸ್:
ನೀವು ಪಡೆಯುತ್ತಿರುವ ನೋಟಿಫಿಕೇಶನ್ ಗಳ ಸ್ವರೂಪ ಮತ್ತು ಫ್ರೀಕ್ವೆನ್ಸಿಗಳನ್ನು ಬದಲಿಸಲು ಕೆಳಗಿನ ವಿಧಾನ ಅನುಸರಿಸಿ:
ಪ್ರತಿಲಿಪಿ ಅಪ್ಲಿಕೇಶನ್ ನಲ್ಲಿ:
i) ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
ii) ಸೆಟ್ಟಿಂಗ್ಸ್ ಗೆ ಹೋಗಿ
iii) ನೋಟಿಫಿಕೇಶನ್ ಗೆ ಹೋಗಿ
iv) ಅಗತ್ಯ ಬದಲಾವಣೆಗಳನ್ನು ಮಾಡಿ.
ಇಮೇಲ್ ಡೈಜೆಸ್ಟ್:
ನೀವು ಇಮೇಲ್ ಡೈಜೆಸ್ಟ್ ನ ಆವರ್ತನವನ್ನುಮೇಲೆ ತಿಳಿಸಿದಂತೆ ನೋಟಿಫಿಕೇಶನ್ ಸೆಟ್ಟಿಂಗ್ಸ್ ಮೂಲಕ ಬದಲಿಸಬಹುದು.
ಇಮೇಲ್ ಅಲ್ಲಿ ಕಾಣಿಸುವ ಅನ್ಸಬ್ಸ್ಕ್ರೈಬ್ ಲಿಂಕ್ ಮೂಲಕವೂ ಇಮೇಲ್ ಡೈಜೆಸ್ಟ್ ಅನ್ನು ಪಡೆಯುವುದನ್ನು ನಿಲ್ಲಿಸಬಹುದು.
ಪಾಸ್ವರ್ಡ್ ಬದಲಿಸುವ ವಿಧಾನ:
ನಿಮ್ಮ ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ -
i) ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
ii) ಸೆಟ್ಟಿಂಗ್ಸ್ ಗೆ ಹೋಗಿ
iii) ‘ಖಾತೆ’ಗೆ ಹೋಗಿ
iv) ‘ಪಾಸ್ವರ್ಡ್ ಬದಲಿಸಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
v) ಹಳೆಯ ಪಾಸ್ವರ್ಡ್ ಮತ್ತು ಹೊಸ ಪಾಸ್ವರ್ಡ್ಗಳನ್ನು ನಮೂದಿಸುವ ಮೂಲಕ ಪಾಸ್ವರ್ಡ್ ಬದಲಿಸಿ.
ಇತರೆ:
ಯಾವುದೇ ಹೊಸ ಸೌಲಭ್ಯದ ಅಗತ್ಯತೆಯ ಕುರಿತು ಅಥವಾ ಈಗಿರುವ ಸೌಲಭ್ಯವನ್ನು ಇನ್ನೂ ಉತ್ತಮಗೊಳಿಸಲು ಯಾವುದೇ ಸಲಹೆ ಸೂಚನೆ ಮಾರ್ಗದರ್ಶನ ನೀಡಲು -
ನಿಮ್ಮ ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ
i) ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
ii) ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ
iii) ‘ಸಹಾಯ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
iv) ಸೂಕ್ತ ತುಂಬಿ ನಮಗೆ ಕಳುಹಿಸಿ
ಪ್ರತಿಲಿಪಿಯನ್ನು ಸಂಪರ್ಕಿಸಲು:
ಈವರೆಗೂ ಪ್ರತಿಲಿಪಿಯ ಓದುಗರಿಗೆ ಸಾಮಾನ್ಯವಾಗಿ ಮೂಡುವ ಸಂಶಯಗಳ ಕುರಿತು ಮಾಹಿತಿ ನೀಡಲಾಗಿದೆ. ಇನ್ನೂ ಹೆಚ್ಚಿನ ಸಂಶಯಗಳು/ಗೊಂದಲಗಳು ಇದ್ದಲ್ಲಿ 9999698309 ಸಂಖ್ಯೆಗೆ ಕರೆ/ವಾಟ್ಸಪ್ ಮಾಡುವ ಮೂಲಕ ಪರಿಹರಿಸಿಕೊಳ್ಳಬಹುದು. ಅಥವಾ kannada@pratilipi.com ಗೆ ಇಮೇಲ್ ಕಳುಹಿಸುವ ಮೂಲಕ ಬಗೆಹರಿಸಿಕೊಳ್ಳಬಹುದು.