pratilipi-logo ಪ್ರತಿಲಿಪಿ
ಕನ್ನಡ
← All articles ಪ್ರಾರಂಭ

ಒಬ್ಬ ಲೇಖಕರಾಗಿ ವ್ಯವಸ್ಥಿತವಾಗಿರಲು ಕೆಲವು ಸರಳ ಮಾರ್ಗಗಳು

ಆತ್ಮೀಯ ಲೇಖಕರೇ,

ವ್ಯವಸ್ಥಿತವಾಗಿರುವುದು ಎಂದರೆ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಲು ನಿಮ್ಮನ್ನು ನೀವೇ ಒತ್ತಾಯಿಸುವುದು ಎಂದಲ್ಲ. ಇದು ಕೇವಲ ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿಡಲು, ನಿಮ್ಮ ಸೃಜನಶೀಲತೆಯನ್ನು ಬೆಂಬಲಿಸಲು ಮತ್ತು ಓದುಗರು ನಿಮ್ಮ ಹೊಸ ಕೃತಿ/ಅಧ್ಯಾಯಗಳ ಪ್ರಕಟಣೆಗಳ ಕುರಿತು ನೀಡುವ ಮಾಹಿತಿಗಳನ್ನು ನಂಬಲು ಸಹಾಯ ಮಾಡುವಂತಹ ಒಂದು ಬರವಣಿಗೆಯ ದಿನಚರಿಯನ್ನು ರೂಪಿಸಿಕೊಳ್ಳುವುದಾಗಿದೆ.

  1. 1

    ಏಕಕಾಲಕ್ಕೆ ಕೆಲವು ಅಧ್ಯಾಯಗಳನ್ನು ಮಾತ್ರ ಯೋಜಿಸಿ

    ನಿಮ್ಮ ಸಂಪೂರ್ಣ ಕಥೆಯನ್ನು ಒಂದೇ ಬಾರಿಗೆ ಯೋಜಿಸಬೇಕಾದ ಅಗತ್ಯವಿಲ್ಲ. ಮುಂದಿನ 3 ರಿಂದ 5 ಅಧ್ಯಾಯಗಳಲ್ಲಿ ಏನಾಗಲಿದೆ ಎಂದು ತಿಳಿದಿರುವುದು ನಿಮ್ಮ ಬರವಣಿಗೆಯನ್ನು ಸುಲಭಗೊಳಿಸುತ್ತದೆ.

  2. 2

    ಸಣ್ಣ ಮತ್ತು ಸುಲಭವಾದ ಗುರಿಗಳನ್ನು ನಿಗದಿಪಡಿಸಿ

    ನಿಮಗೆ ಆಯಾಸ ಅಥವಾ ಒತ್ತಡವನ್ನು ಉಂಟುಮಾಡುವಂತಹ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಡಿ. ವಾರಕ್ಕೆ ಕೇವಲ ಎರಡು ಅಧ್ಯಾಯಗಳು ಅಥವಾ ದಿನಕ್ಕೆ ಕೆಲವು ನೂರು ಪದಗಳನ್ನು ಬರೆಯುವುದೂ ಸಹ ನಿಮ್ಮ ಕಥೆಯನ್ನು ಮುನ್ನಡೆಸುತ್ತದೆ.

  3. 3

    ಬರವಣಿಗೆಗಾಗಿ ನಿಮ್ಮದೇ ಆದ ಸಮಯವನ್ನು ಕಂಡುಕೊಳ್ಳಿ

    ನಿಮ್ಮ ಜೀವನಶೈಲಿ ಮತ್ತು ಉತ್ಸಾಹಕ್ಕೆ ಹೊಂದುವ ಬರವಣಿಗೆಯ ಸಮಯವನ್ನು ಆಯ್ಕೆ ಮಾಡಿಕೊಳ್ಳಿ. ಕೆಲವು ಲೇಖಕರು ರಾತ್ರಿಯ ಸಮಯದಲ್ಲಿ ಬರೆಯುತ್ತಾರೆ, ಇನ್ನು ಕೆಲವರು ಬೆಳಿಗ್ಗೆ ಬರೆಯುತ್ತಾರೆ ಮತ್ತು ಕೆಲವರು ದಿನದ ಸಣ್ಣ ವಿರಾಮದ ಸಮಯದಲ್ಲಿ ಬರೆಯುತ್ತಾರೆ.

  4. 4

    ಸರಳವಾದ ಪರಿಕರಗಳನ್ನು ಬಳಸಿ

    ನಿಮ್ಮ ಆಲೋಚನೆಗಳನ್ನು ಉಳಿಸಲು ನೋಟ್ಸ್ ಆ್ಯಪ್‌ಗಳು, ಟೈಮರ್‌ಗಳು ಅಥವಾ ಸಣ್ಣ ಡೈರಿಯನ್ನು ಬಳಸಿ. ಈ ಸರಳ ಪರಿಕರಗಳು ನಿಮ್ಮ ಗಮನವನ್ನು ಕೇಂದ್ರೀಕರಿಸಲು ಮತ್ತು ಕಥೆಯ ಉತ್ತಮ ಆಲೋಚನೆಗಳನ್ನು ಕಳೆದುಕೊಳ್ಳದಂತೆ ತಡೆಯಲು ಸಹಾಯ ಮಾಡುತ್ತವೆ.

  5. 5

    ಪ್ರತಿಲಿಪಿಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿ

    ಪ್ರತಿಲಿಪಿಯ ಡ್ರಾಫ್ಟ್ ಎಡಿಟರ್, ಸ್ವಯಂಚಾಲಿತ ಸಂರಕ್ಷಕ ಮತ್ತು ಅಧ್ಯಾಯಗಳನ್ನು ಸ್ವಯಂ ಚಾಲಿತವಾಗಿ ಪ್ರಕಟಿಸುವ ‘ಷೆಡ್ಯೂಲಿಂಗ್’ ಸೌಲಭ್ಯಗಳನ್ನು ಬಳಸಿ. ನೀವು ಕಾರ್ಯನಿರತರಾಗಿದ್ದಾಗಲೂ ಸಹ ನಿರಂತರತೆಯನ್ನು ಕಾಯ್ದುಕೊಳ್ಳಲು ಈ ಪರಿಕರಗಳು ಸಹಾಯ ಮಾಡುತ್ತವೆ.

  6. 6

    ಓದುಗರಿಗೆ ವಿಶ್ವಾಸಾರ್ಹರಾಗಿರಿ

    ನಿಯಮಿತವಾಗಿ ಕಥೆಗಳನ್ನು ನವೀಕರಿಸುವ ಮತ್ತು ಇದ್ದಕ್ಕಿದ್ದಂತೆ ಕಣ್ಮರೆಯಾಗದ ಲೇಖಕರನ್ನು ಓದುಗರು ಹೆಚ್ಚು ನಂಬುತ್ತಾರೆ. ಓದುಗರು ನಿಮ್ಮನ್ನು ನಂಬಲು ಪ್ರಾರಂಭಿಸಿದಾಗ, ಅವರು ನಿಮ್ಮ ಕಥೆಗಳಿಗೆ ನಿಷ್ಠಾವಂತರಾಗಿ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ.

  7. 7

    ಶಿಸ್ತು ಮತ್ತು ವಿಶ್ರಾಂತಿಯ ನಡುವೆ ಸಮತೋಲನ ಕಾಯ್ದುಕೊಳ್ಳಿ

    ನಿಮ್ಮ ಬರವಣಿಗೆಯಲ್ಲಿ ನಿಯಮಿತವಾಗಿರಿ, ಆದರೆ ನಿಮಗಾಗಿ ವಿಶ್ರಾಂತಿ ಪಡೆಯಲು ಸಮಯವನ್ನು ನೀಡಿ. ಒಬ್ಬ ಉತ್ತಮ ಲೇಖಕರು ಪರಿಪೂರ್ಣವಾಗಿರಬೇಕಾಗಿಲ್ಲ; ಅವರು ತಮ್ಮ ಬರವಣಿಗೆಯ ಪಯಣದಲ್ಲಿ ಸ್ಥಿರವಾಗಿ, ಸ್ಪಷ್ಟವಾಗಿ ಮತ್ತು ತಮ್ಮ ಬಗ್ಗೆಯೇ ಹೆಚ್ಚು ವಿಶ್ವಾಸ ಉಳ್ಳವರಾಗಿದ್ದಲ್ಲಿ ಉತ್ತಮ .

ಬರೆಯುವ ಆನಂದ ನಿಮ್ಮದಾಗಲಿ!

— ಪ್ರತಿಲಿಪಿ ಬಳಗ

ಇದು ಉಪಯೋಗಕರವಾಯಿತೇ? ಪ್ರಾರಂಭನಲ್ಲಿ ಇನ್ನಷ್ಟು ಲೇಖನಗಳನ್ನು ಓದಿ. ಹೆಚ್ಚಿನ ಲೇಖನಗಳು