pratilipi-logo ಪ್ರತಿಲಿಪಿ
ಕನ್ನಡ
← All articles ಪ್ರಾರಂಭ

ಡ್ರಾಫ್ಟ್ ನಿಂದ ಪ್ರಕಟಣೆಯವರೆಗೆ: ಲೇಖಕರಿಗಾಗಿ ಸರಳ ಪ್ರತಿಲಿಪಿ ಪರಿಕರಗಳು

ಆತ್ಮೀಯ ಲೇಖಕರೇ,

ಪ್ರತಿಲಿಪಿಯಲ್ಲಿ ನೇರವಾಗಿ ನಿಮ್ಮ ಅಧ್ಯಾಯಗಳನ್ನು ಬರೆಯಲು, ಉಳಿಸಲು, ಎಡಿಟ್ ಮಾಡಲು ಮತ್ತು ಪ್ರಕಟಿಸಲು ಪ್ರತಿಲಿಪಿಯು ನಿಮಗೆ ಸರಳವಾದ ಪರಿಕರಗಳನ್ನು ಒದಗಿಸುತ್ತದೆ. ಈ ಪರಿಕರಗಳನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಕಥೆಗಳನ್ನು ಅಚ್ಚುಕಟ್ಟಾಗಿ ಮತ್ತು ಆತ್ಮವಿಶ್ವಾಸದಿಂದ ಪ್ರಕಟಿಸಲು ಸಹಾಯ ಮಾಡುತ್ತದೆ.

  1. 1

    ಬರೆಯುವ ಪುಟದಲ್ಲಿ ನೇರವಾಗಿ ಬರೆಯಿರಿ

    ಪ್ರತಿಲಿಪಿಯ ಬರೆಯುವ ಪುಟದಲ್ಲಿ ನೀವು ನೇರವಾಗಿ ನಿಮ್ಮ ಅಧ್ಯಾಯವನ್ನು ಟೈಪ್ ಮಾಡಬಹುದು. ಇದು ನಿಮ್ಮ ಕಥೆಯನ್ನು ಒಂದೇ ಸ್ಥಳದಲ್ಲಿ ಬರೆಯಲು, ಸಂಪಾದಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

  2. 2

    ಮೂಲಭೂತ ವಿನ್ಯಾಸಗಳನ್ನು ಬಳಸಿ

    ಪ್ರಮುಖ ಸಾಲುಗಳು ಅಥವಾ ಸಂಭಾಷಣೆಗಳನ್ನು ಎದ್ದು ಕಾಣುವಂತೆ ಮಾಡಲು ದಪ್ಪ ಅಕ್ಷರ, ಓರೆ ಅಕ್ಷರ ಮತ್ತು ಅಡಿಗೆರೆ ವಿನ್ಯಾಸಗಳನ್ನು ಬಳಸಿ. ಸ್ವಚ್ಛವಾದ ವಿನ್ಯಾಸವು ನಿಮ್ಮ ಅಧ್ಯಾಯವನ್ನು ಓದಲು ಸುಲಭ ಮತ್ತು ಹೆಚ್ಚು ಆನಂದದಾಯಕವಾಗಿಸುತ್ತದೆ.

  3. 3

    ಅಗತ್ಯವಿದ್ದಾಗ ಮಾತ್ರ ಲಿಂಕ್‌ಗಳು ಅಥವಾ ಚಿತ್ರಗಳನ್ನು ಸೇರಿಸಿ

    ಲಿಂಕ್‌ಗಳು ಅಥವಾ ಚಿತ್ರಗಳು ನಿಮ್ಮ ಓದುಗರಿಗೆ ನಿಜವಾಗಿಯೂ ಸಹಾಯ ಮಾಡುತ್ತವೆ ಎಂದಾದರೆ ಮಾತ್ರ ಅವುಗಳನ್ನು ಸೇರಿಸಿ. ಅತಿಯಾದ ದೃಶ್ಯಾವಳಿಗಳನ್ನು ಬಳಸುವುದನ್ನು ತಪ್ಪಿಸಿ, ಏಕೆಂದರೆ ಮುಖ್ಯ ಗಮನವು ಯಾವಾಗಲೂ ನಿಮ್ಮ ಕಥೆಯ ಮೇಲೆಯೇ ಇರಬೇಕು.

  4. 4

    ನಿಮ್ಮ ಕರಡು ಪ್ರತಿಯನ್ನು ಸುರಕ್ಷಿತವಾಗಿ ಉಳಿಸಿ

    ಸಂರಕ್ಷಿಸಿ ಬಟನ್ ನೀವು ಪ್ರಕಟಿಸಲು ಸಿದ್ಧರಾಗುವವರೆಗೆ ನಿಮ್ಮ ಅಧ್ಯಾಯವನ್ನು ಖಾಸಗಿಯಾಗಿ ಇರಿಸುತ್ತದೆ. ಯಾವುದೇ ಆತುರವಿಲ್ಲದೆ ನೀವು ಯಾವಾಗ ಬೇಕಾದರೂ ನಿಮ್ಮ ಡ್ರಾಫ್ಟ್ ಪ್ರತಿಯನ್ನು ಎಡಿಟ್ ಮಾಡಬಹುದು ಮತ್ತು ಉತ್ತಮಗೊಳಿಸಬಹುದು.

  5. 5

    ಪ್ರಕಟಿಸುವ ಮುನ್ನ ಪ್ರಿವ್ಯೂ ಪರಿಶೀಲಿಸಿ

    ಪ್ರಿವ್ಯೂ ನಿಮ್ಮ ಅಧ್ಯಾಯವು ಓದುಗರಿಗೆ ಹೇಗೆ ಕಾಣಿಸುತ್ತದೆ ಎಂಬುದನ್ನು ನೋಡಲು ಸಹಾಯ ಮಾಡುತ್ತದೆ. ಪ್ರಕಟಿಸುವ ಮುನ್ನ ಅಕ್ಷರಗಳ ನಡುವಿನ ಅಂತರ, ಪ್ಯಾರಾಗ್ರಾಫ್ ವಿಭಜನೆ, ಸಂಭಾಷಣೆ ಮತ್ತು ವಿನ್ಯಾಸಗಳನ್ನು ಮತ್ತೊಮ್ಮೆ ಪರಿಶೀಲಿಸಿ.

  6. 6

    ಆತ್ಮವಿಶ್ವಾಸದಿಂದ ಪ್ರಕಟಿಸಿ

    ನಿಮ್ಮ ಅಧ್ಯಾಯವನ್ನು ಸರಿಯಾಗಿ ಮರುಪರಿಶೀಲಿಸಿದ ನಂತರವೇ ಪ್ರಕಟಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ. ಎಚ್ಚರಿಕೆಯ ಪ್ರಕಟಣೆಯು ನಿಮ್ಮ ಕಥೆಗೆ ಹೆಚ್ಚು ಅಚ್ಚುಕಟ್ಟಾದ ಮತ್ತು ವೃತ್ತಿಪರ ಸ್ಪರ್ಶವನ್ನು ನೀಡುತ್ತದೆ.

  7. 7

    ನಿಮ್ಮ ಅಧ್ಯಾಯಗಳ ಪ್ರಕಟಿಸುವಿಕೆಯ ಸಮಯ ಮತ್ತು ದಿನಾಂಕಗಳನ್ನು ಮುಂಚಿತವಾಗಿ ನಿಗದಿಪಡಿಸಿ

    ಮುಂದೆ ಪ್ರಕಟಗೊಳ್ಳುವ ಅಧ್ಯಾಯಗಳನ್ನು ಭವಿಷ್ಯದ ದಿನಾಂಕ ಮತ್ತು ಸಮಯಕ್ಕೆ ನೀವು ಮುಂಚಿತವಾಗಿ ಷೆಡ್ಯೂಲ್ ಮಾಡಿ ಓದುಗರಿಗೆ ಮಾಹಿತಿ ನೀಡಬಹುದು. ನಿಯಮಿತ ಮಾಹಿತಿಗಳು ಓದುಗರು ನಿಮ್ಮ ಕಥೆಗೆ ಮರಳಿ ಬರುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ.

ಬರೆಯುವ ಆನಂದ ನಿಮ್ಮದಾಗಲಿ!

— ಪ್ರತಿಲಿಪಿ ಬಳಗ

ಇದು ಉಪಯೋಗಕರವಾಯಿತೇ? ಪ್ರಾರಂಭನಲ್ಲಿ ಇನ್ನಷ್ಟು ಲೇಖನಗಳನ್ನು ಓದಿ. ಹೆಚ್ಚಿನ ಲೇಖನಗಳು