pratilipi-logo ಪ್ರತಿಲಿಪಿ
ಕನ್ನಡ
← All articles ಗಳಿಕೆ ಮತ್ತು ಸುರಕ್ಷತೆ

ಪ್ರತಿಲಿಪಿಯಲ್ಲಿ ನಿಮ್ಮ ಗಳಿಕೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

ಪ್ರಿಯ ಲೇಖಕರೇ,

ಪ್ರತಿಲಿಪಿಯಲ್ಲಿ ಯಶಸ್ವಿ ಬರವಣಿಗೆಯ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದು ಎಂದರೆ ಕೇವಲ ಹೆಚ್ಚು ಕಥೆಗಳನ್ನು ಬರೆಯುವುದಷ್ಟೇ ಅಲ್ಲ. ಇದು ಆಕರ್ಷಕವಾದ ಕಂಟೆಂಟ್ ರಚಿಸುವುದು, ನಿಯಮಿತವಾಗಿ ಪಬ್ಲಿಷ್ ಮಾಡುವುದು ಮತ್ತು ನಿಮ್ಮ ಕೃತಿಗಳನ್ನು ಓದುಗರು ದೀರ್ಘಕಾಲದವರೆಗೆ ಬೆಂಬಲಿಸುವಂತೆ ಪ್ರೇರೇಪಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ನಿಮ್ಮ ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಓದುಗರ ಬಳಗವನ್ನು ಬೆಳೆಸಿಕೊಳ್ಳಲು ಕೆಲವು ಪ್ರಾಯೋಗಿಕ ಸಲಹೆಗಳು ಇಲ್ಲಿವೆ.

ಪ್ರೀಮಿಯಂ ಗಳಿಕೆಯ ಅವಕಾಶಗಳನ್ನು ಪಡೆದುಕೊಳ್ಳಿ :

ನೀವು ಗೋಲ್ಡನ್ ಬ್ಯಾಡ್ಜ್ (200 ಫಾಲೋವರ್ಸ್) ಪಡೆದ ತಕ್ಷಣ, ಪ್ರೀಮಿಯಂ ಧಾರಾವಾಹಿಗಳನ್ನು ಪಬ್ಲಿಷ್ ಮಾಡಲು ಅರ್ಹರಾಗುತ್ತೀರಿ. ಈಗಾಗಲೇ ಪ್ರಕಟಿಸಿರುವ 16 ಅಥವಾ ಅದಕ್ಕಿಂತ ಹೆಚ್ಚು ಅಧ್ಯಾಯಗಳಿರುವ ಧಾರಾವಾಹಿಗಳನ್ನು ಪ್ರೀಮಿಯಂ ಆಗಿ ಪರಿವರ್ತಿಸಬಹುದು ಮತ್ತು ಹೊಸ ಧಾರಾವಾಹಿಗಳು ಮೊದಲ 15 ಉಚಿತ ಅಧ್ಯಾಯಗಳ ನಂತರ ಸ್ವಯಂಚಾಲಿತವಾಗಿ ಪ್ರೀಮಿಯಂ ಆಗಿ ಬದಲಾಗುತ್ತವೆ. ಓದುಗರು ಲಾಕ್ ಆಗಿರುವ ಅಧ್ಯಾಯಗಳನ್ನು ಪ್ರತಿಲಿಪಿ ಪ್ರೀಮಿಯಂ, ಸೂಪರ್‌ಫ್ಯಾನ್ ಸಬ್‌ಸ್ಕ್ರಿಪ್ಶನ್, ಕಾಯಿನ್‌ಗಳು ಅಥವಾ ಡೈಲಿ ಅನ್‌ಲಾಕ್‌ಗಳ ಮೂಲಕ ಓದಬಹುದು. ಓದುಗರು ನಿಮ್ಮ ಕಂಟೆಂಟ್ ಅನ್ನು ಅನ್‌ಲಾಕ್ ಮಾಡಿದಾಗ ಕ್ರಿಯೇಟ್ ಆಗುವ ಮೌಲ್ಯದಲ್ಲಿ, ಒಬ್ಬ ಲೇಖಕರಾಗಿ ನಿಮಗೂ ಒಂದು ಪಾಲನ್ನು ಗಳಿಕೆಯಾಗಿ ನೀಡಲಾಗುತ್ತದೆ.

  1. 1

    ನಿಮ್ಮ ಕೃತಿಗೆ ಬೆಂಬಲ ನೀಡಲು ಓದುಗರನ್ನು ಹುರಿದುಂಬಿಸಿ

    ಬಹಳಷ್ಟು ಓದುಗರು ತಮಗೆ ಇಷ್ಟವಾದ ಲೇಖಕರನ್ನು ಬೆಂಬಲಿಸಲು ಬಯಸುತ್ತಾರೆ, ಆದರೆ ಅವರು ನಿಮಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಅವರಿಗೆ ಆಗಾಗ ನೆನಪಿಸಬೇಕಾಗುತ್ತದೆ. ಪ್ರೀಮಿಯಂ ಮತ್ತು ಸೂಪರ್‌ಫ್ಯಾನ್ ಸಬ್‌ಸ್ಕ್ರಿಪ್ಶನ್‌ಗಳ ಪ್ರಯೋಜನಗಳನ್ನು ನಿಯಮಿತವಾಗಿ ಅವರಿಗೆ ತಿಳಿಸಿ. ನಿಮ್ಮ ಕಥೆಗಳು ಅವರಿಗೆ ಇಷ್ಟವಾಗುತ್ತಿದ್ದರೆ ಸಬ್‌ಸ್ಕ್ರೈಬ್ ಮಾಡಿಕೊಳ್ಳಲು ಪ್ರೋತ್ಸಾಹಿಸಿ. ಅಧ್ಯಾಯದ ಕೊನೆಯಲ್ಲಿ ನೀವು ಮಾಡುವ ಒಂದು ಸಣ್ಣ ಮನವಿ ಕೂಡ ಕೆಲವೊಮ್ಮೆ ದೊಡ್ಡ ಬದಲಾವಣೆ ತರಬಹುದು.

  2. 2

    ಗಟ್ಟಿಯಾದ ಓದುಗರ ಸಮುದಾಯವನ್ನು ಬೆಳೆಸಿಕೊಳ್ಳಿ

    ತಮ್ಮೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಲೇಖಕರನ್ನು ಓದುಗರು ಹೆಚ್ಚು ಬೆಂಬಲಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಆಡಿಯನ್ಸ್ ಜೊತೆ ಕನೆಕ್ಟ್ ಆಗಲು ಪೋಸ್ಟ್‌ಗಳು, ಚಾಟ್‌ರೂಮ್‌ಗಳು, ಪ್ರಶ್ನೋತ್ತರ (Q&A) ಸೆಷನ್‌ಗಳು ಮತ್ತು ಧನ್ಯವಾದ ಸಂದೇಶಗಳನ್ನು ಬಳಸಿ. ನಿಮ್ಮ ಬರವಣಿಗೆಯ ಜರ್ನಿ, ಪಾತ್ರಗಳ ಹಿಂದಿನ ಆಲೋಚನೆಗಳು ಮತ್ತು ಬರವಣಿಗೆಯ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಇದು ಓದುಗರು ನಿಮ್ಮ ಕಥೆಗಳು ಹಾಗೂ ನಿಮ್ಮ ಯಶಸ್ಸಿನೊಂದಿಗೆ ಹೆಚ್ಚು ಭಾವನಾತ್ಮಕವಾಗಿ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ.

  3. 3

    ಸುದೀರ್ಘ ಧಾರಾವಾಹಿಗಳನ್ನು ಸಕ್ರಿಯವಾಗಿ ಬರೆಯಿರಿ

    ದೊಡ್ಡ ಧಾರಾವಾಹಿಗಳು ಓದುಗರು ನಿಮ್ಮ ಕಥೆಯೊಂದಿಗೆ ದೀರ್ಘಕಾಲ ತೊಡಗಿಸಿಕೊಳ್ಳಲು ಮತ್ತು ಧಾರಾವಾಹಿಯ ಅಧ್ಯಾಯಗಳನ್ನು ಅನ್‌ಲಾಕ್ ಮಾಡುತ್ತಾ ಸಾಗಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತವೆ. ಹೆಚ್ಚು ಅಧ್ಯಾಯಗಳನ್ನು ಹೊಂದಿರುವ ಕಥೆಗಳು ಸಾಮಾನ್ಯವಾಗಿ ಉತ್ತಮವಾಗಿ ಯಶಸ್ವಿಯಾಗುತ್ತವೆ; ಏಕೆಂದರೆ ಓದುಗರು ಅದರಲ್ಲಿರುವ ಪಾತ್ರಗಳು ಮತ್ತು ಕಥೆಯ ಹರಿವಿನೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿರುತ್ತಾರೆ. ನಿಮಗಿರುವ ಅನುಭವದ ಆಧಾರದ ಮೇಲೆ, ಓದುಗರಿಗೆ ಓದಲು ಹೆಚ್ಚಿನ ಕಂಟೆಂಟ್ ಸಿಗುವಂತಹ ಸುದೀರ್ಘ ಧಾರಾವಾಹಿಗಳ ಭಂಡಾರವನ್ನೇ ಸೃಷ್ಟಿಸುವ ಗುರಿ ಹೊಂದಿರಿ.

  4. 4

    ಕಥೆಯ ಆರಂಭ ಆಕರ್ಷಕವಾಗಿರಲಿ ಮತ್ತು ಆ ವೇಗವನ್ನು ಕಾಯ್ದುಕೊಳ್ಳಿ

    ಕಥೆಯ ಆರಂಭವು ತುಂಬಾನೇ ಕುತೂಹಲಕಾರಿಯಾಗಿದ್ದರೆ, ಅದು ಓದುಗರನ್ನು ಪ್ರೀಮಿಯಂ ಅಧ್ಯಾಯಗಳವರೆಗೂ ಕರೆದುಕೊಂಡು ಹೋಗುತ್ತದೆ. ನಿಮ್ಮ ಕಥೆಯ ಹರಿವು ಮುಂದೆ ಸಾಗುತ್ತಿರಲಿ, ಆರಂಭದಲ್ಲೇ ಪ್ರಮುಖ ಟ್ವಿಸ್ಟ್‌ಗಳು ಅಥವಾ ಸಂಘರ್ಷಗಳನ್ನು ಪರಿಚಯಿಸಿ, ಮತ್ತು ಪ್ರತಿ ಅಧ್ಯಾಯವನ್ನು ತೀವ್ರ ಕುತೂಹಲ ಅಥವಾ ರೋಚಕ ತಿರುವಿನೊಂದಿಗೆ (ಕ್ಲಿಫ್‌ಹ್ಯಾಂಗರ್) ಕೊನೆಗೊಳಿಸಿ. ಮುಂದೆ ಏನಾಗಬಹುದು ಎಂಬ ಕುತೂಹಲವಿದ್ದಾಗ ಓದುಗರು ಮುಂದಿನ ಅಧ್ಯಾಯಗಳನ್ನು ಅನ್‌ಲಾಕ್ ಮಾಡಿ ಓದಲು ಹೆಚ್ಚು ಆಸಕ್ತಿ ತೋರಿಸುತ್ತಾರೆ.

  5. 5

    ನಿಯಮಿತವಾಗಿ ಪಬ್ಲಿಷ್ ಮಾಡಿ

    ಓದುಗರ ಬಳಗವನ್ನು ಬೆಳೆಸಿಕೊಳ್ಳುವಲ್ಲಿ ನಿರಂತರತೆ ಅತ್ಯಂತ ಪ್ರಮುಖವಾದ ಅಂಶವಾಗಿದೆ. ಹೊಸ ಅಧ್ಯಾಯಗಳು ಯಾವಾಗ ಬರುತ್ತವೆ ಎಂದು ತಿಳಿದುಕೊಳ್ಳಲು ಓದುಗರು ಇಷ್ಟಪಡುತ್ತಾರೆ. ಹಾಗೆಯೇ ನಿಯಮಿತವಾಗಿ ಪಬ್ಲಿಷ್ ಮಾಡುವುದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಕಥೆಗಳು ಹೆಚ್ಚು ಜನರಿಗೆ ಕಾಣಿಸಲು ನೆರವಾಗುತ್ತದೆ. ನೀವು ಪ್ರತಿದಿನ ಪಬ್ಲಿಷ್ ಮಾಡಿ ಅಥವಾ ವಾರದಲ್ಲಿ ಕೆಲವು ಬಾರಿ ಪಬ್ಲಿಷ್ ಮಾಡಿ, ಒಂದು ನಿಗದಿತ ಸಮಯವನ್ನು ಪಾಲಿಸುವುದರಿಂದ ಓದುಗರು ನಿಮ್ಮ ಕಥೆಗಳನ್ನು ಹುಡುಕಿಕೊಂಡು ಬರುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ.

  6. 6

    ಸ್ಪರ್ಧೆಗಳು ಮತ್ತು ಚಾಲೆಂಜ್‌ಗಳಲ್ಲಿ ಭಾಗವಹಿಸಿ

    ಬರವಣಿಗೆಯ ಸ್ಪರ್ಧೆಗಳು, ಈವೆಂಟ್‌ಗಳು ಮತ್ತು ಚಾಲೆಂಜ್‌ಗಳು ನಿಮ್ಮ ಕೃತಿಗಳನ್ನು ಹೊಸ ಓದುಗರಿಗೆ ತಲುಪಿಸಲು ಸಹಾಯ ಮಾಡುತ್ತವೆ. ಈ ಅವಕಾಶಗಳು ನಿಮ್ಮ ಕಥೆಗಳು ಹೆಚ್ಚು ಜನರಿಗೆ ತಲುಪುವಂತೆ ಮಾಡುವುದಷ್ಟೇ ಅಲ್ಲದೆ, ನಿಮ್ಮಲ್ಲಿ ಬರವಣಿಗೆಯ ಶಿಸ್ತನ್ನು ಬೆಳೆಸುತ್ತವೆ, ಬರೆಯುವ ವೇಗವನ್ನು ಹೆಚ್ಚಿಸುತ್ತವೆ ಮತ್ತು ಸಮಯದೊಂದಿಗೆ ನಿಮ್ಮ ಬಳಿ ಕಥೆಗಳ ದೊಡ್ಡ ಸಂಗ್ರಹವೇ ಇರುವಂತೆ ಮಾಡುತ್ತವೆ.

  7. 7

    ಮೊದಲ ನೋಟದಲ್ಲೇ ಗಮನ ಸೆಳೆಯಿರಿ

    ಓದುಗರು ನಿಮ್ಮ ಬರವಣಿಗೆಯನ್ನು ಓದುವುದಕ್ಕೂ ಮುನ್ನ, ಅವರು ನೋಡುವುದು ನಿಮ್ಮ ಕಥೆಯ ಕವರ್ ಇಮೇಜ್, ಶೀರ್ಷಿಕೆ ಮತ್ತು ವಿವರಣೆಯನ್ನು ಒಂದು ಆಕರ್ಷಕ ಕವರ್, ಸ್ಪಷ್ಟವಾದ ಶೀರ್ಷಿಕೆ ಮತ್ತು ಕುತೂಹಲ ಕೆರಳಿಸುವ ವಿವರಣೆಯು ಓದುಗರು ನಿಮ್ಮ ಕಥೆಯನ್ನು ಓದಲು ಶುರು ಮಾಡುವ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಈ ಮೊದಲ ಇಂಪ್ರೆಷನ್ ಯಾವಾಗಲೂ ಹೆಚ್ಚಿನ ಓದುಗರನ್ನು ತಂದುಕೊಡುತ್ತದೆ ಮತ್ತು ದೀರ್ಘಾವಧಿಯ ಬೆಳವಣಿಗೆಗೆ ಕಾರಣವಾಗುತ್ತದೆ.

  8. 8

    ಸಾಮಾನ್ಯ ತಪ್ಪುಗಳನ್ನು ತಪ್ಪಿಸಿ

    ನಿಮ್ಮ ಬರವಣಿಗೆ ಎಷ್ಟೇ ಉತ್ತಮವಾಗಿದ್ದರೂ, ಕೆಲವು ತಪ್ಪು ಹವ್ಯಾಸಗಳು ನಿಮ್ಮ ಗಳಿಕೆಯನ್ನು ಸೀಮಿತಗೊಳಿಸಬಹುದು. ಪಬ್ಲಿಷ್ ಮಾಡುವಲ್ಲಿ ದೀರ್ಘಾವಧಿಯ ಗ್ಯಾಪ್ ತೆಗೆದುಕೊಳ್ಳುವುದು, ಕಥೆಗಳನ್ನು ಅಪೂರ್ಣವಾಗಿ ಬಿಡುವುದು, ಕಥೆಯ ಆರಂಭ ನಿರಸವಾಗಿರುವುದು, ಕಳಪೆ ಪ್ರೆಸೆಂಟೇಶನ್ ಮತ್ತು ಓದುಗರ ಫೀಡ್‌ಬ್ಯಾಕ್ ಅನ್ನು ನಿರ್ಲಕ್ಷಿಸುವುದು ಓದುಗರ ಸಂಖ್ಯೆ ಕಡಿಮೆಯಾಗಲು ಕಾರಣವಾಗಬಹುದು. ದೀರ್ಘಕಾಲದ ಯಶಸ್ಸಿಗಾಗಿ ನಿರಂತರತೆ ಮತ್ತು ಗುಣಮಟ್ಟದ ಮೂಲಕ ಓದುಗರಲ್ಲಿ ನಂಬಿಕೆ ಮೂಡಿಸುವುದು ಅತ್ಯಗತ್ಯ.

    ಕೊನೆಯ ಮಾತು ಯಶಸ್ವಿ ಲೇಖಕರು ಪ್ರಮುಖವಾಗಿ ಮೂರು ವಿಷಯಗಳ ಕಡೆಗೆ ಗಮನ ಹರಿಸುತ್ತಾರೆ: ಆಕರ್ಷಕ ಕಥೆಗಳನ್ನು ರಚಿಸುವುದು, ನಿಯಮಿತವಾಗಿ ಪಬ್ಲಿಷ್ ಮಾಡುವುದು ಮತ್ತು ಓದುಗರೊಂದಿಗೆ ಗಟ್ಟಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು. ನಿಮ್ಮ ಆಡಿಯನ್ಸ್‌ಗೆ ನೀವು ಎಷ್ಟು ಉತ್ತಮ ಕಂಟೆಂಟ್ ನೀಡುತ್ತೀರೋ, ಅಷ್ಟೇ ಹೆಚ್ಚಿನ ಓದುಗರು, ಜನಪ್ರಿಯತೆ ಮತ್ತು ಗಳಿಕೆಯ ಅವಕಾಶಗಳು ನಿಮ್ಮದಾಗುತ್ತವೆ.

ಬರೆಯುವ ಆನಂದ ನಿಮ್ಮದಾಗಲಿ!

— ಪ್ರತಿಲಿಪಿ ಬಳಗ

ಇದು ಉಪಯೋಗಕರವಾಯಿತೇ? ಗಳಿಕೆ ಮತ್ತು ಸುರಕ್ಷತೆನಲ್ಲಿ ಇನ್ನಷ್ಟು ಲೇಖನಗಳನ್ನು ಓದಿ. ಹೆಚ್ಚಿನ ಲೇಖನಗಳು