pratilipi-logo ಪ್ರತಿಲಿಪಿ
ಕನ್ನಡ

ಇದೀಗ ನಿಮ್ಮ ಧಾರಾವಾಹಿಗಳನ್ನು ನೀವೇ ಪ್ರೀಮಿಯಂಗೆ ಸೇರಿಸಬಹುದು!

01 ಆಗಸ್ಟ್ 2023

ಆತ್ಮೀಯ ಸಾಹಿತಿಗಳೇ,

ನೀವು ಸೌಖ್ಯವಾಗಿರುವಿರಿ ಎಂದು ಭಾವಿಸುತ್ತೇವೆ.

ಧಾರಾವಾಹಿಗಳನ್ನು ಸಾಹಿತಿಗಳೇ ಪ್ರೀಮಿಯಂಗೆ ಸೇರಿಸುವ ಬಹುನಿರೀಕ್ಷಿತ ಸೌಲಭ್ಯ ಇದೀಗ ಪ್ರತಿಲಿಪಿ ಕನ್ನಡದಲ್ಲಿ ಬಿಡುಗಡೆಗೊಂಡಿದೆ ಎಂದು ತಿಳಿಸಲು ಹರ್ಷಿಸುತ್ತೇವೆ! ಈ ಸೌಲಭ್ಯವನ್ನು ಪಡೆಯಲು ದಯವಿಟ್ಟು ನಿಮ್ಮ ಅಪ್ಲಿಕೇಶನ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಣ ಮಾಡಿಕೊಳ್ಳಬೇಕೆಂದು ಮನವಿ.

ನೀವು ನಿಮ್ಮ ಧಾರಾವಾಹಿಗಳನ್ನು ಪ್ರಸ್ತುತ ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುತ್ತಿದ್ದಲ್ಲಿ, ಈ ಬದಲಾವಣೆಗಳು ನಿಮಗೆ ಲಭ್ಯವಾಗುತ್ತವೆ ->


ಇದು ಪ್ರತಿಲಿಪಿಯಲ್ಲಿ ನನ್ನ ಗಳಿಕೆಯ ಅವಕಾಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?

ಈ ಮೂಲಕ ನಾವು ಎಲ್ಲ ಗೋಲ್ಡನ್ ಬ್ಯಾಡ್ಜ್ ಲೇಖಕ/ಲೇಖಕಿಯರಿಗೆ ಹಣ ಸಂಪಾದನೆಯ ಸಮಾನ ಅವಕಾಶ ಒದಗಿಸುತ್ತಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ. ಈಗ ನೀವು ನಿಮ್ಮ ಮುಕ್ತಾಯಗೊಂಡ ಕೃತಿಗಳನ್ನು ಪ್ರೀಮಿಯಂ ವಿಭಾಗಕ್ಕೆ ಸೇರಿಸಲು ಪ್ರತಿಲಿಪಿ ತಂಡವನ್ನು ಸಂಪರ್ಕಿಸಿ ವಿನಂತಿಸಬೇಕಿಲ್ಲ. ಮುಕ್ತಾಯಗೊಂಡಿರುವ ನಿಮ್ಮ ಕೃತಿಗಳನ್ನು ನೀವೇ ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಗೆ ಸೇರಿಸಬಹುದು..

ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ನಾನೀಗ ಮುಂದುವರೆಸುತ್ತಿರುವ ಧಾರಾವಾಹಿಗಳು ಏನಾಗುತ್ತವೆ ?

ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ಮುಂದುವರೆಯುತ್ತಿರುವ ಧಾರಾವಾಹಿಗಳೆಲ್ಲವೂ ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯ ಅಡಿಯಲ್ಲಿ ತಾನಾಗಿಯೇ ಸೇರಲ್ಪಡುತ್ತವೆ. ಆದರೆ, ಓದುಗರಿಗೆ ಕೆಲವು ಹೊಸ ಅನುಭವಗಳು ಇದರಿಂದಾಗುತ್ತವೆ. ಈ ಯೋಜನೆಯಡಿಯಲ್ಲಿ ನಿಮ್ಮ ಮುಂದುವರೆಯುತ್ತಿರುವ ಧಾರಾವಾಹಿಗಳನ್ನು ತಂದಲ್ಲಿ, ಇದರ ೧೬ನೆಯ ಅಧ್ಯಾಯದಿಂದ ಪ್ರತಿಯೊಂದು ಅಧ್ಯಾಯವೂ ಲಾಕ್ ಆಗಲ್ಪಡುತ್ತದೆ. ಈ ಮೊದಲು, ಯಾವುದೇ ಸಬ್ಸ್ಕ್ರಿಪ್ಷನ್ ಯೋಜನೆ ಖರೀದಿಸದ ಎಲ್ಲ ಓದುಗರೂ ಹೊಸ ಅಧ್ಯಾಯ ಪ್ರಕಟಗೊಂಡ ಐದು ದಿನಗಳ ಬಳಿಕ ಉಚಿತವಾಗಿ ಓದಬಹುದಿತ್ತು. ಈ ಬದಲಾವಣೆಯ ಬಳಿಕ, ಉಚಿತವಾಗಿ ಓದಲು, ಪ್ರೀಮಿಯಂ ಧಾರಾವಾಹಿಗಳ ಅಧ್ಯಾಯಗಳನ್ನು ದಿನಕ್ಕೊಂದರಂತೆ ಅನ್ಲಾಕ್ ಮಾಡಿದಂತೆ, ಹಿಂದಿನ ಅಧ್ಯಾಯವನ್ನು ಸಂಪೂರ್ಣವಾಗಿ ಓದಿದ ಮಾರನೆಯ ಅದರ ಮುಂದಿನ ಅಧ್ಯಾಯ ಅನ್ಲಾಕ್ ಆಗುತ್ತದೆ.

 

ಪ್ರತಿಲಿಪಿ ಈ ಬದಲಾವಣೆಗಳನ್ನು ಯಾಕೆ ತರುತ್ತಿದೆ ?

ತಮ್ಮ ಕೃತಿಗಳ ಮೂಲಕ ಹೆಚ್ಚಿನ ಹಣ ಸಂಪಾದಿಸಬಯಸುವ ಎಲ್ಲ ಅರ್ಹ ಲೇಖಕ/ಲೇಖಕಿಯರಿಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಈ ಬದಲಾವಣೆ ಪರಿಚಯಿಸಲಾಗಿದೆ.


ನನ್ನ ಓದುಗರಿಗೆ ಯಾವೆಲ್ಲ ರೀತಿಯ ಬದಲಾವಣೆಗಳು ಲಭ್ಯವಾಗುತ್ತವೆ ?

ಮುಂದುವರೆಯುತ್ತಿರುವ ಮತ್ತು ಮುಕ್ತಾಯಗೊಂಡಿರುವ ಎಲ್ಲ ಕೃತಿಗಳೂ ಪ್ರೀಮಿಯಂ ಅಡಿಯಲ್ಲಿ ಲಭ್ಯವಾಗುತ್ತವೆ. ಈವರೆಗೂ ಮುಂದುವರೆಯುತ್ತಿರುವ ಕೃತಿಗಳನ್ನು ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಕರ್ತೃಗಳು ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿಯೂ, ಮುಕ್ತಾಯಗೊಂಡ ಕೃತಿಗಳನ್ನು ಪ್ರತಿಲಿಪಿ ಆಯ್ಕೆ ಮಾಡಿ ಲೇಖಕ/ಲೇಖಕಿಯರನ್ನು ಸಂಪರ್ಕಿಸಿ ಅವರು ಅನುಮತಿಸಿದಲ್ಲಿ ಪ್ರೀಮಿಯಂ ವಿಭಾಗದಡಿಯಲ್ಲಿಯೂ ಸೇರಿಸುತ್ತಿದ್ದರು.
ಈ ಹೊಸ ಸೌಲಭ್ಯದಡಿಯಲ್ಲಿ ಆಯಾ ಲೇಖಕ ಲೇಖಕಿಯರುತಮ್ಮ ಮುಕ್ತಾಯಗೊಂಡ ಮತ್ತು ಮುಂದುವರೆಯುತ್ತಿರುವ ಧಾರಾವಾಹಿಗಳನ್ನು ಪ್ರೀಮಿಯಂ ವಿಭಾಗಕ್ಕೆ ಸೇರಿಸಲು ಬಯಸುವ ಧಾರಾವಾಹಿಗಳ ಅಧ್ಯಾಯಗಳು ಓದುಗರಿಗೆ ೧೬ನೆಯ ಅಧ್ಯಾಯದಿಂದ ಲಾಕ್ ಆಗುತ್ತವೆ. ಅದಕ್ಕೂ ಮೊದಲಿನ ಎಲ್ಲ ಅಧ್ಯಾಯಗಳನ್ನೂ ಉಚಿತವಾಗಿ ಒಮ್ಮೆಲೇ ಓದಬಹುದು.
ಓದುಗರು ಓದಿದ ಹಿಂದಿನ ಅಧ್ಯಾಯದ ನಂತರದ ಅಧ್ಯಾಯ ಮರುದಿನವೇ ಅನ್ಲಾಕ್ ಆಗುತ್ತದೆ.
ಈ ಹಿಂದೆ ಪ್ರೀಮಿಯಂ ಅಡಿಯಲ್ಲಿರುವ ಮುಕ್ತಾಯಗೊಂಡ ಕೃತಿಗಳನ್ನು ಸಂಪೂರ್ಣ ಉಚಿತವಾಗಿ ಓದಬಯಸುತ್ತಿದ್ದ ಓದುಗರಿಗೆ ಪ್ರತಿನಿತ್ಯ ಅವರು ಓದಿದ ಅಧ್ಯಾಯದ ಮುಂದಿನ ಅಧ್ಯಾಯ ಅನ್ಲಾಕ್ ಮರುದಿನ ಆಗುತ್ತಿತ್ತು. ಹೊಸ ಸೌಲಭ್ಯದಡಿಯಲ್ಲಿ ಮುಂದುವರೆಯುತ್ತಿರುವ ಕೃತಿಗಳ ಅಧ್ಯಾಯಗಳೂ ಸಹ ಹಿಂದಿನ ಅಧ್ಯಾಯ ಓದಿ ಮುಗಿಸಿದ ಮರುದಿನ ಅನ್ಲಾಕ್ ಆಗುತ್ತವೆ. ಅವರು ಎಲ್ಲ ಅಧ್ಯಾಯಗಳನ್ನೂ ಒಮ್ಮೆಲೇ ಓದಬಯಸಿದಲ್ಲಿ, ಆಯಾ ಲೇಖಕ/ಲೇಖಕಿಯರನ್ನು ಸಬ್ಸ್ಕ್ರೈಬ್ ಮಾಡಬಹುದು ಅಥವಾ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಖರೀದಿಸಬಹುದು. ಅಥವಾ ಪ್ರತಿ ಅಧ್ಯಾಯಕ್ಕೆ ಐದು ನಾಣ್ಯಗಳಂತೆ ವ್ಯಯಿಸಿ ಅನ್ಲಾಕ್ ಮಾಡಬಹುದು.

ನಾನು ನನ್ನ ಮುಂದುವರೆಯುತ್ತಿರುವ ಧಾರಾವಾಹಿಯನ್ನು ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯಡಿಯಲ್ಲಿ ಹೇಗೆ ತರಬಹುದು ?
ಮುಂದುವರೆಯುತ್ತಿರುವ ಕೃತಿಗಳ ಮೊದಲ ೧೫ ಅಧ್ಯಾಯಗಳು ಉಚಿತವಾಗಿರುತ್ತವೆ. ೧೬ನೆಯ ಅಧ್ಯಾಯ ಪ್ರಕಟಗೊಂಡಾಗ ಅದು ತಾನಾಗಿಯೇ ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯಡಿಯಲ್ಲಿ ಬರುತ್ತದೆ.

ಈಗಾಗಲೇ ಮುಕ್ತಾಯಗೊಂಡಿರುವ ನನ್ನ ಧಾರಾವಾಹಿಗಳನ್ನು ಹೇಗೆ ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯಡಿಯಲ್ಲಿ ತರಬಹುದು ?

ನೀವು ಪ್ರಸ್ತುತ ಮುಂದುವರೆಸುತ್ತಿರುವ ಧಾರಾವಾಹಿಗಳನ್ನು ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಯೋಜನೆಯಡಿಲ್ಲಿ ಪ್ರಕಟಿಸುತ್ತಿದ್ದರೆ, ಅದು ತಾನಾಗಿಯೇ ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯಡಿಯಲ್ಲಿ ಸೇರ್ಪಡೆಯಾಗುತ್ತದೆ. ನೀವು ಇದಕ್ಕೆ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯ ಇರುವುದಿಲ್ಲ. ಆದರೆ, ಈಗಾಗಲೇ ಮುಕ್ತಾಯಗೊಂಡ ನಿಮ್ಮ ಧಾರಾವಾಹಿಗಳನ್ನು ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯಡಿಯಲ್ಲಿ ತರಬಯಸಿದಲ್ಲಿ, ಬರೆಯಿರಿ ವಿಭಾಗಕ್ಕೆ ಹೋಗಿ ‘ಪ್ರಕಟಿತ ಬರಹಗಳು’ ಅಡಿಯಲ್ಲಿರುವ ನಿಮ್ಮ ಧಾರಾವಾಹಿಗಳ ಮೇಲೆ ಕ್ಲಿಕ್ ಮಾಡಿ, ‘ಇತರೆ ಮಾಹಿತಿಗಳನ್ನು ಎಡಿಟ್ ಮಾಡಿ’ ಮೇಲೆ ಕ್ಲಿಕ್ ಮಾಡಿ, ಈ ಯೋಜನೆಯಡಿಯಲ್ಲಿ ಆಯಾ ಧಾರಾವಾಹಿಗಳನ್ನು ತರಬಹುದು.


ನಾನು ನನ್ನ ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯಡಿಯಲ್ಲಿರುವ ಧಾರಾವಾಹಿಯನ್ನು ಇದರಿಂದ ಹೊರತರಬಯಸಿದಲ್ಲಿ ಅದಕ್ಕೆ ಅವಕಾಶವಿದೆಯೇ ?

ನೀವು ನೇರವಾಗಿ ಇದರಿಂದ ನಿಮ್ಮ ಧಾರಾವಾಹಿಯನ್ನು ಹೊರತೆಗೆಯಲು ಅವಕಾಶವಿಲ್ಲ. ಇತರೆ ಮಾಹಿತಿಗಳನ್ನು ಎಡಿಟ್ ಮಾಡಿ ವಿಭಾಗದಲ್ಲಿ‘Make it part of paid program’ ನಲ್ಲಿ ‘no’ ಆಯ್ಕೆ ಮಾಡಬೇಕಾಗುತ್ತದೆ. ಇದರಿಂದ ನಮ್ಮ ತಂಡಕ್ಕೆ ನೇರವಾಗಿ ಸೂಚನೆ ಲಭಿಸಿ, ನಾವು ನಿಮ್ಮನ್ನು ಮುಂದಿನ ೭೨ ಗಂಟೆಗಳ ಒಳಗೆ ಸಂಪರ್ಕಿಸಿ ಧಾರಾವಾಹಿಯನ್ನು ಇದರಿಂದ ಹೊರತೆಗೆಯುವ ಕುರಿತು ಚರ್ಚಿಸಿ ಹೊರತೆಗೆಯಲು ಸಹಾಯ ಮಾಡುತ್ತೇವೆ.

ಪ್ರತಿಲಿಪಿ ಆ್ಯಪ್/ವೆಬ್ಸೈಟ್ ನಲ್ಲಿ ಆಯಾ ಲೇಖಕ/ಲೇಖಕಿಯರೇ ತಮ್ಮ ಧಾರಾವಾಹಿಗಳನ್ನು ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯಿಂದ ಹೊರತರಲು ಏಕೆ ಸಾಧ್ಯವಿಲ್ಲ ?

ಪಾವತಿಸಿ ಓದುವ ಓದುಗರಿಗೆ ನಾವು ಸ್ಥಿರವಾದ ಓದಿನ ಹಿತಾನುಭವವನ್ನು ನೀಡಬಯಸುತ್ತೇವೆ. ಧಾರಾವಾಹಿಯನ್ನು ಈ ಯೋಜನೆಯಿಂದ ಒಮ್ಮೆಲೇ ಹೊರತೆಗೆಯುವುದರಿಂದ, ಓದುಗರ ನಂಬುಗೆ ಮತ್ತು ವಿಶ್ವಾಸಗಳಿಗೆ ಘಾಸಿಯಾಗುವ ಸಾಧ್ಯತೆ ಇರುತ್ತದೆಯಾದ್ದರಿಂದ ಈ ರೀತಿಯ ಕ್ರಮ ಅನುಸರಿಸಲಾಗುತ್ತದೆ.

ನನ್ನ ಬರಹದ ರಚನೆ ಮತ್ತು ಪ್ರಕಟಿಸುವಿಕೆಯ ಪ್ರಕ್ರಿಯೆಯಲ್ಲಿ ಯಾವುದಾದರೂ ಬದಲಾವಣೆ ಆಗಲಿದೆಯೇ ?
‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯಡಿಯಲ್ಲಿ ನೀವು ನಿಮ್ಮ ಧಾರಾವಾಹಿಯನ್ನು ತರಬಯಸಿದಲ್ಲಿ ->

- ಅಧ್ಯಾಯಗಳನ್ನು ಅಳಿಸಲು ಅಥವಾ ಅಪ್ರಕಟಿತಗೊಳಿಸಲು ಸಾಧ್ಯವಾಗುವುದಿಲ್ಲ. ಧಾರಾವಾಹಿಯ ಕೊನೆಯ ಪ್ರಕಟಿತ ಅಧ್ಯಾಯವನ್ನು ಮಾತ್ರ ಅಳಿಸಿ/ಅಪ್ರಕಟಿತಗೊಳಿಸಬಹುದು. ನೀವು [email protected] ಅಥವಾ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ, ಅಳಿಸಿ/ಅಪ್ರಕಟಿತಗೊಳಿಸಬಹುದು
- ಆದರೆ, ನೀವು ಯಾವುದೇ ಅಧ್ಯಾಯವನ್ನು ಎಡಿಟ್ ಮಾಡಲು ಅವಕಾಶ ಲಭ್ಯವಿರುತ್ತದೆ.
- ಅಧ್ಯಾಯಗಳನ್ನು ಧಾರಾವಾಹಿಗಳ ಹೊರಗಡೆ ಪ್ರತ್ಯೇಕವಾಗಿ ಪ್ರಕಟಿಸಿ ಧಾರಾವಾಹಿಗೆ ಸೇರಿಸುವ/ ಧಾರಾವಾಹಿಯಿಂದ ಬೇರ್ಪಡಿಸುವ ಆಯ್ಕೆ ಇರುವುದಿಲ್ಲ.
- ಧಾರಾವಾಹಿಯ ಒಳಗೆ ಅಧ್ಯಾಯಗಳನ್ನು ಮರುವಿಂಗಡಿಸುವ ಆಯ್ಕೆ ಇರುವುದಿಲ್ಲ.


ಬರಹದ ಪ್ರಕ್ರಿಯೆಯಲ್ಲಿ ಯಾಕೆ ಹಲವಾರು ನಿಬಂಧನೆಗಳನ್ನು ಅಳವಡಿಸಲಾಗಿದೆ ?

ಪ್ರೀಮಿಯಂ ಚಂದಾದಾರರಿಗೆ ಉಂಟಾಗುವ ಅಹಿತಾನುಭವವನ್ನು ತಪ್ಪಿಸಲು ಈ ನಿಯಮಗಳನ್ನು ಅಳವಡಿಸಲಾಗಿದೆ. ಉದಾಹರಣೆಗೆ - ಓದುಗರೊಬ್ಬರು ಪ್ರೀಮಿಯಂ/ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಖರೀದಿಸಿ ಒಂದು ಧಾರಾವಾಹಿಯನ್ನು ಓದಲು ಪ್ರಾರಂಭಿಸುತ್ತಾರೆ. ಆದರೆ ಅದರ ಕರ್ತೃ ಆ ಧಾರಾವಾಹಿಯ ಅಧ್ಯಾಯವನ್ನು ಅಪ್ರಕಟಿತಗೊಳಿಸಿದಲ್ಲಿ ಅಥವಾ ಮರುವಿಂಗಡಿಸಿದಲ್ಲಿ, ಓದುಗರ ಓದಿನ ಹಿತಾನುಭವಕ್ಕೆ ತಡೆಯುಂಟಾಗುತ್ತದೆ.


‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಯಡಿಯಲ್ಲಿ ಪ್ರಕಟಿಸುತ್ತಿರುವ ನನ್ನ ಧಾರಾವಾಹಿ ಮುಕ್ತಾಯಗೊಂಡಾಗ ಏನಾಗುತ್ತದೆ ?


ಎಲ್ಲವೂ ಹೇಗಿದೆಯೋ ಹಾಗೆಯೇ ಇರುತ್ತವೆ. ನಿಮ್ಮ ಧಾರಾವಾಹಿ ಪ್ರೀಮಿಯಂ ಅಡಿಯಲ್ಲಿಯೇ ಓದುಗರಿಗೆ ಲಭ್ಯವಾಗುತ್ತದೆ. ಆದರೆ ನೀವು ಧಾರಾವಾಹಿಯನ್ನು ಅಪ್ಲಿಕೇಶನ್ ನಲ್ಲಿ ‘ಮುಕ್ತಾಯಗೊಂಡಿದೆ’ ಎಂದು ಗುರುತಿಸಿದಲ್ಲಿ, ಅದನ್ನು ಹೆಚ್ಚಿನ ಓದುಗರಿಗೆ ತಲುಪಿಸಲು ವಿವಿಧ ಪ್ರಮೋಷನ್ ಚಟುವಟಿಕೆಗಳಿಗೆ ಬಳಸಲು ನಮಗೆ ಸಹಾಯಕವಾಗುತ್ತದೆ.


ನಾನು ಈ ಹೊಸ ಯೋಜನೆಯಡಿಯಲ್ಲಿ ಪ್ರಕಟಗೊಳ್ಳುತ್ತಿರುವ ಈ ಧಾರಾವಾಹಿಯ ಅಧ್ಯಾಯಗಳನ್ನು ಷೆಡ್ಯೂಲ್ ಮಾಡಬಹುದೇ ?

ಹೌದು, ಷೆಡ್ಯೂಲಿಂಗ್ ಸೌಲಭ್ಯ ಮೊದಲಿನಂತೆಯೇ ಇರಲಿದೆ.

ನನ್ನ ಸೂಪರ್ ಫ್ಯಾನ್ ಗಳ ಓದಿನ ಅನುಭವದಲ್ಲಿ ಯಾವುದಾದರೂ ಬದಲಾವಣೆಗಳಾಗುತ್ತವೆಯೇ ?

ಇಲ್ಲ, ಅವರ ಓದಿನ ಅನುಭವದಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ.


ಈಗಾಗಲೇ ಪ್ರೀಮಿಯಂ ವಿಭಾಗದಡಿಯಲ್ಲಿರುವ ನನ್ನ ಧಾರಾವಾಹಿಗಳು ಏನಾಗುತ್ತವೆ ?

ಅವುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಈಗಾಗಲೇ ಪ್ರೀಮಿಯಂ ಅಡಿಯಲ್ಲಿರುವ ಕೃತಿಗಳು ಈಗ ಹೇಗೆ ಲಭ್ಯವಾಗುತ್ತವೆಯೋ ಹಾಗೆಯೇ ಲಭ್ಯವಾಗಲಿವೆ.

ಈಗಾಗಲೇ ಮುಕ್ತಾಯಗೊಂಡಿರುವ ನನ್ನ ಧಾರಾವಾಹಿಯನ್ನು ಹಿಂದೆ ಪ್ರಕಟಿಸುವಾಗ ಸೂಪರ್ ಫ್ಯಾನ್ ಸೌಲಭ್ಯದಡಿಯಲ್ಲಿ ಸೇರಿಸಿರಲಿಲ್ಲ. ಹೀಗಿದ್ದೂ ಆ ಧಾರಾವಾಹಿಯನ್ನು ಈ ಯೋಜನೆಯಡಿ ತರಬಹುದೇ ?

ಈಗಾಗಲೇ ಮುಕ್ತಾಯಗೊಂಡಿರುವ ನಿಮ್ಮ ಧಾರಾವಾಹಿಯನ್ನು ನೀವು ಹಿಂದೆ ಪ್ರಕಟಿಸುತ್ತಿದ್ದಾಗ ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಸೇರಿಸಿರದಿದ್ದರೂ, ಈಗ ‘ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆ’ಗೆ ಸೇರಿಸಬಹುದು.


ನನ್ನ ಓದುಗರು, ಸೂಪರ್ ಫ್ಯಾನ್ ಗಳು ಮತ್ತು ಸಂಪಾದನೆ ಎಲ್ಲವೂ ಈ ಯೋಜನೆಯಿಂದ ಕಡಿಮೆಯಾಗಬಹುದು ಎನಿಸುತ್ತಿದೆ.

1. ಸಹಜವಾಗಿ, ಪ್ರಾರಂಭದಲ್ಲಿ ಈ ಯೋಜನೆಯಿಂದ ಓದುಗರ ಸಂಖ್ಯೆ ಕುಂಠಿತಗೊಳ್ಳಬಹುದು. ಆದರೆ ಇದು ತಾತ್ಕಾಲಿಕವಾಗಿದ್ದು, ಸದಾ ಋಣಾತ್ಮಕವಾಗಿಯೇ ಇರುವುದಿಲ್ಲ.

2. ಎಲ್ಲ ಓದುಗರಿಗೂ ಅಧ್ಯಾಯ ೨೪ ಗಂಟೆಗಳಲ್ಲಿ ಉಚಿತವಾಗುವುದಿಲ್ಲ. ಒಬ್ಬ ಓದುಗ ಲಾಕ್ ಆಗಿರುವ ಅಧ್ಯಾಯವನ್ನು ಸಂಪೂರ್ಣವಾಗಿ ಪ್ರಸ್ತುತ ದಿನ ಓದಿದಲ್ಲಿ ಆತನಿಗೆ ಮರುದಿನ ಮುಂದಿನ ಅಧ್ಯಾಯ ಅನ್ಲಾಕ್ ಆಗುತ್ತದೆ. ಅದು ಆತನಿಗೆ ಮಾತ್ರವೇ ಲಭ್ಯವಾಗುವುದಾಗಿದ್ದು, ಇತರರಿಗೆ ಲಾಕ್ ಆಗಲ್ಪಟ್ಟಿರುತ್ತದೆ. ಉಚಿತವಾಗಿ ಓದಬಯಸುವ ಒಬ್ಬ ಓದುಗನಿಗೆ ದಿನವೊಂದಕ್ಕೆ ಆಯಾ ಧಾರಾವಾಹಿಯ ಒಂದು ಅಧ್ಯಾಯ ಮಾತ್ರ ಅನ್ಲಾಕ್ ಆಗುತ್ತದೆ.

ಈ ಮಹತ್ವದ ಬದಲಾವಣೆಯಿಂದ ನಿಮ್ಮ ಧಾರಾವಾಹಿಗಳಿಂದ ನೀವು ಈಗ ಗಳಿಸುತ್ತಿರುವ ಆದಾಯ ಇನ್ನೂ ಅಧಿಕಗೊಳ್ಳಲಿದೆ ಮತ್ತು ಹೆಚ್ಚು ಓದಿನ ಸಂಖ್ಯೆ, ವಿಮರ್ಶೆಗಳ ಜೊತೆಗೆ ನೀವು ವ್ಯಯಿಸುವ ಸಮಯ ಮತ್ತು ಕಲ್ಪನೆಗಳಿಗೆ ಪ್ರತಿಯಾಗಿ ಹೆಚ್ಚಿನ ಹಣದ ಸಂಪಾದನೆಯೂ ಆಗುತ್ತದೆ ಎಂದು ಭಾವಿಸುತ್ತೇವೆ.

ನಿಮ್ಮಿಂದ ಅತ್ಯುನ್ನತ ಸಾಹಿತ್ಯ ರಚಿಸಲ್ಪಡಲಿ ಎಂದು ಹಾರೈಸುತ್ತೇವೆ.

ಧನ್ಯವಾದಗಳೊಂದಿಗೆ
ಪ್ರತಿಲಿಪಿಕನ್ನಡ ಬಳಗ