pratilipi-logo ಪ್ರತಿಲಿಪಿ
ಕನ್ನಡ

ಸೂಪರ್ ಸಾಹಿತಿ ಅವಾರ್ಡ್ಸ್- 5 ರಲ್ಲಿ 100+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು!

17 ಅಕ್ಟೋಬರ್ 2023

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

ನಿಮ್ಮೊಂದಿಗೆ ಒಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ!

 

ಬಹು ನಿರೀಕ್ಷಿತ ಸೂಪರ್ ಸಾಹಿತಿ ಅವಾರ್ಡ್ಸ್ 5 ಸ್ಪರ್ಧೆಯ ಫಲಿತಾಂಶ ಕೆಲವು ದಿನಗಳ ಹಿಂದೆ ಘೋಷಣೆಯಾಗಿದೆ! ಇದು ಭಾರತದ ಅತಿದೊಡ್ಡ ಆನ್ಲೈನ್ ಕಥಾ ಸ್ಪರ್ಧೆಯಾಗಿದ್ದು ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ವೇದಿಕೆಯನ್ನೊದಗಿಸುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ 100+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸುವ ಬರಹಗಾರರಿಗೆ ಪ್ರತಿಲಿಪಿ ಕಡೆಯಿಂದ ಖಚಿತ ಬಹುಮಾನ ನೀಡುವುದಾಗಿ ತಿಳಿಸಲಾಗಿತ್ತು.

 

ನಿಗದಿತ ಕಾಲಾವಧಿಯಲ್ಲಿ 100+ ಅಧ್ಯಾಯಗಳನ್ನು ಹೊಂದಿರುವ ಧಾರಾವಾಹಿ ರಚಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಬರಹಗಾರರು ಸಾಕಷ್ಟು ಶ್ರಮ ಮತ್ತು ಸಮಯವನ್ನು ವ್ಯಯಿಸಿ ತಮ್ಮ ಕೌಶಲ್ಯಕ್ಕೆ ರೂಪ ನೀಡಿರುತ್ತಾರೆ. ಶಿಸ್ತುಬದ್ಧ ಮತ್ತು ಯೋಜನಾಬದ್ಧವಾಗಿ ಕೃತಿಯನ್ನು ರಚಿಸಿರುತ್ತಾರೆ. ಸಾಹಿತ್ಯ ಮತ್ತು ಬರವಣಿಗೆಯ ಕುರಿತು ಆಸಕ್ತಿ ಹೊಂದಿರುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ.

 

ನಿಜವಾಗಿಯೂ, ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು ಈ ಸವಾಲನ್ನು ಸ್ವೀಕರಿಸಿ 100+ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ.

 

ಇಂತಹ ಪ್ರತಿಭಾವಂತ ಬರಹಗಾರರನ್ನು ಹೊಂದಿರುವುದು ನಮಗೆ ಹೆಮ್ಮೆಯ ವಿಷಯ. ಇದೇ ರೀತಿಯ ಬದ್ಧತೆ ಮತ್ತು ಪರಿಶ್ರಮದಿಂದ ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಇನ್ನಷ್ಟು ಉತ್ತಮವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಯಾಗಿಸಿದ್ದಕ್ಕೆ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಾಹಿತ್ಯದ ಕುರಿತು ನಿಮಗಿರುವ ಆಸಕ್ತಿ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಈ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿದೆ. 

 

ಸ್ಪರ್ಧೆಗೆ ಸಲ್ಲಿಸಲ್ಪಟ್ಟ ಕನ್ನಡದ ಬೃಹತ್ ಧಾರಾವಾಹಿ-

 

ಬನಶಂಕರಿ ಕುಲಕರ್ಣಿ ಅವರ 180 ಅಧ್ಯಾಯಗಳ ಭಾರ್ಯ ರೂಪವತಿ ಶತೃ



100+ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದವರ ವಿವರ- 

 

ಕೃತಿ 

ಕರ್ತೃ

ಕ್ಷಮಿಸಿ ಬಿಡಲೆ ಒಲವಿಗೆ ಸೋತು..!!

ವಿನುತಾ ಗೌಡ

ಅಮ್ನೋರ ಮಗಳು

ವಿಷ್ಣುಪ್ರಿಯಾ

ಭಾರ್ಯ ರೂಪವತಿ ಶತೃ

ಬನಶಂಕರಿ ಕುಲಕರ್ಣಿ

ಎಲ್ಲಿ ಮರೆಯಾದೆ? ಏಕೆ ದೂರಾದೆ?

ವೀಣಾ

ದೊರೆಸಾನಿ

ಲಕ್ಷ್ಮಿ ಗೌಡ 

ಕಾಲ: ಕ್ರೀಡತಿ

ವಿಜಯ ಭಾರತಿ

ಶಿವರಂಜನಿ

ಸಂಧ್ಯಾ ಭಟ್

ನೀ ಮರೆಯಾದೆ ಏಕೆ?

ವಿದ್ಯಾ ಮೂರ್ತಿ

ಕಾದಿರುವೆ ಜೀವ ಸಖ

ಜೆ ಕೆ

ಸ್ವತಂತ್ರ ಹಕ್ಕಿ

ವೇದಾ ಮಂಜುನಾಥ್

ಆರಕ್ಕೇರದವರು

ಗಜಲಕ್ಷ್ಮಿ ಗೋವಿಂದ ರಾಜು

ಆಲಿಸಲಾರೆಯಾ ಮೌನದಿ ಹೃದಯದ ಮಾತನ್ನು

ಮಾಲಾ ನಾರಾಯಣ

ಬದುಕೆಂಬ ಮಾಯಾವಿ

ಮೌನ ವಿ

ಮತ್ತೆ ಒಲವ ಮಳೆಯಾಗುವುದೇ?

ವೀಣಾ 

 

ನಮ್ಮ ದೃಷ್ಟಿಯಲ್ಲಿ ನೀವೆಲ್ಲರೂ ಸೂಪರ್ ಸಾಹಿತಿಗಳು!

 

ನಿಮ್ಮಿಂದ ಇನ್ನಷ್ಟು ಉತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.

 

ನೀವು ಸೂಪರ್ ಸಾಹಿತಿ ಅವಾರ್ಡ್ಸ್ 6 ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 60+ ಅಧ್ಯಾಯಗಳ ಧಾರಾವಾಹಿಯನ್ನು ಡಿಸೆಂಬರ್ 25 ರ ಒಳಗೆ ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://kannada.pratilipi.com/event/9ys4h3faop

 

ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ!

- ಪ್ರತಿಲಿಪಿ ಸ್ಪರ್ಧಾ ವಿಭಾಗ