pratilipi-logo ಪ್ರತಿಲಿಪಿ
ಕನ್ನಡ

‘ಸೂಪರ್ ಸಾಹಿತಿ ಅವಾರ್ಡ್ಸ್ 6’ ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ

25 ಫೆಬ್ರವರಿ 2024

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಬಹು ನಿರೀಕ್ಷಿತ ‘ಸೂಪರ್ ಸಾಹಿತಿ ಅವಾರ್ಡ್ಸ್ 6’ ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ!

 

ಹಿಂದಿನ ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಬರಹಗಾರರಿಂದ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ನವ ಬರಹಗಾರರು ಗೋಲ್ಡನ್ ಬ್ಯಾಡ್ಜ್ ಪಡೆದು, ಈ ಸ್ಪರ್ಧೆಯಲ್ಲಿ ಭಾಗವಹಿಸಿ 60+ ಅಧ್ಯಾಯಗಳ ಧಾರಾವಾಹಿ ರಚಿಸಿರುವುದನ್ನು ನಾವು ಗಮನಿಸಿದ್ದೇವೆ.

 

ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ.

 

ಸ್ಪರ್ಧೆಯಲ್ಲಿ ವಿಜೇತ ಸಾಹಿತಿಗಳಾಗಿ ಗುರುತಿಸಿಕೊಂಡು, ಉತ್ತಮ ಕೃತಿಗಳನ್ನು ರಚಿಸಿರುವ ಸೂಪರ್ ಸಾಹಿತಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ. ನಿಮ್ಮ ಸಾಹಿತ್ಯ ಕೃಷಿ ಇನ್ನಷ್ಟು ಉತ್ತಮ ರೀತಿಯಲ್ಲಿ ಮುಂದುವರೆದು ಕನ್ನಡ ಸಾಹಿತ್ಯಕ್ಕೆ ನಿಮ್ಮಿಂದ ಅತ್ಯುತ್ತಮ ಕೃತಿಗಳು ಪ್ರತಿಲಿಪಿಯ ಮೂಲಕ ಸಿಗುವಂತಾಗಲಿ ಎಂದು ಆಶಿಸುತ್ತೇವೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಪರಿಶ್ರಮದಿಂದ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.

 

ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು-

 

ಓದುಗರ ಆಯ್ಕೆಯ ಕೃತಿಗಳು:

 

ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಕತೆಗಳಲ್ಲಿ; ಸ್ಪರ್ಧೆಯ ಪ್ರಾರಂಭದ ದಿನಾಂಕದಿಂದ ಮುಕ್ತಾಯದ ದಿನಾಂಕದವರೆಗಿನ ಅಂಕಿಅಂಶಗಳ ಆಧಾರದ ಮೇಲೆ, ಈ ಕೆಳಗಿನ ಅಂಶಗಳನ್ನು ಪರಿಗಣಿಸಿ, ಒಟ್ಟಾರೆ ರೇಶಿಯೋ ಪಡೆದು ಓದುಗರ ಆಯ್ಕೆಯ ಕೃತಿಗಳ ಸ್ಥಾನಗಳನ್ನು ತೀರ್ಮಾನಿಸಲಾಗಿದೆ. 

- ಆಯಾ ಬರಹಗಾರರ ಹಿಂಬಾಲಕರ ಸಂಖ್ಯೆಗೆ ಹೋಲಿಸಿದರೆ ಆ ಕೃತಿಯ ಓದಿನ ಸಂಖ್ಯೆ

- ಹೆಚ್ಚು ಚರ್ಚಿಸಲ್ಪಡುವ ಕೃತಿ, ಅಂದರೆ ಆರಂಭದಿಂದ ಅಂತ್ಯದವರೆಗೆ ಓದಿದವರ ಶೇಕಡಾವಾರು ಸಂಖ್ಯೆ

 

ಪ್ರಥಮ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಪುಷ್ಪಲತಾ ಹರೀಶ್ ಅವರ ಮಹಿರ

 

ದ್ವಿತೀಯ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಮನುಪ್ರಿಯ ಅವರ ಒಲವಿನ ಹೂವೇ...

 

ತೃತೀಯ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಅನಿತಾ ಹೆಚ್. ಅವರ ಈ ಪ್ರೀತಿ ಒಂಥರಾ

 

ನಾಲ್ಕನೆಯ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಪ್ರಸನ್ನಾ ವಿ ಚೆಕ್ಕೆಮನೆ ಅವರ ಈ ಹೃದಯ ನಿನಗೇ ಮೀಸಲು

 

ಐದನೆಯ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಸುಷ್ಮಿತಾ ಕೆ. ಎನ್ ಅವರ ಒಲವಿನ ಅಭಿಸಾರಿಕೆ

 

ಆರನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ತೀರ್ಥ ಶಿವು ಅವರ ಸದ್ದಿಲ್ಲದೆ ಮೂಡಿದೆ ಪ್ರೇಮ...

 

ಏಳನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಪುಷ್ಕರಿಣಿ ಅವರ ಕೈಲಾಸಪುರ

 

ಎಂಟನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಶ್ವೇತಾ ಅವರ ನೀ ಜೊತೆಗಿರೆ... ಸಾಕು!(ನಾನೆಂದು ನಿನ್ನವನು)

 

ಒಂಬತ್ತನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಚೈತ್ರಾ ಯೋಗೇಶ್ ಅವರ ನಿನ್ನೇ ಪ್ರೀತಿಸುವೆ ಎಂದೂ

 

ಹತ್ತನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಉಮಾ ರಾವ್ ಎಸ್ ಭಟ್ ಅವರ ಯೂಫೋರಿಯಾ



ತೀರ್ಪುಗಾರರ ಆಯ್ಕೆಯ ಕೃತಿಗಳು:

 

ಓದುಗರ ಆಯ್ಕೆಯ ವಿಜೇತ ಕೃತಿಗಳನ್ನು ಆರಿಸಿದ ನಂತರ ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಉಳಿದ ಎಲ್ಲಾ ಕತೆಗಳನ್ನು ತೀರ್ಪುಗಾರರು ಓದಿ, ವಿಶ್ಲೇಷಿಸಿ ಅವುಗಳಲ್ಲಿ ಉತ್ತಮವಾದ ಕೃತಿಗಳನ್ನು ವಿಜೇತ ಕೃತಿಗಳಾಗಿ ಆಯ್ಕೆ ಮಾಡಿದ್ದಾರೆ.

 

ಪ್ರಥಮ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಶ್ರೀನಿವಾಸ ಸಂಡೂರು ಅವರ ಎ ಜಾಕಲ್ಸ್ ಡೇ

 

ದ್ವಿತೀಯ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಓಂಪ್ರಕಾಶ್ ನಾಯಕ್ ಅವರ ಕೆಂಪು ಜೀಪು

 

ತೃತೀಯ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಶಿವಶಂಕರ್ ಎಸ್. ಜಿ ಅವರ ಓ..ನನ್ನ ಚೇತನ!

 

ನಾಲ್ಕನೆಯ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ವಿಜಯ ಭಾರತಿ ಅವರ ತಲ್ಲಣಿಸದಿರು

 

ಐದನೆಯ ಬಹುಮಾನ: 4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ರಾಘವ್ ವಿಶ್ವಾಸಿ ಅವರ ಘರ್ಷಣೆ 

 

ಆರನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಸಂಜಯ್ ಪಾಟೀಲ್ ಅವರ ಗಿಗೋಳೋ (ಗಂಡು ವೇಶ್ಯೆ)

 

ಏಳನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಕೌಸಲ್ಯ ಕಾರಂತ್ ಅವರ ಬದುಕು ಜಟಕಾಬಂಡಿ

 

ಎಂಟನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಸಂಧ್ಯಾ ಭಟ್ ಅವರ ಸೂಕ್ಷ್ಮ

 

ಒಂಬತ್ತನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಮಾಧವಿ ಹೆಬ್ಬಾರ್ ಅವರ ಸಿಂಹ ಪುರಿಯ ರಹಸ್ಯ

 

ಹತ್ತನೆಯ ಬಹುಮಾನ: 4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ವೇದಾ ಮಂಜುನಾಥನ್ ಅವರ ಜಾಡು....!!



ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು:

 

ಈ ಬಾರಿ ಸಣ್ಣ ಅಂತರದಿಂದ ವಿಜೇತ ಕೃತಿಗಳ ಪಟ್ಟಿಗೆ ಬರಲು ಸಾಧ್ಯವಾಗದ ಕೆಲವು ಧಾರಾವಾಹಿಗಳನ್ನು ಕೆಳಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇವೆ.



ಕೃತಿ

ಕರ್ತೃ

ಮೃತ್ಯೋರ್ಮಾ ಅಮೃತಂಗಮಯ

ಪ್ರಖ್ಯಾ

ಎಲ್ಲಿರುವೆ......!

ಕೃಷ್ಣ ತುಳಸಿ

ಇಷ್ಟೇ ಸಾಕು ಈ‌ ಜನ್ಮಕೆ

ವೀಣಾ ವಿನಾಯಕ

ನನ್ನ ನಿನ್ನ ನಡುವೆ ಏನಿಲ್ಲಾ...!!?

ರಾಧಾಮಣಿ ಜೆ. ಹೆಚ್

ಜೀವನ ಸಂಜೀವನ

ಸುಜಲ ಘೋರ್ಪಡೆ

ಕಾರ್ಮೋಡ

ಲಕ್ಷ್ಮಿ ಗೌಡ

ಯದ್ಭಾವಂ ತದ್ಭವತಿ

ರಮ್ಯಾ ವಿಜಿತ್

ಬಂಗಾರದ ಹುಲಿ

ಗೋಪಾಲ

ಮೋಹದ ಬಲೆ

ಸವಿತಾ ರಮೇಶ್

ಒಡೆದ ಕನ್ನಡಿ

ಲತಾ ರವಿ

ನಿನ್ನೊಲವಿನಾಸರೆ

ವಿದ್ಯಾ ಮೂರ್ತಿ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಪೂಜಾ ಕೌಶಿಕ್

ಕನ್ನಡಿಯಲ್ಲಿ ಕಂಡ ಪ್ರತಿಬಿಂಬ

ಶುಭಾ ಶ್ರೀನಾಥ್

ಸೀತೆಯಂತೆ ಕಾಯುವೆ, ನೀ ರಾಮನಾದರೆ..

ಚೈತ್ರ ಭಟ್ಟ

ಕಥಾನಾಯಕಿ

ಕೃಷ್ಣಪ್ರಿಯೆ



ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಡಳಿಯ ಅನಿಸಿಕೆ:

 

ಆತ್ಮೀಯ ಸಾಹಿತಿಗಳೇ,

 

ಬರವಣಿಗೆ ಎನ್ನುವ ಕಲೆ ಒಂದು ಕೃತಿಯಾಗಿ ಓದುಗನ ಮನದಾಳದಲ್ಲಿ ಇಳಿಯಬೇಕಾದರೆ, ಉಳಿಯಬೇಕಾದರೆ ಅದರಲ್ಲಿ ಒಂದು ಹದವಿರಬೇಕು, ಸತ್ವವಿರಬೇಕು, ಸ್ವಾತಂತ್ರ್ಯವೂ ಇರಬೇಕು. 

 

ಒಂದು ಹಾಡು ಕೇಳುಗನ ಮನಸ್ಸಿಗೆ ಹತ್ತಿರವಾಗುತ್ತದೆದಂರೆ ಅದರ ಸಾಹಿತ್ಯ, ಶೃತಿ, ರಾಗ, ತಾಳ, ಸ್ವರಗಳೆಲ್ಲವೂ ಕ್ರಮಬದ್ಧವಾಗಿ ಒಳ್ಳೆಯ ಹಾಡುಗಾರರ ದನಿಯಲ್ಲಿ ಹೊರಬರಬೇಕು. ಅಂತೆಯೇ ಒಬ್ಬ ಬರಹಗಾರನ ಆಲೋಚನೆ ಓದುಗನ ಮನಸ್ಸಿನಲ್ಲಿ ಜಾಗ ಪಡೆಯಬೇಕಾದರೆ ಆ ಆಲೋಚನೆಯ ಸ್ಪಷ್ಟ ರೂಪ ಮೊದಲು ಬರಹಗಾರನ ಮನಸ್ಸನ್ನು ಗೆಲ್ಲಬೇಕು. ಒಂದು ಆಲೋಚನೆ, ಅದರಿಂದ ಕಥಾವಸ್ತು, ಅದನ್ನು ಬೆಳೆಸಿದಾಗ ಕಥಾಹಂದರ, ಅದನ್ನು ಮುನ್ನಡೆಸಲು ಪಾತ್ರಗಳು, ಕುತೂಹಲಕ್ಕಾಗಿ ತಿರುವುಗಳು, ಹಾಡುಗಾರನ ದನಿಯಂತೆ ಬರೆಯುವ ಶೈಲಿ, ಇದಕ್ಕೆಲ್ಲ ಮೂಲವಾಗಿ ಭಾಷೆ ಮತ್ತು ವ್ಯಾಕರಣದಲ್ಲಿನ ಹಿಡಿತ; ಒಂದು ಆಲೋಚನೆಯನ್ನು ವಿಸ್ತ್ರತ ಕಥೆ/ಕಾದಂಬರಿಯಾಗಿ ಪ್ರಸ್ತುತಪಡಿಸಲು ಅವಶ್ಯಕವಾದವುಗಳಾಗಿವೆ.

 

ಈ ಪ್ರಕ್ರಿಯೆ ಕೇವಲ ಒಂದು ಎರಡು ದಿನಗಳಲ್ಲಿ ಮುಗಿದು ಬಿಡಬಹುದಾದಂತದ್ದಲ್ಲ. ಆದರೆ ಪ್ರತಿಲಿಪಿ ಆಯೋಜಿಸಿದ್ದ 'ಸೂಪರ್ ಸಾಹಿತಿ ಅವಾರ್ಡ್ಸ್ 6' ಸ್ಪರ್ಧೆಯಲ್ಲಿ ಭಾಗವಹಿಸಿ 60, 80, 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ಪ್ರಕಟಿಸಿರುವ ಎಲ್ಲಾ ಬರಹಗಾರರ ಪರಿಶ್ರಮ, ಬದ್ಧತೆ ಮತ್ತು ಉತ್ಸಾಹ ಮಾದರಿಯಾಗುವಂಥದ್ದು. ಸಹಜವಾಗಿ ಕತೆ ಬರೆಯುವಾಗ ಸಮಯದ ಮಿತಿ ಇರಲಾರದು; ಆಗ ಬರಹಗಾರರಿಗೆ ಸಮಯದ ಸ್ವಾತಂತ್ರ್ಯ ಅಧಿಕವಿರುವುದರಿಂದ ಹೆಚ್ಚು ಒತ್ತಡವಿರದಂತೆ ತಮ್ಮ ಬರವಣಿಗೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ಇರುತ್ತದೆ. ಆದರೆ ಸ್ಪರ್ಧೆ ಎಂದಾಕ್ಷಣ ಇರುವ ಮನೋಭಾವವೇ ಬೇರೆಯಾಗುತ್ತದೆ. ಕಾಲಾವಕಾಶದಿಂದ ಹಿಡಿದು ಅದಕ್ಕೆ ಓದುಗರು ಸ್ಪಂದಿಸುವ ರೀತಿಯವರೆಗೆ ಎಲ್ಲವನ್ನು ಮಸ್ತಿಷ್ಕದಲ್ಲಿಟ್ಟುಕೊಂಡು ತಮ್ಮ ಮೂಲ ಆಲೋಚನೆಗೆ ಧಕ್ಕೆ ಬರದಂತೆ ಕೃತಿಯನ್ನು ರಚಿಸುವುದು ಒಂದು ಯಜ್ಞವೆಂದೇ ಹೇಳಬಹುದು. ಹಾಗಾಗಿ ಸ್ಪರ್ಧೆಯ ಕಾಲಾವಕಾಶದೊಳಗೆ ತಮ್ಮ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು.

 

ಪ್ರತಿ ಆವೃತ್ತಿಗಳ ಕೃತಿಗಳನ್ನು ನೋಡುವಾಗಲೂ ವಿಭಿನ್ನ ರೀತಿಯ ಕೃತಿಗಳು ಸಲ್ಲಿಸಲ್ಪಟ್ಟಿರುವುದು, ಸಲ್ಲಿಸಲ್ಪಡುತ್ತಿರುವುದು ಪ್ರಶಂಸನೀಯ. ಕನ್ನಡ ಸಾಹಿತ್ಯಾಸಕ್ತರಿಗೆ ಉತ್ತಮ ಗುಣಮಟ್ಟದ ಧಾರಾವಾಹಿಗಳನ್ನು ನೀಡುತ್ತಿರುವ ಲೇಖಕರಿಗೆ ಧನ್ಯವಾದಗಳು. ಹೊಸ ಹೊಸ ವಿಚಾರಗಳು, ವಿಶೇಷಗಳು ಈ ಕೃತಿಗಳ ಮೂಲಕ ಲಕ್ಷಾಂತರ ಓದುಗರನ್ನು ತಲುಪುತ್ತಿರುವುದು ಸಂತಸದ ಸಂಗತಿ. ಬರಹಗಾರರ ಆಲೋಚನೆ, ಬರವಣಿಗೆ, ನಿರೂಪಣೆಯಲ್ಲಿ ಪ್ರತಿ ಬಾರಿಯೂ ಬೆಳವಣಿಗೆ, ಬದಲಾವಣೆ ಕಾಣುತ್ತಿರುವುದು ಆಶಾದಾಯಕ ವಿಷಯ.

 

ಮಾನವರು ಎಲ್ಲಿಯವರೆಗೆ ತಮ್ಮನ್ನು ತಾವು ಉತ್ತಮಪಡಿಸಿಕೊಳ್ಳಲು ತೊಡಗಿಕೊಂಡಿರುತ್ತಾರೋ ಅಲ್ಲಿಯವರೆಗೆ ಜಗತ್ತು ಹೊಸದನ್ನು, ಅದ್ಭುತಗಳನ್ನು ಕಾಣುತ್ತಿರುತ್ತದೆ; ಹಾಗೆಯೇ ಸಾಹಿತ್ಯದಲ್ಲಿಯೂ ಲೇಖಕರು ತಮ್ಮನ್ನು ತಾವು ಮತ್ತಷ್ಟು ಉತ್ತಮಪಡಿಸಿಕೊಳ್ಳುವಲ್ಲಿ ಹೆಜ್ಜೆ ಇರಿಸಿದಷ್ಟು ಅದ್ಭುತ ಕೃತಿಗಳ ಮೂಲಕ ಅನೇಕ ವಿಚಾರಗಳು ಜನರನ್ನು ತಲುಪಲು ಸಾಧ್ಯವಾಗುತ್ತದೆ. ಸಾಹಿತ್ಯ ಹರಿಯುವ ತೊರೆಯಾಗಬೇಕಾದರೆ ವಿಭಿನ್ನ ಪ್ರಯೋಗಗಳು ನಡೆಯಬೇಕು.

 

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬರಹಗಾರರು ಸ್ಪರ್ಧೆಯ ಕುರಿತು ಆಸಕ್ತಿ ತೋರಿಸಿ ಇನ್ನಷ್ಟು ಉತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂಬುದು ನಮ್ಮ ಆಶಯ. ಮತ್ತೊಮ್ಮೆ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು.

 

ಶುಭವಾಗಲಿ!

-ಪ್ರತಿಲಿಪಿ ಕನ್ನಡ

 

ದಯವಿಟ್ಟು ಗಮನಿಸಿ: ಕೆಲವೇ ದಿನಗಳಲ್ಲಿ, ಈ ಸ್ಪರ್ಧೆಯಲ್ಲಿ 80+ ಅಧ್ಯಾಯಗಳ ಧಾರಾವಾಹಿಗಳನ್ನು ಪ್ರಕಟಿಸಿದ ಎಲ್ಲಾ ಯಶಸ್ವಿ ಬರಹಗಾರರ ಪಟ್ಟಿಯನ್ನು ಮತ್ತು ಉದಯೋನ್ಮುಖ ಲೇಖಕರ ಹೆಸರನ್ನು ನಾವು ಪ್ರಕಟಿಸುತ್ತೇವೆ. ಸ್ಪರ್ಧೆಯ ವಿವರಗಳಲ್ಲಿ ತಿಳಿಸಿದಂತೆ ಪ್ರತಿಲಿಪಿ ಕಡೆಯಿಂದ ಅವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ನಾವು ಅವರ ಸಾಧನೆಯನ್ನು ಇಡೀ ಪ್ರತಿಲಿಪಿ ಕುಟುಂಬದೊಂದಿಗೆ ಆಚರಿಸುತ್ತೇವೆ. 

ಜೊತೆಗೆ ಹೆಚ್. ಜಿ. ರಾಧಾದೇವಿ ಸ್ಮರಣ ಪುರಸ್ಕಾರ ವಿಜೇತರ ಪಟ್ಟಿಯನ್ನು ಸಹ ಪ್ರಕಟಿಸಲಾಗುವುದು.

ಪ್ರತಿಲಿಪಿ ಬ್ಲಾಗ್‌ ವಿಭಾಗವನ್ನು ಗಮನಿಸುತ್ತಿರಿ!