pratilipi-logo ಪ್ರತಿಲಿಪಿ
ಕನ್ನಡ

ಸೂಪರ್ ಸಾಹಿತಿ ಅವಾರ್ಡ್ಸ್- ಸೂಪರ್ 7 ಸೀಸನ್ | ಶೀಘ್ರದಲ್ಲಿ ಆರಂಭವಾಗಲಿದೆ

28 ഡിസംബര്‍ 2023

ಆತ್ಮೀಯ ಸಾಹಿತಿಗಳೇ,

ಹೊಸ ಕ್ಯಾಲೆಂಡರ್ ವರ್ಷ 2024 ನ್ನು ಸ್ವಾಗತಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶುಭಾಶಯವನ್ನು ಕೋರುತ್ತಿದ್ದೇವೆ. ನಿಮ್ಮ ಸಾಹಿತ್ಯ ಪಯಣವನ್ನು ಇನ್ನಷ್ಟು ಮುಂದುವರೆಸಿ ಯಶಸ್ಸನ್ನು ಗಳಿಸುವ ಹಾದಿಯಲ್ಲಿ ಈ ಹೊಸ ವರ್ಷ ನಿಮಗೆ ಹೊಸ ಹುರುಪು ನೀಡುವಂತಾಗಲಿ! 

 

ನಮ್ಮ ಸಾಹಿತಿಗಳಿಗಾಗಿ ಶೀಘ್ರದಲ್ಲಿಯೇ ‘ಸೂಪರ್ ಸಾಹಿತಿ ಅವಾರ್ಡ್ಸ್- ಸೂಪರ್ 7 ಸೀಸನ್’ ಅನ್ನು ಆಯೋಜಿಸಲಿದ್ದೇವೆ.

 

ನಮ್ಮ ಸವಾಲು : ಹೊಸ ವರ್ಷವೆಂದರೆ ಹೊಸ ಹುಮ್ಮಸ್ಸು, ಉತ್ಸಾಹ, ಸಂಭ್ರಮ! ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಓದುಗರನ್ನು ಪಡೆದು, ಜನಪ್ರಿಯತೆ ಗಳಿಸುವಂತಹ ಕಥಾಹಂದರವನ್ನು ಹೊಂದಿರುವ ಹೊಚ್ಚ ಹೊಸ ಧಾರಾವಾಹಿಯನ್ನು ಬರೆಯಲು ಆರಂಭಿಸಿ.

 

ಹೊಸವರ್ಷದ ಸಮಯದಲ್ಲಿ ನಿಮ್ಮ ಒಂದು ಅತ್ಯುತ್ತಮ ಕೃತಿಯ ಮೂಲಕ ಪ್ರತಿಲಿಪಿಯ ಲಕ್ಷಾಂತರ ಓದುಗರ ಮನಗೆಲ್ಲುವ ಅವಕಾಶವಿದು. ಸಾಹಿತ್ಯ ಲೋಕದಲ್ಲಿ ನಿಮ್ಮದೇ ಛಾಪು ಮೂಡಿಸುವ ಅವಕಾಶದ ಸದ್ವಿನಿಯೋಗ ಪಡೆಯಿರಿ. ನಿಮ್ಮ ಕತೆಯ ಪಾತ್ರಗಳು ಮತ್ತು ರೂಪುರೇಷೆಯನ್ನು ಇಂದಿನಿಂದಲೇ ಯೋಚಿಸಿ. 

 

ಸ್ಪರ್ಧೆಯನ್ನು ನಾವು ಜನವರಿ 2 ರಂದು ಆರಂಭಿಸಲಿದ್ದೇವೆ! ಈ ಸೂಪರ್ 7 ಸೀಸನ್ನಿನ ಅತ್ಯಾಕರ್ಷಕ ಬಹುಮಾನ, ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮ ಸಂದೇಶಗಳನ್ನು ಗಮನಿಸುತ್ತಿರಿ.