pratilipi-logo ಪ್ರತಿಲಿಪಿ
ಕನ್ನಡ

ನಿಮ್ಮ ಕೃತಿಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ - ಅರ್ಲಿ ಬರ್ಡ್ ಆಫರ್

29 ಫೆಬ್ರವರಿ 2024

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

ಕೇವಲ 5000/- ರೂಪಾಯಿಗಳಲ್ಲಿ ನಿಮ್ಮ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಅವಕಾಶ ಇಲ್ಲಿದೆ! ಪ್ರತಿಲಿಪಿಕನ್ನಡದಲ್ಲಿ ತಮ್ಮ ಕಾದಂಬರಿಗಳನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸುವ ನೂರಾರು ಲೇಖಕ ಲೇಖಕಿಯರ ಬಹುದಿನಗಳ ಅಪೇಕ್ಷೆಯ ಮೇರೆಗೆ ಪ್ರತಿಲಿಪಿಯು ಮುದ್ರಣ ಸೌಲಭ್ಯವನ್ನೂ ಒದಗಿಸುತ್ತಿದೆ. ಕೆಳಗಿನ ವಿವರಗಳನ್ನು ಪರಿಶೀಲಿಸಿ ಸೀಮಿತ ಅವಧಿಯ ಕೊಡುಗೆಗಳನ್ನು ಪಡೆದು ನಿಮ್ಮ ಕೃತಿಗಳನ್ನು ಪುಸ್ತಕ ರೂಪದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಮುದ್ರಿಸಿ ಪ್ರಕಟಿಸಿ. ಹೆಚ್ಚಿನ ಮಾಹಿತಿಗೆ [email protected] ಸಂಪರ್ಕಿಸಿ. 

ಬೇಸಿಕ್ ಪ್ಯಾಕೇಜ್ ಯೋಜನೆ :

40,000 ಪದಗಳಿರುವ ಕಾದಂಬರಿಯ ಮುದ್ರಣಕ್ಕೆ 5,000/-  ರೂಪಾಯಿಗಳು + 18% GST. ಪಾವತಿಸಬೇಕಾಗುತ್ತದೆ. 40,000 ಕ್ಕೂ ಅಧಿಕ ಪದಸಂಖ್ಯೆಯನ್ನು ಹೊಂದಿದ್ದಲ್ಲಿ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ. ಮತ್ತು ಪ್ರತಿಗಳ ಸಂಖ್ಯೆ ಕಡಿಮೆಯಾಗುತ್ತದೆ. 

ಪ್ಯಾಕೇಜ್ ನಲ್ಲಿ ಕೆಳಗಿನ ಸೌಲಭ್ಯಗಳು ಸೇರಿರುತ್ತವೆ :  

- 15 ಮುದ್ರಿತ ಪ್ರತಿಗಳು

- ಇದರಲ್ಲಿ ಶಿಪ್ಪಿಂಗ್ ಖರ್ಚು ಸೇರಿದೆ

- ರಕ್ಷಾಪುಟ ವಿನ್ಯಾಸವನ್ನು ಪ್ರತಿಲಿಪಿಯೇ ಮಾಡುತ್ತದೆ.

- ಪುಸ್ತಕದ ISBN ನಂಬರ್

- ಮುದ್ರಣ ಕಾಗದ - ಬೇಸಿಕ್ ಗುಣಮಟ್ಟ

- ಪ್ರಥಮ ಹಂತದ ಟೈಪ್ ಸೆಟ್ಟಿಂಗ್

ಪ್ಯಾಕೇಜ್ ಒಳಗೊಂಡಿರದ ಸೌಲಭ್ಯಗಳು

  • ಪ್ರೂಫ್ ರೀಡಿಂಗ್/ ಕರಡು ತಿದ್ದುಪಡಿ. 

 

ಗಮನದಲ್ಲಿಡಬೇಕಾದ ಇತರೆ ಅಂಶಗಳು : 

- ಒಪ್ಪಂದಕ್ಕೆ ಸಹಿ ಹಾಕುವಾಗಲೇ ಹಣ ಪಾವತಿ ಮಾಡಬೇಕು. ಇದನ್ನು ಒಂದೇ ಕಂತಿನಲ್ಲಿ ಪಾವತಿಸಬೇಕಾಗುತ್ತದೆ

- ಸಾಹಿತಿಗಳು ಮುದ್ರಣ ಪ್ರಕ್ರಿಯೆ ಪ್ರಾರಂಭಕ್ಕೂ ಮೊದಲು ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ

- ಭೌತಿಕ ಪುಸ್ತಕದ ವಿಡಿಯೋವನ್ನು ಸಾಹಿತಿಗಳ ಮಾಹಿತಿಗಾಗಿ ಕಳುಹಿಸಲಾಗುವುದು. (ಸೂಚನೆ - ಇದು ನಿಮ್ಮ ಪುಸ್ತಕದ ವಿಡಿಯೋ ಆಗಿರದಿರಬಹುದು. ಈ ಉದ್ದೇಶಕ್ಕಾಗಿ ಪ್ರಿಂಟ್ ಮಾಡಲಾದ ಪುಸ್ತಕವನ್ನು ನಿಮ್ಮ ಮಾಹಿತಿಗಾಗಿ ಕಳುಹಿಸಲಾಗುವುದು)

- ಸಾಹಿತಿಗಳು ಪುಸ್ತಕದಲ್ಲಿ ಯಾವುದಾದರೂ ಬದಲಾವಣೆ ಮಾಡಲಿಚ್ಛಿಸಿದಲ್ಲಿ 7-10 ದಿವಸಗಳ ಕಾಲಾವಕಾಶ ಲಭ್ಯವಿರುತ್ತದೆ. ಈ ಸಮಯದಲ್ಲಿ ಲೇಖಕರು ಸ್ವತಃ ಪ್ರೂಫ್ ರೀಡಿಂಗ್ ಮತ್ತು ಟೈಪ್ ಸೆಟ್ಟಿಂಗ್ ಮಾಡಬೇಕಾಗುತ್ತದೆ.

- ಎಡಿಟ್ ಮಾಡಿದ ಪ್ರತಿಯನ್ನು ನಮಗೆ ಕಳುಹಿಸಿದ ಬಳಿಕ ಗರಿಷ್ಟ 30 ದಿನಗಳಲ್ಲಿ ಮುದ್ರಿತ ಪುಸ್ತಕಗಳನ್ನು ಕಳುಹಿಸಲಾಗುವುದು.

- ರಕ್ಷಾಪುಟದ ವಿನ್ಯಾಸವನ್ನು ಪ್ರತಿಲಿಪಿಯೇ ನಿರ್ಧರಿಸುತ್ತದೆ. ಲೇಖಕರು ಸ್ಯಾಂಪಲ್ ಕಳುಹಿಸಬಹುದು. ಆದರೆ ಅಂತಿಮ ನಿರ್ಧಾರ ಪ್ರತಿಲಿಪಿಯದ್ದೇ ಆಗಿರುತ್ತದೆ. ಒಂದು ರಕ್ಷಾಪುಟವನ್ನು ಮಾತ್ರ ವಿನ್ಯಾಸಗೊಳಿಸಲಾಗುತ್ತದೆ.

- ಕೃತಿಯ ಹಕ್ಕುಗಳು ಆಯಾ ಲೇಖಕ/ಲೇಖಕಿಯರದ್ದೇ ಆಗಿರುತ್ತದೆ. ಪ್ರತಿಲಿಪಿ ಯಾವುದಾದರೂ ಹಕ್ಕುಗಳನ್ನು ಪಡೆದುಕೊಂಡಿದ್ದಲ್ಲಿ ಮಾತ್ರ ಅದರ ಹಕ್ಕು ಪ್ರತಿಲಿಪಿಯದ್ದಾಗಿರುತ್ತದೆ.

- ಪುಸ್ತಕದ ರಕ್ಷಾಪುಟದ ಹಕ್ಕು ಪ್ರತಿಲಿಪಿಯದ್ದಾಗಿರುತ್ತದೆ. ಇದನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ದಯವಿಟ್ಟು ಒಪ್ಪಂದದ ಎಲ್ಲ ನಿಯಮಗಳು ಮತ್ತು ಅಂಶಗಳನ್ನು ಸರಿಯಾಗಿ ಪರಿಶೀಲಿಸಿ ಅರ್ಥೈಸಿಕೊಳ್ಳಿ.

- ಪುಸ್ತಕ ಮುದ್ರಣಕ್ಕೂ ಮೊದಲು ಪ್ರತಿಲಿಪಿಯು ಆಯಾ ಕೃತಿಗಳ ಕರ್ತೃಗಳ ಓದಿಗಾಗಿ ಕೃತಿಯ ಪಿಡಿಎಫ್ ಕಳುಹಿಸುತ್ತದೆ.

 

ಟೈಪ್ ಸೆಟ್ಟಿಂಗ್/ಪ್ರೂಫ್ ರೀಡಿಂಗ್ ಮಾರ್ಗದರ್ಶನ : 

  • ಕೃತಿಯಲ್ಲಿ ಯಾವುದೇ ಎಮೋಜಿ ಬಳಸುವಂತಿಲ್ಲ. 

  • ಹೆಚ್ಚುವರಿ ಸ್ಪೇಸ್ ಮತ್ತು ಲೈನ್ ಗಳು ಇರುವಂತಿಲ್ಲ. 

  • ಹೆಚ್ಚುವರಿ ಪೂರ್ಣವಿರಾಮಗಳು, ಅಲ್ಪವಿರಾಮಗಳು ಇರಬಾರದು. 

ಪ್ರಶ್ನೋತ್ತರಗಳು : 

1. ನಾನು ಈ ಯೋಜನೆಯಲ್ಲಿ ಆಸಕ್ತನಾಗಿದ್ದೇನೆ. ನಾನೇನು ಮಾಡಬೇಕು ?

ನೀವು ಪುಸ್ತಕ ಮುದ್ರಿಸಲು ಇಚ್ಛಿಸಿದ್ದಲ್ಲಿ [email protected] ಸಂಪರ್ಕಿಸಬಹುದು

2. ಪುಸ್ತಕ ಮುದ್ರಣ ಯೋಜನೆಯಲ್ಲಿ ಯಾವೆಲ್ಲ ಪ್ರಕ್ರಿಯೆಗಳಿವೆ ?

ಒಮ್ಮೆ ನೀವು ಇಮೇಲ್ ಕಳುಹಿಸಿದ ಬಳಿಕ, ನಾವು ನಿಮ್ಮನ್ನು ಸಂಪರ್ಕಿಸಿ, ನಿಮ್ಮ ಪುಸ್ತಕದ ಮಾಹಿತಿ ಪಡೆದುಕೊಳ್ಳುತ್ತೇವೆ. ಬಳಿಕ spotdraft ಮೂಲಕ ಒಪ್ಪಂದಕ್ಕೆ ಸಹಿ ಹಾಕಿ, ನಾವು ನೀಡುವ ಬ್ಯಾಂಕ್ ಖಾತೆಗೆ ಹಣ ಪಾವತಿಸಬೇಕಾಗುತ್ತದೆ. ಹಣಪಾವತಿ ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಪುಸ್ತಕದ ವಿವರಗಳನ್ನು ಸಂಗ್ರಹಿಸಲು ಗೂಗಲ್ ಫಾರ್ಮ್ ಕಳುಹಿಸಲಾಗುತ್ತದೆ. ಪುಸ್ತಕದ ಹಸ್ತಪ್ರತಿಯನ್ನು ನಿಮಗೆ ಕಳುಹಿಸಲಾಗುತ್ತದೆ. ಪುಸ್ತಕದ ವಿವರಗಳು ಮತ್ತು ಎಡಿಟ್ ಮಾಡಿದ ಹಸ್ತಪ್ರತಿ ನಮಗೆ ತಲುಪಿದ ಬಳಿಕ, ಪುಸ್ತಕ ಮುದ್ರಣದ ಪ್ರಕ್ರಿಯೆ ಮತ್ತು ಇನ್ನಿತರ ಎಲ್ಲ ಪ್ರಕ್ರಿಯೆಗಳು ಪ್ರಾರಂಭಗೊಳ್ಳುತ್ತವೆ. 

 

3. ಪುಸ್ತಕದ ಪ್ರಕಾಶಕರು ಯಾರು ?

ಪ್ರತಿಲಿಪಿ ಪೇಪರ್ ಬ್ಯಾಕ್ಸ್

 

4. ನಾನು ನನ್ನ ಕಾದಂಬರಿಯನ್ನು ಮುದ್ರಣಕ್ಕಾಗಿ ಹೇಗೆ ಕಳುಹಿಸಬೇಕು ?

ಕಾದಂಬರಿ ಈಗಾಗಲೇ ಪ್ರತಿಲಿಪಿಯಲ್ಲಿ ಲಭ್ಯವಿದ್ದಲ್ಲಿ, ನಾವದನ್ನು ಡೌನ್ಲೋಡ್ ಮಾಡಿ ಅದರ ಕರ್ತೃಗಳಿಗೆ ಅಂತಿಮ ಹಂತದ ಎಡಿಟಿಂಗ್ ಗೆ MS ವರ್ಡ್ ಫೈಲ್ ಮೂಲಕ ಕಳುಹಿಸುತ್ತೇವೆ.

 

5. ನನ್ನ ಕಾದಂಬರಿ ಪ್ರತಿಲಿಪಿಯಲ್ಲಿ ಪ್ರಕಟಗೊಂಡಿಲ್ಲ. ಆದರೆ ಮುದ್ರಿಸಲು ಇಚ್ಛಿಸುತ್ತೇನೆ. ಇದಕ್ಕೆ ಅನುಸರಿಸಬೇಕಾದ ಕ್ರಮಗಳೇನು ?

ನಾವು ಪ್ರತಿಲಿಪಿಯಲ್ಲಿ ಮುದ್ರಿತವಾಗದ ಕೃತಿಗಳನ್ನೂ ಸಹ ಪ್ರಕಟಿಸುತ್ತೇವೆ. ನಿಮ್ಮ ಕೃತಿಯನ್ನು MS ವರ್ಡ್ ಫಾರ್ಮ್ಯಾಟ್ ನಲ್ಲಿ ನಮಗೆ ಕಳುಹಿಸಿ.

 

6. ನಾನು ಹಣವನ್ನು ಹೇಗೆ ಪಾವತಿಸಬೇಕು ?

ನೀವು ಒಪ್ಪಂದದಲ್ಲಿರುವ ಎಲ್ಲ ನೀತಿ ನಿಯಮಗಳನ್ನು ಅರ್ಥಮಾಡಿಕೊಂಡ ಬಳಿಕ ಹಣ ಪಾವತಿಸಬೇಕಾದ ಖಾತೆಯ ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇವೆ.

 

7. ನನ್ನ ಪುಸ್ತಕದ ಮಾರಾಟ ಬೆಲೆ ಎಷ್ಟಿರಬಹುದು ?

ಇದನ್ನು ಹಲವಾರು ಅಂಶಗಳು ನಿರ್ಧರಿಸುವುದರಿಂದ ನಿಮ್ಮೊಡನೆ ಈ ಕುರಿತು ಕೂಲಂಕುಷವಾಗಿ ಚರ್ಚಿಸಿ ಬೆಲೆ ನಿಗದಿಪಡಿಸಲಾಗುತ್ತದೆ. 

 

8. ನನ್ನ ಪುಸ್ತಕಗಳನ್ನು ಆನ್ಲೈನ್ ವೆಬ್ಸೈಟ್ ಗಳ ಮೂಲಕವೂ ಮಾರಾಟ ಮಾಡುವಿರಾ ? (ಉದಾ : ಅಮೆಜಾನ್)

ಹೌದು. ನಿಮ್ಮ  ಪುಸ್ತಕಗಳನ್ನು ಅಮೆಜಾನ್ ನಲ್ಲಿ ಲಿಸ್ಟ್ ಮಾಡಲಾಗುತ್ತದೆ. ಇದಕ್ಕೆ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ. 

 

9. ಪುಸ್ತಕದ ಗಾತ್ರ ಎಷ್ಟಿರುತ್ತದೆ ?

8.5 x 5.5 ಇಂಚುಗಳು