pratilipi-logo ಪ್ರತಿಲಿಪಿ
ಕನ್ನಡ

'ಪ್ರೇಮಾಮೃತವರ್ಷಿಣಿ' ಕಥಾ ಸ್ಪರ್ಧೆಯ ಫಲಿತಾಂಶ

14 ಅಕ್ಟೋಬರ್ 2023

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಬಹು ನಿರೀಕ್ಷಿತ ‘ಪ್ರೇಮಾಮೃತವರ್ಷಿಣಿ’ ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ! 

 

ಪ್ರತಿಲಿಪಿಯ ನವ ಬರಹಗಾರರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬರಹಗಾರರು ಈ ಸ್ಪರ್ಧೆಯಲ್ಲಿ ತಮ್ಮ ಧಾರಾವಾಹಿಯನ್ನು ಪ್ರಕಟಿಸುವುದರ ಮೂಲಕ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವತ್ತ ಒಂದು ಹೆಜ್ಜೆ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಯಾಕಷ್ಟು ಮುಖ್ಯವಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು! 

 

ಸರಳವಾಗಿ ಹೇಳುವುದಾದರೆ, ಬರಹಗಾರರಿಗೆ ತಮ್ಮ ಬರವಣಿಗೆಯ ಮೂಲಕವೇ ಆದಾಯ ಗಳಿಸುವ ಅವಕಾಶ ಪಡೆಯಲು ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಮೊದಲ ಹೆಜ್ಜೆ. ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಬರಹಗಾರರು ತಮ್ಮ ಧಾರಾವಾಹಿಯ ಅಧ್ಯಾಯಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಆ ಮೂಲಕ ತಮ್ಮ ಬರಹಗಳಿಂದಲೇ ಪ್ರತಿ ತಿಂಗಳೂ ಆದಾಯ ಗಳಿಸುವ ಅವಕಾಶವೂ ಸಿಗಲಿದೆ.

 

ಇದಲ್ಲದೆ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಬರಹಗಾರರು ‘ಪ್ರತಿಲಿಪಿ ಸೂಪರ್ ಸಾಹಿತಿ ಅವಾರ್ಡ್ಸ್- 6’ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಆಕರ್ಷಕ ನಗದು ಬಹುಮಾನ, ಭೌತಿಕ ಪ್ರಮಾಣಪತ್ರ ಮತ್ತಿತರ ಪ್ರಯೋಜನಗಳನ್ನು ಪಡೆಯುವ ಅವಕಾಶ ಸಿಗಲಿದೆ. 

 

‘ಪ್ರೇಮಾಮೃತವರ್ಷಿಣಿ’ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಬರಹಗಾರರ ಆಸಕ್ತಿ ಮತ್ತು ಪರಿಶ್ರಮ ಶ್ಲಾಘನೀಯ. ಬರವಣಿಗೆಯ ಕುರಿತು ನಿಮಗಿರುವ ಆಸಕ್ತಿ ಮತ್ತು ಬದ್ಧತೆ ಮುಂದಿನ ದಿನಗಳಲ್ಲಿ ನಿಮಗೆ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಸಹಾಯ ಮಾಡಲಿದೆ. ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ಲಕ್ಷಾಂತರ ಓದುಗರ ಪ್ರೀತಿ, ಅಭಿಮಾನ ಗಳಿಸುವಂತಾಗಲಿ ಎಂದು ನಾವು ಆಶಿಸುತ್ತೇವೆ. 

 

‘ಪ್ರೇಮಾಮೃತವರ್ಷಿಣಿ’ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಬಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳನ್ನು ತಿಳಿಸುತ್ತೇವೆ.



ವಿಜೇತ ಕೃತಿಗಳ ವಿವರ



ಪ್ರಥಮ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಮಲ್ಲಿಕಾ ಶಾಂತಾರಾಮ್ ಶೆಟ್ಟಿ ಅವರ ಮುಡಿಗೇರಿದ ಮಲ್ಲಿಗೆ

 

ಕೃತಿಯ ಕುರಿತು: ಪ್ರೀತಿಯ ವಿವಿಧ ಸ್ವರೂಪಗಳನ್ನು ಉತ್ತಮವಾದ ಕತೆಗಳ ಮೂಲಕ ಪ್ರಸ್ತುತಪಡಿಸಿರುವ ಕಥಾಸಂಕಲನವಿದು. ಉತ್ತಮ ಕಥಾಹಂದರಗಳು ಮತ್ತು ನಿರೂಪಣೆಯ ಮೂಲಕ ಓದುಗರನ್ನು ಆಕರ್ಷಿಸುತ್ತದೆ. ಮನುಷ್ಯ ಸಂಬಂಧಗಳಲ್ಲಿ ಪ್ರೀತಿಯ ವಿವಿಧ ಬಗೆಯನ್ನು ಪ್ರಸ್ತುತಪಡಿಸಿರುವ ರೀತಿ ಉತ್ತಮವಾಗಿದೆ.

 

ದ್ವಿತೀಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಭಾನು ಶ್ರೀಪಾದ್ ಅವರ ನಿನ್ನ ಭಾವ ನಿನ್ನ ರಾಗ

 

ಕೃತಿಯ ಕುರಿತು: ವಿಭಿನ್ನ ಕಥಾಹಂದರದ ಆಯ್ಕೆ ಮತ್ತು ಮನಮುಟ್ಟುವ ನಿರೂಪಣೆಯ ಮೂಲಕ ಈ ಕಥಾಸಂಕಲನ ಓದುಗರ ಮನಸ್ಸಿನಲ್ಲಿ ನೆಲೆಯೂರುತ್ತದೆ. ಪ್ರತಿ ಕತೆಯಲ್ಲಿಯೂ ಬೆರೆತ ಭಾವನಾತ್ಮಕತೆ ಓದುವಿಕೆಯಲ್ಲಿ ತಲ್ಲೀನರಾಗುವಂತೆ ಮಾಡುತ್ತದೆ.

 

ತೃತೀಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ವಸು ಭದ್ರಾವತಿ ಅವರ ಪ್ರೀತಿಯ ಮಜಲುಗಳು

 

ಕೃತಿಯ ಕುರಿತು: ಪ್ರತಿ ಕತೆಯಲ್ಲಿ ಪ್ರೀತಿಯನ್ನು ವಿಭಿನ್ನ ಭಾವದಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸಲಾಗಿದೆ. ಉತ್ತಮ ಕಥಾಹಂದರ ಮತ್ತು ನಿರೂಪಣಾ ಶೈಲಿಯ ಮೂಲಕ ಈ ಕಥಾಸಂಕಲನ ಓದುಗರನ್ನು ಸೆಳೆಯುತ್ತದೆ.

 

ನಾಲ್ಕನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಚೈತನ್ಯಾ ಬಿ ಅವರ ಪ್ರೇಮಾಮೃತವರ್ಷಿಣೀ - ಕಥಾಸರಣಿ

 

ಐದನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ನಂದಿನಿ ಅವರ ಒಲವಾಮೃತವರ್ಷಿಣಿ

 

ಆರನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ವರ್ಷಾ ಕಡಸೂರು ಅವರ ಪ್ರೇಮಸುಧೆ

 

ಏಳನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಸತೀಶ್ ಪಿ ಅವರ ದಿವ್ಯ ಪ್ರೇಮ



ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು



ಕ್ರ. ಸಂ

ಕೃತಿ

ಕರ್ತೃ

1

ಮುಡಿ ಏರಿದ ಹೂ

ಸುಮಾ ಬೆಳಗೆರೆ

2

ಅನುರಾಗ ಸಂಗಮ

ಲಾವಣ್ಯಾ ಹೆಗಡೆ

3

ಪ್ರೀತಿಯೆಂಬ ಅದ್ಭುತ!

ಅದ್ವಯ

4

ಪ್ರೇಮಾಮೃತವರ್ಷಿಣಿ

ಪ್ರಶ್ನಾ ನಾರಾಯಣ ರೈ

5

ಪ್ರೇಮ ಸುಮವು ಅರಳಿತು

ಅಶೋಕ್ ಕುಮಾರ್ ಜಿ. ಎಸ್

6

ಪಯಣ ಪ್ರೀತಿಯ ಜೊತೆಗೆ

ಶ್ರೀಮೇಧ

7

ಬೆಸೆದ ಬಂಧನ

ಮಾನಸ ವಿಜಯ್

8

ಪ್ರೇಮಾಮೃತವರ್ಷಿಣಿ

ದೀಕ್ಷಾ

9

ಕಥಾಸರಣಿ

ರಾಧಾ ಕೃಷ್ಣನ ಅರಸಿ

10

ಜಂಭೋ

ಶ್ವೇತಾ

11

ಪ್ರೇಮಾಮೃತವರ್ಷಿಣಿ

ಎಲ್. ವಿ. ಎಲ್

12

ಅಂಜೆಲಿಕಾ - ಪ್ರೀತಿಯ ಮಜಲುಗಳಿಗೊಂದು ಸಾಕ್ಷಿ

ಅಂಜೆಲಿಕಾ

13

ಪ್ರೇಮಾಮೃತವರ್ಷಿಣಿ ಕಥೆಗಳು

ಹರ್ಷ ವರ್ಧನ ಹೆಗಡೆ ನಿಟ್ಟೂರು

14

ಪ್ರೇಮದ ಹೊನಲು ಪ್ರೀತಿಯ ತೋರಣ

ಪವಿತ್ರ ಹೆಗಡೆ

15

ಪ್ರೇಮಾಮೃತವರ್ಷಿಣಿ

ಪ್ರಸನ್ನ



ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ:

 

ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಪ್ರೇಮಾಮೃತವರ್ಷಿಣಿ' ಕಥಾ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ತಮ್ಮಿಷ್ಟದ ಯಾವುದೇ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 7 ವಿಭಿನ್ನ ಕತೆಗಳ ಕಥಾಸಂಕಲನವನ್ನು ರಚಿಸುವ ಸ್ಪರ್ಧೆಯಾಗಿತ್ತು. ಸಲ್ಲಿಸಲ್ಪಟ್ಟಿದ್ದ ಕತೆಗಳು ಉತ್ತಮ ಕಥಾವಸ್ತುಗಳ ಮೇಲೆ ರಚಿಸಲ್ಪಟ್ಟಿದ್ದವು; ನಿರೂಪಣೆ, ಕಥಾ ಸಾರ ಬಹಳ ಉತ್ತಮವಾಗಿತ್ತು. ಅವುಗಳಲ್ಲಿ ಎಲ್ಲಾ ಕಥಾಸಂಕಲನಗಳ ಎಲ್ಲಾ ಕತೆಗಳನ್ನು ಓದಿ ವಿಜೇತ ಕೃತಿಗಳನ್ನು ಆಯ್ಕೆ ಮಾಡುವುದು ಸುಲಭದ ವಿಷಯವಾಗಿರಲಿಲ್ಲ. 

 

ಕಥಾವಸ್ತುವಿನ ಆಯ್ಕೆಯಲ್ಲಿ ವಿಭಿನ್ನತೆಯಿದ್ದರೂ ಪ್ರಸ್ತುತಿ ಮತ್ತು ನಿರೂಪಣಾ ಶೈಲಿ ಇನ್ನಷ್ಟು ಸುಧಾರಿಸಿದರೆ ಉತ್ತಮ ಎನಿಸಿತು. ಕೆಲವು ಕತೆಗಳಲ್ಲಿ ಪ್ರೀತಿಯನ್ನು ಪ್ರಸ್ತುತಪಡಿಸುವಂತಹ ನಿರೂಪಣೆಯಲ್ಲಿ ಹಿಂದೆ ಬಿದ್ದರೆ, ಕೆಲವು ಕತೆಗಳು ಆಯ್ದುಕೊಂಡ ಕಥಾವಸ್ತುವಿಗೆ ತಮ್ಮ ನಿರೂಪಣೆಯಿಂದ ಇನ್ನಷ್ಟು ಶಕ್ತಿ ತುಂಬಬಹುದಿತ್ತು ಎನಿಸಿದ್ದು ಸುಳ್ಳಲ್ಲ. ಹಾಗೆಯೇ ಬಹುತೇಕ ಕತೆಗಳು ಕೊಟ್ಟಿರುವ ವಿಷಯವಸ್ತುವನ್ನೇ ಶೀರ್ಷಿಕೆಯಾಗಿಸಿಕೊಂಡಿವೆ, ಕತೆಗೆ ತಕ್ಕಂತೆ ಬೇರೆ ಶೀರ್ಷಿಕೆ ಹುಡುಕುವ ಪ್ರಯತ್ನವೇ ಇಲ್ಲದಂತಿದೆ!! ಜೊತೆಗೆ ಬರಹಗಾರರು ಭಾಷಾ ಶುದ್ಧತೆ, ಅಧ್ಯಯನ, ನಿರೂಪಣಾ ಶೈಲಿಯ ಕುರಿತು ಇನ್ನಷ್ಟು ಗಮನ ಹರಿಸುವುದು ಉತ್ತಮ.

 

ಹಿಂದೆಯೂ ಹೇಳಿದಂತೆ, ವಿಜೇತ ಕೃತಿಗಳ ಪಟ್ಟಿಯಲ್ಲಿ ಕಂಡುಬಂದ ಕೃತಿಗಳೇ ಶ್ರೇಷ್ಠವೆಂದಲ್ಲ! ಓದುವಾಗ ಪ್ರತಿ ಕೃತಿಯಲ್ಲಿಯೂ ಏನೋ ಒಂದು ಹೊಸ ಅಂಶ, ಹೊಸ ವಿಷಯ ಕಾಣುತ್ತದೆ. ಆದರೆ ಸ್ಪರ್ಧೆಯಲ್ಲಿ ತೀರ್ಪು ನೀಡಬೇಕಾದರೆ ಹಲವು ಅಂಶಗಳನ್ನು ಅಂದರೆ ಭಾಷೆ, ಸಾಹಿತ್ಯ, ನಿರೂಪಣೆ, ಸೃಜನಶೀಲತೆ ಮತ್ತು ಮೌಲ್ಯಯುತ ಸಂದೇಶ ಮುಂತಾದ ಮಾನದಂಡಗಳನ್ನು ಪರಿಗಣಿಸಬೇಕಾಗಿರುವುದರಿಂದ ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ.

ಎಲ್ಲಾ ಬರಹಗಾರರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ.

 

- ಪ್ರತಿಲಿಪಿ ಕನ್ನಡ