pratilipi-logo ಪ್ರತಿಲಿಪಿ
ಕನ್ನಡ

ಪ್ರತಿಲಿಪಿ ಸೂಪರ್ ಸಾಹಿತಿ ಅವಾರ್ಡ್ಸ್: 60 ಅಧ್ಯಾಯಗಳ ಧಾರಾವಾಹಿ ರಚಿಸಲು ನಿಮಗಾಗಿ 6 ವಿಶೇಷ ಸಲಹೆಗಳು

21 ಆಗಸ್ಟ್ 2023

ಆತ್ಮೀಯ ಸಾಹಿತಿಗಳೇ,

 

ಭಾರತದ ಅತ್ಯಂತ ಜನಪ್ರಿಯ ಆನ್ಲೈನ್ ಕಥಾ ಸ್ಪರ್ಧೆ ‘ಪ್ರತಿಲಿಪಿ ಸೂಪರ್ ಸಾಹಿತಿ ಅವಾರ್ಡ್ಸ್’ ಮತ್ತೆ ಆರಂಭವಾಗಿದೆ. 60+ ಅಧ್ಯಾಯಗಳ ಧಾರಾವಾಹಿ ರಚಿಸುವುದರ ಮೂಲಕ ನೀವು ಪ್ರತಿಲಿಪಿಯ ‘ಸೂಪರ್ ಸಾಹಿತಿ’ ಎಂದು ಗುರುತಿಸಿಕೊಳ್ಳಬಹುದು ಮತ್ತು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಪಡೆಯಬಹುದು.

 

60 ಕ್ಕೂ ಅಧಿಕ ಅಧ್ಯಾಯಗಳ ಬೆಸ್ಟ್ ಸೆಲ್ಲರ್ ಕೃತಿಯನ್ನು ರಚಿಸಲು ಈ ಕೆಳಗೆ ನಾವು ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ.

 

1. ಒಂದು ಕಥಾವಸ್ತುವನ್ನು ಆಯ್ದುಕೊಳ್ಳಿ- ಒಂದು ಹಾಳೆಯಲ್ಲಿ ನಿಮ್ಮ ಕಲ್ಪನೆ/ಆಯ್ದುಕೊಂಡಿರುವ ಕಥಾವಸ್ತುವನ್ನು ಬರೆಯಿರಿ. ನಿಮ್ಮ ಕಥಾವಸ್ತು ದೈನಂದಿನ ಘಟನೆ, ವಿಷಯಗಳಿಂದ ಪ್ರೇರಿತವಾಗಿರಬಹುದು. ನೀವು ಓದಿರುವ/ಕೇಳಿರುವ ಸುದ್ದಿಗಳು, ಅನುಭವಗಳು, ನಿಮ್ಮೆದುರಲ್ಲಿ ಘಟಿಸಿದ ಘಟನೆಗಳು, ಪ್ರತಿಲಿಪಿಯ ನಿಮ್ಮ ಓದುಗರ ಸಲಹೆಗಳು ಹೀಗೆ ಯಾವುದೇ ವಿಷಯವಾಗಿರಬಹುದು. ನಿಮಗೆ ಇಷ್ಟವೆನಿಸುವ ಕಥಾವಸ್ತುವನ್ನು ಆಯ್ಕೆ ಮಾಡಿ.

 

2. ನಿಮ್ಮ ಕತೆಯ ಸಂಕ್ಷಿಪ್ತ ಸಾರಾಂಶವನ್ನು ಬರೆಯಿರಿ- ನೀವು ಆರಿಸಿಕೊಂಡಿರುವ ಕಥಾವಸ್ತುವಿನ ಆಧಾರದ ಮೇಲೆ ನಿಮಗೆ ತೋಚುವಂತೆ ಸಂಕ್ಷಿಪ್ತ ಸಾರಾಂಶವನ್ನು ಬರೆಯಿರಿ. ನಿಮ್ಮ ಕತೆಯ ಆರಂಭ, ಹರಿವು, ಅಂತ್ಯದ ಬಗ್ಗೆ ಒಂದು ಚೌಕಟ್ಟನ್ನು ರೂಪಿಸಿಕೊಳ್ಳಿ. ಮುಖ್ಯ ಪಾತ್ರಗಳು ಮತ್ತು ಕತೆಗೆ ಅಗತ್ಯವೆನಿಸುವ ಪೋಷಕ ಪಾತ್ರಗಳ ಕುರಿತು ಒಂದೆರಡು ಸಾಲಿನ ಟಿಪ್ಪಣಿ ಬರೆಯಿರಿ.

 

3. ನಿಮ್ಮ ಕತೆಯ ಮುಖ್ಯ ಪಾತ್ರಗಳನ್ನು ರಚಿಸಿ- ನಿಮ್ಮ ಕತೆಯ ಮುಖ್ಯ ಪಾತ್ರಗಳು, ಅವುಗಳ ಸ್ವಭಾವ, ವ್ಯಕ್ತಿತ್ವದ ಬಗ್ಗೆ ಆಲೋಚಿಸಿ. ಅವರು ವಾಸಿಸುವ ಸ್ಥಳ, ಅವರ ಜೀವನದ ಪ್ರಮುಖ ಘಟ್ಟಗಳು, ಅವರ ವ್ಯಕ್ತಿತ್ವವನ್ನು ಪ್ರಭಾವಿಸುವ ವ್ಯಕ್ತಿ/ಘಟನೆಗಳು, ಅಲ್ಲಿನ ಜೀವನಕ್ರಮ, ಜನರ ವರ್ತನೆ, ಭಾಷೆ ಇತ್ಯಾದಿಗಳ ಕುರಿತು ಕತೆಗೆ ಮುಖ್ಯವೆನಿಸುವ ಇತರ ಪಾತ್ರಗಳ ಬಗ್ಗೆ 4-5 ಸಾಲುಗಳ ಟಿಪ್ಪಣಿ ಬರೆದುಕೊಳ್ಳಿ.

 

4. ಕತೆಯ ಪ್ರಾರಂಭದಿಂದ ಅಂತ್ಯದವರೆಗಿನ ಪ್ರಮುಖ ಘಟನೆಗಳನ್ನು ಪಟ್ಟಿ ಮಾಡಿ- ಈಗ ನೀವು ಯೋಚಿಸಿರುವ ಕಥಾವಸ್ತು, ಕಥಾಹಂದರ, ಪಾತ್ರಗಳ ಆಧಾರದ ಮೇಲೆ ಕತೆಯಲ್ಲಿ ಅವಶ್ಯಕವಾಗುವ ಪ್ರಮುಖ ಘಟನೆ, ಸಂದರ್ಭಗಳನ್ನು ಆಲೋಚಿಸಿ, ಪಟ್ಟಿಮಾಡಿ. ಕತೆಯ ತಿರುವುಗಳನ್ನು ನಿರ್ಧರಿಸಿ. ಇವು ಕತೆ ಸರಾಗವಾಗಿ ಸಾಗಲು ಸಹಾಯ ಮಾಡುತ್ತವೆ.

 

ಪ್ರಮುಖ ಘಟನೆಗಳನ್ನು 1, 2, 3, 4 ಎಂದು ಪಟ್ಟಿ ಮಾಡಿಕೊಳ್ಳುವುದರಿಂದ ಧಾರಾವಾಹಿಯನ್ನು ರಚಿಸುವಾಗ ತಿರುವುಗಳನ್ನು ನೀಡಲು, ಓದುಗರಲ್ಲಿ ಕುತೂಹಲ ಹುಟ್ಟಿಸಲು ಸುಲಭವಾಗುತ್ತದೆ. ಪ್ರತಿ ಘಟನೆಗಳ ಬಗ್ಗೆ 1 ಸಾಲಿನ ಸಾರಾಂಶ ಬರೆಯಿರಿ.

 

5. ನಿಮ್ಮ ಕತೆಯನ್ನು ಅಧ್ಯಾಯಗಳಾಗಿ ವಿಭಾಗಿಸಿ- ನಿಮಗೆ ಸಂಪೂರ್ಣ ಕತೆಯ ಚಿತ್ರಣ ದೊರೆತ ಮೇಲೆ ಕತೆಯನ್ನು 60 ಅಧ್ಯಾಯಗಳಾಗಿ ವಿಂಗಡಿಸಿ. ಒಟ್ಟು 6 ವಿಭಾಗಗಳನ್ನು ಮಾಡಿ, ಪ್ರತಿ ವಿಭಾಗದಲ್ಲಿ ಕುತೂಹಲಕಾರಿ ಸನ್ನಿವೇಶ ಇರುವಂತೆ ನೋಡಿಕೊಳ್ಳಿ.-

1-10 ಅಧ್ಯಾಯಗಳು
11-20 ಅಧ್ಯಾಯಗಳು
21-30 ಅಧ್ಯಾಯಗಳು
31-40 ಅಧ್ಯಾಯಗಳು
41-50 ಅಧ್ಯಾಯಗಳು
51-60 ಅಧ್ಯಾಯಗಳು

 

ಪ್ರತಿ ವಿಭಾಗದಲ್ಲಿ ಕತೆ ಯಾವ ರೀತಿಯಾಗಿ ಮೂಡಿಬರುತ್ತದೆ? ಎಂಬುದರ ಬಗ್ಗೆ ನಿಮ್ಮ ಕಲ್ಪನೆಯನ್ನು 1-2 ಸಾಲುಗಳಲ್ಲಿ ಬರೆಯಿರಿ.

 

6. ಪ್ರತಿಯೊಂದು ಅಧ್ಯಾಯದ ಕುರಿತು ಟಿಪ್ಪಣಿ ಬರೆಯಿರಿ- ಈಗ ನೀವು ಬಹುತೇಕ ಸಿದ್ಧರಾಗಿದ್ದೀರಿ! ಪ್ರತಿ 10 ಅಧ್ಯಾಯದ ಸಾರಾಂಶ ಬರೆದ ಮೇಲೆ, ಪ್ರತಿ ಅಧ್ಯಾಯದ ಸಂಕ್ಷಿಪ್ತ ಸಾರಾಂಶ ಬರೆಯಿರಿ.

 

ಪ್ರತಿ ಅಧ್ಯಾಯದಲ್ಲಿ ಕತೆ ಯಾವ ರೀತಿಯಾಗಿ ಮೂಡಿಬರುತ್ತದೆ ಎಂಬುದನ್ನು 1-2 ಸಾಲುಗಳಲ್ಲಿ ಬರೆಯಿರಿ, ಉದಾಹರಣೆಗೆ-
ಅಧ್ಯಾಯ 1-
ಅಧ್ಯಾಯ 2-
ಅಧ್ಯಾಯ 3-
ಅಧ್ಯಾಯ 4-
ಇತ್ಯಾದಿ…

 

*******************************

 

ಈ ರೀತಿಯಾಗಿ ಯೋಜನೆ ರೂಪಿಸಿಕೊಳ್ಳಲು 2-3 ದಿನಗಳ ಕಾಲಾವಕಾಶ ಬೇಕಾಗಬಹುದು. ಆದರೆ ಈ ಯೋಜನೆ ನಿಮ್ಮ ಕಥಾರಚನೆಗೆ ಖಂಡಿತವಾಗಿ ಸಹಾಯ ಮಾಡುತ್ತದೆ. ನೀವು ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಗೆ ನಿಮ್ಮ ಕೃತಿಯನ್ನು ಪ್ರಕಟಿಸಲು ಆರಂಭಿಸಿದಾಗ ಯಾವುದೇ ತಡೆಯಿಲ್ಲದೆ ಸರಾಗವಾಗಿ ಕತೆಯನ್ನು ಮುಂದುವರೆಸಲು ಈ ಯೋಜನೆ ಅತ್ಯಂತ ಸಹಕಾರಿ. ಯಾವುದೇ ಸಂದರ್ಭದಲ್ಲಿ ನಿಮ್ಮ ಕತೆಯ ಮುಂದುವರೆಯುವಿಕೆಗೆ ತೊಂದರೆಯಾದಲ್ಲಿ ನೀವು ಈಗಾಗಲೇ ಸಿದ್ಧಪಡಿಸಿಕೊಂಡಿರುವ ಪಟ್ಟಿ, ಟಿಪ್ಪಣಿಯ ಸಹಾಯವನ್ನು ಪಡೆಯಬಹುದು. ಇದು ಸ್ಪರ್ಧೆಯ ಮುಕ್ತಾಯದ ದಿನಾಂಕದೊಳಗೆ ನಿಗದಿತ ಅಧ್ಯಾಯಗಳನ್ನು ಸುಲಭವಾಗಿ ಪ್ರಕಟಿಸಲು ಉತ್ತಮ ವಿಧಾನ.

 

ಈ ಕೆಳಗೆ ನೀಡಲಾಗಿರುವ ಲಿಂಕ್’ಗಳ ಮೂಲಕ ಸುದೀರ್ಘ ಕೃತಿಗಳನ್ನು ರಚಿಸಲು ಹಂತಗಳನ್ನು ಸುಲಭವಾಗಿ ಅರಿಯಿರಿ:

 

1. ಪ್ರತಿಲಿಪಿಯು ತನ್ನ ಬರಹಗಾರರಿಗೆ ಸುದೀರ್ಘ ಕೃತಿಗಳನ್ನು ರಚಿಸಲು ಏಕೆ ಪ್ರೇರೇಪಿಸುತ್ತದೆ?

2. ಒಂದು ಕಥಾವಸ್ತು/ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿಸುವುದು ಹೇಗೆ?

3. ಉಪಕತೆಗಳು ಮತ್ತು ಪಾತ್ರಪೋಷಣೆ ಮಾಡುವುದು ಹೇಗೆ?

4. ಪ್ರೀತಿ-ಪ್ರೇಮ ವಿಷಯಾಧಾರಿತ ಕತೆಗಳನ್ನು ಆಸಕ್ತಿದಾಯಕವಾಗಿ ರಚಿಸುವುದು ಹೇಗೆ?

5. ಕೌಟುಂಬಿಕ, ಸಾಮಾಜಿಕ, ಮಹಿಳಾ ಕೇಂದ್ರಿತ ಕೃತಿಗಳನ್ನು ಆಸಕ್ತಿದಾಯಕವಾಗಿ ಹೇಗೆ ರಚಿಸಬಹುದು?

6. ಕಾಲ್ಪನಿಕ(ಫ್ಯಾಂಟಸಿ), ರಹಸ್ಯ, ಭಯಾನಕ ವಿಷಯಾಧಾರಿತ ಕತೆಗಳನ್ನು ಕುತೂಹಲಕಾರಿಯಾಗಿ ರಚಿಸುವುದು ಹೇಗೆ?

7. ಥ್ರಿಲ್ಲರ್ ಧಾರಾವಾಹಿಗಳನ್ನು ಕೌತುಕಭರಿತವಾಗಿಸುವುದು ಹೇಗೆ?

8. ನಿರೂಪಣಾ ಶೈಲಿ ಮತ್ತು ಸನ್ನಿವೇಶಗಳ ಸೃಷ್ಟಿ, ಘಟನೆಗಳನ್ನು ಜೋಡಿಸುವುದು ಹೇಗೆ?

9. ಅಧ್ಯಾಯಗಳ ರೂಪುರೇಷೆ ಮತ್ತು ಸನ್ನಿವೇಶಗಳನ್ನು ಬರೆಯುವ ವಿಧಾನ

10. ಸಂಭಾಷಣಾ ಶೈಲಿ ಮತ್ತು ಕೃತಿಯ ಮೊದಲ ಅಧ್ಯಾಯವನ್ನು ಆರಂಭಿಸುವ ಬಗೆ

11. ತಿರುವುಗಳು ಮತ್ತು ಕಥಾ ಕೊಂಡಿಗಳನ್ನು ಬಳಸುವುದು; ಕತೆಯನ್ನು ಅಂತ್ಯಗೊಳಿಸುವ ಪರಿ

12. ವಿವಿಧ ಭಾವನೆಗಳನ್ನು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ?

13. ಟ್ರೆಂಡಿಂಗ್ ಧಾರಾವಾಹಿಗಳ ವಿಶ್ಲೇಷಣೆ

14. ಓದುಗರನ್ನು ಆಕರ್ಷಿಸಬಲ್ಲ ವಿವಿಧ ಬಗೆಯ ಪ್ರಚಾರ ತಂತ್ರಗಳು

15. ಸತತವಾಗಿ ಬರೆಯಲು ವೇಳಾಪಟ್ಟಿ ತಯಾರಿಸುವುದು ಹೇಗೆ?

16. ಬರೆಯುವಾಗ ಎದುರಾಗುವ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ

17. ದೀರ್ಘ ಧಾರಾವಾಹಿಗಳನ್ನು ರಚಿಸುವುದರ ಪ್ರಯೋಜನಗಳು

 

ಪ್ರತಿಲಿಪಿ ತಂಡ ಹಂಚಿಕೊಂಡಿರುವ ಈ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿ! ದೀರ್ಘ ಧಾರಾವಾಹಿ ಬರವಣಿಗೆ ನಿಮಗೆ ಎಷ್ಟು ಸರಳ ಮತ್ತು ಸುಲಭವಾಗಿ ತೋರುತ್ತದೆ ಎಂಬುದನ್ನು ನೀವು ಮನಗಾಣುವಿರಿ. ಈ ಮೂಲಕ 60+ ಅಧ್ಯಾಯಗಳ ಧಾರಾವಾಹಿಯನ್ನು ಸುಲಭವಾಗಿ ಪೂರ್ಣಗೊಳಿಸುವಿರಿ ಎಂದು ನಾವು ನಂಬುತ್ತೇವೆ.

 

ಇಂದಿನಿಂದಲೇ ಬರೆಯಲು ಆರಂಭಿಸಿ!

 

ಶುಭವಾಗಲಿ!
ಪ್ರತಿಲಿಪಿ ಸ್ಪರ್ಧಾ ವಿಭಾಗ